Site icon Vistara News

Navneet Rana: ಮೋದಿಯವರ ಸಿಂಹಗಳು, ರಾಮಭಕ್ತರು ಗಲ್ಲಿ ಗಲ್ಲಿಯಲ್ಲಿದ್ದಾರೆ ಹುಷಾರ್‌!- ಓವೈಸಿಗೆ ಮತ್ತೆ ನವನೀತ್‌ ರಾಣಾ ಟಾಂಗ್

Navneet Rana

ಹೈದರಾಬಾದ್‌: ಬಿಜೆಪಿ ನಾಯಕಿ ನವನೀತ್‌ ರಾಣಾ(Navneet Rana) ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ(Asaduddin Owaisi) ನಡುವಿನ ವಾಕ್ಸಮರ ಮುಂದುವರೆದಿದೆ. 15 ನಿಮಿಷಗಳ ಕಾಲ ಪೊಲೀಸ್‌ ಭದ್ರತೆ ತೆಗೆದರೆ ಓವೈಸಿ ಸಹೋದರರು ಎಲ್ಲಿಂದ ಬಂದರು ಎಲ್ಲಿಗೆ ಹೋದರು ಎಂಬುದೇ ತಿಳಿಯದಂತೆ ಮಾಡುತ್ತೇನೆ ಎಂದಿದ್ದ ನವನೀತ್‌ ರಾಣಾ, ಇದೀಗ ಮತ್ತೆ ಓವೈಸಿ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಓವೈಸಿ ಅವರು ತಮ್ಮ ನಿಯಂತ್ರಣದಲ್ಲಿ ತಾವಿದ್ದರೆ ಉತ್ತಮ. ಇಲ್ಲದಿದ್ದರೆ ಪ್ರಧಾನಿ ಮೋದಿಯವರ ಸಿಂಹಗಳು ಮತ್ತು ರಾಮ ಭಕ್ತರು ಗಲ್ಲಿ ಗಲ್ಲಿಯಲ್ಲಿ ತಿರುಗಾಡುತ್ತಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ತಮ್ಮನನ್ನು ನಾನು ಮಾತ್ರ ನಿಯಂತ್ರಿಸಲು ಸಾಧ್ಯ. ಬೇರೆ ಯಾರಿಂದಲೂ ಸಾಧ್ಯವಿಲ್ಲ ಎಂದು ಹಿರಿಯ ಸಹೋದರ ಅಸಾದುದ್ದೀನ್‌ ಓವೈಸಿ ಹೇಳುತ್ತಿದ್ದಾರೆ. ಇದು ಒಳ್ಳೆಯ ವಿಚಾರ. ಇದು ನಿಮಗೆ ಅರ್ಥ ಆಗಿದ್ದು ಒಳ್ಳೆಯದ್ದಾಯಿತು. ಇಲ್ಲದಿದರೆ ರಾಮ ಭಕ್ತರು ಮತ್ತು ಮೋದಿಯವರ ಸಿಂಹಗಳು ತಿರುಗಾಡುತ್ತಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಸಂಚಲನೆ ಮೂಡಿಸಿದೆ.

‍ಘಟಾನುಘಟಿಗಳ ಸ್ಪರ್ಧೆಯ ಕಾರಣದಿಂದ ಹೈದರಾಬಾದ್‌ ಲೋಕಸಭಾ ಕ್ಷೇತ್ರ ಈ ಬಾರಿ ದೇಶದ ಗಮನ ಸೆಳೆದಿದೆ. ಇಲ್ಲಿ ಬಿಜೆಪಿಯ ಫೈರ್‌ ಬ್ರ್ಯಾಂಡ್‌ ಮಾಧವಿ ಲತಾ ಅವರು ಎಐಎಂಐಎಂ ಮುಖ್ಯಸ್ಥ, ಹಾಲಿ ಸಂಸದ ಅಸಾದುದ್ದೀನ್‌ ಓವೈಸಿ (Asaduddin Owaisi)  ವಿರುದ್ಧ ಕಣಕ್ಕಿಳಿದಿದ್ದಾರೆ. ಅಸಾದುದ್ದೀನ್‌ ಓವೈಸಿ ಅವರ ಸಹೋದರ ಈ ಅಕ್ಬರುದ್ದೀನ್ ಓವೈಸಿ ಅವರು 2013ರಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿ, ʼʼ15 ನಿಮಿಷ ಪೊಲೀಸರನ್ನು ತೆರವುಗೊಳಿಸಿ ನೋಡಿ. 100 ಕೋಟಿ ಹಿಂದುಗಳಿಗೆ ನಾವು ಏನು ಎಂಬುದನ್ನು ತೋರಿಸುತ್ತೇವೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದು ದೇಶಾದ್ಯಂತ ಚರ್ಚೆ ಹುಟ್ಟು ಹಾಕಿತ್ತು.

ಇದಕ್ಕೆ ಪ್ರತಿಕ್ರಿಯೆ ನೀಡಿದ ನವನೀತ್‌ ರಾಣಾ ಈ 15 ಸೆಕೆಂಡ್‌ಗಳ ಹೇಳಿಕೆ ನೀಡಿದ್ದಾರೆ. ʼʼಅಸಾದುದ್ದೀನ್ ಓವೈಸಿ ಮತ್ತು ಅಕ್ಬರುದ್ದೀನ್ ಓವೈಸಿ ಅವರಿಬ್ಬರೂ ಅಣ್ಣ-ತಮ್ಮಂದಿರು ತಾನೇ. ಈ ಹಿಂದೆ ಅಕ್ಬುರುದ್ದೀನ್ ಓವೈಸಿ 15 ನಿಮಿಷ ಪೊಲೀಸರನ್ನು ತೆರವುಗೊಳಿಸಿದರೆ, ನಾವೇನೆಂದು ತೋರಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು. ನಾವು ಹೇಳುತ್ತೇವೆ. ನಮಗೆ 15 ನಿಮಿಷ ಬೇಡ, 15 ಸೆಕೆಂಡು ಸಾಕು. 15 ಸೆಕೆಂಡು ಕಾಲ ಪೊಲೀಸರನ್ನು ತೆರವುಗೊಳಿಸಿದರೂ ಸಾಕು, ಅಣ್ಣ ತಮ್ಮಂದಿರಿಬ್ಬರು ಎಲ್ಲಿಂದ ಬಂದಿದ್ದಾರೆ, ಎಲ್ಲಿಗೆ ಹೋದರು ಎಂಬುದೂ ತಿಳಿಯಬಾರದು. ಹಾಗೆ ಮಾಡುತ್ತೇವೆʼʼ ಎಂದು ಹೇಳಿದ್ದಾರೆ.

ಇದನ್ನೂ ಓದಿ: Akbar Nagar: ಉತ್ತರ ಪ್ರದೇಶದ ಅಕ್ಬರ್‌ ನಗರದ ಅಕ್ರಮ ಮನೆಗಳ ಧ್ವಂಸಕ್ಕೆ ಸುಪ್ರೀಂ ಕೋರ್ಟ್‌ ಅಸ್ತು!

ಇನ್ನು ಇದಕ್ಕೆ ಪ್ರತಿಕ್ರಿಯಿಸಿದ ಓವೈಸಿ ನಾನು ಇಲ್ಲೇ ನಿಂತಿದ್ದೇನೆ ಅದೇನು ಮಾಡುತ್ತೀರೋ ಮಾಡಿ ಎಂದು ಟಾಂಗ್‌ ಕೊಟ್ಟಿದ್ದರು. ಮಹಾರಾಷ್ಟ್ರದಿಂದ ಬಂದ ಎಂಪಿ ಸಾಹೇಬರು ಇಲ್ಲಿ ನಮ್ಮ ವಿರುದ್ಧ ಏನೇನೋ ಮಾತನಾಡುತ್ತಿದ್ದಾರೆ. ನನ್ನ ತಮ್ಮ ಅಕ್ಬರುದ್ದೀನ್‌ ಓವೈಸಿ ಪರಿಸ್ಥಿತಿಯನ್ನು ಅವನದ್ದೇ ರೀತಿಯಲ್ಲಿ ತಿಳಿಗೊಳಿಸಲು ಮುಂದಾಗಿದ್ದ. ಆದರೆ ನಾನೇ ಅವನನ್ನು ತಡೆದು ನಿಲ್ಲಿಸಿದೆ ಎಂದು ಹೇಳಿದ್ದರು.

Exit mobile version