Site icon Vistara News

Naxalites Killed: 6 ಗಂಟೆ ಭರ್ಜರಿ ಕಾರ್ಯಾಚರಣೆ; ಬರೋಬ್ಬರಿ 12 ನಕ್ಸಲರ ಎನ್‌ಕೌಂಟರ್

Naxalites Killed

ಮುಂಬೈ: ಮಹಾರಾಷ್ಟ್ರ(Maharashtra) ದಲ್ಲಿ ಭರ್ಜರಿ ಪೊಲೀಸರು ಕಾರ್ಯಾಚರಣೆ(Police Operation) ನಡೆದಿದ್ದು, ಬರೋಬ್ಬರಿ 12 ನಕ್ಸಲರನ್ನು(Naxalites Killed) ಹೊಡೆದುರುಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಗದ್ಚಿರೋಳಿ(Gadchiroli Encounter) ಜಿಲ್ಲೆಯಲ್ಲಿ ಆರು ಗಂಟೆಗಳ ಸುದೀರ್ಘ ನಕ್ಸಲರ ಬೇಟೆ ನಡೆದಿದ್ದು, ಹತ್ಯೆಯಾದ ಮಾವೋವಾದಿಗಳಿಂದ ಅನೇಕ ಅಟೋಮ್ಯಾಟಿಕ್‌ ಬಂದೂಕುಗಳನ್ನು, ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

ಛತ್ತೀಸ್‌ಗಡ ಗಡಿ ಪ್ರದೇಶದಲ್ಲಿರುವ ವಾಂದೊಳಿ ಗ್ರಾಮದಲ್ಲಿರುವ ಅರಣ್ಯ ಪ್ರದೇಶದಲ್ಲಿ 15 ನಕ್ಸಲರು ಬೀಡು ಬಿಟ್ಟಿರುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಪೊಲೀಸರು ಡೆಪ್ಯುಟಿ ಎಸ್‌ಪಿ ನೇತೃತ್ವದಲ್ಲಿ ಏಳು ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆ ಕೈಗೊಂಡಿತ್ತು. ಈ ವೇಳೆ ಭಾರೀ ಗುಂಡಿನ ಚಕಮಕಿ ನಡೆದಿತ್ತು. ಮಧ್ಯಾಹ್ನ ಶುರುವಾದ ಗುಂಡಿನ ಚಕಮಕಿ ಸಾಯಂಕಾಲದವರೆಗೂ ಮುಂದುವರೆದಿತ್ತು. ದಾಳಿಯಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ಮತ್ತು ಪೊಲೀಸ್‌ ಒಬ್ಬ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ನಾಗ್ಪುರ ಆಸ್ಪತ್ರೆಗೆ ದಾಖಲಿಸಲಾಯಿತು.

ಬರೋಬ್ಬರು ಆರು ಗಂಟೆಗಳ ಕಾರ್ಯಾಚರಣೆ ಬಳಿಕ 12 ಮಾವೋವಾದಿಗಳನ್ನು ಹತ್ಯೆ ಮಾಡುವಲ್ಲಿ ಪೊಲೀಸರು ಯಶಸ್ವಿ ಆಗಿದ್ದಾರೆ. ಇಲ್ಲಿಯವರೆಗೆ 3 AK47, 2 INSAS, 1 ಕಾರ್ಬೈನ್ ಮತ್ತು ಒಂದು SLR ಸೇರಿದಂತೆ ಏಳು ಅಟೋಮ್ಯಾಟಿವ್‌ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: UP CM v/s DCM: ಉತ್ತರಪ್ರದೇಶ ಬಿಜೆಪಿಯಲ್ಲಿ ಭಿನ್ನಮತ; ಯೋಗಿ ತಲೆದಂಡ ಪಕ್ಕಾನಾ?

Exit mobile version