Site icon Vistara News

Lok Sabha Pre Poll Survey: ಬಿಹಾರದಲ್ಲಿ ಎನ್‌ಡಿಎಗೆ 32, ಇಂಡಿಯಾ ಕೂಟಕ್ಕೆ 8 ಸ್ಥಾನ ಎಂದ ಸಮೀಕ್ಷೆ

NDA 33 and India bloc 32 seat for in bihar Says Lok Sabha Pre Poll Survey

ನವದೆಹಲಿ: ಇಂಡಿಯಾ ಕೂಟವನ್ನು (India bloc) ರಚಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಜೆಡಿಯು ನಾಯಕ, ಬಿಹಾರ ಸಿಎಂ ನಿತೀಶ್ ಕುಮಾರ್ (Bihar CM Nitish Kumar) ಅವರು ಅದೇ ಕೂಟದಿಂದ ಹೊರ ಬಂದು, ಮತ್ತೆ ಬಿಜೆಪಿ ನೇತೃತ್ವದ ಎನ್‌ಡಿಎ (NDA) ತೆಕ್ಕೆಗೆ ಜಾರಿದ್ದಾರೆ. ಹಾಗಾಗಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ (Lok Sabha Election) ಬಿಹಾರ ಫಲಿತಾಂಶದ ಮೇಲೆ ಎಲ್ಲರ ಕಣ್ಣು ಇದ್ದೇ ಇರುತ್ತದೆ. ಆದರೆ, ಅದಕ್ಕೂ ಮೊದಲು ಬಿಡುಗಡೆಯಾಗಿರುವ ಇಂಡಿಯಾ ಟುಡೇ ಮೂಡ್ ಆಫ್ ದಿ ನೇಷನ್ ಓಪಿನಿಯನ್ ಪೋಲ್ ಪ್ರಕಾರ(Lok Sabha Pre Poll Survey), 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟವು 40 ಸ್ಥಾನಗಳ ಪೈಕಿ 32 ಹಾಗೂ ಕಾಂಗ್ರೆಸ್-ಆರ್‌ಜೆಡಿ ನೇತೃತ್ವದ ಇಂಡಿಯಾ ಕೂಟವು 8 ಸ್ಥಾನಗಳನ್ನು ಗೆಲ್ಲಲಿವೆ.

2019ರ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ಕೂಟವು, 40 ಸ್ಥಾನಗಳ ಪೈಕಿ 39 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ, ಈ ಬಾರಿ ಅವುಗಳ ಟ್ಯಾಲಿಯಲ್ಲಿ 8 ಸ್ಥಾನ ಕೊರತೆಯಾಗಲಿದೆ. ಆ ಸ್ಥಾನಗಳು ಕಾಂಗ್ರೆಸ್-ಆರ್‌ಜೆಡಿ ಪಾಲಾಗಲಿವೆ ಎಂದು ಸಮೀಕ್ಷೆಯಲ್ಲಿ ಗೊತ್ತಾಗಿದೆ.

ಮೂಡ್ ಆಫ್ ದಿ ನೇಷನ್ ಸಮೀಕ್ಷೆಯನ್ನು 2023ರ ಡಿಸೆಂಬರ್ 15 ಮತ್ತು 2024 ಜನವರಿ 28ರ ನಡುವೆ ನಡೆಸಲಾಗಿದೆ. ಕಳೆದ ಕೆಲವು ವಾರಗಳಲ್ಲಿ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಮತ್ತು ಮೈತ್ರಿಯ ಬದಲಾವಣೆಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಇದೇ ವೇಳೆ, ಎನ್‌ಡಿಎ ಮತ ಪ್ರಮಾಣದಲ್ಲಿ ಶೇ.1ರಷ್ಟು ಕಡಿಮೆಯಾಗಲಿದೆ. ಅಂದರೆ, 2019ರಲ್ಲಿ ಎನ್‌ಡಿಎ ಶೇ.53 ಮತ್ತು ಇಂಡಿಯಾ ಕೂಟವು ಶೇ.31 ಹಾಗೂ ಇತರರು ಶೇ.16ರಷ್ಟು ಮತ ಪಡೆದಿದ್ದರು.

ಈಗ ನಡೆಸಿರುವ ಸಮೀಕ್ಷೆಯ ಪ್ರಕಾರ, ಎನ್‌ಡಿಎ ಶೇ.52, ಇಂಡಿಯಾ ಕೂಟವು ಶೇ.38 ಹಾಗೂ ಇತರರು ಶೇ.10ರಷ್ಟು ಮತ ಪಡೆಯಲಿದ್ದಾರೆ. ಅಂದರೆ, ಎನ್‌ಡಿಎಗೆ ಒಂದು ಪ್ರತಿಶತ ಮತ ನಷ್ಟವಾದರೆ, ಇಂಡಿಯಾ ಕೂಟಕ್ಕೆ 7 ಪ್ರತಿಶತ ಲಾಭವಾಗಲಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ 4, ಬಿಜೆಪಿ-ಜೆಡಿಎಸ್‌ಗೆ 24 ಸೀಟು

ಮೂಡ್ ಆಫ್ ದಿ ನೇಷನ್ ಒಪಿನಿಯನ್ ಪೋಲ್ ಸಮೀಕ್ಷೆಯ ಪ್ರಕಾರ, ಕರ್ನಾಟಕ (Karnataka) 28 ಲೋಕಸಭೆ ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳನ್ನು ಗೆಲ್ಲಲಿದೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟವು ಕೇವಲ 4 ಸ್ಥಾನಗಳಿಗೆ ತೃಪ್ತಿ ಪಡಲಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಶೇ.51 ಮತಗಳೊಂದಿಗೆ 25 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಈ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ತಲಾ ಒಂದು ಸ್ಥಾನವನ್ನು ಪಡೆದುಕೊಂಡಿವೆ. ಆದರೆ, ಈ ಬಾರಿಯ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಕಳೆದುಕೊಳ್ಳಲಿರುವ ಬಿಜೆಪಿ 24 ಸ್ಥಾನವನ್ನು ಉಳಿಸಿಕೊಳ್ಳಲಿದೆ.

ವಿಶೇಷ ಎಂದರೆ, ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಹಳೆ ಮೈಸೂರು ಕರ್ನಾಟಕದಲ್ಲಿ ಸಾಕಷ್ಟು ಪ್ರಾಬಲ್ಯವನ್ನು ಹೊಂದಿರುವ ಜೆಡಿಎಸ್ ನಾಲ್ಕೈದು ಸ್ಥಾನಗಳಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆಯಾದರೂ, ಇನ್ನೂ ಸೀಟು ಹಂಚಿಕೆಯಾಗಿಲ್ಲ. ಹಾಗಾಗಿ, ಯಾವ ಸ್ಥಾನಗಳಲ್ಲಿ ಜೆಡಿಎಸ್ ಗೆಲ್ಲಬಹುದು ಎಂಬ ನಿಖರ ಮಾಹಿತಿ ಇಲ್ಲ.

ವಿಧಾನಸಭೆ ಗೆದ್ದಿದ್ದ ಕಾಂಗ್ರೆಸ್‌ಗೆ ಹಿನ್ನಡೆ

2023ರ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿಯಾಗಿ ಗೆದ್ದಿದ್ದ ಕಾಂಗ್ರೆಸ್ ಪಕ್ಷಕ್ಕೆ 2024ರ ಲೋಕಸಭೆ ಚುನಾವಣೆಯು ನಿರಾಸೆ ಮೂಡಲಿದೆ ಎಂಬುದು ಸಮೀಕ್ಷೆಗಳ ಸಾರವಾಗಿದೆ. 2019ರ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನವನ್ನು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 15ರಿಂದ 20 ಸ್ಥಾನಗಳನ್ನು ಗೆಲ್ಲುವ ಪಣ ತೊಟ್ಟಿದೆ. ಆದರೆ, ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್‌ಗೆ ಕೇವಲ ನಾಲ್ಕು ಸ್ಥಾನಗಳು ಸಿಗುವ ಸಾಧ್ಯತೆ ಇದೆ.

ಎನ್‌ಡಿಎ ಪರ ಜನರ ಒಲವೇಕೆ?

1)ಪ್ರಧಾನಿ ನರೇಂದ್ರ ಮೋದಿ ಪ್ರಬಲ ನಾಯಕತ್ವ
2) ಭ್ರಷ್ಟಾಚಾರ ರಹಿತ 10 ವರ್ಷಗಳ ಆಡಳಿತ
3) ರಾಹುಲ್‌ಗಾಂಧಿ ವಿಫಲ ನಾಯಕತ್ವಕ್ಕೆ ಕಾಂಗ್ರೆಸ್‌ ಮನ್ನಣೆ
4) 28 ಪಕ್ಷಗಳ I.N.D.I.A ಮೈತ್ರಿಕೂಟ ಛಿದ್ರವಾಗಿದ್ದು
5) ದೇಶದಲ್ಲಿ ಪ್ರಬಲ ವಿರೋಧ ಪಕ್ಷದ ಕೊರತೆ
6) ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ
7) ಭಾರಿ ವೇಗದಲ್ಲಿ ರಸ್ತೆ, ರೈಲ್ವೆ ಸೌಕರ್ಯ ಅಭಿವೃದ್ದಿ
8) ವಿಶ್ವದಲ್ಲೇ ಅತಿ ವೇಗವಾಗಿ ಆರ್ಥಿಕ ಬೆಳವಣಿಗೆ
9) ಮೋದಿ ಬಗ್ಗೆ ವಿಶ್ವದ ನಾಯಕರಿಂದ ಪ್ರಶಂಸೆ
10) ಭಾರತದ ಬಗ್ಗೆ ವಿಶ್ವ ನೋಡುವ ನೋಟ ಬದಲಾವಣೆ
11) ಮೇಕ್‌ ಇನ್‌ ಇಂಡಿಯಾ, ಆತ್ಮನಿರ್ಭರ ಭಾರತದಂತಹ ಯೋಜನೆಗಳು
12) ರೈತರಿಗೆ, ಮಹಿಳೆಯರಿಗೆ, ವೃದ್ದರಿಗೆ ಕೇಂದ್ರ ಯೋಜನೆಗಳ ನೇರ ಲಾಭ
13) ಬಿಜೆಪಿ ಬಹುಸಂಖ್ಯಾತ ಹಿಂದುತ್ವದ ಪರ, ಕಾಂಗ್ರೆಸ್‌ ಅಲ್ಪಸಂಖ್ಯಾತರ ಓಲೈಕೆ
13) 2047ರಲ್ಲಿ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಬದಲಾವಣೆ ಭರವಸೆ

ಈ ಸುದ್ದಿಯನ್ನೂ ಓದಿ: 2024ರ ಚುನಾವಣೆಯಲ್ಲಿ ಮೋದಿ ಮತ್ತಷ್ಟು ಸ್ಟ್ರಾಂಗ್! ಹೊಸ ಸಮೀಕ್ಷೆ ಪ್ರಕಾರ ಎನ್‌ಡಿಎಗೆ ಸಿಗುವ ಸೀಟೆಷ್ಟು?

Exit mobile version