Site icon Vistara News

ನೇಹಾ ಧೂಪಿಯಾ @42

ನೇಹಾ ಧೂಪಿಯಾ

ನೇಹಾ ಧೂಪಿಯಾ 1980ರ ಆ.27ರಂದು ಕೇರಳದ ಕೊಚ್ಚಿಯಲ್ಲಿ ಜನಿಸಿದರು. ಹಿಂದಿ, ಪಂಜಾಬಿ, ತೆಲುಗು, ಮಲಯಾಳಂ, ಜಪಾನೀಸ್‌, ಉರ್ದು ಚಿತ್ರಗಳಲ್ಲಿ ನಟಿಸಿದ್ದಾರೆ.

1994ರ ಮಲಯಾಳಂ ಚಿತ್ರ ‘ಮಿನ್ನಾರಂ’ನಲ್ಲಿ ಬಾಲ ನಟಿಯಾಗಿ ಬೆಳ್ಳಿತೆರೆಗೆ ಪದಾರ್ಪಣೆ.

2000ರಲ್ಲಿ ಬಿಡುಗಡೆಯಾದ ಜಪಾನೀಸ್ ಚಿತ್ರ Ninja Odoru! Ninja Densetsuನಲ್ಲಿ ಮೀನಾ ಪಾತ್ರದಲ್ಲಿ ನಟಿಸಿದ್ದಾರೆ.

ಫೆಮಿನಾ ಮಿಸ್ ಇಂಡಿಯಾ 2002 ಸ್ಪರ್ಧೆಯಲ್ಲಿ ಇವರು ವಿಜೇತರು. ಅದೇ ವರ್ಷ ಮಿಸ್ ಯೂನಿವರ್ಸ್‌ನಲ್ಲಿ 10 ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದರು.

2003ರ Qayamat: City Under Threat ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟರು.

Qayamat: City Under Threat ಚಿತ್ರಕ್ಕಾಗಿ ಸ್ಕ್ರಿನ್‌ ಅವಾರ್ಡ್ಸ್‌ನಿಂದ ಅತ್ಯುತ್ತಮ ನಟಿ ಪ್ರಶಸ್ತಿ.

2005ರ ‘ಶೀಶಾ’ ಚಿತ್ರದಲ್ಲಿ ನೇಹಾ ದ್ವಿಪಾತ್ರದಲ್ಲಿ ನಟಿಸಿದ್ದಾರೆ.

2008ರ ಪಾಕಿಸ್ತಾನದ ಉರ್ದು ಚಿತ್ರ ‘ಕಭಿ ಪ್ಯಾರ್ ನಾ ಕರನಾ’ದಲ್ಲಿ ನೇಹಾ ನಟಿಸಿದ್ದಾರೆ.

2017ರ ‘ತುಮಾರಿ ಸುಲು’ ಚಿತ್ರದ ʼಮರಿಯಾʼ ಪಾತ್ರಕ್ಕಾಗಿ ಸ್ಜ್ರೀನ್‌ ಅವಾರ್ಡ್ಸ್‌ನಿಂದ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ.

MTVಯ ಪ್ರಸಿದ್ಧ ರಿಯಾಲಿಟಿ ಶೋ MTV Roadiesನಲ್ಲಿ 2016ರಿಂದ ಈವರೆಗೆ ಅವರು ʼಗ್ಯಾಂಗ್‌ ಲೀಡರ್‌ʼ.

ಇದನ್ನೂ ಓದಿ| ಜನುಮದಿನದ ಶುಭಾಶಯ ರಣದೀಪ್ ಹೂಡಾ

Exit mobile version