ನವದೆಹಲಿ: ಟ್ವಿಟರ್, ಅಮೆಜಾನ್ ಸೇರಿ ಜಗತ್ತಿನ ಹಲವು ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಬೆನ್ನಲ್ಲೇ ಒಟಿಟಿ ಪ್ಲಾಟ್‌ಫಾರ್ಮ್ ದೈತ್ಯ ನೆಟ್‌ಫ್ಲಿಕ್ಸ್ ಕಂಪನಿಯು (Netflix Hiring) ಪ್ರೈವೇಟ್ ಜೆಟ್‌ಗೆ ಪರಿಚಾರಕರನ್ನು (Flight Attendant) ಹುಡುಕುತ್ತಿದೆ. ಅದರಲ್ಲೂ, ವರ್ಷಕ್ಕೆ ಕೋಟಿ ಕೋಟಿ ರೂಪಾಯಿ ಸಂಬಳ ಇರುವ ಕಾರಣ ಇದು ದೊಡ್ಡ ಆಫರ್ ಎನಿಸಿದೆ.
ಹೌದು, ಕ್ಯಾಲಿಫೋರ್ನಿಯಾದಲ್ಲಿರುವ ಕಂಪನಿ ಹೆಡ್‌ಕ್ವಾರ್ಟರ್ಸ್‌ನ ಪ್ರೈವೇಟ್ ಜೆಟ್‌ನ ಅಟೆಂಡಂಟ್ ಆಗುವವರಿಗೆ ವಾರ್ಷಿಕ ಮೂರು ಕೋಟಿ ರೂಪಾಯಿಗಿಂತ (3.85 ಲಕ್ಷ ಡಾಲರ್) ಅಧಿಕ ಸಂಬಳ ನೀಡಲು ಕಂಪನಿಯು ತೀರ್ಮಾನಿಸಿದೆ. ಹಾಗಾಗಿ, ಜಾಗತಿಕವಾಗಿ ಸಂಬಳದ ಆಫರ್ ಸಂಚಲನ ಮೂಡಿಸಿದೆ.
ಮೂರು ಕೋಟಿ ರೂ. ಸಂಬಳ ನೀಡುವ ಕಂಪನಿಯು ಗಗನಸಖಿ ಅಥವಾ ಗಗನಸಖ ಆಗುವವರ ಬಳಿ ಕೆಲವು ಕೌಶಲಗಳು ಇರಬೇಕು ಎಂದು ನಿರೀಕ್ಷಿಸಿದೆ. ಹೆಚ್ಚು ಹೊತ್ತು ನಿಲ್ಲುವ, ಭಾರದ ಲಗೇಜುಗಳನ್ನು ಎತ್ತಿ ಇಡುವ, ಉತ್ತಮ ಸಂವಹನ ಕೌಶಲ ಸೇರಿ ಹಲವು ಕೌಶಲಗಳು ಇರುವವರು ಅರ್ಜಿ ಹಾಕಬಹುದು ಎಂದು ಕಂಪನಿ ತಿಳಿಸಿದೆ. ಕೆಲ ತಿಂಗಳ ಹಿಂದಷ್ಟೇ ಕಂಪನಿಯು ನೂರಾರು ಉದ್ಯೋಗಿಗಳನ್ನು ವಜಾಗೊಳಿಸಿದೆ.
ಇದನ್ನೂ ಓದಿ | Salary hike | ಭಾರತದ ಉದ್ಯೋಗಿಗಳಿಗೆ ಶೇ.15ರಿಂದ 30ರಷ್ಟು ವೇತನ ಏರಿಕೆ: ಸಮೀಕ್ಷೆ