Site icon Vistara News

Shah Rukh Khan: ಹಾಲಿವುಡ್‌ನಿಂದ ನನಗೆ ಈವರೆಗೂ ಆಫರ್‌ ಬಂದಿಲ್ಲ ಎಂದ ಶಾರುಖ್ ಖಾನ್

'never' been offered a role in Hollywood Says Shah Rukh Khan

ನವದೆಹಲಿ: ಭಾರತದ ಪ್ರಮುಖ ಸಾಂಸ್ಕೃತಿಕ ನಾಯಕರಲ್ಲಿ ಒಬ್ಬರೆನಿಸಿರುವ ಬಾಲಿವುಡ್ ಸೂಪರ್ ಸ್ಟಾರ್, ಶಾರುಖ್ ಖಾನ್ (Shah Rukh Khan) ಫೆಬ್ರವರಿ 14 ರಂದು ದುಬೈನಲ್ಲಿ ನಡೆದ ವಿಶ್ವ ಸರ್ಕಾರದ ಶೃಂಗಸಭೆಯಲ್ಲಿ(WGS) ಆಯೋಜಿಸಲಾಗಿದ್ದ ‘ಟೈಮ್‌ಲೆಸ್ ಸಕ್ಸಸ್: ಶಾರುಖ್ ಖಾನ್ ಜೊತೆಗಿನ ಸಂವಾದ’ ಎಂಬ ಶೀರ್ಷಿಕೆಯ ಅಧಿವೇಶನದಲ್ಲಿ ಸೂಪರ್‌ಸ್ಟಾರ್ ತಮ್ಮ ಆಲೋಚನೆಗಳನ್ನು ಹಂಚಿಕೊಂಡರು. ಈ ವೇಳೆ, ಶಾರುಖ್ ಖಾನ್ ಅವರು ಹಾಲಿವುಡ್ (Hollywood) ಅಥವಾ ಇಂಗ್ಲೆಂಡ್‌ನಲ್ಲಿ ಎಂದಿಗೂ ಸಿನಿಮಾದಲ್ಲಿ ನಟಿಸಲು ಆಫರ್ ಬರಲೇ ಇಲ್ಲ ಎಂದು ಬಹಿರಂಗಪಡಿಸಿದರು.

ಹಿರಿ ತೆರೆಯಲ್ಲಿ ಮ್ಯಾಜಿಕ್ ಮಾಡುತ್ತಿರುವ ಹಾಗೂ ಅತ್ಯುತ್ತಮ ಪ್ರಸೆನ್ಸ್ ಹೊಂದಿರುವ ಶಾರುಖ್ ಖಾನ್ ಅವರು ಹಾಲಿವುಡ್ ಪ್ರವೇಶ ಏಕೆ ವಿಳಂಬವಾಗುತ್ತಿದೆ ಎಂಬ ಪ್ರಶ್ನೆಗೆ ಅವರು ನೀಡಿದು ಉತ್ತರ ಎಲ್ಲರನ್ನು ದಂಗುಬಡಿಸಿತು.

ಹಾಲಿವುಡ್ ಅಥವಾ ಇಂಗ್ಲೆಂಡ್‌ನಲ್ಲಿ ತನಗೆ ಎಂದಿಗೂ ಚಲನಚಿತ್ರವನ್ನು ಆಫರ್ ಮಾಡಿಲ್ಲ. ನಾನು ಇದನ್ನು ಪ್ರಾಮಾಣಿಕವಾಗಿ ಹೇಳಿದ್ದೇನೆ. ಆದರೆ ಯಾರೂ ಅದನ್ನು ನಂಬುವುದಿಲ್ಲ, ಆದ್ದರಿಂದ ನಾನು ಅದನ್ನು ಮತ್ತೆ ಹೇಳುತ್ತೇನೆ. ಯಾರೂ ನನಗೆ ಆಫರ್ ನೀಡಿಲ್ಲ. ನಾನು ಜನರೊಂದಿಗೆ ಸಂಭಾಷಣೆ ನಡೆಸಿರಬಹುದು. ನನಗೆ ಪಾಶ್ಚಿಮಾತ್ಯ, ಇಂಗ್ಲಿಷ್ ಮತ್ತು ಅಮೇರಿಕನ್ ಚಲನಚಿತ್ರೋದ್ಯಮದ ಅನೇಕ ಸುಂದರ ವ್ಯಕ್ತಿಗಳು ಗೊತ್ತಿದ್ದಾರೆ. ಆದರೆ ಯಾರೂ ನನಗೆ ಯಾವುದೇ ಒಳ್ಳೆಯ ಕೆಲಸವನ್ನು ನೀಡಲಿಲ್ಲ ಎಂದು ಶಾರುಖ್ ಖಾನ್ ಅವರು ಹೇಳಿದರು.

ಗಡಿ ದಾಟುವ ಬಗ್ಗೆ ನಟರು ಮಾತನಾಡುವುದನ್ನು ಕೇಳಿದ್ದೇನೆ. ನನ್ನನ್ನು ಇಷ್ಟಪಡುವ ಪ್ರೇಕ್ಷಕರಿಗೆ ಹೇಗೆ ತಲುಪಿಸಲು ಸಾಧ್ಯವಾಗುತ್ತದೆ ಎಂದು ನಾನು ಇನ್ನೂ ಕಲಿಯಬೇಕಾಗಿದೆ ಎಂದು ನಾನು ಭಾವಿಸುತ್ತೇನೆ. ನಿಮಗೆ ಕೆಲಸ ನೀಡದಿದ್ದರೆ, ನೀವು ಅದನ್ನು ಹೇಗೆ ತೆಗೆದುಕೊಳ್ಳುತ್ತೀರಿ? ಹಾಲಿವುಡ್ ಅಥವಾ ಇಂಗ್ಲೆಂಡ್‌ನಲ್ಲಿ ನನಗೆ ಎಂದಿಗೂ ಚಲನಚಿತ್ರವನ್ನು ಆಫರ್ ಮಾಡಿಲ್ಲ ಎಂದು ಶಾರುಖ್ ಖಾನ್ ಹೇಳಿದರು.

ಇಷ್ಟಾಗಿಯೂ ಡ್ಯಾನಿ ಬೋಯೆಲ್ ಅವರು ಸ್ಲಮ್ ಡಾಗ್ ಮಿಲಿಯನೇರ್ ಸಿನಿಮಾದ ಕ್ವಿಜ್ ಕಾರ್ಯಕ್ರಮ ನಿರೂಪಕ ಪಾತ್ರಕ್ಕೆ ಸಂಪರ್ಕಿಸಿದ್ದರು. ನಾನು ಬೋಯೆಲ್ ಅವರೊಂದಿಗೆ ಸಾಕಷ್ಟು ಸಮಯ ಕಳೆದಿದ್ದೇನೆ. ಆ ಸಮಯದಲ್ಲಿ ನಾನು ಟಿವಿಯಲ್ಲಿ ಹೂ ವಾಂಟ್ಸ್ ಟು ಬಿ ಮಿಲಿಯನೇರ್ ಅನ್ನು ಯಶಸ್ವಿಯಾಗಿ ನಡೆಸಿಕೊಡುತ್ತಿದ್ದೆ. ಚಿತ್ರದ ಕಥೆಯಲ್ಲಿ, ಹೋಸ್ಟ್ ಮಾಡುತ್ತಿದ್ದ ವ್ಯಕ್ತಿ ತುಂಬಾ ನೀಚನಾಗಿರುತ್ತಾನೆ. ಚಿತ್ರದಲ್ಲಿನ ವ್ಯಕ್ತಿ ಹೋಸ್ಟ್ ಆಗಿ ಮೋಸ ಮಾಡುತ್ತಿದ್ದಾನೆ ಎಂದು ನಾನು ಕಂಡುಕೊಂಡೆ. ರಿಯಲ್ ಲೈಫ್‌ನಲ್ಲಿ ನಾನು ಅಂಥದ್ದೇ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದೆ. ಆದರೆ, ನಾನು ಚಿತ್ರದಲ್ಲಿ ಮೋಸ ಮಾಡುವ ಪಾತ್ರವನ್ನು ಮಾಡಬೇಕಾಗುತ್ತಿತ್ತು. ಹಾಗಾಗಿ, ದಯವಿಟ್ಟು ಅದನ್ನು ಮಾಡಲು ನಾನು ಇಷ್ಟಪಡುವುದಿಲ್ಲ ಮತ್ತು ನನಗಿಂತ ಉತ್ತಮ ನಟರು ಇದ್ದಾರೆ ಎಂದು ತಿಳಿಸಿದೆ. ಬಳಿಕ ಅನಿಲ್ ಕಪೂರ್ ಆ ಪಾತ್ರವನ್ನು ಮಾಡಿದರು ಎಂದು ಶಾರುಖ್ ಖಾನ್ ಹೇಳಿದರು.

ಈ ಸುದ್ದಿಯನ್ನೂ ಓದಿ: ನೌಕಾ ಅಧಿಕಾರಿಗಳ ಬಿಡುಗಡೆಯಲ್ಲಿ ಯಾವುದೇ ಪಾತ್ರ ನಿರ್ವಹಿಸಿಲ್ಲ ಎಂದ ಶಾರುಖ್ ಖಾನ್; ಸ್ವಾಮಿಗೆ ಮುಖಭಂಗ!

Exit mobile version