Site icon Vistara News

New Parliament Building: ಹೊಸ ಸಂಸತ್ತಿನ ಉದ್ಘಾಟನೆಯ ನೆನಪಿಗೆ ₹ 75 ನಾಣ್ಯ

New Parliament Building

How Is New Parliament Building, Here Is A video

ಹೊಸ ದಿಲ್ಲಿ: ನೂತನ ಸಂಸತ್ ಭವನದ ಉದ್ಘಾಟನೆಯ ಸ್ಮರಣಾರ್ಥ ₹ 75 ನಾಣ್ಯವನ್ನು ಟಂಕಿಸುವುದಾಗಿ ಕೇಂದ್ರ ಹಣಕಾಸು ಸಚಿವಾಲಯ ಗುರುವಾರ ಪ್ರಕಟಿಸಿದೆ. ನಾಣ್ಯದಲ್ಲಿ ಹೊಸ ಕಟ್ಟಡದ ಚಿತ್ರವಿದ್ದು ʼParliament Complex’ ಎಂದು ಮುದ್ರಿಸಲಾಗಿರುತ್ತದೆ.

ಹೊಸ ನಾಣ್ಯ ಹೇಗಿರುತ್ತದೆ?

ಅಧಿಸೂಚನೆಯ ಪ್ರಕಾರ, ನಾಣ್ಯವು ವೃತ್ತಾಕಾರವಾಗಿದ್ದು 44 ಮಿಲಿಮೀಟರ್ ವ್ಯಾಸ ಹೊಂದಿರುತ್ತದೆ. ಅಂಚಿನಲ್ಲಿ ಉದ್ದಕ್ಕೂ 200 ಸರಪಣಿಗಳ ಮುದ್ರಣವಿರುತ್ತದೆ. ನಾಣ್ಯವು 50% ಬೆಳ್ಳಿ, 40% ತಾಮ್ರ, 5% ನಿಕಲ್ ಮತ್ತು 5% ಸತುವನ್ನು ಒಳಗೊಂಡಿರುವ ಕ್ವಾಟರ್ನರಿ ಮಿಶ್ರಲೋಹವನ್ನು ಹೊಂದಿರುತ್ತದೆ.

ರಾಷ್ಟ್ರೀಯ ಲಾಂಛನವಾದ ಅಶೋಕ ಸ್ತಂಭದ ಸಿಂಹಗಳ ಜೊತೆಗೆ ‘ಸತ್ಯಮೇವ ಜಯತೇ’ ಎಂಬ ವಾಕ್ಯ ನಾಣ್ಯದ ಹಿಂಭಾಗದಲ್ಲಿ ಇರಲಿದೆ. ಇಂಗ್ಲಿಷ್‌ ಹಾಗೂ ದೇವನಾಗರಿ ಲಿಪಿಯಲ್ಲಿ ಎಡ- ಬಲ ಕಡೆಗಳಲ್ಲಿ ʼಭಾರತʼ ಎಂದು ಬರೆದಿರುತ್ತದೆ. ನಾಣ್ಯದ ಮೇಲ್ಬದಿಯಲ್ಲಿ ಇಂಗ್ಲಿಷ್‌ನಲ್ಲಿ ಹಾಗೂ ಕೆಳಬದಿಯಲ್ಲಿ ದೇವನಾಗರಿ ಲಿಪಿಯಲ್ಲಿ ʼಸಂಸತ್‌ ಭವನʼ ಎಂದು ಕೆತ್ತಲಾಗಿರುತ್ತದೆ. ನಾಣ್ಯದ ವಿನ್ಯಾಸ ಸಂವಿಧಾನದ ಮೊದಲ ಶೆಡ್ಯೂಲ್‌ನಲ್ಲಿ ನಿರ್ದಿಷ್ಟಪಡಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿರುತ್ತದೆ.

ನೂತನ ಸಂಸತ್‌ ಭವನವನ್ನು ಮೇ 28ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ.

ಇದನ್ನೂ ಓದಿ: ವಿಸ್ತಾರ Explainer: New Parliament Building: ಹೇಗಿದೆ ಹೊಸ ಸಂಸತ್‌ ಭವನ? ಇಲ್ಲಿದೆ ನೋಡಿ ವಿಡಿಯೊ

Exit mobile version