Site icon Vistara News

Home Loan: ನಗರದಲ್ಲಿ ಮನೆ ಖರೀದಿಗೆ ಕೇಂದ್ರ ಸರ್ಕಾರದಿಂದ ಶೀಘ್ರ ಹೊಸ ಯೋಜನೆ! ಬಡ್ಡಿಯಲ್ಲಿ ವಿನಾಯ್ತಿ?

home loan

ನವದೆಹಲಿ: ನಗರಗಳಲ್ಲಿ ಸ್ವಂತ ಮನೆಯನ್ನು (Own House) ಹೊಂದುವ ಮಧ್ಯಮ ವರ್ಗದವರ (Middle Class) ಕನಸನ್ನು ನನಸು ಮಾಡಲು ಕೇಂದ್ರ ಸರ್ಕಾರ (Central Government) ಹೊರಟಿದೆ. ಈ ಕುರಿತಾದ ಹೊಸ ಯೋಜನೆಯೊಂದನ್ನು ಸೆಪ್ಟೆಂಬರ್ ತಿಂಗಳಲ್ಲಿ ಘೋಷಣೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಆಗಸ್ಟ್ 15, ಸ್ವಾತಂತ್ರ್ಯ ದಿನದಂದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಕೆಂಪು ಕೋಟೆಯಲ್ಲಿ ಭಾಷಣ ಮಾಡುತ್ತಾ, ಸ್ವಂತ ಮನೆಯ ಕನಸು ಕಾಣುತ್ತಿರುವ ನಗರಗಳಲ್ಲಿನ ಮಧ್ಯಮ ವರ್ಗದ ಜನರಿಗೆ ಹೊಸ ಯೋಜನೆಯ ಮೂಲಕ ನೆರವು ಒದಗಿಸಲಾಗುವುದು ಎಂದು ಹೇಳಿದ್ದರು. ಅದೀಗ ಅನುಷ್ಠಾನಗೊಳ್ಳುತ್ತಿದೆ.

ಈ ಕುರಿತು ಸುಳಿವು ನೀಡಿರುವ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು, ನಗರವಾಸಿಗಳಿಗೆ ಮನೆ ಒದಗಿಸುವ ಈ ಯೋಜನೆಯ ಕುರಿತಾದ ಕಾರ್ಯವಿಧಾನಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ನಗರಗಳಲ್ಲಿ ಸ್ವಂತ ಮನೆಗಳನ್ನು ಹೊಂದಲು ಬಯಸುವವರಿಗೆ ಬ್ಯಾಂಕ್ ಸಾಲದ ಮೇಲಿನ ಬಡ್ಡಿಯಲ್ಲಿ ಪರಿಹಾರ ನೀಡುವ ಯೋಜನೆಯನ್ನು ಸೆಪ್ಟೆಂಬರ್‌ನಲ್ಲಿ ಪ್ರಾರಂಭಿಸಲಾಗುವುದು ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಮನೋಜ್ ಜೋಶಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರೂ ಕೆಂಪು ಕೋಟೆಯ ಭಾಷಣದ ವೇಳೆ ಈ ಯೋಜನೆಯ ಜಾರಿ ಕುರಿತು ಮಾತನಾಡಿದ್ದರು. ನಗರಗಳಲ್ಲಿ ವಾಸಿಸುತ್ತಿದ್ದು ಸ್ವಂತ ಮನೆ ಇಲ್ಲದ ಮಧ್ಯಮ ವರ್ಗದವರಿಗೆ ಮನೆ ಖರೀದಿಗೆ ನೆರವು ಒದಗಿಸುವ ಭರವಸೆಯನ್ನು ನೀಡಿದ್ದರು. ನಗರಗಳಲ್ಲಿರು ಮಧ್ಯಮ ವರ್ಗದ ಜನರು ಸ್ವಂತ ಮನೆಗಳನ್ನು ಹೊಂದುವ ಕನಸು ಕಂಡಿರುತ್ತಾರೆ. ಅವರಿಗಾಗಿ ನಾವು ಶೀಘ್ರವೇ ಯೋಜನೆಯನ್ನು ಜಾರಿ ಮಾಡುತ್ತೇವೆ ಎಂದು ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆ ವೇಳೆ ಹೇಳಿದ್ದರು.

ಈ ಸುದ್ದಿಯನ್ನೂ ಓದಿ: Home loan EMI : ಈಗ ಗೃಹ ಸಾಲಗಾರರಿಗೆ ಅಸಲಿಗಿಂತ ಬಡ್ಡಿಯೇ ಜಾಸ್ತಿ, ಎರಡು ವರ್ಷಗಳಲ್ಲಿ ಆಗಿದ್ದೇನು?

ನಗರಗಳಲ್ಲಿ ಬಾಡಿಗೆ ಮನೆ, ಅನಧಿಕೃತ ಕಾಲೋನಿಗಳು ಮತ್ತು ಗುಡಿಸಲುಗಳಲ್ಲಿ ವಾಸಿಸುವ ಕುಟುಂಬಗಳಿಗೆ ಸ್ವಂತ ಮನೆ ನಿರ್ಮಿಸಲು ಲಕ್ಷ ರೂಪಾಯಿಗಳ ಸಹಾಯವನ್ನು ನೀಡುವ ಮೂಲಕ ಬ್ಯಾಂಕ್ ಸಾಲದ ಬಡ್ಡಿಯಲ್ಲಿ ಪರಿಹಾರ ನೀಡಲು ನಾವು ನಿರ್ಧರಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು. ಮುಂದಿನ ಎರಡ್ಮೂರು ವಾರದಲ್ಲಿ ಈ ಕುರಿತು ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version