Site icon Vistara News

NIA Arrest: ಹಿಜ್ಬುಲ್‌, LeT ಉಗ್ರ ಸಂಘಟನೆಗಳ ಜೊತೆ ನಂಟು; ಪ್ರಮುಖ ಆರೋಪಿ ಅರೆಸ್ಟ್‌

NIA Arrest

ಹೊಸದಿಲ್ಲಿ: ಜಮ್ಮು-ಕಾಶ್ಮೀರದಲ್ಲಿ ಪಾಕಿಸ್ತಾನ ಮೂಲದ ಲಷ್ಕರ್‌ ಎ ತೊಯ್ಬಾ (LeT) ಮತ್ತು ಹಿಜ್ಬುಲ್‌ ಮುಜಾಹಿದ್ದೀನ್‌(HM) ಸಂಘಟನೆ ಜೊತೆಗೆ ನಂಟು ಹೊಂದಿದ್ದ ಪ್ರಮುಖ ಆರೋಪಿಯನ್ನು ಎನ್‌ಐಎ(NIA Arrest) ಅರೆಸ್ಟ್‌ ಮಾಡಿದೆ. ನಾರ್ಕೋ-ಭಯೋತ್ಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಯ್ಯದ್‌ ಸಲೀಂ ಜಹಾಂಗೀರ್‌ ಅಂದ್ರಾಬಿ ಅಲಿಯಾಸ್‌ ಸಲೀಂ ಅಂದ್ರಾಬಿ ಕಳೆದ ನಾಲ್ಕೈದು ವರ್ಷಗಳಿಂದ ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.

ಸಯ್ಯದ್‌ ಸಲೀಂ ವಿರುದ್ಧ ಎನ್‌ಡಿಪಿಎಸ್‌ ಕಾಯ್ದೆಯಲ್ಲಿ ಈತನ ವಿರುದ್ಧ ಕೇಸ್‌ ದಾಖಲಿಸಲಾಗಿದೆ. ನಾರ್ಕೋ ಭಯೋತ್ಪಾದನೆ ನಿಗ್ರಹಿಸುವಲ್ಲಿ ಪಣತೊಟ್ಟಿರುವ ಎನ್‌ಐಎಗೆ ಇದು ಬಹುದೊಡ್ಡ ಮಟ್ಟದ ಯಶಸ್ಸು ಎಂದು ಹೇಳಲಾಗಿದೆ. ಈತ ಗಡಿ ಭಾಗದಲ್ಲಿ ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.

ಗ್ರೇಟರ್ ಕಾಶ್ಮೀರ ವೆಬ್‌ಸೈಟ್‌ನ ಪ್ರಕಾರ, ಜೂನ್ 26, 2020 ರಂದು ಸ್ಥಳೀಯ ಪೊಲೀಸರಿಂದ ಪ್ರಕರಣದ ತನಿಖೆಯನ್ನು ಕೇಂದ್ರೀಯ ಸಂಸ್ಥೆ ವಹಿಸಿಕೊಂಡಿತ್ತು. ಎನ್‌ಐಎ ತನ್ನ ತನಿಖೆಯ ಸಮಯದಲ್ಲಿ, ಭಾನುವಾರ ಬಂಧಿತ ಆರೋಪಿ ಅಂದ್ರಾಬಿ ಜಮ್ಮು ಮತ್ತು ಕಾಶ್ಮೀರ ಮತ್ತು ಭಾರತದ ಇತರ ಭಾಗಗಳಲ್ಲಿ ಮಾದಕ ದ್ರವ್ಯಗಳನ್ನು ಸಂಗ್ರಹಿಸಲು ಮತ್ತು ಮಾರಾಟ ಮಾಡುವ ಜಾಲದಲ್ಲಿ ಭಾಗಿಯಾಗಿದ್ದ.

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಅಬ್ದುಲ್ ಮೋಮಿನ್ ಪೀರ್ ಎಂಬಾತನನ್ನು ಬಂಧಿಸಿದ ಹಂದ್ವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆತನನ್ನು ಬಂಧಿಸಿದ ಪೊಲೀಸರು ₹20 ಲಕ್ಷ ನಗದು ಹಾಗೂ 2 ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಇಲ್ಲಿಯವರೆಗೆ, NIA ಪ್ರಕರಣದಲ್ಲಿ ಒಟ್ಟು 15 ಆರೋಪಿಗಳನ್ನು ಚಾರ್ಜ್ ಶೀಟ್ ಮಾಡಿದೆ. ಈ ಚಾರ್ಜ್ ಶೀಟ್‌ಗಳನ್ನು ಡಿಸೆಂಬರ್ 2020 ಮತ್ತು ಫೆಬ್ರವರಿ 2023 ರ ನಡುವೆ ಸಲ್ಲಿಸಲಾಗಿದೆ.

ಕೆಲವು ದಿನಗಳ ಹಿಂದೆಯಷ್ಟೇ ಕೇರಳದಲ್ಲಿ ಉಗ್ರ ಸಂಘಟನೆಗಳಿಗೆ ಯುವಕರನ್ನು ನೇಮಕಾತಿ ಮಾಡುತ್ತಿದ್ದ ಆರೋಪದಲ್ಲಿ ಕುಖ್ಯಾತ ಮಾವೋವಾದಿ ಸಂಜಯ್‌ ದೀಪಕ್‌ ರಾವ್‌(Sanjay Deepak Rao) ವಿರುದ್ಧ ಎನ್‌ಐಎ(NIA Charge sheet) ಚಾರ್ಜ್‌ ಶೀಟ್‌ ದಾಖಲಿಸಿತ್ತು.. ಸಿಪಿಐ (ಮಾವೋವಾದಿ)ಯ ಪಶ್ಚಿಮ ಘಟ್ಟಗಳ ವಿಶೇಷ ವಲಯ ಸಮಿತಿಯ (ಡಬ್ಲ್ಯುಜಿಎಸ್‌ಝಡ್‌ಸಿ) ಕೇಂದ್ರ ಸಮಿತಿ ಸದಸ್ಯ ಸಂಜಯ್ ದೀಪಕ್ ರಾವ್ ವಿರುದ್ಧ ಎನ್‌ಐಎ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಐಪಿಸಿ ಮತ್ತು ಯುಎ (ಪಿ) ಕಾಯ್ದೆ ಯುಎಪಿಎಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಎರ್ನಾಕುಲಂನ ಎನ್‌ಐಎ ವಿಶೇಷ ನ್ಯಾಯಾಲಯದ ಮುಂದೆ ಎನ್‌ಐಎ ಈ ಚಾರ್ಜ್‌ಶೀಟ್‌ ದಾಖಲಿಸಿದೆ.

ಸಿಪಿಐ (ಮಾವೋವಾದಿ) ಪಶ್ಚಿಮ ಘಟ್ಟದ ​​ವಿಶೇಷ ವಲಯ ಸಮಿತಿಯ (ಡಬ್ಲ್ಯುಜಿಎಸ್‌ಝಡ್‌ಸಿ) ಕೇಂದ್ರ ಸಮಿತಿ ಸದಸ್ಯ ಸಂಜಯ್ ದೀಪಕ್ ರಾವ್ ಅಲಿಯಾಸ್‌ ವಿಕಾಸ್, ಸಿಪಿಐನ ಮುಂಚೂಣಿ ಸಂಘಟನೆಯಾದ ಕ್ರಾಂತಿಕಾರಿ ಲೇಖಕಿಯರ ಸಂಘದ ಸದಸ್ಯರಾದ ಪಿನಾಕಾ ಪಾಣಿ ಅಲಿಯಾಸ್‌ ಪಾಣಿ ಮತ್ತು ವರಲಕ್ಷ್ಮಿ ಆರೋಪಿಗಳು ಎಂದು ತನಿಖೆಯಿಂದ ತಿಳಿದುಬಂದಿದೆ. ಆಂಧ್ರಪ್ರದೇಶದಲ್ಲಿ (ಮಾವೋವಾದಿ), ವಯನಾಡಿನ ಶ್ರೀಕಾಂತ್ ಮತ್ತು ಆಂಧ್ರಪ್ರದೇಶದ ಆಂಜನೇಯಲು ಅಕಾ ಸುಧಾಕರ್ ಮುಂತಾದವರು ಚೈತನ್ಯ ಅಕಾ ಸೂರ್ಯನನ್ನು ನಿಷೇಧಿತ ಭಯೋತ್ಪಾದಕ ಸಂಘಟನೆ ಸಿಪಿಐ (ಮಾವೋವಾದಿ)ಗೆ ಸೇರ್ಪಡೆಗೊಳ್ಳಲು ಪ್ರೇರೇಪಿಸಿದ್ದಾರೆ ಎಂಬುದನ್ನು ಎನ್‌ಐಎ ಹೇಳಿದೆ. ನೇಮಕಾತಿಯ ನಂತರ, ಭಾರತದ ಒಕ್ಕೂಟದ ಭದ್ರತೆ, ಏಕತೆ, ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಉದ್ದೇಶದಿಂದ ಆತನಿಗೆ ತರಬೇತಿ ನೀಡಲಾಯಿತು.

ಇದನ್ನೂ ಓದಿ:Mahadayi Water Dispute: ಮಹದಾಯಿ ಜಲಾನಯನ ಪ್ರದೇಶಕ್ಕೆ ಕೇಂದ್ರದ ಪ್ರವಾಹ್ ತಂಡ ಭೇಟಿ; ನಾಲೆಗಳ ಪರಿಶೀಲನೆ

Exit mobile version