Site icon Vistara News

ISIS Terrorist: ಕೇರಳದ ಐಸಿಸ್‌ ಉಗ್ರ ತಮಿಳುನಾಡಿನಲ್ಲಿ ಸೆರೆ; ಕರ್ನಾಟಕಕ್ಕೂ ಇದೆ ಈತನ ನಂಟು

ISIS Terrorist

ISIS Magazine Voice of Khurasan threatens Hindus and Bharat

ಚೆನ್ನೈ/ಬೆಂಗಳೂರು: ಉಗ್ರ ಚಟುವಟಿಕೆಗಳಿಗೆ ಸಂಚು ರೂಪಿಸಿದ ಹಿನ್ನೆಲೆಯಲ್ಲಿ ಕರ್ನಾಟಕ (Karnataka), ಕೇರಳ ಹಾಗೂ ತಮಿಳುನಾಡಿಗೆ ಬೇಕಾಗಿದ್ದ ಕೇರಳದ ಐಸಿಸ್‌ (ISIS Terrorist) ಉಗ್ರ ಸೈಯದ್‌ ನಬಿಲ್‌ ಅಹ್ಮದ್‌ನಲ್ಲಿ ಎನ್‌ಐಎ ಅಧಿಕಾರಿಗಳು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ. ತುಂಬ ದಿನಗಳಿಂದ ತಲೆಮರೆಸಿಕೊಂಡು ತಿರುಗಾಡುತ್ತಿದ್ದ ಉಗ್ರನನ್ನು ಚೆನ್ನೈನಲ್ಲಿ ಬಂಧಿಸಿರುವ ಅಧಿಕಾರಿಗಳು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ನಕಲಿ ಪಾಸ್ಟ್‌ಪೋರ್ಟ್‌ ಇಟ್ಟುಕೊಂಡು ನೇಪಾಳಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ಉಗ್ರನನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ಸೈಯದ್‌ ನಬಿಲ್‌ ಅಹ್ಮದ್‌ ಕೇರಳದ ತ್ರಿಶ್ಶೂರ್‌ ಘಟಕದ ಅಧ್ಯಕ್ಷನಾಗಿದ್ದು, ಹಲವು ಉಗ್ರ ಚಟುವಟಿಕೆಗಳಲ್ಲಿ ತೊಡಗಿದ ಹಿನ್ನೆಲೆಯಲ್ಲಿ ಎನ್‌ಐಎ ಹದ್ದಿನ ಕಣ್ಣಿಗೆ ಗುರಿಯಾಗಿದ್ದ. ಈತನ ವಿರುದ್ಧ ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನಲ್ಲೂ ಪ್ರಕರಣಗಳಿದ್ದು, ತಲೆಮರೆಸಿಕೊಂಡು ತಿರುಗಾಡುತ್ತಿದ್ದ. ಕರ್ನಾಟಕ ಹಾಗೂ ತಮಿಳುನಾಡಿನಲ್ಲೂ ಈತ ಅಡಗಿದ್ದ. ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಬೇರೆ ದೇಶಕ್ಕೆ ಪರಾರಿಯಾಗಲು ಸಂಚು ರೂಪಿಸಿದ್ದ ಎಂದು ತಿಳಿದುಬಂದಿದೆ.

ಕೇರಳ ಸೇರಿ ಹಲವೆಡೆ ಉಗ್ರ ಚಟುವಟಿಕೆ ಕೈಗೊಳ್ಳುವುದು, ದರೋಡೆ, ಉಗ್ರ ಚಟುವಟಿಕೆಗಾಗಿ ಹಣ ಸಂಗ್ರಹ ಸೇರಿ ಹಲವು ಕೃತ್ಯಗಳಲ್ಲಿ ಭಾಗಿಯಾಗಿದ್ದ ಈತ ಯುವಕರನ್ನು ಉಗ್ರ ಸಂಘಟನೆಗೆ ಸೆಳೆಯುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಉಗ್ರ ಚಟುವಟಿಕೆಗಳಿಗೆ ಹಣ ಹೊಂದಿಸಲು ಕಳ್ಳತನ, ದರೋಡೆಗೆ ಪ್ರಚೋದನೆ ನೀಡುತ್ತಿದ್ದ ಎಂದು ಕೂಡ ತಿಳಿದುಬಂದಿದೆ.

ಇದನ್ನೂ ಓದಿ: Adnan Ali Sarkar: ವೈದ್ಯನಾಗಿದ್ದುಕೊಂಡೇ ಐಸಿಸ್‌ ಉಗ್ರರ ಜತೆ ಅದ್ನಾನ್‌ ಅಲಿ ಸರ್ಕಾರ್‌ ನಂಟು; ಬಂಧಿಸಿದ ಎನ್‌ಐಎ

ಜುಲೈನಿಂದ ಉಗ್ರನಿಗಾಗಿ ಬಲೆ

ಉಗ್ರ ಚಟುವಟಿಕೆ, ನಕಲಿ ದಾಖಲೆ ಸೃಷ್ಟಿ ಸೇರಿ ಹಲವು ಆರೋಪಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಜುಲೈ 11ರಂದೇ ಐಪಿಸಿ ಹಾಗೂ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸತ್ತಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸಿಫ್‌ ಎಂಬಾತ ಸೇರಿ ಇಬ್ಬರನ್ನು ಬಂಧಿಸಿದ್ದಾರೆ. ಈಗ ಪ್ರಕರಣದಲ್ಲಿ ಮೂರನೇ ಉಗ್ರನನ್ನು ಬಂಧಿಸಲಾಗಿದೆ.

Exit mobile version