Site icon Vistara News

Hurriyat Conference: ಹುರಿಯತ್ ಕಾನ್ಫರೆನ್ಸ್ ಕಚೇರಿ ಮುಟ್ಟುಗೋಲು ಹಾಕಿಕೊಂಡ ಎನ್ಐಎ

NIA seized Hurriyat Conference office at Raj Bagh in Srinagar

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿರುವ ರಾಜ್ಭಾಗ್‌ನ ಹುರಿಯತ್ ಕಾನ್ಫರೆನ್ಸ್ (Hurriyat Conference) ಕಚೇರಿಯನ್ನು ರಾಷ್ಟ್ರೀಯ ತನಿಖಾ ಏಜೆನ್ಸಿ(NIA) ಭಾನುವಾರ ಮುಟ್ಟುಗೋಲು ಹಾಕಿಕೊಂಡಿದೆ. ಉಗ್ರರಿಗೆ ಹಣ ಪೂರೈಸಿದ ಆರೋಪದ ಹಿನ್ನೆಲೆಯಲ್ಲಿ ಎನ್ಐಎ ಈ ಕ್ರಮಕೈಗೊಂಡಿದೆ. ತನಿಖೆಯ ಭಾಗವಾಗಿ ಹುರಿಯತ್ ಕಾನ್ಫರೆನ್ಸ್ ಕಚೇರಿಯನ್ನು ಸೀಜ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಪ್ರತ್ಯೇಕ ಕಾಶ್ಮೀರಕ್ಕೆ ಆಗ್ರಹಿಸಿ ಹುಟ್ಟಿಕೊಂಡ ಸುಮಾರು 26 ಸಂಘಟನೆಗಳ ಒಕ್ಕೂಟವೇ ಈ ಹುರಿಯತ್ ಕಾನ್ಫರೆನ್ಸ್. 1993ರಲ್ಲಿ ರಚನೆಯಾಯಿತು. ಕಣಿವೆ ರಾಜ್ಯದಲ್ಲಿ ಎನ್ಐಎ ಪ್ರತ್ಯೇಕತಾವಾದಿಗಳ ಮೇಲೆ ಕಾರ್ಯಾಚರಣೆಯನ್ನು ಕೈಗೊಂಡ ಹಿನ್ನೆಲೆಯಲ್ಲಿ ಈ ಕಚೇರಿಯು 2019ರ ಆಗಸ್ಟ್‌ನಿಂದಲೇ ಬಾಗಿಲು ಹಾಕಿತ್ತು.

ಇದನ್ನೂ ಓದಿ: NIA Cases | ಪ್ರಸಕ್ತ ಸಾಲಿನಲ್ಲಿ 497 ಕೇಸ್ ದಾಖಲಿಸಿದ ಎನ್ಐಎ, ರಾಜ್ಯಸಭೆಗೆ ಸಚಿವ ಮಾಹಿತಿ

ಎನ್ಐಎ ತಂಡವು ಭಾನುವಾರ ರಾಜ್ಭಾಗದ ಕಚೇರಿಗೆ ಆಗಮಿಸಿ, ಕಟ್ಟಡದ ಗೋಡೆಗೆ ಮುಟ್ಟುಗೋಲು ನೋಟಿಸ್ ಅಂಟಿಸಿ ಹೋಗಿದೆ ಎಂದು ತಿಳಿದು ಬಂದಿದೆ. ಭಯೋತ್ಪಾದಕರಿಗೆ ಹಣಕಾಸು ನೆರವು ಸೇರಿದಂತೆ ಅನೇಕ ಆರೋಪಗಳನ್ನು ಈ ಹುರಿಯತ್ ಕಾನ್ಫರೆನ್ಸ್ ಎದುರಿಸುತ್ತಿದೆ. ಈಗಾಗಲೇ ಹಲವು ನಾಯಕರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದೆ.

Exit mobile version