Site icon Vistara News

Share Market: ದಾಖಲೆ ಬರೆದ ನಿಫ್ಟಿ, ಸೆನ್ಸೆಕ್ಸ್‌ ಭರ್ಜರಿ ನೆಗೆತ; ಹೂಡಿಕೆದಾರರಿಗೆ ಭಾರಿ ಲಾಭ!

Share Market

Nifty At All-Time High, Sensex Jumps Over 1,000 Points

ಮುಂಬೈ: ಷೇರು ಮಾರುಕಟ್ಟೆಯಲ್ಲಿ (Share Market) ಗುರುವಾರ (ಮೇ 23) ಹೂಡಿಕೆದಾರರಿಗೆ ಭಾರಿ ಲಾಭವಾಗಿದೆ. ನಿಫ್ಟಿ (Nifty) 303 ಪಾಯಿಂಟ್ಸ್‌ ಏರಿಕೆಯೊಂದಿಗೆ ದಾಖಲೆಯ 22,900 ಪಾಯಿಂಟ್ಸ್‌ ತಲುಪಿದರೆ, ನಿಫ್ಟಿ 986 ಅಂಕಗಳ ಏರಿಕೆಯೊಂದಿಗೆ 75,206 ಪಾಯಿಂಟ್ಸ್‌ ತಲುಪುವ ಮೂಲಕ ದಾಖಲೆ ಸೃಷ್ಟಿಸಿತು. ಸೆನ್ಸೆಕ್ಸ್‌ (Sensex) ಶೇ.1.33ರಷ್ಟು ಏರಿಕೆಯಾದರೆ, ನಿಫ್ಟಿ ಕೂಡ ಶೇ.1.33ರಷ್ಟು ಏರಿಕೆಯಾಯಿತು. ನಿಫ್ಟಿ ಮಿಡ್‌ಕ್ಯಾಪ್‌ ಇಂಡೆಕ್ಸ್‌ ಕೂಡ 238 ಪಾಯಿಂಟ್‌ಗಳ ಏರಿಕೆಯೊಂದಿಗೆ 52,405 ಪಾಯಿಂಟ್ಸ್‌ ತಲುಪಿದರೆ, ನಿಫ್ಟಿಯ ಸ್ಮಾಲ್‌ಕ್ಯಾಪ್‌ ಕೂಡ 27 ಅಂಕಗಳ ಏರಿಕೆಯೊಂದಿಗೆ 16,909 ಪಾಯಿಂಟ್ಸ್‌ ತಲುಪಿತು.

ಆಟೋಮೊಬೈಲ್‌, ಐಟಿ, ಪಿಎಸ್‌ಯು (ಸಾರ್ವಜನಿಕ ವಲಯದ ಬ್ಯಾಂಕ್‌ಗಳು), ಖಾಸಗಿ ಬ್ಯಾಂಕ್‌ಗಳು ಹಾಗೂ ಮೂಲ ಸೌಕರ್ಯ ಕ್ಷೇತ್ರದ ಕಂಪನಿಗಳು ಲಾಭ ಗಳಿಸಿದವು. ಫಾರ್ಮಾ, ಎಫ್‌ಎಂಸಿಜಿ, ಇಂಧನ ಕ್ಷೇತ್ರದ ಕಂಪನಿಗಳು ನಷ್ಟ ಅನುಭವಿಸಿವೆ. ಆಕ್ಸಿಸ್‌ ಬ್ಯಾಂಕ್‌, ಎಲ್‌&ಟಿ, ಮಾರುತಿ ಸುಜುಕಿ, ಇಂಡಸ್‌ಐಎನ್‌ಡಿ ಬ್ಯಾಂಕ್‌, ಇನ್ಫೋಸಿಸ್‌, ಬಜಾಜ್‌, ಎಸ್‌ಬಿಐ, ಟೈಟಾನ್‌, ಐಸಿಐಸಿಐ ಬ್ಯಾಂಕ್‌ಗಳು ಲಾಭ ಗಳಿಸಿದ ಪ್ರಮುಖ ಕಂಪನಿಗಳಾಗಿವೆ.

ಇನ್ನು ಸನ್‌ ಫಾರ್ಮಾ, ಪವರ್‌ ಗ್ರಿಡ್‌, ಎನ್‌ಟಿಪಿಸಿ, ಜೆಎಸ್‌ಡಬ್ಲ್ಯೂ ಸ್ಟೀಲ್‌, ಐಟಿಸಿ, ಟಾಟಾ ಸ್ಟೀಲ್‌ ನಷ್ಟ ಹೊಂದಿದವು. ಕಳೆದ 6 ತಿಂಗಳಲ್ಲಿ ಬಾಂಬ್‌ ಸ್ಟಾಕ್‌ ಎಕ್ಸ್‌ಚೇಂಜ್‌ (BSE) ಪಟ್ಟಿಯಲ್ಲಿರುವ ಕಂಪನಿಗಳು 1 ಲಕ್ಷ ಕೋಟಿ ಡಾಲರ್‌ ಗಳಿಸಿವೆ ಎಂಬುದಾಗಿ ತಿಳಿದುಬಂದಿದೆ. ಇದರೊಂದಿಗೆ ಭಾರತದ ಈಕ್ವಿಟಿ ಮಾರುಕಟ್ಟೆಯ ಮೌಲ್ಯವು 5 ಲಕ್ಷ ಕೋಟಿ ಡಾಲರ್‌ ದಾಟುವ ಮೂಲಕ ಹೊಸ ಇತಿಹಾಸ ಸೃಷ್ಟಿಯಾದಂತಾಗಿದೆ.

2023ರ ನವೆಂಬರ್‌ನಲ್ಲಿ ಬಿಎಸ್‌ಇ ಒಟ್ಟು ಮಾರುಕಟ್ಟೆ ಮೊತ್ತವು 4 ಲಕ್ಷ ಕೋಟಿ ಡಾಲರ್‌ ಇತ್ತು. ಬಿಎಸ್‌ಇನಲ್ಲಿ ಲಿಸ್ಟ್‌ ಆಗಿರುವ ಕಂಪನಿಗಳ ಮಾರುಕಟ್ಟೆ ಬಂಡವಾಳವು ಕಳೆದ 6 ತಿಂಗಳಲ್ಲಿಯೇ 1 ಲಕ್ಷ ಕೋಟಿ ಡಾಲರ್‌ ಜಾಸ್ತಿಯಾಗಿದೆ. ಬಿಎಸ್‌ಇ ಲಿಸ್ಟ್‌ ಆಗಿರುವ ಕಂಪನಿಯಗಳ ಮಾರುಕಟ್ಟೆ ಬಂಡವಾಳವು 2007ರ ಮೇ ತಿಂಗಳಲ್ಲಿ 1 ಲಕ್ಷ ಕೋಟಿ ಡಾಲರ್‌ ತಲುಪಿತ್ತು. ಇದಾದ ಒಂದು ದಶಕದ ಬಳಿಕ ಅಂದರೆ, 2017ರ ಜುಲೈನಲ್ಲಿ 2 ಲಕ್ಷ ಕೋಟಿ ಡಾಲರ್‌ ತಲುಪಿತ್ತು. ಇನ್ನು 2021ರ ಮೇ ತಿಂಗಳಲ್ಲಿ 4 ಲಕ್ಷ ಕೋಟಿ ಡಾಲರ್‌ ಆಗಿತ್ತು. ಈಗ ಆರೇ ತಿಂಗಳಲ್ಲಿ ಮಾರುಕಟ್ಟೆ ಬಂಡವಾಳವು 1 ಲಕ್ಷ ಕೋಟಿ ಡಾಲರ್‌ ಜಾಸ್ತಿಯಾಗಿದೆ.

ಇದನ್ನೂ ಓದಿ: Equity Market: ದೇಶದ ಷೇರುಪೇಟೆಯಲ್ಲಿ ಗೂಳಿ ನೆಗೆತ; 6 ತಿಂಗಳಲ್ಲಿ 1 ಲಕ್ಷ ಕೋಟಿ ಡಾಲರ್‌ ಗಳಿಕೆ!

Exit mobile version