Site icon Vistara News

Nitin Gadkari: “ಜೀವ ಮತ್ತು ಆರೋಗ್ಯ ವಿಮೆಗಳ ಪ್ರೀಮಿಯಂ ಮೇಲಿನ GST ತೆಗೆದುಹಾಕಿ”; ಹಣಕಾಸು ಸಚಿವಾಲಯಕ್ಕೆ ಗಡ್ಕರಿ ಪತ್ರ

Nitin Gadkari

Nitin Gadkari

ನವದೆಹಲಿ: ಜೀವ ವಿಮೆ ಮತ್ತು ಆರೋಗ್ಯ ವಿಮೆಗಳ ಪ್ರೀಮಿಯಂ ಮೇಲಿನ 18% ಸರಕು ಮತ್ತು ಸೇವಾ ತೆರಿಗೆ(GST)ಯನ್ನು ತೆಗೆದು ಹಾಕುವಂತೆ ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ(Nitin Gadkari) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌(Nirmala Sitharaman) ಅವರಿಗೆ ಪತ್ರ ಬರೆದಿದ್ದಾರೆ. ಜಿಎಸ್‌ಟಿಯು ಜೀವನದ ಅನಿಶ್ಚಿತತೆಗಳಿಗೆ ತೆರಿಗೆ ವಿಧಿಸುತ್ತದೆ. ಜೀವ ಮತ್ತು ವೈದ್ಯಕೀಯ ವಿಮಾ ಕಂತುಗಳ ಮೇಲೆ ಶೇ. 18 ರಷ್ಟು GST ವಿಧಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಜೀವ ಮತ್ತು ವೈದ್ಯಕೀಯ ವಿಮಾ ಪ್ರೀಮಿಯಂ ಮೇಲಿನ ಜಿಎಸ್‌ಟಿಯನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡುತ್ತಿದ್ದೇನೆ. ಇದನ್ನು ಆದ್ಯತೆಯ ಮೇರೆಗೆ ಪರಿಗಣಿಸಲು ನಿಮ್ಮನ್ನು ವಿನಂತಿಸಲಾಗಿದೆ, ಏಕೆಂದರೆ ಇದು ಹಿರಿಯ ನಾಗರಿಕರಿಗೆ ತೊಡಕಾಗಿದೆ ಎಂದು ನಿತಿನ್ ಗಡ್ಕರಿ ಪತ್ರದಲ್ಲಿ ಬರೆದಿದ್ದಾರೆ. ಜೀವ ವಿಮೆ ಮತ್ತು ಆರೋಗ್ಯ ವಿಮೆಗಳ ಮೇಲಿನ ಜಿಎಸ್ಟಿ ತೆಗೆದು ಹಾಕುವಂತೆ ಅನೇಕರು ಮನವಿ ಮಾಡಿದ್ದಾರೆ. ಜಿಎಸ್‌ಟಿಯಿಂದಾಗಿ ಈ ವಲಯಗಳ ಅಭಿವೃದ್ಧಿ ಕುಂಠಿತವಾಗಿದೆ ಎಂಬುದನ್ನು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

ಜೀವ ವಿಮಾ ಪ್ರೀಮಿಯಂ ಮೇಲೆ GST ವಿಧಿಸುವುದರಿಂದ ಜೀವನದ ಅನಿಶ್ಚಿತತೆಗಳ ಮೇಲೆ ತೆರಿಗೆ ವಿಧಿಸುತ್ತದೆ. ಕುಟುಂಬಕ್ಕೆ ಸ್ವಲ್ಪ ರಕ್ಷಣೆ ನೀಡಲು ಜೀವನದ ಅನಿಶ್ಚಿತತೆಯ ಅಪಾಯವನ್ನು ಆವರಿಸುವ ವ್ಯಕ್ತಿಯು ಈ ಅಪಾಯದ ವಿರುದ್ಧ ರಕ್ಷಣೆಯನ್ನು ಖರೀದಿಸಲು ಪ್ರೀಮಿಯಂಗೆ ತೆರಿಗೆಯನ್ನು ವಿಧಿಸಬಾರದು ಎಂದು ಒಕ್ಕೂಟವು ಭಾವಿಸುತ್ತದೆ. ಅಲ್ಲದೇ ತೆರಿಗೆ ವಿಧಿಸುವುದರಿಂದ ವಿಮಾ ಕಂಪನಿಗಳ ಬಲವರ್ಧನೆ ಅಡ್ಡಿ ಆಗುತ್ತಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ಇತೀಚೆಗಷ್ಟೇ ಈ ಹಣಕಾಸು ವರ್ಷದ ಜಿಎಸ್‌ಟಿ ಸಂಗ್ರಹದ ವರದಿ ಬಹಿರಂಗವಾಗಿತ್ತು. 2024-25ನೇ ಹಣಕಾಸು ವರ್ಷದ ಜೂನ್​​ನಲ್ಲಿ ಒಟ್ಟು ಜಿಎಸ್ಟಿ ಸಂಗ್ರಹವು (GST Collection) 1.74 ಲಕ್ಷ ಕೋಟಿ ರೂಪಾಯಿ ಆಗಿದ್ದು ಶೇಕಡಾ 8 ರಷ್ಟು ಏರಿಕೆಯಾಗಿತ್ತು. ಆದಾಗ್ಯೂ, ಮಾಸಿಕ ಜಿಎಸ್ಟಿ ಸಂಗ್ರಹದ ದತ್ತಾಂಶದ ಅಧಿಕೃತ ಬಿಡುಗಡೆಯನ್ನು ಸರ್ಕಾರ ನಿಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಹಣಕಾಸು ವರ್ಷದ ಮೂರು ತಿಂಗಳಲ್ಲಿ (ಏಪ್ರಿಲ್-ಜೂನ್) ಒಟ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ​) ಸಂಗ್ರಹವು 5.57 ಲಕ್ಷ ಕೋಟಿ ರೂ.ಗಳಷ್ಟಿದೆ ಎಂದು ಮೂಲಗಳು ತಿಳಿಸಿವೆ.

ಜೂನ್​​ನ ಸಂಗ್ರಹವು ಮೇ 2024 ರಲ್ಲಿ ಸಂಗ್ರಹಿಸಿದ 1.73 ಲಕ್ಷ ಕೋಟಿ ರೂ.ಗಿಂತ ಹೆಚ್ಚಾಗಿದೆ. ಇದು ಜೂನ್ 2023 ರಲ್ಲಿ ಸಂಗ್ರಹಿಸಿದ 1.61 ಲಕ್ಷ ಕೋಟಿ ರೂ.ಗಿಂತ ಶೇಕಡಾ 8 ರಷ್ಟು ಹೆಚ್ಚಾಗಿದೆ. ಕೇಂದ್ರ ಜಿಎಸ್ಟಿ (ಸಿಜಿಎಸ್​ಟಿ) ಗೆ 39,586 ಕೋಟಿ ರೂ., ರಾಜ್ಯ ಜಿಎಸ್ಟಿ (ಎಸ್ಜಿಎಸ್ಟಿ) ಗೆ 33,548 ಕೋಟಿ ರೂ. ಜಿಎಸ್ಟಿ ಸಂಗ್ರಹವು ಏಪ್ರಿಲ್​​ನಲ್ಲಿ ದಾಖಲೆಯ ಗರಿಷ್ಠ 2.10 ಲಕ್ಷ ಕೋಟಿ ರೂ.ಗೆ ತಲುಪಿತ್ತು.

ತೆರಿಗೆ ಸಂಗ್ರಹಕ್ಕೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ಹೇಳಿಕೆ ಬಿಡುಗಡೆ ಮಾಡುವುದಿಲ್ಲ ಎಂದು ಮೂಲಗಳು ತಿಳಿಸಿವೆ. ತೆರಿಗೆ ಪಾಲುದಾರ ಸೌರಭ್ ಅಗರ್ವಾಲ್ ಮಾತನಾಡಿ, ಈ ದೃಢ ಕಾರ್ಯಕ್ಷಮತೆಯು ಉತ್ಸಾಹಭರಿತ ಆರ್ಥಿಕತೆಯನ್ನು ಪ್ರತಿಬಿಂಬಿಸುತ್ತದೆ. ಸಮಯೋಚಿತ ಲೆಕ್ಕಪರಿಶೋಧನೆ, ಪರಿಶೀಲನಾ ಕ್ರಮಗಳು ಮತ್ತು ಇಲಾಖೆಯ ಪರಿಣಾಮಕಾರಿ ಜಾರಿ ಇವೆಲ್ಲವೂ ಈ ಜಿಎಸ್​ಟಿ ಸಂಗ್ರಹ ಹೆಚ್ಚಳಕ್ಕೆ ಕಾರಣವಾಗಿವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Narayana Murthy: ಜನ ವಾದ ಮಾಡದೆ ಸುಮ್ಮನೆ ಕೆಲಸ ಮಾಡುವುದರಿಂದ ಚೀನಾ ನಮ್ಮ ದೇಶಕ್ಕಿಂತ ಮುಂದಿದೆ: ನಾರಾಯಣಮೂರ್ತಿ ಹೊಸ ವಾದ!

Exit mobile version