Site icon Vistara News

No Confidence Motion: ಅವಿಶ್ವಾಸ ನಿರ್ಣಯಕ್ಕೆ ಕಾಂಗ್ರೆಸ್ ಮಾತ್ರ ಸಹಿ ಹಾಕಿದ್ದೇಕೆ?

INDIA alliance

ಹೊಸದಿಲ್ಲಿ: ಬುಧವಾರ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ (No Confidence Motion) ಮಂಡಿಸಿದ ಒಂದು ದಿನದ ನಂತರ, ಇದೊಂದು ಗಡಿಬಿಡಿಯ ನಿರ್ಣಯ ಆಗಿತ್ತು ಎಂಬುದನ್ನು ಯುಪಿಎಯ ಇತರ ಮಿತ್ರಪಕ್ಷಗಳು ಒಪ್ಪಿಕೊಂಡಿವೆ.

ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರು ಬುಧವಾರ ಅವಿಶ್ವಾಸ ನಿರ್ಣಯ ಮಂಡಿಸಿದರು. ಆದರೆ ಇದರಲ್ಲಿ ಕಾಂಗ್ರೆಸ್‌ನ ಸಹಿ ಮಾತ್ರ ಇತ್ತು. ಈ ಬಗ್ಗೆ ಸಿಪಿಐ ಸಂಸದ ಬಿನೋಯ್ ವಿಶ್ವಂ ಅವರು ಮಾತನಾಡಿದ್ದಾರೆ. ʼʼಇಂಡಿಯಾ ಮೈತ್ರಿಕೂಟದ (INDIA alliance) ಎಲ್ಲ ಪಕ್ಷಗಳನ್ನೂ ಗಣನೆಗೆ ತೆಗೆದುಕೊಂಡಿದ್ದರೆ ಈ ನಿರ್ಣಯ ಹೆಚ್ಚು ಬಲಶಾಲಿ ಮತ್ತು ಪರಿಣಾಮಕಾರಿಯಾಗುತ್ತಿತ್ತು ಎಂದು ಪಕ್ಷಗಳು ಭಾವಿಸಿವೆ. ಸಿಪಿಐ ಮಾತ್ರವಲ್ಲ, ಇತರ ಹಲವು ಪಕ್ಷಗಳೂ ಈ ಆಕ್ಷೇಪಣೆಯನ್ನು ಜವಾಬ್ದಾರಿಯುತ ರೀತಿಯಲ್ಲಿ ಎತ್ತಿವೆ. ಕಾಂಗ್ರೆಸ್ ನಾಯಕತ್ವವು ಅದನ್ನು ಅರ್ಥಮಾಡಿಕೊಂಡಿದೆ. ಇದನ್ನು ಆತುರದಿಂದ ಮಂಡಿಸಲಾಗಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ” ಎಂದು ಬಿನೋಯ್ ವಿಶ್ವಂ ಹೇಳಿದರು.

ಆ ಅಧ್ಯಾಯ ಈಗ ಮುಕ್ತಾಯವಾಗಿದೆ. ಈಗ ಏನೆಂದರೆ, ಅವಿಶ್ವಾಸ ನಿರ್ಣಯ ಸಂಸತ್ತಿನಲ್ಲಿದೆ ಮತ್ತು ಅದು ಸಾಕಷ್ಟು ಸಂಖ್ಯೆಯ ಸಂಸದರ ಸಹಿಯನ್ನು ಹೊಂದಿದೆ ಎಂದು ಸಿಪಿಐ ಸಂಸದ ಹೇಳಿದ್ದಾರೆ.

ಕಾಂಗ್ರೆಸ್‌ನ ಎಂದಿನ ಧೋರಣೆ: ಪ್ರಹ್ಲಾದ್ ಜೋಶಿ

ಇದನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (prahlad joshi) ವ್ಯಂಗ್ಯವಾಡಿದ್ದಾರೆ. 2019ರಲ್ಲಿ ಪ್ರಧಾನಿ ಮೋದಿಯವರು ಭವಿಷ್ಯ ನುಡಿದಂತೆಯೇ 2023ರಲ್ಲಿ ಅವಿಶ್ವಾಸ ನಿರ್ಣಯಕ್ಕೆ ಪ್ರತಿಪಕ್ಷಗಳು ಮುಂದಾಗಿವೆ. ಆದರೂ ಅವರ ನಡುವೆ ಭಿನ್ನಾಭಿಪ್ರಾಯವಿದೆ. ಕಾಂಗ್ರೆಸ್ ತನ್ನ ಎಂದಿನ ಧೋರಣೆಯಂತೆ ಇತರ ವಿರೋಧ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಲಿಲ್ಲ. ಮೊದಲು, ವಿರೋಧ ಪಕ್ಷಗಳಲ್ಲಿ ಪರಸ್ಪರ ವಿಶ್ವಾಸ ಇರಬೇಕು. ಆ ಬಳಿಕ ಪ್ರಧಾನಿ ಮೋದಿಯವರ ಮೇಲೆ ಜನರಿಟ್ಟಿರುವ ವಿಶ್ವಾಸದ ಬಗ್ಗೆ ಅವರು ಮಾತನಾಡಬಹುದು. ಕಪ್ಪು ಬಟ್ಟೆ ಧರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ನಂತರವೂ ನೀವು ಕಪ್ಪು ಬಟ್ಟೆಯನ್ನು ಧರಿಸಿಯೇ ಇರಬೇಕಾಗುತ್ತದೆ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ಇದನ್ನೂ ಓದಿ: No Confidence Motion: ಪ್ರತಿಪಕ್ಷಗಳ ಅಭಿಪ್ರಾಯ ಕೇಳದೆ ಕಾಂಗ್ರೆಸ್‌ ಅವಿಶ್ವಾಸ ನಿರ್ಣಯ? ‘ಇಂಡಿಯಾ’ದಲ್ಲಿ ಬಿಕ್ಕಟ್ಟು

Exit mobile version