ನವದೆಹಲಿ: ಗುಟ್ಕಾ, ತಂಬಾಕು ಸೇರಿ ಯಾವುದೇ ಉತ್ಪನ್ನಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು (GST Council Meet) ಏರಿಸದಿರಲು ಜಿಎಸ್‌ಟಿ ಸಮಿತಿ ಸಭೆಯು ತೀರ್ಮಾನಿಸಿದೆ. ಹಾಗಾಗಿ, ಉತ್ಪನ್ನಗಳ ಬೆಲೆಯೇರಿಕೆಯ ಭೀತಿ ಇದ್ದ ಸಾರ್ವಜನಿಕರಿಗೆ ಇದರಿಂದ ತುಸು ನಿರಾಳವಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಜಿಎಸ್‌ಟಿ 48ನೇ ಸಭೆ ನಡೆದಿದ್ದು, ಉತ್ಪನ್ನಗಳ ಮೇಲಿನ ಜಿಎಸ್‌ಟಿ ಏರಿಕೆ ನಿರೀಕ್ಷಿಸಲಾಗಿತ್ತು. ಅದರಲ್ಲೂ, ಗುಟ್ಕಾ ಹಾಗೂ ತಂಬಾಕು ಉತ್ಪನ್ನಗಳ ಮೇಲಿನ ಜಿಎಸ್‌ಟಿಯನ್ನು ಶೇ.28ರಿಂದ ಶೇ.38ಕ್ಕೆ ಏರಿಸುವ ಪ್ರಸ್ತಾಪ ಇದೆ ಎನ್ನಲಾಗಿತ್ತು. ಆದರೆ, ಯಾವುದೇ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಏರಿಕೆ ಮಾಡುವ ಕುರಿತು ತೀರ್ಮಾನ ತೆಗೆದುಕೊಂಡಿಲ್ಲ.
ಜಿಎಸ್‌ಟಿ ಸಮಿತಿ ಸಭೆಯ ಪ್ರಮುಖ ತೀರ್ಮಾನಗಳು
1. ಸಿಪ್ಪೆಯುಕ್ತ ಕಾಳುಗಳ ಮೇಲಿನ ಶೇ.5ರಷ್ಟು ಜಿಎಸ್‌ಟಿಯನ್ನು ಕಡಿತಗೊಳಿಸಿದ್ದು, ಇನ್ನು ಇವುಗಳಿಗೆ ಜಿಎಸ್‌ಟಿ ಇರುವುದಿಲ್ಲ.
2. ಜೈವಿಕ ಇಂಧನದ (Ethyl Alcohal) ಮೇಲಿನ ಜಿಎಸ್‌ಟಿಯನ್ನು ಶೇ.18ರಿಂದ ಶೇ.5ಕ್ಕೆ ಇಳಿಸುವುದು
3. ನಕಲಿ ಇನ್‌ವಾಯ್ಸ್‌ಗಳನ್ನು ಹೊರತುಪಡಿಸಿ ಜಿಎಸ್‌ಟಿ ಅನ್ವಯ ಯಾವುದೇ ಅಕ್ರಮದ ಮೇಲೆ ವಿಧಿಸುವ ತೆರಿಗೆಯ ಕನಿಷ್ಠ ಮಿತಿಯನ್ನು ಒಂದು ಕೋಟಿ ರೂ.ನಿಂದ ಎರಡು ಕೋಟಿ ರೂ.ಗೆ ಏರಿಕೆ ಮಾಡುವುದು.
4. ಇನ್ಶುರೆನ್ಸ್ ಕಂಪನಿಗಳು ನೀಡುವ ‘ನೋ ಕ್ಲೇಮ್ ಬೋನಸ್’ (NCB)ಗೆ ಜಿಎಸ್‌ಟಿ ಇರುವುದಿಲ್ಲ
ಇದನ್ನೂ ಓದಿ | Fuel Under GST | ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್ ತರಲು ಸಿದ್ಧ, ಕೇಂದ್ರ ಮಹತ್ವದ ಘೋಷಣೆ