Site icon Vistara News

Narendra Modi | ದೇಶದ ಮುಂದೆ ಯಾವ ವ್ಯಕ್ತಿ, ಸಂಬಂಧವೂ ಮಿಗಿಲಲ್ಲ, ನರೇಂದ್ರ ಮೋದಿ ಉವಾಚ

Narendra Modi Holds High-Level Meet On Covid As Daily Cases Spike

ನರೇಂದ್ರ ಮೋದಿ

ನವದೆಹಲಿ: “ದೇಶದ ಹಿತಾಸಕ್ತಿಯ ಎದುರು ಯಾವುದೇ ವ್ಯಕ್ತಿ ಅಥವಾ ಸಂಬಂಧವೂ ಮಿಗಿಲಲ್ಲ” ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. ಅಸ್ಸಾಂ ರಾಜವಂಶದ ಸೇನಾನಿ, ಮೊಘಲರ ವಿರುದ್ಧ ಹೋರಾಡಿದ ಲಚಿತ್‌ ಬೋರ್‌ಫೂಕನ್‌ ಅವರ 400ನೇ ಜಯಂತ್ಯುತ್ಸವದ ಸಮಾರೋಪದಲ್ಲಿ ಮಾತನಾಡಿದ ಅವರು, “ದೇಶಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ” ಎಂದು ಹೇಳಿದರು.

“ಲಚಿತ್‌ ಬೋರ್‌ಫೂಕನ್‌ ಅವರು ದೇಶವೇ ಮೊದಲು (Nation First) ಎಂಬ ತತ್ವದಂತೆ ಕಾರ್ಯನಿರ್ವಹಿಸಲು ಸ್ಫೂರ್ತಿ ನೀಡುತ್ತಾರೆ. ದೇಶದ ಹಿತಾಸಕ್ತಿಗಾಗಿ ಅವರು ಹೊಂದಿದ್ದ ಮನೋಭಾವ ಹಾಗೂ ತೋರಿದ ಶೌರ್ಯವು ಶ್ಲಾಘನೀಯವಾಗಿದೆ. ಸ್ವಜನ ಪಕ್ಷಪಾತ, ಕುಟುಂಬಕ್ಕಿಂತ ದೇಶವೇ ಮಿಗಿಲಾದುದು ಎಂಬುದನ್ನು ಅವರ ಜೀವನವೇ ಸಾರಿ ಹೇಳುತ್ತದೆ” ಎಂದು ತಿಳಿಸಿದರು.

“ಅಸ್ಸಾಂ ಸಂಸ್ಕೃತಿ, ಸಂಪ್ರದಾಯದ ಉಳಿವಿಗೆ ವೀರ ಲಚಿತ್‌ ಬೋರ್‌ಫೂಕನ್‌ ಅವರ ಪಾತ್ರ ಹಿರಿದಾಗಿದೆ. ಇತಿಹಾಸವನ್ನು ಅರಿಯದ ಹೊರತು ನಾವು ಭವಿಷ್ಯದಲ್ಲಿ ಏಳಿಗೆ ಹೊಂದಲು ಸಾಧ್ಯವಿಲ್ಲ. ಲಚಿತ್‌ ಅವರಂತಹ ವೀರರನ್ನು ನಾವು ಸ್ಫೂರ್ತಿಯಾಗಿಟ್ಟುಕೊಳ್ಳಬೇಕು. ಅಷ್ಟಕ್ಕೂ, ಭಾರತದ ಇತಿಹಾಸ ಎಂದರೆ ಗುಲಾಮಗಿರಿಗೆ ಒಳಪಟ್ಟಿದ್ದು ಅಷ್ಟೇ ಅಲ್ಲ. ಬೋರ್‌ಫೂಕನ್‌ ಅವರಂತಹ ನೂರಾರು ವೀರರ ಚರಿತ್ರೆಯೂ ಅಡಕವಾಗಿದೆ” ಎಂದರು.

ಇದನ್ನೂ ಓದಿ | Ravindra Jadeja | ಪ್ರಧಾನಿ ನರೇಂದ್ರ ಮೋದಿ ಜತೆಗಿನ ಮೊದಲ ಭೇಟಿ ಸ್ಮರಿಸಿದ ರವೀಂದ್ರ ಜಡೇಜಾ

Exit mobile version