Narendra Modi | ದೇಶದ ಮುಂದೆ ಯಾವ ವ್ಯಕ್ತಿ, ಸಂಬಂಧವೂ ಮಿಗಿಲಲ್ಲ, ನರೇಂದ್ರ ಮೋದಿ ಉವಾಚ - Vistara News

ದೇಶ

Narendra Modi | ದೇಶದ ಮುಂದೆ ಯಾವ ವ್ಯಕ್ತಿ, ಸಂಬಂಧವೂ ಮಿಗಿಲಲ್ಲ, ನರೇಂದ್ರ ಮೋದಿ ಉವಾಚ

ದೇಶದ ಇತಿಹಾಸ ಎಂದರೆ ಕೇವಲ ಗುಲಾಮಗಿರಿಗೆ ಒಳಪಟ್ಟಿದ್ದಷ್ಟೇ ಅಲ್ಲ. ಲಚಿತ್‌ ಬೋರ್‌ಫೂಕನ್‌ ಅವರಂತಹ ವೀರರೂ ಇತಿಹಾಸದಲ್ಲಿ ಅಡಕವಾಗಿದ್ದಾರೆ ಎಂದು ನರೇಂದ್ರ ಮೋದಿ (Narendra Modi) ಹೇಳಿದರು.

VISTARANEWS.COM


on

Narendra Modi Holds High-Level Meet On Covid As Daily Cases Spike
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: “ದೇಶದ ಹಿತಾಸಕ್ತಿಯ ಎದುರು ಯಾವುದೇ ವ್ಯಕ್ತಿ ಅಥವಾ ಸಂಬಂಧವೂ ಮಿಗಿಲಲ್ಲ” ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. ಅಸ್ಸಾಂ ರಾಜವಂಶದ ಸೇನಾನಿ, ಮೊಘಲರ ವಿರುದ್ಧ ಹೋರಾಡಿದ ಲಚಿತ್‌ ಬೋರ್‌ಫೂಕನ್‌ ಅವರ 400ನೇ ಜಯಂತ್ಯುತ್ಸವದ ಸಮಾರೋಪದಲ್ಲಿ ಮಾತನಾಡಿದ ಅವರು, “ದೇಶಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ” ಎಂದು ಹೇಳಿದರು.

“ಲಚಿತ್‌ ಬೋರ್‌ಫೂಕನ್‌ ಅವರು ದೇಶವೇ ಮೊದಲು (Nation First) ಎಂಬ ತತ್ವದಂತೆ ಕಾರ್ಯನಿರ್ವಹಿಸಲು ಸ್ಫೂರ್ತಿ ನೀಡುತ್ತಾರೆ. ದೇಶದ ಹಿತಾಸಕ್ತಿಗಾಗಿ ಅವರು ಹೊಂದಿದ್ದ ಮನೋಭಾವ ಹಾಗೂ ತೋರಿದ ಶೌರ್ಯವು ಶ್ಲಾಘನೀಯವಾಗಿದೆ. ಸ್ವಜನ ಪಕ್ಷಪಾತ, ಕುಟುಂಬಕ್ಕಿಂತ ದೇಶವೇ ಮಿಗಿಲಾದುದು ಎಂಬುದನ್ನು ಅವರ ಜೀವನವೇ ಸಾರಿ ಹೇಳುತ್ತದೆ” ಎಂದು ತಿಳಿಸಿದರು.

“ಅಸ್ಸಾಂ ಸಂಸ್ಕೃತಿ, ಸಂಪ್ರದಾಯದ ಉಳಿವಿಗೆ ವೀರ ಲಚಿತ್‌ ಬೋರ್‌ಫೂಕನ್‌ ಅವರ ಪಾತ್ರ ಹಿರಿದಾಗಿದೆ. ಇತಿಹಾಸವನ್ನು ಅರಿಯದ ಹೊರತು ನಾವು ಭವಿಷ್ಯದಲ್ಲಿ ಏಳಿಗೆ ಹೊಂದಲು ಸಾಧ್ಯವಿಲ್ಲ. ಲಚಿತ್‌ ಅವರಂತಹ ವೀರರನ್ನು ನಾವು ಸ್ಫೂರ್ತಿಯಾಗಿಟ್ಟುಕೊಳ್ಳಬೇಕು. ಅಷ್ಟಕ್ಕೂ, ಭಾರತದ ಇತಿಹಾಸ ಎಂದರೆ ಗುಲಾಮಗಿರಿಗೆ ಒಳಪಟ್ಟಿದ್ದು ಅಷ್ಟೇ ಅಲ್ಲ. ಬೋರ್‌ಫೂಕನ್‌ ಅವರಂತಹ ನೂರಾರು ವೀರರ ಚರಿತ್ರೆಯೂ ಅಡಕವಾಗಿದೆ” ಎಂದರು.

ಇದನ್ನೂ ಓದಿ | Ravindra Jadeja | ಪ್ರಧಾನಿ ನರೇಂದ್ರ ಮೋದಿ ಜತೆಗಿನ ಮೊದಲ ಭೇಟಿ ಸ್ಮರಿಸಿದ ರವೀಂದ್ರ ಜಡೇಜಾ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

Tsering Namgyal: ಸಂಸತ್ತಲ್ಲಿ ಕಾಂಗ್ರೆಸ್‌ ವಿರುದ್ಧ ಗುಡುಗಿದ್ದ ತ್ಸೆರಿಂಗ್‌ ಈಗ ಅದೇ ಪಕ್ಷದ ಲಡಾಕ್‌ ಅಭ್ಯರ್ಥಿ!

Tsering Namgyal: ಸಂಸತ್‌ನಲ್ಲಿ ನಿಂತು ಕಾಂಗ್ರೆಸ್‌ ವಂಶಾಡಳಿತವನ್ನು, ಜಮ್ಮು-ಕಾಶ್ಮೀರ, ಲಡಾಕ್‌ಗೆ ಮಾಡಿದ ಅವಮಾನವನ್ನು ಗಟ್ಟಿಯಾಗಿ ಹೇಳುವ ಮೂಲಕ ದೇಶಾದ್ಯಂತ ಗಮನ ಸೆಳೆದಿದ್ದ, ಈಗಲೂ ಬಿಜೆಪಿ ಸಂಸದರಾಗಿರುವ ತ್ಸೆರಿಂಗ್‌ ನಾಮ್‌ಗ್ಯಾಲ್‌ ಅವರೀಗ ಗುರುವಾರ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕೊನೆಯ ಕ್ಷಣದಲ್ಲಿ ಬಿಜೆಪಿಯ ಭಿನ್ನಮತದ ಲಾಭ ಪಡೆದ ಕಾಂಗ್ರೆಸ್‌ ನಾಯಕರು ನಾಮ್‌ಗ್ಯಾಲ್‌ ತ್ಸೆರಿಂಗ್‌ ಅವರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

VISTARANEWS.COM


on

Tsering Namgyal
Koo

ನವದೆಹಲಿ: ರಾಜಕೀಯದಲ್ಲಿ ಯಾರೂ ಶತ್ರುಗಳಿಲ್ಲ, ಯಾರೂ ಮಿತ್ರರಾಗಿಯೂ ಇರುವುದಿಲ್ಲ ಎಂಬ ಮಾತಿದೆ. ಇದಕ್ಕೆ ನಿದರ್ಶನ ಎಂಬಂತೆ, ಲಡಾಕ್‌ ಬಿಜೆಪಿ ಸಂಸದ, ಒಂದು ಕಾಲದ ಕಾಂಗ್ರೆಸ್‌ ಖಟ್ಟರ್‌ ವಿರೋಧಿಯಾಗಿದ್ದ ಜಾಮ್‌ಯಾಂಗ್‌ ತ್ಸೆರಿಂಗ್‌ ನಾಮ್‌ಗ್ಯಾಲ್‌ (Tsering Namgyal) ಅವರೀಗ ಕಾಂಗ್ರೆಸ್‌ (Congress) ಟಿಕೆಟ್‌ ಪಡೆದು, ಲಡಾಕ್‌ (Ladakh) ಲೋಕಸಭೆ ಕ್ಷೇತ್ರದಲ್ಲಿ ಗುರುವಾರ (ಮೇ 2) ನಾಮಪತ್ರ ಸಲ್ಲಿಸಿದ್ದಾರೆ. ಇವರು ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಚುನಾವಣೆ ಆಯೋಗವೂ ಅನುಮತಿ ನೀಡಿದೆ.

ಹೌದು, ಸಂಸತ್‌ನಲ್ಲಿ ನಿಂತು ಕಾಂಗ್ರೆಸ್‌ ವಂಶಾಡಳಿತವನ್ನು, ಜಮ್ಮು-ಕಾಶ್ಮೀರ, ಲಡಾಕ್‌ಗೆ ಮಾಡಿದ ಅವಮಾನವನ್ನು ಗಟ್ಟಿಯಾಗಿ ಹೇಳುವ ಮೂಲಕ ದೇಶಾದ್ಯಂತ ಗಮನ ಸೆಳೆದಿದ್ದ, ಈಗಲೂ ಬಿಜೆಪಿ ಸಂಸದರಾಗಿರುವ ತ್ಸೆರಿಂಗ್‌ ನಾಮ್‌ಗ್ಯಾಲ್‌ ಅವರೀಗ ಗುರುವಾರ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ತುಸು ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಚುನಾವಣೆ ಆಯೋಗವು ತ್ಸೆರಿಂಗ್‌ ನಾಮ್‌ಗ್ಯಾಲ್‌ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಬಹುದು ಎಂದು ತಿಳಿಸಿದೆ. ಲಡಾಕ್‌ನಲ್ಲಿ ಮೇ 20ರಂದು ಮತದಾನ ನಡೆಯಲಿದೆ.

ಲಡಾಕ್‌ನಲ್ಲಿ ಹೈಡ್ರಾಮಾ

ಲೋಕಸಭೆ ಚುನಾವಣೆಯ ಎರಡು ಹಂತದ ಮತದಾನ ಮುಗಿದರೂ, ಲಡಾಕ್‌ನಲ್ಲಿ ರಾಜಕೀಯ ಹೈಡ್ರಾಮಾ ಮಾತ್ರ ಮುಂದುವರಿದಿದೆ. ಲಡಾಕ್‌ನಲ್ಲಿ ಕಾಂಗ್ರೆಸ್‌ ಹಾಗೂ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಹಾಜಿ ಹನಿಫಾ ಅವರು ಹೊರಹೊಮ್ಮಿದ್ದರು. ಆದರೆ, ಗುರುವಾರ (ಮೇ 2) ಬೆಳಗ್ಗೆ ತ್ಸೆರಿಂಗ್‌ ನಾಮ್‌ಗ್ಯಾಲ್‌ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಇದು ಹೈಡ್ರಾಮಾಗೆ ಕಾರಣವಾಗಿತ್ತು. ಗೊಂದಲದ ಬಳಿಕ ಕಾಂಗ್ರೆಸ್‌ ನಾಯಕ ರಿಗ್ಜಿನ್‌ ಜೋರಾ ಅವರು ತ್ಸೆರಿಂಗ್‌ ನಾಮ್‌ಗ್ಯಾಲ್‌ ಅವರು ಕಾಂಗ್ರೆಸ್‌ ಅಭ್ಯರ್ಥಿ ಎಂಬುದಾಗಿ ಘೋಷಿಸಿದರು.

ಬಿಜೆಪಿಯಿಂದ ತಾಶಿ ಗ್ಯಾಲ್ಸನ್‌ ಅವರು ಬುಧವಾರ (ಮೇ 1) ನಾಮಪತ್ರ ಸಲ್ಲಿಸಿದ್ದಾರೆ. ತ್ಸೆರಿಂಗ್‌ ನಾಮ್‌ಗ್ಯಾಲ್‌ ಅವರು ಲಡಾಕ್‌ನಲ್ಲಿ ಬಿಜೆಪಿಯ ಪ್ರಮುಖ ನಾಯಕರಾಗಿದ್ದು, ಇತ್ತೀಚೆಗೆ ಪಕ್ಷದಲ್ಲಿಯೇ ಅವರನ್ನು ಮರೆಗೆ ಸರಿಸಲಾಗುತ್ತಿತ್ತು. ಅಲ್ಲದೆ, ಅವರಿಗೆ ಟಿಕೆಟ್‌ ಕೂಡ ನಿರಾಕರಿಸಿದ ಕಾರಣ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂಬುದಾಗಿ ಹೇಳಲಾಗುತ್ತಿತ್ತು. ಆದರೆ, ಕೊನೆಯ ಕ್ಷಣದಲ್ಲಿ ತ್ಸೆರಿಂಗ್‌ ನಾಮ್‌ಗ್ಯಾಲ್‌ ಅವರನ್ನು ಕಾಂಗ್ರೆಸ್‌ನಿಂದ ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್‌ ನಾಯಕರು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪಿ ಬ್ರಿಜ್‌ ಭೂಷಣ್‌ಗಿಲ್ಲ ಟಿಕೆಟ್‌; ಮಗನಿಗೆ ಮಣೆ, ರಾಯ್‌ಬರೇಲಿಗೂ ಅಭ್ಯರ್ಥಿ ಘೋಷಿಸಿದ ಬಿಜೆಪಿ

Continue Reading

ದೇಶ

Lok Sabha Election : ಮೋದಿ ಗ್ಯಾರಂಟಿ ಪಡೆಯಲು ಜೋಶಿ ಗೆಲ್ಲಿಸಿ; ಏಕನಾಥ ಶಿಂಧೆ

Lok Sabha Election: ದೇಶದ ವಿಕಾಸ ಹಾಗೂ ಪ್ರಗತಿಯ ಚುನಾವಣೆ ಇದಾಗಿದೆ. ಜೋಶಿ ಅವರು 5ನೆಯ ಬಾರಿ ಸ್ಪರ್ದೆ ಮಾಡಿದ್ದಾರೆ. ನಿಮ್ಮ ಆಶೀರ್ವಾದದಿಂದ ಮತ್ತೊಮ್ಮೆ ಅವರು ಗೆಲ್ಲಬೇಕು. ಆ ಮೂಲಕ ಮೋದಿಯವರ ಕೈ ಬಲಪಡಿಸಬೇಕು. ನಾನು ಕಾರ್ಯಕರ್ತನಾಗಿ ಕೆಲಸ ಮಾಡಿ ಸಿಎಂ ಆಗಿದ್ದೇನೆ. ಈಗಲೂ ಸಹ ನಾನು ಕಾರ್ಯಕರ್ತನಾಗಿಯೇ ಇದ್ದೇನೆ. ನೀವೆಲ್ಲ ಭಾಗ್ಯವಂತರು ಯಾಕೆಂದರೆ ಜೋಶಿ ಆದರ್ಶ ಸಂಸದರು. ಅವರು ಮೋದಿಯವರ ಹತ್ತಿರವೇ ಇರುವ ಸಂಸದರಾಗಿದ್ದಾರೆ ಎಂದು ನುಡಿದರು.

VISTARANEWS.COM


on

Lok Sabha Election
Koo

ಧಾರವಾಡ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಧಾರವಾಡ ಕ್ಷೇತ್ರದ ಅಭ್ಯರ್ಥಿ ಪ್ರಲ್ಹಾದ್​ ಜೋಶಿ (pralhad joshi) ಪರ ಗುರುವಾರ ಮಹಾರಾಷ್ಟ್ರ ಸಿಎಂ ಹಾಗೂ ಶಿವಸೇನೆ (Eknath Shinde) ಮುಖ್ಯಸ್ಥ ಏಕನಾಥ ಶಿಂಧೆ ಅವರು ಪ್ರಚಾರ ಭಾಷಣೆ ಮಾಡಿದರು. ನಗರದ ಮೃತ್ಯುಂಜಯ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ಮೋದಿ (Narendra Modi) ನೀಡುವ ಗ್ಯಾರಂಟಿ ಪಡೆಯಲು ಪ್ರಲ್ಹಾದ್ ಜೋಶಿಯನ್ನು ಗೆಲ್ಲಿಸಿ ಎಂದು ಕರೆಕೊಟ್ಟರು.

ನಮಸ್ಕಾರಗಳು ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಸಿಎಂ ಶಿಂಧೆ ಅವರು, ಧಾರವಾಡದ ಜನತೆಯನ್ನು ಭೇಟಿ ಮಾಡಿದ್ದು ಖುಷಿ ತಂದಿದೆ ಎಂದು ಹೇಳಿದರು. ಛತ್ರಪತಿ ಶಿವಾಜಿ ಅವರಿಗೂ ಧಾರವಾಡಕ್ಕೂ ಸಂಬಂಧ ಇದೆ. ಪುಣೆ ಹಾಗೂ ಧಾರವಾಡ ಸಾಂಸ್ಕೃತಿಕ, ಶೈಕ್ಷಣಿಕ ಕೇಂದ್ರ ಎಂಬುದಾಗಿ ನುಡಿದರು.

ದೇಶದ ವಿಕಾಸ ಹಾಗೂ ಪ್ರಗತಿಯ ಚುನಾವಣೆ ಇದಾಗಿದೆ. ಜೋಶಿ ಅವರು 5ನೆಯ ಬಾರಿ ಸ್ಪರ್ದೆ ಮಾಡಿದ್ದಾರೆ. ನಿಮ್ಮ ಆಶೀರ್ವಾದದಿಂದ ಮತ್ತೊಮ್ಮೆ ಅವರು ಗೆಲ್ಲಬೇಕು. ಆ ಮೂಲಕ ಮೋದಿಯವರ ಕೈ ಬಲಪಡಿಸಬೇಕು. ನಾನು ಕಾರ್ಯಕರ್ತನಾಗಿ ಕೆಲಸ ಮಾಡಿ ಸಿಎಂ ಆಗಿದ್ದೇನೆ. ಈಗಲೂ ಸಹ ನಾನು ಕಾರ್ಯಕರ್ತನಾಗಿಯೇ ಇದ್ದೇನೆ. ನೀವೆಲ್ಲ ಭಾಗ್ಯವಂತರು ಯಾಕೆಂದರೆ ಜೋಶಿ ಆದರ್ಶ ಸಂಸದರು. ಅವರು ಮೋದಿಯವರ ಹತ್ತಿರವೇ ಇರುವ ಸಂಸದರಾಗಿದ್ದಾರೆ ಎಂದು ನುಡಿದರು.

ಕಾಂಗ್ರೆಸ್ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಅವರು ಗೆಲ್ಲುವ ಮೊದಲು ಏನೇನೋ ಕೊಡ್ತೀನಿ ಅಂಥ ಹೇಳಿದ್ದರು. ಆದರೆ ಈಗ ನಮ್ಮಲ್ಲಿ ದುಡ್ಡಿಲ್ಲ ಅಂತಾರೆ. ಆದ್ರೆ ದೇಶದಲ್ಲಿ ಚಾಲ್ತಿ ಇರೋದು ಮೋದಿ ಗ್ಯಾರಂಟಿ ಎಂದು ಅವರು ಹೇಳಿದರು.

ಇದನ್ನೂ ಓದಿ: K. Annamalai : ಪ್ರಚಾರ ಸಭೆಯಲ್ಲಿ ಅಣ್ಣಾಮಲೈ ಹೊಗಳಿದಾಗ ಕಣ್ಣೀರು ಹಾಕಿದ ವಿಜಯಪುರ ಅಭ್ಯರ್ಥಿ ಜಿಗಜಿಣಗಿ

ಜಾಗತಿಕ ಅರ್ಥ ವ್ಯವಸ್ಥೆಯಲ್ಲಿ ನಾವು 5ನೆಯ ಪಡೆಯಲು ಮೋದಿ ಕಾರಣ. ದೇಶದಲ್ಲಿ ಮೋದಿ ಅಭಿವೃದ್ಧಿ ಮಾಡಿದ್ದಾರೆ. ಒಂದೇ ಒಂದು ರಜೆ ಸಹ ಪಡೆಯದೆ ಕೆಲಸ ಮಾಡಿದ್ದಾರೆ. ಸ್ವಲ್ಪ ಚಳಿ ಆದರೆ ವಿದೇಶಕ್ಕೆ ತೆರಳುವವರು ಬೇರೆ ಪಾರ್ಟಿಯ ಯುವರಾಜ (ರಾಹುಲ್ ಗಾಂಧಿ) ಎಂದು ಶಿಂಧೆ ಹೇಳಿದರು.

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ತ್ರಿವರ್ಣ ದ್ವಜ ಹಾರಿಸಿದ ಕೀರ್ತಿ ಜೋಶಿ ಅವರಿಗೆ ಇದೆ. ಪಾಕಿಸ್ತಾನದವರು ಮೊದಲು ನಮ್ಮ ದೇಶದಲ್ಲಿ ಬಾಂಬ್ ಹಾಕುತ್ತಿದ್ದರು. ಈಗ ಭಾರತ ಮೋದಿ ನೇತೃತ್ವದಲ್ಲಿ ಪಾಕ್ ನ ಒಳಗೆ ಹೊಕ್ಕು ಸದೆಬಡಿಯುತ್ತಿದೆ ಎಂದು ಹೇಳಿದರು.

ದ್ವಾರಕಾ ನಗರದಲ್ಲಿ ಸಮುದ್ರದ ಒಳಗೆ ಹೋಗಿ ಮೋದಿ ದೇಶದ ಒಳಿತಿಗೆ ಪ್ರಾರ್ಥನೆ ಮಾಡಿದ್ದಾರೆ. ಮೋದಿ ದೇಶದ ಕೆಲಸಕ್ಕಾಗಿ ಅವರು ಇದ್ದಾರೆ. ಕೋಟ್ಯಾನುಕೋಟಿ ರಾಮನ ಭಕ್ತರ ಸಂಕಲ್ಪ ಪೂರ್ಣ ಆಗಿದೆ. ಈಗ ಎಲ್ಲರೂ ಖುಷಿಯಿಂದ ಇದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಮಾಡಿದ ಚಂದ್ರಯಾನ ಫೇಲ್ ಆಗಿವೆ. ಪದೇ ಪದೇ ತಪ್ಪುಗಳನ್ನು ಮಾಡಿದ್ದಾರೆ. ಆದಾಗ್ಯೂ ಇಂಡಿಯಾ ಬಣ ಮೋದಿಯನ್ನು ಸೋಲಿಸುವುದಕ್ಕೆ ನಿಂತಿದೆ, ಅದು ಅದು ಎಂದಿಗೂ ಆಗುವುದಿಲ್ಲ ಎಂದು ನುಡಿದರು.

Continue Reading

ದೇಶ

Amit Shah: ಮತದಾನ ಕುಸಿತದಿಂದ ಬಿಜೆಪಿಗೆ ನಷ್ಟ? ಅಮಿತ್ ಶಾ ಹೇಳೋದೇನು?

Amit Shah: Lok Sabha Election 2024: ಚುನಾವಣೆ ಆಯೋಗದ ಅಂತಿಮ ಮಾಹಿತಿ ಪ್ರಕಾರ, ಹಂತ 1ರಲ್ಲಿ 66.1%ರಷ್ಟು ಮತದಾನವಾಗಿದ್ದು, 2ನೇ ಹಂತದಲ್ಲಿ 66.7% ರಷ್ಟು ಮತದಾನವಾಗಿದೆ. 2019ರಲ್ಲಿ, ಈ ಹಂತಗಳ ಅಂಕಿಅಂಶಗಳು ಕ್ರಮವಾಗಿ 69.4% ಮತ್ತು 69.6% ಆಗಿದ್ದವು. ಮತದಾನ ಪ್ರಮಾಣ ಕಡಿಮೆಯಾದ ಕಾರಣ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗುತ್ತದೆ ಎಂದೇ ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ, ಮತದಾನ ಪ್ರಮಾಣದ ಪರಿಣಾಮದ ಕುರಿತು ಅಮಿತ್‌ ಶಾ ಮಾತನಾಡಿದ್ದಾರೆ.

VISTARANEWS.COM


on

Amit Shah
Koo

ನವದೆಹಲಿ: ಲೋಕಸಭೆ ಚುನಾವಣೆಯ (Lok Sabha Election) ಮೊದಲನೇ ಹಾಗೂ ಎರಡನೇ ಹಂತದ ಮತದಾನ ಮುಕ್ತಾಯಗೊಂಡಿದ್ದು, ಎರಡೂ ಹಂತಗಳಲ್ಲಿ ಕಳೆದ ಬಾರಿಗಿಂತ ಈ ಬಾರಿ ತಲಾ ಶೇ.3ರಷ್ಟು ಮತದಾನ ಪ್ರಮಾಣ ಕುಸಿತವಾಗಿದೆ. ಮತದಾನ ಪ್ರಮಾಣ ಕಡಿಮೆಯಾದ ಕಾರಣ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗುತ್ತದೆ. ನರೇಂದ್ರ ಮೋದಿ (Narendra Modi) ಅವರ ಅಲೆ ಕಡಿಮೆಯಾಗಿದ್ದು, ಮತದಾನ ಪ್ರಮಾಣ ಕುಂಠಿತಗೊಂಡಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಆದರೆ, ಮತದಾನ ಪ್ರಮಾಣ ಕಡಿಮೆಯಾಗಿರುವ ಕಾರಣ ಬಿಜೆಪಿಗೆ ಹಿನ್ನಡೆಯಾಗುತ್ತದೆ ಎಂಬುದನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ತಿರಸ್ಕರಿಸಿದ್ದಾರೆ.

ನ್ಯೂಸ್‌ 18 ಸುದ್ದಿ ಸಂಸ್ಥೆಗೆ ಸಂದರ್ಶನ ನೀಡುವ ವೇಳೆ ಮತದಾನ ಪ್ರಮಾಣ ಕುಸಿತ, ಅದರಿಂದ ಬಿಜೆಪಿ ಮೇಲೆ ಉಂಟಾಗುವ ಪರಿಣಾಮ ಕುರಿತ ಪ್ರಶ್ನೆಗೆ ಅವರು ಉತ್ತರಿಸಿದರು. “ದೇಶದಲ್ಲಿ ಮತದಾನ ಪ್ರಮಾಣ ಕಡಿಮೆಯಾಯಿತು ಎಂಬ ಮಾತ್ರಕ್ಕೆ ಫಲಿತಾಂಶದ ಮೇಲೆ ಅದು ಪರಿಣಾಮ ಬೀರುವುದಿಲ್ಲ. ಬಿಜೆಪಿಯು ಖಂಡಿತವಾಗಿಯೂ ಸರಿಯಾದ ಮಾರ್ಗದಲ್ಲಿದೆ. ನೀವು ಬೇಕಾದರೆ ಗಮನಿಸಿ, ಜೂನ್‌ 4ರಂದು ಫಲಿತಾಂಶ ಪ್ರಕಟವಾಗುವ ದಿನ ಮಧ್ಯಾಹ್ನ 12.30ರ ವೇಳೆಗೆ ಎನ್‌ಡಿಎ 400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುತ್ತದೆ. ಅಷ್ಟಕ್ಕೂ, ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗುವುದು ನಿಶ್ಚಿತ” ಎಂದು ಹೇಳಿದರು.

ಮತದಾನ ಕುಸಿತಕ್ಕೆ 2 ಕಾರಣ ಕೊಟ್ಟ ಶಾ

ಎರಡು ಹಂತಗಳಲ್ಲಿ ಮತದಾನ ಕುಸಿತಗೊಂಡಿರುವುದಕ್ಕೆ ಅಮಿತ್‌ ಶಾ ಅವರು ಎರಡು ಪ್ರಮುಖ ಕಾರಣ ಕೊಟ್ಟಿದ್ದಾರೆ. “12 ವರ್ಷಗಳ ಬಳಿಕ ಮತದಾರರ ಪಟ್ಟಿಯಲ್ಲಿ ಭಾರಿ ಪ್ರಮಾಣದ ಬದಲಾವಣೆಗಳಾಗಿವೆ. ಇನ್ನು, ಬಿಜೆಪಿ ವಿರುದ್ಧ ಪ್ರಬಲ ಸ್ಪರ್ಧಿಗಳು ಇಲ್ಲದ ಕಾರಣ ಮತದಾನ ಕುಸಿತವಾಗಿದೆ. ಆದರೆ, ನಮ್ಮ ಪಕ್ಷ, ಪರಿಣತರು ಸೇರಿ ನಾವೊಂದು ವಿಶ್ಲೇಷಣೆ ಮಾಡಿದ್ದೇವೆ. ಎರಡು ಹಂತಗಳಲ್ಲಿ ಬಿಜೆಪಿಗೆ 100 ಸೀಟು ಸಿಗಲಿವೆ. 400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದರಲ್ಲಿ ಅನುಮಾನವೇ ಇಲ್ಲ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಬಾರಿ 7 ಹಂತಗಳಲ್ಲಿ ಮತದಾನ ನಡೆಯಲಿದ್ದು, ಈಗಾಗಲೇ ಎರಡು ಹಂತಗಳ ಮತದಾನ ಮುಕ್ತಾಯವಾಗಿದೆ. ಮೊದಲ ಹಂತದಲ್ಲಿ 66.1%ರಷ್ಟು ಮತದಾನವಾಗಿದ್ದು, 2ನೇ ಹಂತದಲ್ಲಿ 66.7%ರಷ್ಟು ಮತದಾನವಾಗಿದೆ. ಆದರೆ, 2019ರಲ್ಲಿ, ಈ ಹಂತಗಳ ಅಂಕಿಅಂಶಗಳು ಕ್ರಮವಾಗಿ 69.4% ಮತ್ತು 69.6% ಆಗಿದ್ದವು. ಮತದಾನ ಪ್ರಮಾಣ ಕಡಿಮೆಯಾದ ಕಾರಣ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗುತ್ತದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಆದರೆ, ಇನ್ನೂ ಐದು ಹಂತಗಳ ಮತದಾನ ಬಾಕಿ ಇರುವ ಕಾರಣ ಮತದಾನ ಪ್ರಮಾಣದ ಮೇಲೆ ಎಲ್ಲರ ಗಮನ ಇದೆ.

ಇದನ್ನೂ ಓದಿ: Amit Shah: ಅಮಿತ್‌ ಶಾ ತಿರುಚಿದ ವಿಡಿಯೋ ಪ್ರಕರಣ: ಆಪ್‌, ಕಾಂಗ್ರೆಸ್‌ ಪಕ್ಷದ ಮೂವರ ಬಂಧನ

Continue Reading

ದೇಶ

ಆಸ್ಪತ್ರೆಯಲ್ಲಿ ಟಾರ್ಚ್‌ ಬಳಸಿ ಹೆರಿಗೆ; ತಾಯಿ, ಮಗು ಸಾವು; 3 ಈಡಿಯಟ್ಸ್‌ ಸಿನಿಮಾ ದೃಶ್ಯ ಇಲ್ಲಿ ದುರಂತ!

ಮುಂಬೈ ನಗರದಲ್ಲಿರುವ ಸುಷ್ಮಾ ಸ್ವರಾಜ್‌ ಆಸ್ಪತ್ರೆಯಲ್ಲಿ ವಿದ್ಯುತ್‌ ಇಲ್ಲದ ಕಾರಣ ಆಸ್ಪತ್ರೆ ಸಿಬ್ಬಂದಿಯು ಸಹಿದುನ್‌ ಎಂಬ ಮಹಿಳೆಗೆ ಸಿಸೇರಿಯನ್‌ ಮೂಲಕ ಹೆರಿಗೆ ಮಾಡಿದ್ದಾರೆ. ಸರಿಯಾದ ಮೂಲ ಸೌಕರ್ಯ, ಚಿಕಿತ್ಸೆ ಸಿಗದೆ, ಹೆರಿಗೆ ಬಳಿಕ ತಾಯಿ ಹಾಗೂ ಮಗು ಮೃತಪಟ್ಟಿದ್ದಾರೆ. ಇದಾದ ಬಳಿಕ ಕುಟುಂಬಸ್ಥರು ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಬಿಎಂಸಿಯು ಪ್ರಕರಣದ ಕುರಿತು ತನಿಖೆಗೆ ಆದೇಶಿಸಿದೆ.

VISTARANEWS.COM


on

Mumbai
Koo

ಮುಂಬೈ: 3 ಈಡಿಯಟ್ಸ್‌ ಸಿನಿಮಾ ನೋಡಿದವರಿಗೆ ಆ ಭಾವುಕ ದೃಶ್ಯ ನೆನಪಿದ್ದೇ ಇರುತ್ತದೆ. ಜೋರು ಮಳೆಯಿಂದ ಕರೆಂಟ್‌ ಕೈಕೊಟ್ಟಾಗ 3 ಈಡಿಯಟ್ಸ್‌ ಸೇರಿ ಎಲ್ಲರೂ ಬ್ಯಾಟರಿ ಮೂಲಕ, ವ್ಯಾಕ್ಯೂಮ್‌ ಕ್ಲೀನರ್‌ ಬಳಸಿ ಮಹಿಳೆಯೊಬ್ಬರ ಹೆರಿಗೆ ಮಾಡಿಸುತ್ತಾರೆ. ಆದರೆ, ಮುಂಬೈನ (Mumbai) ಸರ್ಕಾರಿ ಆಸ್ಪತ್ರೆಯೊಂದರಲ್ಲಿ (Government Hospital) ಮೂಲ ಸೌಕರ್ಯವಿಲ್ಲದೆ, ಮೊಬೈಲ್‌ ಟಾರ್ಚ್‌ ಬಳಸಿ ಮಹಿಳೆಯ ಹೆರಿಗೆ ಮಾಡಿದ್ದಾರೆ. ಹೆರಿಗೆ ಬಳಿಕ ತಾಯಿ ಹಾಗೂ ಮಗು ಮೃತಪಟ್ಟಿದ್ದು, ಮನ ಕಲಕುವ ಘಟನೆಯು ಜನರ ಆಕ್ರೋಶ ಕೆರಳಿಸಿದೆ.

ಹೌದು, ಬೃಹನ್‌ಮುಂಬೈ ಮುನ್ಸಿಪಲ್‌ ಕಾರ್ಪೊರೇಷನ್‌ (BMC) ವ್ಯಾಪ್ತಿಯ ಸುಷ್ಮಾ ಸ್ವರಾಜ್‌ ಆಸ್ಪತ್ರೆಯಲ್ಲಿ ವಿದ್ಯುತ್‌ ಇಲ್ಲದ ಕಾರಣ ಆಸ್ಪತ್ರೆ ಸಿಬ್ಬಂದಿಯು ಸಹಿದುನ್‌ ಎಂಬ ಮಹಿಳೆಗೆ ಸಿಸೇರಿಯನ್‌ ಮೂಲಕ ಹೆರಿಗೆ ಮಾಡಿದ್ದಾರೆ. ಸರಿಯಾದ ಮೂಲ ಸೌಕರ್ಯ, ಚಿಕಿತ್ಸೆ ಸಿಗದೆ, ಹೆರಿಗೆ ಬಳಿಕ ತಾಯಿ ಹಾಗೂ ಮಗು ಮೃತಪಟ್ಟಿದ್ದಾರೆ. ಖುಸ್ರುದ್ದೀನ್‌ ಅನ್ಸಾರಿ ಅವರು 11 ತಿಂಗಳ ಹಿಂದಷ್ಟೇ ಸಹಿದುನ್‌ ಅವರನ್ನು ಮದುವೆಯಾಗಿದ್ದರು. ಮದುವೆಯಾದ ಕೆಲವೇ ತಿಂಗಳಿಗೆ ಸಹಿದುನ್‌ ಗರ್ಭಿಣಿಯಾಗಿದ್ದರು. ಕೆಲ ದಿನಗಳ ಹಿಂದಷ್ಟೇ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಈಗ ಮೂಲ ಸೌಕರ್ಯ, ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ತಾಯಿ ಮತ್ತು ಮಗು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಕುಟುಂಬಸ್ಥರು ಹೇಳುವುದೇನು?

ಹೆರಿಗೆ ಮಾಡಿಸುವ ಕೋಣೆಯಲ್ಲಿ ವಿದ್ಯುತ್‌ ಕಡಿತವಾಗಿದೆ. ಸಿಸೇರಿಯನ್‌ ಮಾಡುವಾಗಲೇ ವಿದ್ಯುತ್‌ ಕೈಕೊಟ್ಟ ಕಾರಣ ಆಪರೇಷನ್‌ಗೆ ತೊಂದರೆಯಾಗಿದೆ. ಇನ್ನು ಮೂರು ಗಂಟೆಯಿಂದ ಜನರೇಟರ್‌ ಆನ್‌ ಆಗಿಲ್ಲ. ಇದಾದ ಬಳಿಕ ವೈದ್ಯರು ಮೊಬೈಲ್‌ ಬ್ಯಾಟರಿ ಬಳಸಿ ಆಪರೇಷನ್‌ ಮಾಡಿದ್ದಾರೆ. ಇದರಿಂದಾಗಿ ನನ್ನ ಪತ್ನಿ ಹಾಗೂ ಮಗುವನ್ನು ಕಳೆದುಕೊಳ್ಳಬೇಕಾಯಿತು ಎಂದು ಮಹಿಳೆಯ ಕುಟುಂಬಸ್ಥರು ದೂರಿದ್ದಾರೆ. ಅಷ್ಟೇ ಅಲ್ಲ, ಆಸ್ಪತ್ರೆ ಹೊರಗೆ ತೀವ್ರವಾಗಿ ಪ್ರತಿಭಟನೆ ನಡೆಸಿದ್ದಾರೆ. ಪ್ರಕರಣವನ್ನು ಬಿಎಂಸಿಯು ತನಿಖೆಗೆ ಆದೇಶಿಸಿದೆ. ಏಪ್ರಿಲ್‌ 29ರಂದು ಡೆಲಿವರಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಬಿಎಂಸಿ ಬಜೆಟ್‌ 52 ಸಾವಿರ ಕೋಟಿ ರೂ.

ಬೃಹನ್‌ಮುಂಬೈ ಮುನ್ಸಿಪಲ್‌ ಕಾರ್ಪೊರೇಷನ್‌ನ ವಾರ್ಷಿಕ ಬಜೆಟ್‌ 52 ಸಾವಿರ ಕೋಟಿ ರೂ. ಆಗಿದೆ. ಆರೋಗ್ಯ ಕ್ಷೇತ್ರಕ್ಕಾಗಿಯೇ ಆಸ್ಪತ್ರೆಯು 6,250 ಕೋಟಿ ರೂ. ಮೀಸಲಿರಿಸಿದೆ. ಇಷ್ಟಿದ್ದರೂ, ಸರ್ಕಾರಿ ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ಮೂಲ ಸೌಕರ್ಯಗಳು, ವೈದ್ಯಕೀಯ ಉಪಕರಣಗಳು ಬಿಡಿ, ಕನಿಷ್ಠ ಸಮರ್ಪಕ ವಿದ್ಯುತ್‌, ವಿದ್ಯುತ್‌ ಕೈಕೊಟ್ಟರೆ ಇನ್ವರ್ಟರ್‌ ಸೇರಿ ಯಾವುದೇ ಸೌಕರ್ಯಗಳು ಇಲ್ಲದಿರುವುದು ಸಾಮಾನ್ಯ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಖಾಸಗಿ ಆಸ್ಪತ್ರೆಗೆ ಹೋದರೆ ಲಕ್ಷಾಂತರ ರೂ. ಕೊಡಬೇಕು, ದುಡ್ಡಿಲ್ಲದ ಕಾರಣ ಸರ್ಕಾರಿ ಆಸ್ಪತ್ರೆಗೆ ಹೋದರೆ ಪ್ರಾಣವನ್ನೇ ತ್ಯಾಗ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜನ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: Medical Negligence : ಸಕಾಲಕ್ಕೆ ಸಿಗದ ಚಿಕಿತ್ಸೆ; ಹೆರಿಗೆಗೂ ಮೊದಲೇ ತಾಯಿ-ಮಗು ಸಾವು

Continue Reading
Advertisement
Tsering Namgyal
ದೇಶ1 min ago

Tsering Namgyal: ಸಂಸತ್ತಲ್ಲಿ ಕಾಂಗ್ರೆಸ್‌ ವಿರುದ್ಧ ಗುಡುಗಿದ್ದ ತ್ಸೆರಿಂಗ್‌ ಈಗ ಅದೇ ಪಕ್ಷದ ಲಡಾಕ್‌ ಅಭ್ಯರ್ಥಿ!

IPL 2024
ಪ್ರಮುಖ ಸುದ್ದಿ9 mins ago

IPL 2024 : ರಾಜಸ್ಥಾನ್ ವಿರುದ್ಧ ಎಸ್​​ಆರ್​ಎಚ್​​ ತಂಡಕ್ಕೆ ರೋಚಕ 1 ರನ್ ಗೆಲುವು

Ragini Khanna
ಸಿನಿಮಾ31 mins ago

Ragini Khanna: ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದಕ್ಕೆ ಕ್ಷಮೆ ಕೇಳಿದ ನಟ ಗೋವಿಂದ ಸೋದರ ಸೊಸೆ!

Rain News
ಪ್ರಮುಖ ಸುದ್ದಿ32 mins ago

Rain News : ಬೆಂಗಳೂರಿನಲ್ಲಿ ಸಂಜೆ ಸುರಿದ ಸಣ್ಣ ಮಳೆಗೆ ಕೆಲವೆಡೆ ಅನಾಹುತ

Election campaign for Congress candidate Samyukta Patil in Prajadhwani convention at Bagalkot
ರಾಜಕೀಯ43 mins ago

Lok Sabha Election 2024: ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್‌ ಪರ ಭರ್ಜರಿ ಪ್ರಚಾರ

Lok Sabha Election
ದೇಶ1 hour ago

Lok Sabha Election : ಮೋದಿ ಗ್ಯಾರಂಟಿ ಪಡೆಯಲು ಜೋಶಿ ಗೆಲ್ಲಿಸಿ; ಏಕನಾಥ ಶಿಂಧೆ

Amit Shah
ದೇಶ1 hour ago

Amit Shah: ಮತದಾನ ಕುಸಿತದಿಂದ ಬಿಜೆಪಿಗೆ ನಷ್ಟ? ಅಮಿತ್ ಶಾ ಹೇಳೋದೇನು?

K. Annamalai
ಪ್ರಮುಖ ಸುದ್ದಿ1 hour ago

K. Annamalai : ಪ್ರಚಾರ ಸಭೆಯಲ್ಲಿ ಅಣ್ಣಾಮಲೈ ಹೊಗಳಿದಾಗ ಕಣ್ಣೀರು ಹಾಕಿದ ವಿಜಯಪುರ ಅಭ್ಯರ್ಥಿ ಜಿಗಜಿಣಗಿ

Mumbai
ದೇಶ2 hours ago

ಆಸ್ಪತ್ರೆಯಲ್ಲಿ ಟಾರ್ಚ್‌ ಬಳಸಿ ಹೆರಿಗೆ; ತಾಯಿ, ಮಗು ಸಾವು; 3 ಈಡಿಯಟ್ಸ್‌ ಸಿನಿಮಾ ದೃಶ್ಯ ಇಲ್ಲಿ ದುರಂತ!

AC Blast
ಪ್ರಮುಖ ಸುದ್ದಿ2 hours ago

AC Blast : ಕಲ್ಯಾಣ್​ ಜ್ಯುವೆಲರಿಯಲ್ಲಿ ಭಾರಿ ಅವಘಡ; ಏರ್​ ಕಂಡೀಷನರ್​ ಬ್ಲಾಸ್ಟ್​ ಆಗಿ ಮೂವರಿಗೆ ಗಾಯ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case Another victim gives statement before judge Will Revanna get anticipatory bail
ಕ್ರೈಂ5 hours ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ19 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ3 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20244 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

ಟ್ರೆಂಡಿಂಗ್‌