Site icon Vistara News

NPCI New Products: ಯುಪಿಐ ಮೂಲಕ ಹಣ ಪಾವತಿಸಲು ಇನ್ನು ನಿಮ್ಮ ಧ್ವನಿ ಸಾಕು! ಏನಿದು?

Voice Based UPI Payment

NPCI launches new Products users can now make voice enabled UPI payments

ನವದೆಹಲಿ: ಡಿಜಿಟಲ್‌ ಪೇಮೆಂಟ್‌ಗೆ ಉತ್ತೇಜನ ನೀಡುವ ದಿಸೆಯಲ್ಲಿ ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು (National Payments Corporation of India-NPCI) ಹಲವು ಮಹತ್ವದ (NPCI New Products) ಸುಧಾರಣೆಗಳನ್ನು ಘೋಷಿಸಿದೆ. ಅದರಲ್ಲೂ, ಧ್ವನಿ ಆಧಾರಿತ ಯುಪಿಐ ಪೇಮೆಂಟ್‌ (Voice-Enabled UPI Payments) ಯೋಜನೆಯಾದ ‘ಹಲೋ! ಯುಪಿಐ’ ಜನರಿಗೆ ಭಾರಿ ಅನುಕೂಲವಾಗಲಿದೆ. ಅಂದರೆ, ನೀವು ಇಂತಿಷ್ಟು ಮೊತ್ತ ಎಂದು ಹೇಳಿದರೆ ಸಾಕು, ಯುಪಿಐ ಮೂಲಕ ಅಷ್ಟು ಹಣ ಪಾವತಿಯಾಗುತ್ತದೆ.

ಗ್ಲೋಬಲ್‌ ಫಿನ್‌ಟೆಕ್‌ ಫೆಸ್ಟಿವಲ್‌ನಲ್ಲಿ ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಅವರು ಎನ್‌ಪಿಸಿಐ ಪ್ರಾಡಕ್ಟ್‌ಗಳನ್ನು ಘೋಷಿಸಿದರು. ದೇಶದಲ್ಲಿ ಈಗಾಗಲೇ ಮಾಸಿಕ 100 ಕೋಟಿ ಯುಪಿಐ ವಹಿವಾಟು ಗುರಿ ಸಾಧನೆ ಆಗಿರುವುದರಿಂದ ಡಿಜಿಟಲ್‌ ಪೇಮೆಂಟ್‌ಗೆ ಮತ್ತಷ್ಟು ಆದ್ಯತೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಪೇಮೆಂಟ್ ಆ್ಯಪ್‌ಗಳ ಮೂಲಕ ಧ್ವನಿ ಆಧಾರಿತವಾಗಿ ಪಾವತಿ ವ್ಯವಸ್ಥೆಯು ಹೆಚ್ಚು ಗಮನ ಸೆಳೆದಿದೆ.

ಆಫ್‌ಲೈನ್‌ನಲ್ಲೂ ಹಣ ಪಾವತಿಸಿ

ಇವುಗಳ ಜತೆಗೆ ಸಾಲ ಸೌಲಭ್ಯ ಕಲ್ಪಿಸುವ ಯುಪಿಐ ಕ್ರೆಡಿಟ್‌ ಲೈನ್‌, ಆಫ್‌ಲೈನ್‌ನಲ್ಲೂ ಹಣ ಪಾವತಿ ಮಾಡಲು ಸಾಧ್ಯವಾಗುವ ಯುಪಿಐ ಲೈಟ್‌ ಎಕ್ಸ್‌, ಯುಪಿಐ ಟ್ಯಾಪ್‌ ಆ್ಯಂಡ್‌ ಪೇ (UPI Tap & Pay) ಯೋಜನೆಗಳನ್ನೂ ಘೋಷಿಸಿದೆ. ಹಲೋ! ಯುಪಿಐ ಯೋಜನೆ ಅಡಿಯಲ್ಲಿ ಟೆಲಿಕಾಮ್‌ ಕಾಲ್‌ಗಳ ಮೂಲಕವೇ ಹಣ ಪಾವತಿ ಮಾಡಬಹುದಾಗಿದೆ. ಆರಂಭದಲ್ಲಿ ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಈ ಸೌಲಭ್ಯ ಇರಲಿದೆ ಎಂದು ಶಕ್ತಿಕಾಂತ ದಾಸ್‌ ತಿಳಿಸಿದ್ದಾರೆ.

ಇದನ್ನೂ ಓದಿ: Hitachi Payment Services: ದೇಶದ ಮೊದಲ ಯುಪಿಐ-ಎಟಿಎಂ ಆರಂಭಿಸಿದ ಹಿಟಾಚಿ ಪೇಮೆಂಟ್ ಸರ್ವೀಸ್

ಯುಪಿಐ ಟ್ಯಾಪ್‌ ಆ್ಯಂಡ್‌ ಪೇ ಎಂದರೆ ಗ್ರಾಹಕರು ಡಿಜಿಟಲ್‌ ಮೂಲಕ “ಸಂಭಾಷಣೆಯುಕ್ತ ಪೇಮೆಂಟ್”‌ (Conversational Payments) ಮಾಡಬಹುದಾಗಿದೆ. ಸುಲಭ ಹಾಗೂ ಸುರಕ್ಷಿತವಾಗಿ ಡಿಜಿಟಲ್‌ ಪಾವತಿಗಾಗಿ ಈ ನೂತನ ತಂತ್ರಜ್ಞಾನದ ಅಳವಡಿಕೆಗೆ ಆರ್‌ಬಿಐ ತೀರ್ಮಾನಿಸಿದೆ. ಕೃತಕ ಬುದ್ಧಿಮತ್ತೆ ಅಳವಡಿಕೆಯ ವ್ಯವಸ್ಥೆ ಜತೆ ಸಂಭಾಷಣೆ ನಡೆಸಿ ಸುಲಭ ಹಾಗೂ ಸುರಕ್ಷಿತವಾಗಿ ಪಾವತಿ ಮಾಡಬಹುದಾಗಿದೆ ಎಂದು ಆರ್‌ಬಿಐ ತಿಳಿಸಿದೆ.

Exit mobile version