Site icon Vistara News

CJI Chandrachud : ಸುಪ್ರೀಂ ಕೋರ್ಟ್ ಮುಖ್ಯ​ ನ್ಯಾಯಮೂರ್ತಿ ಚಂದ್ರಚೂಡ್ ಕಾರಿನ ನಂಬರ್ ಪ್ಲೇಟ್ ವೈರಲ್

CJI Car

ನವದೆಹಲಿ: ಸುಪ್ರಿಂಕೋರ್ಟ್​ (Supreme Court) ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ (CJI Chandrachud) ಅವರು ಬಳಸು ವ ಕಾರಿನ ನಂಬರ್ ಪ್ಲೇಟ್ ಆಸಕ್ತರ ಗಮನ ಸೆಳೆದಿದೆ. ಹೀಗಾಗಿ ಕಾರಿನ ನಂಬರ್​ ಪ್ಲೇಟ್​ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್ ಆಗಿದೆ. (Viral News) ಅವರ ಕಾರಿನ ಕಾರಿನ ಚಿತ್ರವನ್ನು ಉದ್ಯಮಿ ಲಾಯ್ಡ್ ಮಥಾಯಿಸ್​ ಅವರು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ (Xpost) ಪೋಸ್ಟ್ ಮಾಡಿದ್ದಾರೆ. ಆ ಬಳಿಕ ಅದು ಎಲ್ಲರ ಗಮನ ಸೆಳೆದಿದೆ. ಯಾಕೆಂದರೆ ಪ್ಲೇಟ್​ ಮೇಲೆ ‘ಡಿಎಲ್ 1 ಸಿಜೆಐ 0001’ ಎಂದು ಬರೆಯಲಾಗಿತ್ತು. ನಂಬರ್​ ಪ್ಲೇಟ್​​ನ ಸೀರಿಯಲ್​ (ಸಿಜೆಐ- ಚೀಪ್​ ಜಸ್ಟಿಸ್​ ಆಫ್​ ಇಂಡಿಯಾ) ಫ್ಯಾನ್ಸಿಯಾಗಿದ್ದ ಕಾರಣ ಎಲ್ಲರೂ ಅಚ್ಚರಿಗೆ ಒಳಗಾಗಿದ್ದಾರೆ.

ನಿನ್ನೆ ದೆಹಲಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಧನಂಜಯ ಚಂದ್ರಚೂಡ್ ಅವರನ್ನು ನೋಡಿದೆ. ನಾನು ಹೊರಗೆ ಹೋಗುವಾಗ, ಅವರ ಕಾರಿನ ಪರವಾನಗಿ ಪ್ಲೇಟ್ ಗಮನ ಸೆಳೆಯಿತು. ಡಿಎಲ್ 1 ಸಿಜೆಐ 0001. ತುಂಬಾ ಕೂಲ್ ಆಗಿದೆ. ಮುಖ್ಯ ಚುನಾವಣಾ ಆಯುಕ್ತರ ಕಾರಿನ ನಂಬರ್ ಪ್ಲೇಟ್ ಡಿಎಲ್ 1 ಸಿಇಸಿ 0001 ಆಗಿದೆಯೇ ಎಂದು ಆಶ್ಚರ್ಯ ಪಡುತ್ತೀರಾ? ಮಥಾಯಿಸ್​ ಕಾರಿನ ಚಿತ್ರದೊಂದಿಗೆ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.

ಮಥಾಯಿಸ್​ ಅವರ ಎಕ್ಸ್​ ಪೋಸ್ಟ್​ ಇಲ್ಲಿದೆ

ಮರ್ಸಿಡಿಸ್ ಇ 350 ಡಿ ಮಾದರಿಯ ಮಾಲೀಕತ್ವವನ್ನು ಪರಿಶೀಲನೆ ಮಾಡಿದಾಗ ಅದು ಭಾರತದ ಸುಪ್ರೀಂ ಕೋರ್ಟ್​​ನ ರಿಜಿಸ್ಟ್ರಾರ್ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದೆ ಎಂದು ಗೊತ್ತಾಗಿದೆ. ಈ ಕಾರನ್ನು ಸರ್ಕಾರವು ಸಿಜೆಐಗೆ ಒದಗಿಸಿದೆ ಎಂಬದು ಗೊತ್ತಾಗಿದೆ.

ಇದನ್ನೂ ಓದಿ : BJP’s national convention : ಜುಲೈ, ಆಗಸ್ಟ್​ನ ವಿದೇಶ ಪ್ರವಾಸ ಬುಕ್ ಆಗಿದೆ; ಹ್ಯಾಟ್ರಿಕ್​ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಮೋದಿ

ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಇ 350ಡಿ ಎಎಂಜಿ ಲೈನ್ ಇ-ಕ್ಲಾಸ್ ಸರಣಿಯ ಟಾಪ್ ಮಾದರಿಯಾಗಿದ್ದು, ಇ-ಕ್ಲಾಸ್ ಟಾಪ್ ಮಾದರಿಯ ಬೆಲೆಯು ರೂ.88.96 ಲಕ್ಷ ರೂಪಾಯಿ. ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಇ 350ಡಿ ಎಎಂಜಿ ಲೈನ್ ಆಟೋಮ್ಯಾಟಿಕ್ (ಟಿಸಿ) ಟ್ರಾನ್ಸ್ ಮಿಷನ್ ನಲ್ಲಿ ಲಭ್ಯವಿದ್ದು, ಅಬ್ಸಿಡಿಯನ್ ಬ್ಲ್ಯಾಕ್ ಮೆಟಾಲಿಕ್, ಗ್ರಾಫೈಟ್ ಗ್ರೇ, ಹೈಟೆಕ್ ಸಿಲ್ವರ್ ಮೆಟಾಲಿಕ್ ಮತ್ತು ಪೋಲಾರ್ ವೈಟ್ ಎಂಬ 4 ಬಣ್ಣಗಳಲ್ಲಿ ಲಭ್ಯವಿದೆ.

Exit mobile version