Site icon Vistara News

Ira Khan: ಜಾಗಿಂಗ್‌ ಉಡುಗೆಯಲ್ಲೇ ಆಮೀರ್ ಪುತ್ರಿ ಇರಾಳನ್ನು ವರಿಸಿದ ನೂಪುರ್!

Nupur Shikhare married Aamir khans daughter Ira khan in jogging clothes

ನವದೆಹಲಿ: ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ (Aamir Khan) ಅವರ ಪುತ್ರಿ ಇರಾ ಖಾನ್ (Ira Khan) ಮತ್ತು ನೂಪುರ್ ಶಿಖರೆ (Nupur Shikhare) ಅವರ ವಿವಾಹವು (Marriage) ಬುಧವಾರ ಸಂಜೆ ನಡೆಯಿತು. ಈ ಯುವಜೋಡಿಯ ರಿಜಿಸ್ಟರ್ ಮದುವೆಯಾಗಿದ್ದು, ವಿವಾಹ ನೋಂದಣಿಯ ವಿಡಿಯೋ ವೈರಲ್ ಆಗಿದೆ(Viral Video). ವರ ನೂಪುರ್ ಕಪ್ಪು ಬಣ್ಣದ ವೆಸ್ಟ್‌ನೊಂದಿಗೆ ಬಿಳಿ ಬಣ್ಣದ ಶಾರ್ಟ್ಸ್‌ನ ಜಾಗಿಂಗ್ ಉಡಿಗೆಯಲ್ಲೇ (jogging clothes) ವೇದಿಕೆಯ ಮೇಲೆ ಕುಳಿತುಕೊಂಡಿದ್ದು, ಇರಾ ಸುಂದರವಾದ ಸಾಂಪ್ರದಾಯಿಕ ಲೆಹೆಂಗಾದಲ್ಲಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ವೇದಿಕೆಯಲ್ಲಿ ಅಮೀರ್ ಖಾನ್, ರೀನಾ ದತ್ತಾ(Reena Datta), ಕಿರಣ್ ರಾವ್ (Kiran Rao) ಮತ್ತು ನೂಪುರ್ ಅವರ ತಾಯಿ, ಇತರ ಸಂಬಂಧಿಕರು ಉಪಸ್ಥಿತರಿದ್ದರು. ಮದುವೆ ಸ್ಥಳ ಅತಿಥಿಗಳಿಂದ ತುಂಬಿ ತುಳುಕುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ವರ ನೂಪರ್ ತಮ್ಮ ವಿಚಿತ್ರ ವರ್ತನೆಯಿಂದಾಗಿ ಗಮನ ಸೆಳೆದಿದ್ದಾರೆ. ಬಾರಾತ್‌ನಲ್ಲಿ ಮದುಮಗ ಸಾಮಾನ್ಯವಾಗ ಸುಂದರ ಬಟ್ಟೆಗಳನ್ನು ಧರಿಸಿಕೊಂಡು ಮಿಂಚುತ್ತಾನೆ. ಆದರೆ, ನೂಪುರ್ ಶಿಖರೆ ಅವರು, ಬಾರಾತ್‌ ಅನ್ನು ಧಿಕ್ಕರಿಸಿ ಮದುವೆ, ಜಾಗಿಂಗ್ ಬಟ್ಟೆಯಲ್ಲಿ ಮದುವೆ ಮನೆಯ ತನಕ ಓಡಿಕೊಂಡು ಬಂದಿದ್ದರು. ವಿಶೇಷ ಎಂದರೆ, ಮದುವೆ ನೋಂದಣಿ ಸಮಯದಲ್ಲೂ ಅದೇ ಡ್ರೆಸ್‌ನಲ್ಲಿ ಅಂದರೆ ಜಾಗಿಂಗ್ ಉಡುಪಿನಲ್ಲಿ ಅವರಿದ್ದರು. ಈ ಕಾರಣಕ್ಕಾಗಿ ಮದುವೆ ವಿಶೇಷ ಗಮನ ಸೆಳೆಯಿತು.

ಇರಾ ಖಾನ್‌ ಮತ್ತು ನೂಪರ್‌ ಅವರ ವಿವಾಹ ನಿಶ್ಚಿತಾರ್ಥ ಕಳೆದ ವರ್ಷ ನೆರವೇರಿತ್ತು. ಖಾಸಗಿಯಾಗಿ ನಡೆದ ಈ ಸಮಾರಂಭದ ಬಳಿಕ ಇಬ್ಬರೂ ಮುಂಬೈಯಲ್ಲಿ ಪಾರ್ಟಿ ಆಯೋಜಿಸಿದ್ದರು. ಈ ಹಿಂದೆ ಮಾಧ್ಯಮದೊಂದಿಗೆ ಮಾತನಾಡಿದ್ದ ಆಮೀರ್‌ ಖಾನ್‌ ತಮ್ಮ ಮಗಳ ಮದುವೆ ಬಗ್ಗೆ ಮಾಹಿತಿ ನೀಡಿದ್ದರು.

ʼʼಇರಾ ಖಾನ್‌ ಆಯ್ಕೆ ಮಾಡಿಕೊಂಡ ನೂಪುರ್‌ ತುಂಬಾ ಒಳ್ಳೆಯ ವ್ಯಕ್ತಿ. ಇರಾ ಖಾನ್‌ ಖಿನ್ನತೆಗೆ ಜಾರಿದ್ದಾಗ ಆತ ಅವಳ ಜತೆಗಿದ್ದು, ಆಕೆಗೆ ಸಹಾಯ ಮಾಡಿದ್ದ. ಬೆಂಬಲ ಸೂಚಿಸಿದ್ದ. ಆಕೆಯ ಆಯ್ಕೆಯ ಬಗ್ಗೆ ನನಗೆ ಹೆಮ್ಮೆ ಇದೆ. ಇಬ್ಬರೂ ಪರಸ್ಪರ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆʼʼ ಎಂದು ಆಮೀರ್‌ ಖಾನ್‌ ಹೇಳಿದ್ದರು.

ʼʼಮಗಳ ಮದುವೆ ದಿನ ಖಂಡಿತಾ ನಾನು ಅಳುತ್ತೇನೆ. ನಾನು ತುಂಬ ಭಾವುಕನಾಗಿರುವುದರಿಂದ ನನ್ನ ಬಗ್ಗೆ ಈಗಲೇ ಕುಟುಂಬ ಸದಸ್ಯರು ಎಚ್ಚರಿಕೆ ವಹಿಸತೊಡಗಿದ್ದಾರೆ. ನಗು ಮತ್ತು ಕಣ್ಣೀರನ್ನು ನನಗೆ ನಿಯಂತ್ರಿಸಲು ಸಾಧ್ಯವಿಲ್ಲʼʼ ಎಂದು ಆಮೀರ್‌ ಖಾನ್‌ ಭಾವುಕರಾಗಿ ಹೇಳಿದ್ದರು.

ಈ ಸುದ್ದಿಯನ್ನೂ ಓದಿ: Aamir Khan: ಆಮೀರ್ ಖಾನ್​ ಮಗಳು ಇರಾ ಖಾನ್ ಮದುವೆ ಶಾಸ್ತ್ರ ಶುರು!

Exit mobile version