ಪಾಟ್ನಾ: ಲೋಕಸಭಾ ಚುನಾವಣೆ(Lok Sabha Election 2024)ಯಷ್ಟೇ ಒಡಿಶಾ ವಿಧಾನಸಭೆ ಚುನಾವಣೆಯೂ ಎಲ್ಲರ ಗಮನ ಸೆಳೆದಿದೆ. ಇಂದು ಒಡಿಶಾ ವಿಧಾನಸಭೆ ಚುನಾವಣೆ ಚುನಾವಣೆಯ ಫಲಿತಾಂಶ(Odisha Assembly Result 2024)ವೂ ಹೊರಬೀಳಲಿದ್ದು, ಈಗಾಗಲೇ ಮತ ಎಣಿಕೆ ಶುರುವಾಗಿದೆ. ಮತ ಎಣಿಕೆ ಬಿರುಸಿನಿಂದ ಸಾಗಿದ್ದು ಈಗಾಗಲೇ ಅಧಿಕಾರದಲ್ಲಿರುವ ಬಿಜೆಡಿ ಮತ್ತೆ ಗದ್ದುಗೆ ಏರುತ್ತದೆಯೋ ಅಥವಾ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅಲೆ ಒಡಿಶಾದಲ್ಲೂ ಬೀಸಿದೆಯೋ ಎಂಬುದು ಇನ್ನೇನು ಕೆಲವೇ ಕ್ಷಣದಲ್ಲಿ ತಿಳಿಯಲಿದೆ.
ಈ ಬಾರಿ ಮೂರನೇ ಎರಡು ಭಾಗದಷ್ಟು ಅಂದರೆ ಒಟ್ಟು 147 ಕ್ಷೇತ್ರಗಳಲ್ಲಿ 110 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಅಧಿಕಾರದ ಗದ್ದುಗೆ ಏರುವುದಾಗಿ ಬಿಜೆಡಿ ಹೇಳಿದೆ. ಈ ಬಾರಿ ಮತ್ತ ಚುನಾಯಿತರಾದರೆ ಸಿಎಂ ನವೀನ್ ಪಟ್ನಾಯಕ್ ಆರನೇ ಬಾರಿ ಒಡಿಶಾ ಸಿಎಂ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಆ ಮೂಲಕ ಇಡೀ ದೇಶದಲ್ಲಿ ಇಷ್ಟು ಸುದೀರ್ಘ ಆಡಳಿತ ನಡೆಸಿದ ಮೊದಲ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈಗಾಗಲೇ ಕಳೆದ 24ವರ್ಷಗಳಿಂದ ಸಿಎಂ ಆಗಿ ಕಾರ್ಯ ನಿರ್ವಹಿಸುತ್ತಿರುವ ಪಟ್ನಾಯಕ್ ಈ ಬಾರಿ ಮತ್ತೆ ಅಧಿಕಾರಕ್ಕೆ ಬಂದರೆ, ಸಿಕ್ಕಿಂ ಸಿಎಂ ಪವನ್ ಕುಮಾರ್ ಚಾರ್ಮ್ಲಿಂಗ್ ಅವರ ದಾಖಲೆಯನ್ನೂ ಇವರ ಮುರಿಯಲಿದ್ದಾರೆ.
ಎಕ್ಸಿಟ್ ಪೋಲ್ ಹೇಳೋದೇನು?
ಎಕ್ಸಿಟ್ ಪೋಲ್ ರಿಸಲ್ಟ್ ಪ್ರಕಾರ ಬಿಜೆಡಿ ಈಬಾರಿ 62-80 ಸ್ಥಾನಗಳನ್ನು ಗಳಿಸಿದರೆ ಕಾಂಗ್ರೆಸ್ 5 ರಿಂದ 8 ಸ್ಥಾನಗಳನ್ನು ಗಿಟ್ಟಿಸಿಕೊಳ್ಳಲಿದೆ. ಇನ್ನು ಲೋಕಸಭಾ ಎಲೆಕ್ಷನ್ ರಿಸಲ್ಟ್‌ಗೆ ಬಂದರೆ ಬಿಜೆಪಿ ಒಡಿಶಾದಲ್ಲಿ 18-20 ಸ್ಥಾನಗಳನ್ನು ಪಡೆದುಕೊಳ್ಳಲಿದೆ. ಬಿಜೆಡಿ ಕೇವಲ 0-2 ಸ್ಥಾನ ಪಡೆದುಕೊಳ್ಳಲಿದೆ. ಇಲ್ಲಿ ಕಾಂಗ್ರೆಸ್ 0-1 ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ.
ಕಣದಲ್ಲಿರುವ ಪ್ರಮುಖರು
ನವೀನ್ ಪಟ್ನಾಯಕ್: ಪುನರಾಯ್ಕೆಯಾದರೆ, 24 ವರ್ಷಗಳಿಂದ ಒಡಿಶಾ ಸಿಎಂ ಪಾತ್ರದಲ್ಲಿದ್ದು, ಆರನೇ ಅವಧಿಗೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರು ಸಿಕ್ಕಿಂನ ಮಾಜಿ ಸಿಎಂ ಪವನ್ ಕುಮಾರ್ ಚಾಮ್ಲಿಂಗ್ ಅವರ ದಾಖಲೆಯನ್ನು ಮೀರಿಸಿ ಭಾರತದ ಸುದೀರ್ಘ ಸೇವೆ ಸಲ್ಲಿಸಿದ ಮುಖ್ಯಮಂತ್ರಿಯಾಗಬಹುದು. 77 ವರ್ಷ ವಯಸ್ಸಿನ ಬಿಜೆಡಿ ಮುಖ್ಯಸ್ಥ, ದಿವಂಗತ ಬಿಜು ಪಟ್ನಾಯಕ್ ಅವರ ಪುತ್ರ, ಅವರು 50 ವರ್ಷ ವಯಸ್ಸಿನವರೆಗೆ ರಾಜಕೀಯದಲ್ಲಿ ಯಾವುದೇ ಅನುಭವವನ್ನು ಹೊಂದಿರಲಿಲ್ಲ.
ಅಂಜನಿ ಸೊರೆನ್: ಎಲ್ಲಾ ವೈಯಕ್ತಿಕ ಹಿನ್ನಡೆಗಳ ನಡುವೆಯೂ ಒಡಿಶಾದಲ್ಲಿ ಜೆಎಂಎಂ ಧ್ವಜವನ್ನು ಎತ್ತಿ ಹಿಡಿಯಲು ಪ್ರಯತ್ನಿಸುತ್ತಿರುವ ಅಂಜನಿ ಸೊರೆನ್, ಜೆಎಂಎಂ ಕುಲಪತಿ ಶಿಬು ಸೊರೆನ್ ಅವರ ಪುತ್ರಿ ಮತ್ತು ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಸಹೋದರಿ. ಅವರು JMM ಅನ್ನು ಜಾರ್ಖಂಡ್‌ನ ಹೊರಗೆ ಪ್ರಸ್ತುತಪಡಿಸಲು ಏಕಾಂಗಿ ಹೋರಾಟವನ್ನು ನಡೆಸುತ್ತಿದ್ದಾರೆ.
ದಿಲೀಪ್ ಟಿರ್ಕಿ: ಬಿಜೆಡಿ ಅಭ್ಯರ್ಥಿ, ಪ್ರಸ್ತುತ ಹಾಕಿ ಇಂಡಿಯಾ ಅಧ್ಯಕ್ಷರಾಗಿರುವ ದಿಲೀಪ್ ಟಿರ್ಕಿ ಅವರು ತಮ್ಮ ಸಾಲಕ್ಕೆ ಹಲವು ಪ್ರಥಮಗಳನ್ನು ಹೊಂದಿದ್ದಾರೆ. ಇವರು ಬುಡಕಟ್ಟು ಸಮುದಾಯದಿಂದ ಮೊದಲ ಭಾರತೀಯ ಹಾಕಿ ನಾಯಕ. 2014 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡಿದ್ದರು.
ಜುಯಲ್ ಓರಮ್: 1999 ರಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವನ್ನು ವಿಭಜಿಸಿದ ನಂತರ ಜುಯಲ್ ಓರಂ ಭಾರತದ ಮೊದಲ ಬುಡಕಟ್ಟು ವ್ಯವಹಾರಗಳ ಸಚಿವರಾಗಿದ್ದರು. ಶ್ರೀ ಓರಂ ಅವರು ಅತ್ಯಂತ ಹಿರಿಯ ಬಿಜೆಪಿ ಸಂಸದರಾಗಿದ್ದಾರೆ, ಅವರು ಒಡಿಶಾವನ್ನು ಲೋಕಸಭೆಯಲ್ಲಿ ಐದು ಬಾರಿ ಪ್ರತಿನಿಧಿಸಿದ್ದಾರೆ.