Site icon Vistara News

ಬೆಂಗಳೂರು ಸೇರಿ ದೇಶದ ಟಾಪ್ 7 ನಗರಗಳಲ್ಲಿ ಕಚೇರಿ ಬಾಡಿಗೆ ಹೆಚ್ಚಳ!

Office Rental Rises in top 7 cities including bengaluru

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೊದಲು ಆರು ತಿಂಗಳು ಬೆಂಗಳೂರು (Bengaluru) ಸೇರಿದಂತೆ ದೇಶದ ಟಾಪ್ 7 ನಗರಗಳಲ್ಲಿ (Top 7 Cities) ವಾಣಿಜ್ಯ ಕಚೇರಿ ಸ್ಥಳಾವಕಾಶದ ಚಟುವಟಿಕೆಗಳು ಅಷ್ಟೇನೂ ಪೂರಕವಾಗಿರಲಿಲ್ಲ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸಾಕಷ್ಟು ಚಟುವಟಿಕೆಗಳು ಮಂದಗತಿಯಲ್ಲಿದ್ದವು ಎಂದು ಅನಾರಾಕ್ ತನ್ನ ಹೇಳಿಕೆಯಲ್ಲಿ ಹೇಳಿದೆ. ಈ ಮಧ್ಯೆ, ಬೆಂಗಳೂರು ಸೇರಿದಂತೆ ದೇಶದ ಏಳು ನಗರಗಳಲ್ಲಿ ಕಚೇರಿ ಬಾಡಿಗೆಯು ಶೇ.7ರಷ್ಟು ಹೆಚ್ಚಳವಾಗಿದೆ(Office Rental Rises). ಈ ಪೈಕಿ, ಚೆನ್ನೈ ನಗರವು (Chennai City) ಭಾರೀ ಬೆಳವಣಿಗೆ ಕಂಡಿದೆ.

ಸರಾಸರಿ ಮಾಸಿಕ ಕಚೇರಿ ಬಾಡಿಗೆ ಮೌಲ್ಯಗಳಲ್ಲಿ ಚೆನ್ನೈ ಅತ್ಯಧಿಕ ಶೇ.10 ರಷ್ಟು ವಾರ್ಷಿಕ ಏರಿಕೆಯನ್ನು ದಾಖಲಿಸಿದೆ. ಪ್ರತಿ ಚದರ ಅಡಿಗೆ 62 ರೂ. ರಿಂದ ಹೆಚ್ಚಳವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಪ್ರತಿ ಚದರ ಅಡಿಗೆ 68 ರೂ. ಇತ್ತು. ವಾರ್ಷಿಕ ಶೇ.8ರ ಬೆಳವಣಿಗೆಯೊಂದಿಗೆ ಹೈದರಾಬಾದ್ ನಂತರದ ಸ್ಥಾನದಲ್ಲಿದೆ. ನಗರದಲ್ಲಿನ ಸರಾಸರಿ ಮಾಸಿಕ ಕಚೇರಿ ಬಾಡಿಗೆ ಮೌಲ್ಯವು 61 ರೂ.ನಿಂದ 66 ರೂ.ಗೆ ಏರಿಕೆಯಾಗಿದೆ. ಮತ್ತೊಂದೆಡೆ, ಬೆಂಗಳೂರು ಮತ್ತು ಪುಣೆ, ಕೋಲ್ಕೊತಾ ನಗರಗಳಲ್ಲಿ ವಾರ್ಷಿಕ ಶೇ.7 ಬೆಳವಣಿಗೆಯನ್ನು ದಾಖಲಾಗಿದೆ. ಮತ್ತೊಂದೆಡೆ ಮುಂಬೈ ಮತ್ತು ಎನ್‌ಸಿಆರ್‌ನಲ್ಲಿ ಈ ಪ್ರಮಾಣ ಶೇ.5ರಷ್ಟು ಏರಿಕೆಯಾಗಿದೆ.

2023ರ ವಿತ್ತ ವರ್ಷದ ಮೊದಲ ಅರ್ಧ ವರ್ಷಕ್ಕೆ ಹೋಲಿಸಿದರೆ, 2024ರ ವಿತ್ತ ವರ್ಷದ ಮೊದಲ ಆರ್ಥಿಕ ವರ್ಷದಲ್ಲಿ ದೇಶದ 7 ನಗರಗಳಲ್ಲಿ ಹೊಸ ಕಚೇರಿಯ ಬೇಡಿಕೆ ಪೂರೈಕೆಯ ಕೇವಲ ಶೇ.5ರಷ್ಟು ಏರಿಕೆಯಾಗಿದೆ. ಇದೇ ವೇಳೆ, ವಾರ್ಷಿಕ ಬೇಡಿಕೆಯಲ್ಲಿ ಶೇ.1ರಷ್ಟು ಕುಸಿತವಾಗಿದೆ.

ಟಿಎಂಎಫ್ ಜಾಗತಿಕ ಸುಸ್ಥಿರ ನಗರಗಳ ಚಾಲೆಂಜ್; ಬೆಂಗಳೂರು, ವಾರಾಣಸಿ ಶಾರ್ಟ್ ಲಿಸ್ಟ್

ಟೊಯೊಟಾ ಮೊಬಿಲಿಟಿ ಫೌಂಡೇಶನ್ (Toyota Mobility Foundation – TMF) 9 ಮಿಲಿಯನ್ ಡಾಲರ್ ಸುಸ್ಥಿರ ನಗರಗಳ ಚಾಲೆಂಜ್ ನಲ್ಲಿ ಅಗ್ರ 10 ನಗರಗಳಲ್ಲಿ ಬೆಂಗಳೂರು (Bengaluru) ಮತ್ತು ವಾರಣಾಸಿಯನ್ನು (Varanasi) ಶಾರ್ಟ್ ಲಿಸ್ಟ್ (Shortlisted) ಮಾಡಲಾಗಿದೆ ಎಂದು ಘೋಷಿಸಿದೆ. ಟೊಯೊಟಾ ಮೊಬಿಲಿಟಿ ಫೌಂಡೇಶನ್, ಚಾಲೆಂಜ್ ವರ್ಕ್ಸ್ ಮತ್ತು ವರ್ಲ್ಡ್ ರಿಸೋರ್ಸಸ್ ಇನ್ಸ್ಟಿಟ್ಯೂಟ್‌ನ ಬೆಂಬಲದೊಂದಿಗೆ ಜೂನ್ 2023 ರಲ್ಲಿ ಈ ಚಾಲೆಂಜ್ ಅನ್ನು ಪ್ರಾರಂಭಿಸಲಾಗಿತ್ತು. ಪ್ರಪಂಚದಾದ್ಯಂತದ ಲಕ್ಷಾಂತರ ಜನರ ಜೀವನವನ್ನು ಪರಿವರ್ತಿಸುವ ಸಾಮರ್ಥ್ಯದೊಂದಿಗೆ ಚಲನಶೀಲತೆ ಕೇಂದ್ರಿತ ನಾವೀನ್ಯತೆಯನ್ನು ಬೆಂಬಲಿಸುವ ಮೂಲಕ ನಗರಗಳು ಭವಿಷ್ಯಕ್ಕಾಗಿ ಸಿದ್ಧವಾಗಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.

ಈ ಪ್ರವೇಶ ಅವಧಿಯಲ್ಲಿ ಜಾಗತಿಕವಾಗಿ 46 ದೇಶಗಳ 150 ಕ್ಕೂ ಹೆಚ್ಚು ನಗರಗಳಿಂದ 200 ಕ್ಕೂ ಹೆಚ್ಚು ನಮೂದುಗಳನ್ನು ಸ್ವೀಕರಿಸಲಾಗಿದೆ. 1) ಚಾಲೆಂಜ್ ಫೋಕಸ್ 2) ನಾವೀನ್ಯತೆ 3) ಪರಿಣಾಮ 4) ಪಾಲುದಾರ ಸಾಮರ್ಥ್ಯದ ನಾಲ್ಕು ಪ್ರಮುಖ ಮಾನದಂಡಗಳ ಮೇಲೆ ಮೌಲ್ಯಮಾಪನ ಮಾಡಲಾಯಿತು. ಬ್ರೆಜಿಲ್, ಕೊಲಂಬಿಯಾ, ಭಾರತ, ಇಟಲಿ, ಮಲೇಷ್ಯಾ, ಮೆಕ್ಸಿಕೊ, ಯುನೈಟೆಡ್ ಕಿಂಗ್ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ ನಗರಗಳು ಈ ಪಟ್ಟಿಯಲ್ಲಿವೆ.

ಈ ಸುದ್ದಿಯನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭದ್ರತಾ ತಪಾಸಣೆಗಾಗಿ ಇನ್ನು ಮೊಬೈಲ್, ಲ್ಯಾಪ್‌ಟ್ಯಾಪ್‌ ಟ್ರೇನಲ್ಲಿ ಇಡಬೇಕಿಲ್ಲ!

Exit mobile version