Site icon Vistara News

Ola Uber Rebate: ರೈಡ್‌ ಕ್ಯಾನ್ಸಲ್‌ ಮಾಡುವ ಕ್ಯಾಬ್‌ಗಳ ಚಾಲಕರಿಗೆ ಬೀಳುತ್ತೆ ದಂಡ; ಆ ಮೊತ್ತ ಗ್ರಾಹಕರಿಗೆ ಪಾವತಿ

Ola Cabs

Ola, Uber should pay a rebate to users if driver cancels: Maharashtra panel

ಮುಂಬೈ: ಓಲಾ, ಉಬರ್ ಸೇರಿ ಯಾವುದೇ ಆನ್‌ಲೈನ್‌ ಅಗ್ರಿಗೇಟರ್‌ಗಳ ಕ್ಯಾಬ್‌ ಬುಕ್‌ ಮಾಡಿರುತ್ತೀರಿ. ಕ್ಯಾಬ್‌ ಬುಕ್‌ ಆಗಿ 5-10 ನಿಮಿಷ ಆಗಿರುತ್ತದೆ. ಇನ್ನೇನು ಕ್ಯಾಬ್‌ ಬರಬೇಕು, ಅಷ್ಟರಲ್ಲೇ ಕ್ಯಾಬ್‌ ಡ್ರೈವರ್‌ ರೈಡ್‌ ಕ್ಯಾನ್ಸಲ್‌ ಮಾಡುತ್ತಾನೆ. ಆಗ ಮತ್ತೊಂದು ಕ್ಯಾಬ್‌ ಬುಕ್‌ ಮಾಡಬೇಕು, ಮತ್ತೆ ಕಾಯಬೇಕು. ಇಂತಹ ಸಮಸ್ಯೆ ಬಗೆಹರಿಸಲು ಮಹಾರಾಷ್ಟ್ರ ಸರ್ಕಾರದ ಸಮಿತಿಯೊಂದು ಮಹತ್ವದ ಶಿಫಾರಸು ಮಾಡಿದೆ. ಓಲ್‌, ಉಬರ್ ಸೇರಿ ಯಾವುದೇ ಕ್ಯಾಬ್‌ಗಳ ಚಾಲಕರು ರೈಡ್‌ ಕ್ಯಾನ್ಸಲ್‌ ಮಾಡಿದರೆ, ಆ ಚಾಲಕರಿಗೆ ದಂಡ ವಿಧಿಸಬೇಕು ಹಾಗೂ ಆ ಮೊತ್ತವನ್ನು ಬುಕ್‌ ಮಾಡಿದ ಗ್ರಾಹಕರಿಗೆ ನೀಡಬೇಕು (Ola Uber Rebate) ಎಂಬ ನಿಯಮ ಜಾರಿಗೆ ತರಲು ಸಮಿತಿಯು ಶಿಫಾರಸು ಮಾಡಿದೆ.

ಕ್ಯಾಬ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರಿಂದ ಹಲವು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರವು ಕಳೆದ ಏಪ್ರಿಲ್‌ನಲ್ಲಿ ಅಧಿಕಾರಿ ಸುಧೀರ್‌ಕುಮಾರ್‌ ಶ್ರೀವಾಸ್ತವ ನೇತೃತ್ವದ ಸಮಿತಿ ರಚಿಸಿತ್ತು. ಸಮಿತಿಯು ಈಗ ವರದಿ ತಯಾರಿಸಿದ್ದು, ಸರ್ಕಾರದಿಂದ ಸಮ್ಮತಿ ಸಿಕ್ಕರೆ ಶೀಘ್ರದಲ್ಲೇ ಹೊಸ ನಿಯಮಗಳು ಜಾರಿಗೆ ಬರಲಿವೆ. ಇದರಲ್ಲಿ, ಕ್ಯಾಬ್‌ಗಳ ಚಾಲಕರಿಗೆ ದಂಡ ವಿಧಿಸುವುದು ಹಾಗೂ ಆ ದಂಡದ ಮೊತ್ತವನ್ನು ಗ್ರಾಹಕರಿಗೆ ಪಾವತಿ ಮಾಡುವ ಶಿಫಾರಸು ಮಹತ್ವದ್ದಾಗಿದೆ.

ಗ್ರಾಹಕರು ಬುಕ್‌ ಮಾಡಿದ 20 ನಿಮಿಷದೊಳಗೆ ಅವರ ಲೊಕೇಷನ್‌ಗೆ ಕ್ಯಾಬ್‌ ತೆರಳಬೇಕು. 20 ನಿಮಿಷಕ್ಕಿಂತ ಹೆಚ್ಚು ಸಮಯ ತಗುಲಿದರೆ ಚಾಲಕರಿಗೆ ದಂಡ ವಿಧಿಸಬೇಕು. ಹಾಗೆಯೇ, ಕ್ಯಾಬ್‌ಗಳ ಚಾಲಕರು ರೈಡ್‌ ಕ್ಯಾನ್ಸಲ್‌ ಮಾಡಿದರೆ ಚಾಲಕರಿಗೆ 50-75 ರೂಪಾಯಿ ದಂಡ ವಿಧಿಸಬೇಕು ಹಾಗೂ ಆ ಮೊತ್ತವನ್ನು ಬುಕ್‌ ಮಾಡಿದ ಗ್ರಾಹಕರಿಗೆ ನೀಡಬೇಕು ಎಂಬುದು ಸೇರಿ ಸಮಿತಿಯು ಹಲವು ಶಿಫಾರಸುಗಳನ್ನು ಮಾಡಿದೆ.

ಇದನ್ನೂ ಓದಿ: Fraud Case: ಕ್ಯಾಬ್‌ನಲ್ಲಿ ಮೈಮರೆತು ಆಡಿದ ಒಂದು ಮಾತು, 22 ಲಕ್ಷ ಕೈಬಿಟ್ಟು ಹೋಯ್ತು!

ಇದೇ ಮೊದಲ ಬಾರಿಗೆ ಆರ್‌ಟಿಒ ಅಧಿಕಾರಿಗಳಿಗೆ ಕ್ಯಾಬ್‌ಗಳು ಸುರಕ್ಷಿತ (Fit) ಎನಿಸದಿದ್ದರೆ, ಅವುಗಳನ್ನು ಅಗ್ರಿಗೇಟರ್‌ಗಳಿಂದ ತೆಗೆದುಹಾಕುವ ಅಧಿಕಾರವನ್ನು ನೀಡಲಾಗುತ್ತಿದೆ. ಸಮಿತಿಯ ಇಷ್ಟೆಲ್ಲ ಶಿಫಾರಸುಗಳು ಜಾರಿಗೆ ಬಂದರೆ ಗ್ರಾಹಕರು ಅನವಶ್ಯಕವಾಗಿ ಕ್ಯಾಬ್‌ಗಳಿಗೆ ಕಾಯುವುದು, ಕೊನೆಯ ಕ್ಷಣದಲ್ಲಿ ಡ್ರೈವರ್‌ಗಳು ರೈಡ್‌ ರದ್ದುಗೊಳಿಸಿದಾಗ ತೊಂದರೆ ಅನುಭವಿಸುವುದು ತಪ್ಪುತ್ತದೆ.

Exit mobile version