ನವದೆಹಲಿ: ಸದನದಲ್ಲಿ ಎಲ್ಲಾ ನಾಯಕರು ರಾಷ್ಟ್ರಪತಿಗಳ ಭಾಷಣದ ಮೇಲೆ ಚರ್ಚೆ ಮಾಡಿದ್ದಾರೆ. ಯಾರಿಗೆ ಎಷ್ಟು ಗೊತ್ತಿದೆ, ಎಷ್ಟು ತಿಳಿದಿದೆ, ಅವರ ಸಿದ್ಧಾಂತದ ಮೇಲೆ ಚರ್ಚಿಸಿದ್ದಾರೆ. ನಿನ್ನೆ (ಮಂಗಳವಾರ) ಕೆಲವು ನಾಯಕರ ಭಾಷಣ ನೋಡ್ತಾ ಇದ್ದೆ. ಬಹಳ ಜೋರಾಗಿ ಭಾಷಣ ಮಾಡುತ್ತಿದ್ದರು. ಕೆಲವರು ಅವರ ಭಾಷಣವನ್ನು ಬಹಳ ಖುಷಿಯಿಂದ ಕೇಳುತ್ತಿದ್ದರು. ಒಬ್ಬ ಮಹಾನ್ ನಾಯಕರಂತೂ ರಾಷ್ಟ್ರಪತಿಯನ್ನು ಸಹ ಅಪಮಾನ ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪರೋಕ್ಷವಾಗಿ ರಾಹುಲ್ ಗಾಂಧಿ ಅವರ ವಿರುದ್ಧ (PM Modi Parliament Speech) ಆರೋಪ ಮಾಡಿದರು.
ಲೋಕಸಭೆಯಲ್ಲಿ ಮಾತನಾಡಿದ ನರೇಂದ್ರ ಮೋದಿ, ರಾಷ್ಟ್ರಪತಿಯ ಭಾಷಣದ ಬಗ್ಗೆ ಈ ಹಿಂದೆ ಹಲವು ಬಾರಿ ನನಗೆ ಮಾತನಾಡುವ ಅವಕಾಶ ಸಿಕ್ಕಿದೆ. ರಾಷ್ಟ್ರಪತಿಗಳಿಗೆ ಈ ಸಂದರ್ಭದಲ್ಲಿ ಶುಭಾಶಯಗಳನ್ನು ತಿಳಿಸುತ್ತೇನೆ. ರಾಷ್ಟ್ರಪತಿಗಳು ಆದಿವಾಸಿ ಸಮಾಜದ ಗೌರವ ಹೆಚ್ಚಿಸಿದ್ದಾರೆ. ಈ ಅಮೃತ ಮಹೋತ್ಸವದಲ್ಲಿ ದೇಶದ ಮಹಿಳೆಯರಿಗೆ ಗೌರವ ಹೆಚ್ಚಿಸಿದೆ ಎಂದು ಹೇಳಿದರು.
ಇದನ್ನೂ ಓದಿ: PM Modi Parliament Speech: ಭಾರತವು ಜಿ20 ಆತಿಥ್ಯ ವಹಿಸುತ್ತಿರುವುದು ಕೆಲವರಿಗೆ ಖುಷಿ ನೀಡಿಲ್ಲ: ಮೋದಿ
ರಾಹುಲ್ ಗಾಂಧಿಗೆ ಮೋದಿ ಟಾಂಗ್
ಕನಸು ಮತ್ತು ಉದ್ದೇಶಗಳನ್ನ ಇಟ್ಟುಕೊಂಡು ದೇಶ ಮುನ್ನುಗ್ಗುತ್ತಿದೆ. ಆದರೆ ಕೆಲವರಿಗೆ ಮಾತ್ರ ಇದು ಬೇರೆ ರೀತಿಯಲ್ಲೆ ಕಾಣುತ್ತಿದೆ. ಅದು ಅವರ ಮನಸ್ಥಿತಿಯಲ್ಲಿರೋದನ್ನು ತೋರಿಸುತ್ತದೆ. ಇದಕ್ಕೆ ಕಾರಣ ಜನರು ಪದೆ ಪದೆ ನೀಡಿರೋ ಸ್ಥಾನವಾಗಿದೆ. ಅವರಿಗೆ ಅದು ಸರಿಯಾಗಿ ಮಲಗೋಕೆ ಬಿಡುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಹುಲ್ ಗಾಂಧಿ ಅವರಿಗೆ ಟಾಂಗ್ ನೀಡಿದರು.