Site icon Vistara News

Onion Price Rise : ಟೊಮೆಟೊವನ್ನೂ ಮೀರಿಸಲಿದೆ ಈರುಳ್ಳಿ ಬೆಲೆ! ಎಷ್ಟಾಗಬಹುದು ದರ?

Onion Price Rise

ನವದೆಹಲಿ: ಅಡುಗೆಗೆ ಅಗತ್ಯವಾದ ಟೊಮೆಟೊ ಬೆಲೆ ನೂರರ ಗಡಿ ದಾಟಿ ಬಂದಿದೆ. ದರ ಇಳಿಸಬೇಕೆನ್ನುವ ಕಾರಣಕ್ಕೆ ಕೇಂದ್ರ ಸರ್ಕಾರದ ಪಕ್ಕದ ನೇಪಾಳದಿಂದ ಟೊಮೆಟೊವನ್ನು ಆಮದು ಮಾಡಿಕೊಳ್ಳುವುದಕ್ಕೂ ಆರಂಭಿಸಿದೆ. ವಿಷಯ ಏನೆಂದರೆ ಈ ಟೊಮೆಟೊ ಬೆಲೆ ಕಡಿಮೆಯಾಗುತ್ತಿದ್ದಂತೆಯೇ ಮತ್ತೊಂದು ಅಗತ್ಯ ತರಕಾರಿಯ ಬೆಲೆ ಗಗನಕ್ಕೆ ಏರಲಿದೆ. ಈರುಳ್ಳಿಯ ದರ ದುಪ್ಪಟ್ಟು (Onion Price Rise) ಆಗುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ.

ದೇಶದಲ್ಲಿ ಮೂರು ಸೀಸನ್‌ನಲ್ಲಿ ಈರುಳ್ಳಿ ಬೆಳೆ ಬೆಳೆಯಲಾಗುತ್ತದೆ. ಖಾರಿಫ್‌, ಲೇಟ್‌ ಖಾರಿಫ್‌ ಮತ್ತು ರಾಬಿ ಸೀಸನ್‌ನಲ್ಲಿ ಈರುಳ್ಳಿ ಬೆಳೆ ಬೆಳೆಯಲಾಗುತ್ತದೆ. ರಾಬಿ ಸೀಸನ್‌ನಲ್ಲಿ ಬೆಳೆಯಲಾದ ಈರುಳ್ಳಿಯನ್ನು ಮಾರ್ಚ್‌ನಿಂದ ಸೆಪ್ಟೆಂಬರ್‌ವರೆಗೆ ಬಳಸಲಾಗುತ್ತದೆ. ಆದರೆ ಈ ಬಾರಿ ಆಗಸ್ಟ್‌ ತಿಂಗಳಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಈರುಳ್ಳಿ ಮಾರಾಟವಾಗಿದೆ. ಸೆಪ್ಟೆಂಬರ್‌ಗೆ ಖಾಲಿಯಾಗಬೇಕಿದ್ದ ಈರುಳ್ಳಿ ಆಗಸ್ಟ್‌ ಅಂತ್ಯದಲ್ಲೇ ಖಾಲಿಯಾಗಲಿದೆ. ಹಾಗಾಗಿ ಸೆಪ್ಟೆಂಬರ್‌ ತಿಂಗಳಲ್ಲಿ ದೇಶದಲ್ಲಿ ಈರುಳ್ಳಿಗೆ ಕೊರತೆ ಬೀಳಲಿದ್ದು, ಅದರ ಬೆಲೆ ಗಗನಕ್ಕೆ ಏರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Viral News : ಒಂದು ಕನ್ನಡಕದ ಬಾಕ್ಸ್‌ನಿಂದ ಬಯಲಾಯ್ತು ಎರಡೆರೆಡು ಕೊಲೆ ಪ್ರಕರಣ!
ಸದ್ಯ ದೇಶದಲ್ಲಿ 100 ರೂ.ಗೆ 5 ಕೆ.ಜಿ. ಅಥವಾ ಆರು ಕೆಜಿ ಬೆಲೆಯಲ್ಲಿ ಈರುಳ್ಳಿಯನ್ನು ಮಾರಾಟ ಮಾಡಲಾಗುತ್ತಿದೆ. ನಿರೀಕ್ಷೆಯಂತೆ ಬೆಲೆ ಏರಿಕೆಯಾದರೆ ಈರುಳ್ಳಿ ದರ ದುಪ್ಪಟ್ಟಾಗಲಿದೆ. ಹಾಗೆಯೇ ಈರುಳ್ಳಿ ದರ ಕೆಜಿಗೆ 70-80 ರೂ.ವರೆಗೆ, ಮುಂದೆ 100 ರೂ. ದಾಟುವ ಸಾಧ್ಯತೆಯಿದೆ ಎನ್ನಲಾಗಿದೆ.

ಈಗಾಗಲೇ ದೇಶದಲ್ಲಿ ಟೊಮೆಟೊ ಕೊರತೆ ಕಾಣಿಸಿಕೊಂಡಿದೆ. ಸರಿಯಾದ ಸಮಯಕ್ಕೆ ಆಗದ ಮಳೆ ಮತ್ತು ವಾತಾವರಣದಲ್ಲಿ ಬದಲಾವಣೆಯಿಂದಾಗಿ ಟೊಮೆಟೊ ಬೆಳೆ ಕಡಿಮೆಯಾಗಿದ್ದು, ಅದರಿಂದಾಗಿ ದೇಶದ ಮೂಲೆ ಮೂಲೆಗಳಲ್ಲೂ ಟೊಮೆಟೊ ಬೆಲೆ ಏರಿಕೆಯಾಗಿದೆ. ಹಲವಾರು ಕಡೆಗಳಲ್ಲಿ ಟೊಮೆಟೊ ದರ ಕೆಜಿಗೆ 100 ರೂ. ದಾಟಿದೆ. ದೆಹಲಿಯ ಆಜಾದ್‌ಪುರ ಹೋಲ್‌ಸೇಲ್‌ ಮಾರುಕಟ್ಟೆಯಲ್ಲಿ ಜೂನ್‌ 2ಕ್ಕೆ ಕ್ವಿಂಟಾಲ್‌ಗೆ 451 ರೂ. ಇದ್ದ ಟೊಮೆಟೊ ಬೆಲೆ ಜುಲೈ 3ಕ್ಕೆ ಕ್ವಿಂಟಾಲ್‌ಗೆ 6,381 ರೂ. ತಲುಪಿತ್ತು. ಅಂದರೆ ಟೊಮೆಟೊ ಬೆಲೆಯಲ್ಲಿ ಬರೋಬ್ಬರಿ ಶೇಕಡಾ 1,315 ಏರಿಕೆಯಾಗಿತ್ತು.

ಇದನ್ನೂ ಓದಿ: Viral Video : ಎಲ್ಲರ ಎದುರೇ ಯುವತಿಯ ಕೆನ್ನೆಗೆ ಬಾರಿಸಿದ ಸರ್ಕಾರಿ ಅಧಿಕಾರಿ!
ಟೊಮೆಟೊ ಬೆಲೆ ಏರಿಕೆಯಾದ ಹಿನ್ನೆಲೆ ಕೇಂದ್ರ ಸರ್ಕಾರವು ನೆರೆ ರಾಷ್ಟ್ರವಾದ ನೇಪಾಳದಿಂದ ಟೊಮೆಟೊ ಆಮದು ಮಾಡಿಕೊಳ್ಳಲು ನಿರ್ಧರಿಸಿದೆ. ಟೊಮೆಟೊದ ಮೊದಲನೇ ಲಾಟ್‌ ಶುಕ್ರವಾರ ವಾರಾಣಸಿ, ಲಕ್ನೋ, ಕಾನ್ಪುರ ನಗರಗಳಿಗೆ ತಲುಪಲಿದೆ ಎಂದು ಕೇಂದ್ರ ಆರ್ಥಿಕ ಸಚಿವರಾದ ನಿರ್ಮಲಾ ಸೀತಾರಾಮನ್‌ ಅವರು ತಿಳಿಸಿದ್ದರು.

Exit mobile version