Site icon Vistara News

Modi Adani Bhai Bhai: ಮೋದಿ ಅದಾನಿ ಭಾಯಿ ಭಾಯಿ, ಮೇಲ್ಮನೆಯಲ್ಲಿ ಮೋದಿಗೆ ತಿರುಗೇಟು ಕೊಟ್ಟ ಪ್ರತಿಪಕ್ಷಗಳು

Modi Adani Bhai Bhai

#image_title

ನವದೆಹಲಿ: ಗೌತಮ್‌ ಅದಾನಿ ಪ್ರಕರಣವನ್ನು ಮುಂದಿಟ್ಟುಕೊಂಡು ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇರಿಸು-ಮುರಿಸು ತಂದಿವೆ. ರಾಜ್ಯಸಭೆಯಲ್ಲಿ ನರೇಂದ್ರ ಮೋದಿ ಅವರು ಭಾಷಣ ಆರಂಭಿಸುತ್ತಲೇ ಪ್ರತಿಪಕ್ಷಗಳ ಸದಸ್ಯರು, “ಮೋದಿ ಅದಾನಿ ಭಾಯಿ ಭಾಯಿ” (Modi Adani Bhai Bhai) ಎಂದು ಘೊಷಣೆ ಕೂಗುವ ಮೂಲಕ ಅದಾನಿ ಪ್ರಕರಣವನ್ನು ಮೇಲ್ಮನೆಯಲ್ಲೂ ಉಲ್ಲೇಖಿಸಿವೆ.

ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಪ್ರತಿಪಕ್ಷಗಳಿಗೆ ವ್ಯಂಗ್ಯ, ಟೀಕೆಗಳ ಮೂಲಕ ತಿರುಗೇಟು ನೀಡುವಾಗ ಪ್ರತಿಪಕ್ಷಗಳು ಸದನವನ್ನು ಬಹಿಷ್ಕರಿಸಿ ಹೊರನಡೆದಿದ್ದವು. ಆದರೆ, ಗುರುವಾರ ರಾಜ್ಯಸಭೆಯಲ್ಲಿ ಮೋದಿ ಭಾಷಣ ಆರಂಭಿಸುತ್ತಲೇ ಪ್ರತಿಪಕ್ಷಗಳ ಸದಸ್ಯರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇಷ್ಟಾದರೂ, ಪ್ರತಿಪಕ್ಷಗಳ ಘೋಷಣೆ, ಆಕ್ರೋಶಗಳಿಗೆ ಜಗ್ಗದ ಮೋದಿ ಭಾಷಣ ಮುಂದುವರಿಸಿದರು. ಹಾಗೆಯೇ, ಒಂದೊಂದೇ ಅಂಶಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಿದರು.

ಇದನ್ನೂ ಓದಿ: PM Modi Speech In Rajya Sabha: ನೀವು ಕೆಸರೆರಚಿದಷ್ಟು ಕಮಲ ಅರಳುತ್ತಲೇ ಇರುತ್ತದೆ, ಮೋದಿ ವಾಗ್ಝರಿ

Exit mobile version