ಬೆಂಗಳೂರು, ಕರ್ನಾಟಕ: 2024ರ ಲೋಕಸಭೆ ಚುನಾವಣೆಯನ್ನು ಒಂದಾಗಿ ಎದುರಿಸಲು ಮುಂದಾಗಿರುವ ಪ್ರತಿಪಕ್ಷಗಳು ಇತ್ತೀಚೆಗಷ್ಟೇ ಬಿಹಾರದ ಪಾಟ್ನಾದಲ್ಲಿ (Patna) ಸಭೆ ನಡೆಸಿದ್ದವು(Opposition Meet). ಈಗ ಮತ್ತೊಂದು ಸಭೆಯನ್ನು ಪ್ರತಿಪಕ್ಷಗಳು ಜುಲೈ 17, 18ರಂದು ಬೆಂಗಳೂರಲ್ಲಿ (Bengaluru) ನಡೆಸಲು ಮುಂದಾಗಿವೆ. ವಾಸ್ತವದಲ್ಲಿ ಈ ಸಭೆಯನ್ನು ಜುಲೈ 13, 14ರಂದು ಸಭೆ ನಡೆಸಲು ಮುಂದಾಗಿದ್ದವು. ಪಾಟ್ನಾದಲ್ಲಿ ನಡೆದ ಸಭೆಯಲ್ಲಿ ಮುಂದಿನ ಸಭೆಯನ್ನು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆಸಲಾಗುವುದು ಎಂದು ಪ್ರತಿಪಕ್ಷಗಳು ಹೆಳಿದ್ದವು. ಅಂತಿಮವಾಗಿ ಸಭೆಯನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗಿತ್ತು.
ಬೆಂಗಳೂರಲ್ಲಿ ನಡೆಯಲಿರುವ ಪ್ರತಿಪಕ್ಷಗಳ ಸಭೆಯ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ. ವಿ. ವೇಣುಗೋಪಾಲ್ ಅವರು, ಪಾಟ್ನಾದಲ್ಲಿ ಪ್ರತಿಪಕ್ಷಗಳ ಬೃಹತ್ ಸಭೆ ಯಶಸ್ವಿಯಾದ ಬೆನ್ನಲ್ಲೇ ಮುಂದಿನ ಸಭೆಯನ್ನು ಬೆಂಗಳೂರಲ್ಲಿ ಜುಲೈ 17 ಮತ್ತು 18ರಂದು ನಡೆಸಲಾಗುವುದು. ದೇಶದ ಅಭಿವೃದ್ಧಿಗಾಗಿ ದೂರದೃಷ್ಟಿಯನ್ನು ಮುಂದಿಡುವುದು ಮಕ್ಕು ಅಪ್ರಜಾಪ್ರಭುತ್ವವಾದಿ ಮತ್ತು ಸರ್ವಾಧಿಕಾರಿ ಪಡೆಗಳನ್ನು ಸೋಲಿಸಲು ಪ್ರತಿಪಕ್ಷಗಳ ಮುಂದಾಗಿವೆ ಎಂದು ಟ್ವೀಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Opposition Meet: ಪ್ರತಿಪಕ್ಷಗಳ ಸಭೆಯಲ್ಲಿ ಕಾಂಗ್ರೆಸ್ಗೆ ಬೈದ ದೀದಿ; ಮೂಡದ ಒಮ್ಮತ, ಶೀಘ್ರವೇ ಮತ್ತೆ ಸಭೆ
ವಾಸ್ತವದಲ್ಲಿ ಶಿಮ್ಲಾದಲ್ಲಿ ಈ ಸಭೆ ನಡೆಯಬೇಕಿತ್ತು. ಆದರೆ, ಇತ್ತೀಚೆಗಷ್ಟೇ ಶರದ್ ಪವಾರ್, ಪ್ರತಿಪಕ್ಷಗಳ ಸಭೆಯನ್ನು ಬೆಂಗಳೂರಲ್ಲಿ ನಡೆಸಲಾಗುತ್ತಿದೆ ಎಂದು ಹೇಳಿದ್ದರು. ಜುಲೈ 13 ಮತ್ತು 14ರಂದು ಸಭೆ ನಡೆಸಲು ದಿನಾಂಕ ನಿಗದಿಯಾಗಿತ್ತು. ಆದರೆ, ಮಹಾರಾಷ್ಟ್ರದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಎನ್‌ಸಿಪಿಯ ನಾಯಕ ಅಜಿತ್ ಪವಾರ್ ಅವರು ಕೆಲವು ಶಾಸಕರೊಂದಿಗೆ ಬಿಜೆಪಿ- ಶಿಂಧೆ ನೇತತ್ವದಲ್ಲಿ ಪಾಲ್ಗೊಂಡಿದ್ದಾರೆ. ಹಾಗಾಗಿ, ಪ್ರತಿಪಕ್ಷಗಳ ಸಭೆಯನ್ನು ಜುಲೈ 17 ಮತ್ತು 18ರಂದು ನಡೆಸಲು ಪ್ರತಿಪಕ್ಷಗಳು ಮುಂದಾಗಿವೆ.
ಇನ್ನಷ್ಟು ವಿದೇಶದ ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.