Site icon Vistara News

Rahul Gandhi In UK Parliament: ಭಾರತದಲ್ಲಿ ಪ್ರತಿಪಕ್ಷಗಳ ಧ್ವನಿ ದಮನ, ಬ್ರಿಟನ್‌ ಸಂಸತ್ತಲ್ಲಿ ರಾಹುಲ್‌ ಗಾಂಧಿ ಹೇಳಿಕೆ

Opposition's voice is being stifled in India, Rahul Gandhi At British Parliament

ರಾಹುಲ್‌ ಗಾಂಧಿ

ಲಂಡನ್‌: ಕೆಂಬ್ರಿಡ್ಜ್‌ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ಸೇರಿ ಹಲವು ಕಾರಣಗಳಿಂದಾಗಿ 10 ದಿನ ಬ್ರಿಟನ್‌ ಪ್ರವಾಸದಲ್ಲಿರುವ ರಾಹುಲ್‌ ಗಾಂಧಿ ಅವರು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಬ್ರಿಟನ್‌ ಸಂಸತ್‌ನಲ್ಲಿ (Rahul Gandhi In UK Parliament) ಸಂಸದರು, ಪತ್ರಕರ್ತರು ಸೇರಿ ಹಲವರೊಂದಿಗೆ ನಡೆದ ಸಂವಾದದಲ್ಲಿ ಪಾಲ್ಗೊಂಡ ರಾಹುಲ್‌ ಗಾಂಧಿ, “ಭಾರತದಲ್ಲಿ ಪ್ರತಿಪಕ್ಷಗಳ ಧ್ವನಿಯನ್ನು ದಮನ ಮಾಡಲಾಗುತ್ತಿದೆ” ಎಂದು ಟೀಕಿಸಿದ್ದಾರೆ.

“ಭಾರತದಲ್ಲಿ ಪ್ರತಿಪಕ್ಷಗಳ ಧ್ವನಿಯನ್ನು ಹುಟ್ಟಡಗಿಸಲು ಯತ್ನಿಸಲಾಗುತ್ತಿದೆ. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಜತೆ ಮಾತುಕತೆ ಸಾಧ್ಯವಿಲ್ಲ. ಅವೆರಡೂ ಶಾಂತಿ, ಮಾತುಕತೆಯಲ್ಲಿ ನಂಬಿಕೆ ಇಟ್ಟಿಲ್ಲ. ಇಂತಹ ಧ್ವನಿಯ ಪುನರುತ್ಥಾನಕ್ಕಾಗಿ, ದೇಶದ ಅಂತಃಸತ್ವ ಮರುಕಳಿಸಬೇಕು ಎಂಬ ಕಾರಣಕ್ಕಾಗಿ ನಾನು ದೇಶದಲ್ಲಿ ಭಾರತ್‌ ಜೋಡೋ ಯಾತ್ರೆ ಕೈಗೊಂಡೆ” ಎಂದು ರಾಹುಲ್‌ ಗಾಂಧಿ ಹೇಳಿದರು. ಹಾಗೆಯೇ, ಬಿಜೆಪಿಯನ್ನು ಯಾರೂ ಸೋಲಿಸಲು ಆಗುವುದಿಲ್ಲ ಎಂಬುದನ್ನು ನಾನು ನಂಬುವುದಿಲ್ಲ ಎಂದೂ ತಿಳಿಸಿದರು.

ಬ್ರಿಟನ್‌ ಸಂಸತ್ತಿನಲ್ಲಿ ರಾಹುಲ್‌ ಗಾಂಧಿ

ಭಾರತದಲ್ಲಿ ಸಂಸದನಾಗುವುದು ಕಷ್ಟ ಎಂದ ರಾಹುಲ್‌

“ಭಾರತದಲ್ಲಿ ಸಂಸದನಾಗಿ ಇರುವುದು ಕಷ್ಟ ಎಂದು ಕೂಡ ರಾಹುಲ್‌ ಗಾಂಧಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ರಾಜಕಾರಣಿಯಾಗಿಯೂ ಮುಕ್ತ ಸ್ವಾತಂತ್ರ್ಯವಿಲ್ಲ. ಯಾವುದೇ ವಿಚಾರಗಳ ಕುರಿತು ಮುಕ್ತ ಮಾತುಕತೆ ಇಲ್ಲ. ಹಾಗಾಗಿ, ಭಾರತದಲ್ಲಿ ಸಂಸದನಾಗಿ ಇರುವುದು ಕಷ್ಟ. ಆದರೆ, ಬ್ರಿಟನ್‌ನಲ್ಲಿ ಇದು ಸುಲಭ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಭಾರತದ ಏಳಿಗೆ ಕುರಿತೂ ಪ್ರಸ್ತಾಪ

ಬಿಜೆಪಿ ಹಾಗೂ ಆರ್‌ಎಸ್‌ಎಸ್‌ಅನ್ನು ಟೀಕಿಸುವುದರ ಹೊರತಾಗಿಯೂ ರಾಹುಲ್‌ ಗಾಂಧಿ ಭಾರತದ ಏಳಿಗೆ ಕುರಿತು ಮಾತನಾಡಿದ್ದಾರೆ. “ಜಗತ್ತಿನಲ್ಲಿ ಭಾರತದ ಸ್ಥಾನ, ಪಾತ್ರವು ಸಕಾರಾತ್ಮಕವಾಗಿ ಬದಲಾಗುತ್ತಿದೆ” ಎಂದು ಹೇಳಿದ್ದಾರೆ.

Exit mobile version