Site icon Vistara News

ನಟಿ ಎದೆ ಮೇಲೆ ಕೈಯಿಟ್ಟು ಕೊಟ್ರೆ ಪೋಸು; ಓರಿಗೆ ಸಿಗ್ತದೆ 20-30 ಲಕ್ಷ ಕಾಸು!

Orry pose with actress on their chest and get paid up to rs 30 lakh rupees

ಮುಂಬೈ: ಬಿಗ್ ಬಾಸ್ (Big Boss) ಮನೆ ಸೇರಿದ್ದ ಓರ್ಹಾನ್ ಅವತ್ರಮಣಿ ಅಲಿಯಾಸ್ ಓರಿ (Orhan Awatramani aka Orry) ಕಳೆದ ಒಂದು ವಾರದಿಂದ ಭಾರೀ ಸದ್ದು ಮಾಡುತ್ತಿದ್ದಾರೆ. ಹಾಗೆಯೇ ಶನಿವಾರ ಬಿಗ್ ಬಾಸ್ ಮನೆ ಪ್ರವೇಶಿಸಿ ಓರಿ, ಭಾನುವಾರ ಮನೆಯಿಂದ ಹೊರ ಬಿದ್ದಿದ್ದಾರೆ! ಆದರೆ, ಸಲ್ಮಾನ್ ಖಾನ್ (Salman Khan) ಅವರು ಕೇಳಿದ ಅನೇಕ ಪ್ರಶ್ನೆಗಳಿಗೆ ಓರಿ ನೀಡಿದ ಉತ್ತರಗಳು ಭಾರೀ ವೈರಲ್ ಆಗಿವೆ. ಓರಿ, ಸೆಲಿಬ್ರೆಟಿ ಪಾರ್ಟಿಗಳಿಗೆ ಹೋಗಿ, ಅಲ್ಲಿನ ನಟ, ನಟಿಯರ ಎದೆಯ ಮೇಲೆ ಕೈಯಿಟ್ಟು ಫೋಟೋ ತೆಗೆಸಿಕೊಳ್ಳುತ್ತಾನೆ (posing for selfies) ಮತ್ತು ಆ ಫೋಟೋಗಳನ್ನು ಆತ ತನ್ನ ಸೋಷಿಯಲ್ ಮೀಡಿಯಾದಲ್ಲಿ ಷೇರು ಮಾಡುತ್ತಾನೆ. ಇದಕ್ಕಾಗಿ ಆತನಿಗೆ 20ರಿಂದ 30 ಲಕ್ಷ ರೂಪಾಯಿ ದೊರೆಯುತ್ತದೆ ಎಂದು ಹೇಳಿಕೊಂಡಿದ್ದಾನೆ.

ಮನೆಯನ್ನು ಪ್ರವೇಶಿಸುವ ಮೊದಲು ಓರಿ ವೇದಿಕೆಯಲ್ಲಿ ಶೋ ನಿರೂಪಕ ಸಲ್ಮಾನ್ ಖಾನ್ ಅವರೊಂದಿಗೆ ತಮಾಷೆಯ ಸಂಭಾಷಣೆಗಳನ್ನು ನಡೆಸಿದರು. ಅದರ ಅನೇಕ ತುಣುಕುಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿದೆ. ಫೋಟೋಗಳಿಗೆ ಪೋಸ್ ನೀಡಿ ಸುಮಾರು 20-30 ಲಕ್ಷ ರೂಪಾಯಿ ಗಳಿಸಿದ್ದೇನೆ ಎಂದು ಹೇಳಿದ್ದು, ಆತನ ಮಾತು ಕೇಳಿ ಸ್ವತಃ ಸಲ್ಮಾನ್ ಖಾನ್ ಕೂಡ ಶಾಕ್ ಆಗಿದ್ದಾರೆ.

ಜನರೇ ಪಾರ್ಟಿಗಳಿಗೆ ಕರೆಯುತ್ತಾರೆ!

ಓರಿ ಹೇಳಿಕೊಂಡಿರುವ ಪ್ರಕಾರ, ಶ್ರೀಮಂತ ಜನರೇ ಓರಿಯನ್ನು ಪಾರ್ಟಿ ಕರೆಯುತ್ತಾರೆ ಮತ್ತು ತಮ್ಮ ಹೆಂಡತಿ, ಮಕ್ಕಳೊಂದಿಗೆ ಫೋಟೋಗೆ ಪೋಸು ನೀಡುವಂತೆ ಕೇಳಿಕೊಳ್ಳುತ್ತಾರೆ. ಹೀಗೆ ನಾನು ಫೋಟೋ ತೆಗೆಸಿಕೊಳ್ಳಲು ಮತ್ತು ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲು ಹಣ ಪಡೆದುಕೊಳ್ಳುತ್ತೇನೆ. ಈ ಫೋಟೋಗಳಿಗಾಗಿ ಒಂದು ರಾತ್ರಿಯನ್ನು ಕನಿಷ್ಠ 20 ರಿಂದ 30 ಲಕ್ಷ ರೂಪಾಯಿ ಗಳಿಸುತ್ತೇನೆ ಎಂದು ಓರಿ ಹೇಳುವುದನ್ನು ವಿಡಿಯೋದಲ್ಲಿ ಕಾಣಬಹುದು.

ಆಗ ಸಲ್ಮಾನ್ ಖಾನ್, ಅವರು ಯಾಕೆ ನಿಮ್ಮ ಜತೆ ಫೋಟೋ ತೆಗೆದುಕೊಳ್ಳುತ್ತಾರೆ ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಉತ್ತರಿಸುವ ಓರಿ, ನಾನು ಯುವತಿಯ ಎದೆ ಮತ್ತು ತೊಡೆಯ ಮೇಲೆ ಕೈಯಿಟ್ಟು ಫೋಟೋ ಕ್ಲಿಕ್ಕಿಸಿಕೊಂಡರೆ ಅವರ ಆಯುಸ್ಸು ಕಡಿಮೆಯಾಗುತ್ತದೆ ಮತ್ತು ಅವರಿಗಿರುವ ಹಲವು ರೋಗಗಳು ವಾಸಿಯಾಗುತ್ತವೆ ಎಂದು ಹೇಳಿದ್ದಾರೆ. ಈ ಮಾತನ್ನು ಕೇಳಿ ಸಲ್ಮಾನ್ ಕೂಡ ಬೆಚ್ಚಿ ಬಿದ್ದಿದ್ದಾರೆ.

ನಾನು ಒಟ್ಟು ಮೂರು ಫೋನುಗಳನ್ನು ಬಳಸುತ್ತೇನೆ. ಒಂದು ಬೆಳಗ್ಗೆ, ಒಂದು ಮಧ್ಯಾಹ್ನ ಮತ್ತೊಂದು ರಾತ್ರಿ ಫೋನ್ ಬಳಸುತ್ತೇನೆ. ಹಾಗಾಗಿ ಬ್ಯಾಟರಿಗಳು ಡಿಸ್ಚಾರ್ಜ್ ಆಗುವುದಿಲ್ಲ. ಒಳ್ಳೆಯ ಚಿತ್ರಗಳಿಂದ ಸಾಕಷ್ಟು ಪ್ರಯೋಜನಗಳಿವೆ. ಚೆನ್ನಾಗಿ ಎಡಿಟ್ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ. ಅಷ್ಟೇ ಕೆಲಸ ಎಂದು ಸಲ್ಮಾನ್ ಅವರ ಪ್ರಶ್ನೆಗೆ ಓರಿ ಉತ್ತರಿಸುತ್ತಾರೆ. ಆಗ ಸಲ್ಮಾನ್ ಖಾನ್, ಈ ಎಲ್ಲವನ್ನೂ ಯಾರಿಗಾಗಿ ಮಾಡುತ್ತಿದ್ದೀರಿ? ಎಂದು ಕೇಳುತ್ತಾರೆ. ಜಗತ್ತಿನ ಮಕ್ಕಳಿಗಾಗಿ ನಾನು ಹೀಗೆ ಮಾಡುತ್ತಿದ್ದೇನೆ. ಮುಂದೊಂದು ದಿನ ಸಾವಿರ ಓರಿಗಳು ಬರಲಿದ್ದಾರೆ. ಅದಕ್ಕಾಗಿ ಇದೆಲ್ಲ ತಯಾರಿ ನಡೆಯುತ್ತಿದೆ ಎಂದು ಓರಿ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: BBK SEASON 10: ಬಿಗ್ ಬಾಸ್ ಮನೆಗೆ ಮಾಡೆಲ್‌ ಪವಿ ಪೂವಪ್ಪ, ಕ್ರಿಕೆಟಿಗ ಅವಿನಾಶ್ ಶೆಟ್ಟಿ ವೈಲ್ಡ್ ಕಾರ್ಡ್ ಎಂಟ್ರಿ!

Exit mobile version