ಲಾಸ್ ಏಂಜಲೀಸ್, ಅಮೆರಿಕ: ಆಸ್ಕರ್ 2023 (Oscars 2023) ಘೋಷಣೆಯಾಗಿದೆ. ಬೆಸ್ಟ್ ಒರಿಜಿನಲ್ ಕೆಟಗರಿಯಲ್ಲಿ ಸ್ಪರ್ಧಿಸಿದ್ದ ಭಾರತದ ಆರ್ಆರ್ಆರ್ ಸಿನಿಮಾದ ನಾಟು ನಾಟು…(Naatu Naatu…) ಗೀತೆಯು ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ಈ ಮೂಲಕ ಎಸ್ ಎಸ್ ರಾಜಮೌಳಿ ನಿರ್ದೇಶನ ಹಾಗೂ ರಾಮ ಚರಣ್ ಮತ್ತು ಜೂ. ಎನ್ಟಿಆರ್ ಚಿತ್ರವು ಇತಿಹಾಸವನ್ನು ಸೃಷ್ಟಿಸಿದೆ. ಆಸ್ಕರ್ ಪ್ರಶಸ್ತಿ ಗೆದ್ದ ಸಂಪೂರ್ಣವಾದ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಆರ್ಆರ್ಆರ್(RRR) ಚಿತ್ರವು ಪಾತ್ರವಾಗಿದೆ. ಬೆಸ್ಟ್ ಡ್ಯಾಕುಮೆಂಟರಿ ಶಾರ್ಟ್ ಫಿಲಮ್ ಕೆಟಗರಿಯಲ್ಲಿ ದಿ ಎಲಿಫೆಂಟ್ ವಿಸ್ಪರ್ಸ್(the elephant whisperers) ಆಸ್ಕರ್ ಗೆದ್ದಿದೆ.
ಬೆಸ್ಟ್ ಒರಿಜಿನಲ್ ಸಾಂಗ್ ಕೆಟಗರಿಯಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದ RRR ಚಿತ್ರಕ್ಕೆ, ಬ್ಲಾಕ್ ಬಸ್ಟರ್ ಸಿನಿಮಾ KGF ನಿರ್ಮಾಣ ಸಂಸ್ಥೆಯಾಗಿರುವ ಹೊಂಬಾಳೆ ಫಿಲ್ಮ್ಸ್ ಮೆಚ್ಚುಗೆ ವ್ಯಕ್ತಪಡಿಸಿದೆ.
ಬ್ರೆಂಡನ್ ಫ್ರೇಸರ್ ಅವರು The Whale ಚಿತ್ರದ ಅತ್ಯುತ್ತಮ ಅಭಿನಯಕ್ಕಾಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಬೆಸ್ಟ್ ಪಿಕ್ಚರ್ ಕೆಟಗರಿಯಲ್ಲಿ ಆಸ್ಕರ್ ಗೆದ್ದ EVERYTHING EVERYWHERE ALL AT ONCE ಸಿನಿಮಾ. ಈ ಸಿನಿಮಾ ಒಟ್ಟು 11 ಕೆಟಗರಿಗಳಲ್ಲಿ ಸ್ಪರ್ಧಿಸಿತ್ತು, 7 ಕೆಟಗರಿಗಳಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಬೆಸ್ಟ್ ಆ್ಯಕ್ಟ್ರೆಸ್ ಕೆಟಗರಿಯಲ್ಲಿ ಮಿಷೆಲ್ ಯೆವೊಹ್(MICHELLE YEOH) ಅವರು ಗೆದ್ದುಕೊಂಡಿದ್ದಾರೆ. Everything Everywhere All at Once ಚಿತ್ರದ ಅಭಿನಯಕ್ಕಾಗಿ ಮಿಷೆಲ್ ಆಸ್ಕರ್ ಗೆದ್ದಿದ್ದಾರೆ.
ಬೆಸ್ಟ್ ಫಿಲ್ಮ್ ಎಡಿಟಿಂಗ್ ಕೆಟಗರಿಯಲ್ಲಿ Everything Everywhere All at Once ಚಿತ್ರವು ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.