Site icon Vistara News

Oscars 2023: ಆಸ್ಕರ್‌ ಪ್ರಶಸ್ತಿಗೆ ಆರ್‌ಆರ್‌ಆರ್ ಜತೆಗೆ ಮತ್ತ್ಯಾವ ಚಿತ್ರಗಳು ನಾಮನಿರ್ದೇಶನ? ಇಲ್ಲಿದೆ ವಿಸ್ತೃತ ಮಾಹಿತಿ

Avatar The Way of Water

ಲಾಸ್‌ ಏಂಜಲೀಸ್‌: ಭಾರತದ ಮೂರು ಸಿನಿಮಾಗಳು ಆಸ್ಕರ್‌ ಪ್ರಶಸ್ತಿಯ (Oscars 2023 Nominations) ಅಂತಿಮ ಸುತ್ತಿಗೆ ನಾಮನಿರ್ದೇಶನದಲ್ಲಿವೆ. ಆರ್‌ಆರ್‌ಆರ್‌ ಸಿನಿಮಾದ ನಾಟು ನಾಟು ಹಾಡು ಒರಿಜಿನಲ್‌ ಬೆಸ್ಟ್‌ ಹಾಡು ಕೆಟಗರಿ, ಅತ್ಯುತ್ತಮ ಸಾಕ್ಷ್ಯಚಿತ್ರ ಕೆಟಗರಿಯಲ್ಲಿ ಆಲ್‌ ದಿ ಬ್ರೆತ್ಸ್‌ , ಅತ್ಯುತ್ತಮ ಕಿರು ಚಿತ್ರ ವಿಭಾಗದಲ್ಲಿ ದಿ ಎಲಿಫೆಂಟ್‌ ವಿಸ್ಪರರ್ಸ್ ನಾಮಿನೇಟ್‌ ಆಗಿವೆ. ಇವುಗಳ ಜತೆಗೆ ಜತೆಗೆ ಜಗತ್ತಿನಾದ್ಯಂತ ಉತ್ತಮ ಪ್ರದರ್ಶನ ಕಂಡ ಅವತಾರ್‌ 2 (Avatar: The Way Of Water), ಟಾಪ್‌ ಗನ್‌: ಮಾವೆರಿಕ್‌ (Top Gun: Maverick) ಸೇರಿ ಹಲವು ಜಾಗತಿಕ ಸಿನಿಮಾಗಳು ಕೂಡ ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿವೆ. ಭಾರತೀಯ ಕಾಲಮಾನ ಮಾರ್ಚ್ 13ರಂದು ಆಸ್ಕರ್ ಪ್ರಶಸ್ತಿ ಘೋಷಣೆಯಾಗಲಿದ್ದು, ಕುತೂಹಲ ಹೆಚ್ಚಾಗತೊಡಗಿದೆ.

ಅವತಾರ್‌ 2 ನಾಲ್ಕು ಹಾಗೂ ಟಾಪ್‌ ಗನ್‌: ಮಾವೆರಿಕ್‌ ಆರು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿವೆ. ಅತ್ಯುತ್ತಮ ಶಬ್ದ, ಅತ್ಯುತ್ತಮ ಪಿಕ್ಚರ್‌, ಬೆಸ್ಟ್‌ ಪ್ರೊಡಕ್ಷನ್‌ ಡಿಸೈನ್, ಬೆಸ್ಟ್‌ ವಿಷ್ಯುವಲ್‌ ಎಫೆಕ್ಟ್ಸ್‌ ವಿಭಾಗದಲ್ಲಿ ಅವತಾರ್‌ 2 ನಾಮಿನೇಟ್‌ ಆಗಿದೆ. ಹಾಗಾಗಿ, ಈ ಸಿನಿಮಾ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.

ಇನ್ನು ಬೆಸ್ಟ್‌ ಸೌಂಡ್‌, ಬೆಸ್ಟ್‌ ಅಡಾಪ್ಟಡ್‌ ಸ್ಕ್ರೀನ್‌ಪ್ಲೇ, ಬೆಸ್ಟ್‌ ಫಿಲಂ ಎಡಿಟಿಂಗ್‌, ಬೆಸ್ಟ್‌ ವಿಷ್ಯುವಲ್‌ ಎಫೆಕ್ಟ್ಸ್‌, ಬೆಸ್ಟ್‌ ಒರಿಜಿನಲ್‌ ಸಾಂಗ್‌ ಹಾಗೂ ಬೆಸ್ಟ್‌ ಪಿಕ್ಚರ್‌ ವಿಭಾಗದಲ್ಲಿ ಟಾಪ್‌ ಗನ್‌: ಮಾವೆರಿಕ್‌ ನಾಮನಿರ್ದೇಶನಗೊಂಡಿದೆ.

ಹಾಗೆಯೇ, ಎಲ್ವಿಸ್‌ (ಬೆಸ್ಟ್‌ ಸಿನಿಮಾಟೋಗ್ರಫಿ, ಬೆಸ್ಟ್‌ ಫಿಲಂ ಎಡಿಟಿಂಗ್),‌ ದಿ ಬ್ಯಾಟ್‌ಮನ್‌ (ಬೆಸ್ಟ್‌ ವಿಷ್ಯುವಲ್‌ ಎಫೆಕ್ಟ್ಸ್‌) ವಿಭಾಗದಲ್ಲಿ ಆಯ್ಕೆಯಾಗಿವೆ. ಇನ್ನು ದಿ ಫ್ಯಾಬೆಲ್‌ಮನ್ಸ್‌ ಸಿನಿಮಾ ನಿರ್ದೇಶನಕ್ಕಾಗಿ ಸ್ಟೀವನ್‌ ಸ್ಪೀಲ್‌ಬರ್ಗ್‌ ಅವರು ಬೆಸ್ಟ್‌ ಡೈರೆಕ್ಟರ್‌ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದಾರೆ.

ಇದನ್ನೂ ಓದಿ | Oscars 2023 Nominations: ಆರ್‌ಆರ್‌ಆರ್‌ ಚಿತ್ರದ ನಾಟು ನಾಟು ಹಾಡು ಆಸ್ಕರ್‌ಗೆ ನಾಮನಿರ್ದೇಶನ, ಮಹತ್ವದ ಮನ್ನಣೆ

Exit mobile version