Site icon Vistara News

PM Modi Parliament Speech: ಈಗ ಬೇರೆ ದೇಶಗಳು ಭಾರತವನ್ನು ಅವಲಂಬಿಸಿವೆ! ನಮ್ಮದು 5ನೇ ದೊಡ್ಡ ಆರ್ಥಿಕತೆ: ಮೋದಿ

Other countries are dependent on india, before india is to depend on others, PM Modi Parliament Speech

ನವದೆಹಲಿ: ಈ ಹಿಂದೆ ಏನಾದರೂ ತೊಂದರೆಯಾದರೆ ಭಾರತವು ಬೇರೆಯವರನ್ನು ಅವಲಂಬಿಸುತ್ತಿತ್ತು. ಈಗ ಕಾಲ ಬದಲಾಗಿದೆ. ಈಗ ಬೇರೆ ದೇಶಗಳು ಭಾರತವನ್ನು ಅವಲಂಬಿಸಿದಂತಾಗಿದೆ. ದೇಶದಲ್ಲಿ ರಚನೆಯಾಗುತ್ತಿರುವ ನೀತಿಗಳು ದೂರದೃಷ್ಟಿಯಿಂದ ಕೂಡಿವೆ. ಈ ಎಲ್ಲ ಸಂಗತಿಗಳು ರಾಷ್ಟ್ರಪತಿಗಳ ಭಾಷಣದಲ್ಲಿ ಉಲ್ಲೇಖವಾಗಿದೆ. ಇದನ್ನು ಎಲ್ಲರೂ ಒಪ್ಪಿದ್ದಾರೆ. ನಾನು ಇದನ್ನು ಸ್ವಾಗತಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಹೇಳಿದರು(PM Modi Parliament Speech).

ಭಾರತ 5ನೇ ಅತಿದೊಡ್ಡ ಆರ್ಥಿಕ ರಾಷ್ಟ್ರ

ನಮ್ಮ ನೆರೆ ಹೊರೆಯ ರಾಷ್ಟ್ರಗಳು ಆರ್ಥಿಕ ಸಂಕಟಗಳಿಂದ ಬಳಲುತ್ತಿವೆ. ಒಂದೊತ್ತಿನ ಊಟಕ್ಕೂ ಪರದಾಡುತ್ತಿವೆ. ಇಂಥ ವಿಷಮ ಸಂದರ್ಭದಲ್ಲೂ ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿ ಹೊರ ಹೊಮ್ಮಿದೆ. ಭಾರತಕ್ಕೆ ಜಿ20 ಮುನ್ನೆಡಸುವ ಅವಕಾಶ ದೊರೆತಿದೆ. ಆದರೆ, ಇದರಿಂದ ಕೆಲವರಿಗೆ ದುಃಖವಾಗುತ್ತಿದೆ ಎಂದು ಪ್ರತಿಪಕ್ಷದ ನಾಯಕರಿಗೆ ಮೋದಿ ಟಾಂಗ್ ಕೊಟ್ಟರು.

ಇದನ್ನೂ ಓದಿ: PM Modi Parliament Speech: ಒಬ್ಬ ಮಹಾನ್ ನಾಯಕರಿಂದ ರಾಷ್ಟ್ರಪತಿಗೆ ಅವಮಾನ: ರಾಹುಲ್ ವಿರುದ್ಧ ಮೋದಿ ಆರೋಪ

ಭಾರತದಲ್ಲೀಗ ರಾಜಕೀಯ ಸ್ಥಿರತೆ

ಭಾರತದಲ್ಲಿ ಹಲವು ದಶಕಗಳ ಕಾಲ ಸ್ಥಿರಸರ್ಕಾರ ಇರಲಿಲ್ಲ. ಆದರೆ ಈಗ ಸ್ಥಿರ ಸರ್ಕಾರವಿದೆ, ಇದರಿಂದ ಹೆಚ್ಚಿನ ನಂಬಿಕೆ ಜನರಲ್ಲಿರುವುದು ಗೊತ್ತಾಗುತ್ತದೆ. ಇದರಿಂದ ದೇಶದ ಪರ ನಿರ್ಧಾರ ತೆಗೆದುಕೊಳ್ಳಲು ಸರ್ಕಾರ ಶಕ್ತವಾಗಿದೆ. ಕೋಟಿ ಕೋಟಿ ಜನರಿಗೆ ಕೋವಿಡ್ ಸಂದರ್ಭದಲ್ಲಿ ಉಚಿತ ಲಸಿಕೆ ನೀಡಲಾಗಿದೆ. ವಿಶ್ವದ 150 ಕ್ಕೂ ಹೆಚ್ಚು ದೇಶಗಳಿಗೆ ಲಸಿಕೆ ನೀಡಲಾಗಿದೆ. ಇದರಿಂದ ವಿಶ್ವದಲ್ಲಿ ದೇಶದ ಬಗ್ಗೆ ಹೋಗಳಿಕೆ ಸಿಕ್ಕಿದೆ. ಕೆಲ ಜನರಿಗೆ ಇದೆಲ್ಲ ಕಣ್ಣಿಗೆ ಕಾಣುವುದಿಲ್ಲ. ಅವರಿಗೆ ಭಾರತ ದೇಶದ 140 ಕೋಟಿ ಜನರ ಅಭಿವೃದ್ದಿ ಕಾಣುತ್ತಿಲ್ಲ ಎಂದು ಟೀಕಿಸಿದರು.

Exit mobile version