Site icon Vistara News

Padma Awards: ನಟ ಚಿರಂಜೀವಿ, ವೆಂಕಯ್ಯ ನಾಯ್ಡುಗೆ ಪದ್ಮವಿಭೂಷಣ, ಉದ್ಯಮಿ ಸೀತಾರಾಮ್ ಜಿಂದಾಲ್‌ಗೆ ಪದ್ಮಭೂಷಣ

Padma Awards, Padma Vibhushan to Actor Chiranjeevi, Venkaiah Naidu and Padma Bhushan to Sitaram Jindal

ನವದೆಹಲಿ: ಗಣರಾಜ್ಯೋತ್ಸವದ ಮುನ್ನಾ ದಿನ ಗುರುವಾರ ಕೇಂದ್ರ ಸರ್ಕಾರವು ಪದ್ಮ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ. ದಕ್ಷಿಣ ಭಾರತದ ಖ್ಯಾತ ನಟ ಚಿರಂಜೀವಿ(Actor Chiranjeevi), ಕಲಾವಿದೆ ವೈಜಯಂತಿಮಾಲಾ ಬಾಲಿ, ಮಾಜಿ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು (Venkaiah Naidu) ಅವರಿಗೆ ಪದ್ಮ ವಿಭೂಷಣ(Padma Vibhushan), ಕರ್ನಾಟಕದ ಉದ್ಯಮಿ ಸೀತಾರಾಮ ಜಿಂದಾಲ್ ಹಾಗೂ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಅವರಿಗೆ ಪದ್ಮಭೂಷಣ (Padma Bhushan) ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಒಟ್ಟು ಐವರಿಗೆ ಪದ್ಮವಿಭೂಷಣ ಹಾಗೂ 17 ಮಂದಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಹಾಗೆಯೇ 110 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಗೌರವ ಅರಸಿ ಬಂದಿದೆ(Padma Awards).

ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು

ನಟ ಚಿರಂಜೀವಿ, ಕಲಾವಿದೆ ವೈಜಯಂತಿ ಮಾಲಾ ಬಾಲಿ, ಮಾಜಿ ಉಪಾರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ತಮಿಳುನಾಡಿನ ಪದ್ಮಾ ಸುಬ್ರಮಣ್ಯಂ ಹಾಗೂ ಸುಲಭ್ ಶೌಚಾಲಯದ ಪರಿಚಯಿಸಿದ ಬಿಹಾರದ ಬಿಂದೇಶ್ವರ್ ಪಾಠಕ್ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ.

ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು

ಕೇರಳದ ಎಂ ಫಾತಿಮಾ ಬೀವಿ, ಮಹಾರಾಷ್ಟ್ರದ ಹೋರಮ್ಷಿಜಿ ಎನ್ ಕಾಮಾ, ನಟ ಮಿಥುನ್ ಚಕ್ರವರ್ತಿ, ಕರ್ನಾಟಕದ ಉದ್ಯಮಿ ಸೀತಾರಾಮ್ ಜಿಂದಾಲ್, ತೈವಾನ್‌ ಉದ್ಯಮಿ ಯಂಗ್ ಲಿಯು, ಮಹಾರಾಷ್ಟ್ರದ ರಾಮ್ ನಾಯ್ಕ್, ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ಗುಜರಾತ್‌ನ ತೇಜಸ್ ಮಧುಸೂದನ್ ಪಟೇಲ್, ಕೇರಳದ ಒ ರಾಜಗೋಪಾಲ್, ಮಹಾರಾಷ್ಟ್ರದ ದತ್ತಾತ್ರೇಯ ಅಂಬಾದಾಸ್ ಮಾಯಲೋ ಅಲಿಯಾಸ್ ರಾಜದತ್, ಲಡಾಕ್‌ನ ತೋಗ್ಡನ್ ರಿಂಪೋಚೆ, ಮಹಾರಾಷ್ಟ್ರದ ಪ್ಯಾರೇಲಾಲ್ ಶರ್ಮಾ, ಬಿಹಾರದ ಚಂದ್ರೇಶ್ವರ್ ಪ್ರಸಾದ್ ಠಾಕೂರ್, ಗಾಯಕಿ ಉಷಾ ಉತುಪ್, ತಮಿಳುನಾಡಿನ ನಟ ವಿಜಯಕಾಂತ್ ಹಾಗೂ ಸಾಹಿತಿ ಕಂದನ್ ವ್ಯಾಸ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಿಸಲಾಗಿದೆ.

ಪದ್ಮಶ್ರೀ ಪುರಸ್ಕೃತ ಕರ್ನಾಟದ ಸಾಧಕರು

ಒಟ್ಟು 110 ಜನರಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಿಸಿಲಾಗಿದೆ. ಈ ಪೈಕಿ ಕರ್ನಾಟಕದ ಎಂಟು ಸಾಧಕರು ಪ್ರದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಟೆನಿಸ್ ಆಟಗಾರ ರೋಹನ್ ಬೋಪಣ್ಣ, ಪ್ರೇಮ್ ಧನರಾಜ್, ಅನುಪಮಾ ಹೊಸಕೆರೆ, ಶ್ರೀಧರ್ ಎಂ ಕೃಷ್ಣಮೂರ್ತಿ, ಸಾಮಾಜಿಕ ಸೇವೆಗಾಗಿ ಕೆ ಎಸ್ ರಾಜಣ್ಣ, ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ಸಿ ಆರ್ ಚಂದ್ರಶೇಖರ್, ಮೈಸೂರಿನ ಸೋಮಣ್ಣ, ಉದ್ಯಮಿ ಶಶಿ ಸೋನಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಲ್ಲಿದೆ

Exit mobile version