Site icon Vistara News

Pakistan Spy: ATS ಭರ್ಜರಿ ಕಾರ್ಯಾಚರಣೆ; ಪಾಕಿಸ್ತಾನ ಗೂಢಾಚಾರ ಅರೆಸ್ಟ್‌

Man involved in spying for Pakistan arrested in Gujarat

ಗುಜರಾತ್‌: ಪಾಕಿಸ್ತಾನ ಪರ ಗೂಢಾಚಾರಿಕೆ(Pakistan Spy) ಮಾಡುತ್ತಿದ್ದ ವ್ಯಕ್ತಿಯನ್ನು ಗುಜರಾತ್‌ನ ಭಯೋತ್ಪಾದಕ ನಿಗ್ರಹ ದಳ(Gujarat anti terrorist squad) ಬಂಧಿಸಿದೆ. ಗುಜರಾತ್‌ನ ಜಾಮ್‌ನಗರ ನಿವಾಸಿ ಮೊಹಮ್ಮದ್‌ ಸಾಕ್ಲೈನ್‌ ಎಂಬಾತ ಬಂಧಿತ ಆರೋಪಿ. ಈತ ಭಾರತದ ಸಿಮ್‌ ಖರೀದಿಸಿ ವಾಟ್ಸಾಪ್‌ ಆಕ್ಟೀವೇಟ್‌ ಮಾಡಿಕೊಂಡಿದ್ದ. ಈ ಸಿಮ್‌ ಅನ್ನು ಪಾಕಿಸ್ತಾನ ಕೆಲವು ವ್ಯಕ್ತಿಗಳು ಆಪರೇಟ್‌ ಮಾಡುತ್ತಿದ್ದರು ಎನ್ನಲಾಗಿದೆ. ಜಮ್ಮು ಮತ್ತು ಕಾಶ್ಮೀರ(Jammu and Kashmir)ದಲ್ಲಿ ನಿಯೋಜನೆಗೊಂಡಿರುವ ಭಾರತೀಯ ಸೇನೆ ವಿರುದ್ಧ ಗೂಢಾಚಾರಿಕೆ ಮಾಡುತ್ತಿದ್ದ ಈತ ಕೆಲವೊಂದು ಗೌಪ್ಯ ವಿಚಾರಗಳನ್ನು ಪಾಕಿಸ್ತಾಕ್ಕೆ ರವಾನಿಸಿದ್ದ ಆರೋಪ ಈತನ ಮೇಲಿತ್ತು.

2023 ಅಕ್ಟೋಬರ್‌ನಲ್ಲಿ ಗುಪ್ತಚರ ಇಲಾಖೆ ಮಾಹಿತಿ ಪ್ರಕಾರ ಲಾಭ್‌ಶಂಕರ್‌ ಮಹೇಶ್ವರಿ ಎಂಬಾತನನ್ನು ಗುಜರಾತ್‌ನ ತಾರಾಪುರದಲ್ಲಿ ಅರೆಸ್ಟ್‌ ಮಾಡಲಾಗಿತ್ತು. ಈತನಿಗೆ ಸಾಕ್ಲೈನ್‌ ಸಿಮ್‌ ಕಾರ್ಡ್‌ ನೀಡಿದ್ದ. ಮೂಲದ ಲಾಭ್‌ ಶಂಕರ್‌ ಪಾಕಿಸ್ತಾನದವನಾಗಿದ್ದು, ಈತನ ತನ್ನ ಗರ್ಭಿಣಿ ಪತ್ನಿ ಸಮೇತ ಗುಜರಾತ್‌ನಲ್ಲಿ ಬಂದು ನೆಲೆಸಿದ್ದ. ಅಲ್ಲದೇ ಭಾರತೀಯ ಪೌರತ್ವವನ್ನೂ ಪಡೆದಿದ್ದ. ಈತ ವಾಟ್ಸ್‌ಆಪ್‌ ಮೂಲಕ ಭಾರತೀಯ ಸೇನೆ ಬಗ್ಗೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ. 2023ರಲ್ಲಿ ಎಟಿಎಸ್‌ ಆತನನ್ನು ಅರೆಸ್ಟ್‌ ಮಾಡಿತ್ತು. ಇದಾದ ಬಳಿಕ ಸಾಕ್ಲೈನ್‌ ತಲೆ ಮರೆಸಿಕೊಂಡಿದ್ದ.

ಕಳೆದ ವರ್ಷ ಪಾಕಿಸ್ತಾನ ಗುಪ್ತಚರ ದಳ ಐಎಸ್​ಐ ಜತೆ ಸಂಪರ್ಕ ಹೊಂದಿದ್ದ ಯುವಕನೊಬ್ಬನನ್ನು ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ (ATS) ಅರೆಸ್ಟ್ ಮಾಡಿದೆ. ಆರೋಪಿ ಹೆಸರು ಮೊಹಮ್ಮದ್​ ರಯೀಸ್ ಎಂದಾಗಿದ್ದು, ಈತ ಐಎಸ್​​ಐಗಾಗಿ ಕೆಲಸ ಮಾಡುತ್ತಿದ್ದ. ಭಾರತದ ಸೇನಾ ಸಂಸ್ಥೆಗಳ ಬಗ್ಗೆ ಐಎಸ್​​ಐಗೆ ಪ್ರಮುಖ ಮಾಹಿತಿಗಳನ್ನು ರವಾನೆ ಮಾಡುತ್ತಿದ್ದ ಎಂದು ಉತ್ತರ ಪ್ರದೇಶ ಎಟಿಎಸ್​ ತಿಳಿಸಿತ್ತು.

ಮೊಹಮ್ಮದ್​ ರಯೀಸ್​ ಉತ್ತರ ಪ್ರದೇಶದ ಗೊಂಡಾದ ತರಬ್​ಗಂಜ್​ ಏರಿಯಾದ ನಿವಾಸಿ. ಮುಂಬಯಿಯಲ್ಲಿ ಕೆಲಸ ಮಾಡುತ್ತಿದ್ದ ಅರ್ಮಾನ್​ ಎಂಬಾತನ ಸಂಪರ್ಕಕ್ಕೆ ಬಂದ ನಂತರ ಅವನು ಐಎಸ್​ಐ ಗೂಢಾಚಾರನಾಗಿ ಬದಲಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದರು. ಮೊಹಮ್ಮದ್ ರಯೀಸ್​, ಎಟಿಎಸ್​ ಎದುರು ಹೇಳಿಕೆ ಕೊಡುವಾಗ ಅರ್ಮಾನ್​ ಹೆಸರನ್ನು ಹೇಳಿದ್ದಾನೆ. ಆತನೇ ನನ್ನ ಸಂಪರ್ಕಕ್ಕೆ ಬಂದ. ಭಾರತದಲ್ಲಿ ಮುಸ್ಲಿಂ ಸಮುದಾಯದ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತಿದೆ ಎಂಬ ವಿಷಯವನ್ನು ನನ್ನ ತಲೆಗೆ ತುಂಬಿದ. ನಾನೂ ಅವನ ಮಾತನನ್ನು ನಂಬಿ, ಐಎಸ್​ಐಗಾಗಿ ಕೆಲಸ ಮಾಡಲು ಶುರು ಮಾಡಿದೆ ಎಂದು ರಯೀಸ್ ಹೇಳಿಕೊಂಡಿದ್ದ.

ಇದನ್ನೂ ಓದಿ:Viral Video: ನಾಲ್ಕನೇ ಮಹಡಿಯಿಂದ ವಿಂಡೋ ಪೋರ್ಚ್‌ ಮೇಲೆ ಬಿದ್ದ ಮಗು; ವಿಡಿಯೋ ವೈರಲ್‌

600 ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶಕ್ಕೆ

ಜಂಟಿ ಕಾರ್ಯಾಚರಣೆಯಲ್ಲಿ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಗುಜರಾತ್ ಕರಾವಳಿಯಲ್ಲಿ 14 ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಿ ಅವರ ಬಳಿ 602 ಕೋಟಿ ಮೌಲ್ಯದ 86 ಕೆಜಿ ನಿಷೇಧ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದೆ. ಕಾರ್ಯಾಚರಣೆಯ ಸಮಯದಲ್ಲಿ ಕಿಡಿಗೇಡಿಗಳು ತಪ್ಪಿಸಿಕೊಳ್ಳಲು ಯತ್ನಿಸಿದರು. ಆಗ ಆರೋಪಿಗಳು ಕಾಲಿಗೆ ಗುಂಡು ಹಾರಿಸಿ ಅವರನ್ನು ಅರೆಸ್ಟ್‌ ಮಾಡಿದ್ದಾರೆ.

Exit mobile version