ನವ ದೆಹಲಿ: ದೇಹಸುಖ ಹಾಗೂ ಹಣಕ್ಕಾಗಿ ಮಿಲಿಟರಿ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸುತ್ತಿದ್ದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಯೊಬ್ಬನನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ. ಈತ ರಕ್ಷಣಾ ಸಂಶೋಧನೆ ಹಾಗೂ ವಿಶ್ಲೇಷಣಾ ಸಂಸ್ಥೆ (DRDO)ಯಲ್ಲಿ ಕೆಲಸ ಮಾಡುತ್ತಿದ್ದ 57 ವರ್ಷದ ಹಿರಿಯ ಅಧಿಕಾರಿ ಎಂದು ತಿಳಿದುಬಂದಿದೆ.
ಈತ ಲೈಂಗಿಕ ಸುಖ ಹಾಗೂ ಹಣಕಾಸಿಗಾಗಿ ಕೆಲವು ಸೂಕ್ಷ್ಮ ಸಂಗತಿಗಳನ್ನು ಪಾಕಿಸ್ತಾನ ಮೂಲದ ಗೂಢಚಾರಿಣಿಯೊಂದಿಗೆ ಹಂಚಿಕೊಂಡಿದ್ದಾನೆ. ದೇಶದ ಕ್ಷಿಪಣಿ ಉಡಾವಣೆಗೆ ಸಂಬಂಧಿಸಿದ ರಹಸ್ಯಗಳನ್ನು ಹಸ್ತಾಂತರಿಸಿದ್ದಾನೆ ಎಂದು ತಿಳಿದುಬಂದಿದೆ. ಈತನ ಬಳಿಯಿಂದ ಫೋನ್ ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ ಇದಕ್ಕೆ ಸಂಬಂಧಿಸಿದ ವಾಟ್ಸ್ಯಾಪ್ ಚಾಟ್‌ಗಳು, ಅಶ್ಲೀಲ ಫೋಟೋಗಳು ಹಾಗೂ ವಿಡಿಯೋಗಳು ಪತ್ತೆಯಾಗಿವೆ. ಈತ ಒಡಿಶಾದ ಬಾಲಾಸೋರ್ ಜಿಲ್ಲೆಯ ಚಂಡಿಪುರದ ಕ್ಷಿಪಣಿ ಉಡಾವಣೆ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
2021ರಲ್ಲೂ ಇನ್ನೊಂದು ಬೇಹುಗಾರಿಕೆ ಪ್ರಕರಣದಲ್ಲಿ ಚಂಡೀಪುರ ಐಟಿಆರ್‌ನ ಐವರು ಗುತ್ತಿಗೆ ಉದ್ಯೋಗಿಗಳನ್ನು ಬಂಧಿಸಲಾಗಿತ್ತು. 2015ರಲ್ಲಿ ಹೀಗೇ ಪಾಕಿಸ್ತಾನದೊಂದಿಗೆ ರಹಸ್ಯ ಹಂಚಿಕೊಳ್ಳುತ್ತಿದ್ದ ಒಬ್ಬ ಗೂಢಚಾರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಇದನ್ನೂ ಓದಿ: ಪಾಕಿಸ್ತಾನದ ವಿವಾದಿತ ಪತ್ರಕರ್ತನ ಜತೆ ಹಮೀದ್ ಅನ್ಸಾರಿ ಸ್ನೇಹ ನಿಜಾನಾ? ಬಿಜೆಪಿ ಕೊಟ್ಟಿರುವ ದಾಖಲೆ ಏನು?