Site icon Vistara News

Mass Killings | ಸಾಮೂಹಿಕ ಹತ್ಯೆ ಕುರಿತ ಜಾಗತಿಕ ವರದಿಯಲ್ಲಿ ಪಾಕಿಸ್ತಾನ ಅಗ್ರ, ಭಾರತದ ಸ್ಥಾನ ಎಷ್ಟು?

EWP Report On Mass Killings

ವಾಷಿಂಗ್ಟನ್‌: ಸಾಮೂಹಿಕ ಹತ್ಯೆ, ಸಾಮೂಹಿಕ ಹತ್ಯೆಯ (Mass Killings) ಭೀತಿ ಇರುವ ರಾಷ್ಟ್ರಗಳ ಕುರಿತು ಅಮೆರಿಕ ವರದಿ ಪ್ರಕಟಿಸಿದ್ದು, ಪಾಕಿಸ್ತಾನವು ಸತತ ಮೂರನೇ ಬಾರಿಗೆ ಮೊದಲ ಸ್ಥಾನ ಪಡೆಯುವ ಮೂಲಕ ಜಾಗತಿಕವಾಗಿ ಮುಖಭಂಗ ಅನುಭವಿಸಿದೆ. ಅಮೆರಿಕದ ʼಅರ್ಲಿ ವಾರ್ನಿಂಗ್‌ ಪ್ರಾಜೆಕ್ಟ್ʼ‌ (Early Warning Project-EWP) ವರದಿ ಪ್ರಕಟಿಸಿದ್ದು, “ಪಾಕಿಸ್ತಾನದಲ್ಲಿ ಭದ್ರತೆ, ಸುರಕ್ಷತೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಿದೆ” ಎಂದು ಉಲ್ಲೇಖಿಸಿದೆ.

ಭಾರತದ ಸ್ಥಾನ ಎಷ್ಟು?
ಪಾಕಿಸ್ತಾನದ ನಂತರದ ಸ್ಥಾನದಲ್ಲಿ ಅಂದರೆ, ಎರಡನೇ ಸ್ಥಾನದಲ್ಲಿ ಯೆಮೆನ್‌, ಮೂರನೇ ಸ್ಥಾನದಲ್ಲಿ ಮ್ಯಾನ್ಮಾರ್‌ ಇದೆ. ಭಾರತ ಏಳನೇ ಸ್ಥಾನ ಪಡೆದಿದ್ದು, ಸಿರಿಯಾ, ಇರಾಕ್‌, ಚೀನಾ ಹಾಗೂ ಇರಾನ್‌ ಭಾರತಕ್ಕಿಂತ ಉತ್ತಮ ಸ್ಥಿತಿ ಹೊಂದಿವೆ. ಭಾರತದ ನಂತರದ ಸ್ಥಾನಗಳನ್ನು ಈ ರಾಷ್ಟ್ರಗಳು ಹೊಂದಿವೆ. ಹಾಗಾಗಿ, ಸಾಮೂಹಿಕ ಹತ್ಯೆ ವಿಚಾರದಲ್ಲಿ ಭಾರತದ ಪರಿಸ್ಥಿತಿ ಇನ್ನೂ ಸುಧಾರಣೆಯಾಗಬೇಕಿದೆ.

ಸಿರಿಯಾ 11ನೇ ಸ್ಥಾನ ಪಡೆದರೆ, ಇರಾಕ್‌ 12, ಚೀನಾ 23 ಹಾಗೂ ಇರಾನ್‌ 30ನೇ ಸ್ಥಾನ ಪಡೆದಿವೆ. ಸಾಮೂಹಿಕ ಹತ್ಯೆ, ಜನರ ಸುರಕ್ಷತೆಗೆ ಧಕ್ಕೆ, ಮಾನವ ಹಕ್ಕುಗಳ ಸ್ಥಿತಿಗತಿ ಆಧರಿಸಿ ಇಡಬ್ಲ್ಯೂಪಿ ಸಂಸ್ಥೆಯು 30 ರಾಷ್ಟ್ರಗಳ ಪಟ್ಟಿ ತಯಾರಿಸಿದೆ. ಇದಕ್ಕೂ ಮೊದಲು ಪ್ರಕಟಿಸಿದ ಎರಡು ವರದಿಗಳಲ್ಲೂ ಪಾಕಿಸ್ತಾನವೇ ಮೊದಲ ಸ್ಥಾನದಲ್ಲಿತ್ತು.

ಇದನ್ನೂ ಓದಿ | ಮೋಸ್ಟ್​ ವಾಂಟೆಡ್​ ಖಲಿಸ್ತಾನಿ ಉಗ್ರ ಹರ್ವಿಂದರ್​ ಸಿಂಗ್ ರಿಂದಾ ಪಾಕಿಸ್ತಾನದಲ್ಲಿ ಸಾವು; ಹತ್ಯೆಯ ಹೊಣೆ ಹೊತ್ತ ಬಂಬಿಹಾ ಗ್ಯಾಂಗ್​

Exit mobile version