Site icon Vistara News

Dhirendra Shastri: ಹಿಂದುಗಳು ಒಗ್ಗಟ್ಟಾದರೆ ಪಾಕಿಸ್ತಾನವನ್ನೂ ಹಿಂದು ರಾಷ್ಟ್ರ ಮಾಡಬಹುದು: ಧೀರೇಂದ್ರ ಶಾಸ್ತ್ರಿ

Dhirendra Shastri On Hindu Nation

Pakistan Will Also Be Turned Into A Hindu Nation if people unite: Says Dhirendra Shastri

ಗಾಂಧಿನಗರ: ಸದಾ ಒಂದಿಲ್ಲೊಂದು ಹೇಳಿಕೆ, ಪವಾಡಗಳು ಸೇರಿ ವಿವಿಧ ಕಾರಣಗಳಿಂದಾಗಿ ಸುದ್ದಿಯಲ್ಲಿರುವ ಮಧ್ಯಪ್ರದೇಶದ ಬಾಗೇಶ್ವರ ಧಾಮ್‌ ಟ್ರಸ್ಟ್‌ ಮುಖ್ಯಸ್ಥ ಆಚಾರ್ಯ ಧೀರೇಂದ್ರ ಶಾಸ್ತ್ರಿ (Dhirendra Shastri) (ಬಾಗೇಶ್ವರ ಬಾಬಾ) ಮತ್ತೆ ಸುದ್ದಿಯಲ್ಲಿದ್ದಾರೆ. “ನಮ್ಮ ದೇಶದ ಹಿಂದುಗಳು ಒಗ್ಗಟ್ಟಾದರೆ ಪಾಕಿಸ್ತಾನವನ್ನೂ ಹಿಂದು ರಾಷ್ಟ್ರ ಮಾಡಬಹುದು” ಎಂದು ಹೇಳುವ ಮೂಲಕ ಸುದ್ದಿಯಾಗಿದ್ದಾರೆ.

ಗುಜರಾತ್‌ನ ಸೂರತ್‌ನಲ್ಲಿ ನಡೆದ ದಿವ್ಯ ದರ್ಬಾರ್‌ ಎಂಬ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ಪಾಕಿಸ್ತಾನವನ್ನೂ ಹಿಂದು ರಾಷ್ಟ್ರ ಮಾಡಬಹುದು ಎಂದು ಹೇಳಿದರು. “ಗುಜರಾತ್‌ನ ಜನರಿಂದ ನಾನು ಹಣವನ್ನಾಗಲಿ, ಖ್ಯಾತಿಯನ್ನಾಗಲಿ ಬಯಸುವುದಿಲ್ಲ. ಆದರೆ, ಹಿಂದುತ್ವದ ಹೆಸರಿನಲ್ಲಿ ಹಿಂದುಗಳು ಒಗ್ಗೂಡಬೇಕು. ಹಾಗೊಂದು ವೇಳೆ, ಹಿಂದುಗಳೆಲ್ಲ ಒಂದಾದರೆ ಭಾರತ ಅ ಥವಾ ಪಾಕಿಸ್ತಾನವನ್ನೂ ಹಿಂದು ರಾಷ್ಟ್ರವನ್ನಾಗಿ ಮಾಡಬಹುದು” ಎಂದರು.

ಹಿಂದು ರಾಷ್ಟ್ರದ ಬಗ್ಗೆ ಹೇಳಿದ್ದೇನು?

ಧೀರೇಂದ್ರ ಶಾಸ್ತ್ರಿ ಅವರು ಮಾತನಾಡುವಾಗ ಕೆಲವು ಜನ “ಭಾರತವನ್ನು ಹೇಗೆ ಹಿಂದು ರಾಷ್ಟ್ರವನ್ನಾಗಿ ಮಾಡಬಹುದು” ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಬಾಗೇಶ್ವರ ಬಾಬಾ, “ಭಾರತ ಈಗಾಗಲೇ ಹಿಂದು ರಾಷ್ಟ್ರವಾಗಿದೆ ಹಾಗೂ ಹಿಂದು ರಾಷ್ಟ್ರವಾಗಿಯೇ ಇರಲಿದೆ. ಆದರೆ, ಸನಾತನಿಗಳು ಎಚ್ಚೆತ್ತುಕೊಳ್ಳಬೇಕು. ರಾಮಮಂದಿರ ವಿವಾದ ಈಗ ಮುಗಿದಿದೆ. ಮುಂದೆ ಮಥುರಾ ವಿವಾದವು ಇತ್ಯರ್ಥವಾಗಬೇಕು” ಎಂದು ಹೇಳಿದರು.

ಧೀರೇಂದ್ರ ಶಾಸ್ತ್ರಿ ಪವಾಡ ಪುರುಷ?

ಮಧ್ಯಪ್ರದೇಶದಲ್ಲಿ ಅಪಾರ ಭಕ್ತವೃಂದವನ್ನು ಹೊಂದಿರುವ ಇವರು ಪವಾಡ ಪುರುಷ ಎನ್ನುವ ವದಂತಿ ಇದೆ. ಬಾಗೇಶ್ವರ ಬಾಬಾ ಎಂದೇ ಪ್ರಸಿದ್ಧಿ ಪಡೆದುಕೊಂಡಿರುವ ಇವರು ಕೆಲ ತಿಂಗಳ ಹಿಂದೆ ಪವಾಡ ಪುರುಷನಾ ಎನ್ನುವ ಪ್ರಶ್ನೆ ಉದ್ಭವಿಸಿತ್ತು. ಈಗಿನ್ನೂ 26 ವರ್ಷದವರಾಗಿರುವ ಧೀರೇಂದ್ರ ಶಾಸ್ತ್ರಿ ಪವಾಡ ಪುರುಷ ಹೌದೇ? ಅಲ್ಲವೇ ಎನ್ನುವ ಬಗ್ಗೆ ʼಇಂಡಿಯಾ ಟಿವಿʼ ಸಂಸ್ಥೆ ಟ್ವಿಟರ್‌ನಲ್ಲಿ ಸಮೀಕ್ಷೆ ಮಾಡಿತ್ತು. ಸಂಸ್ಥೆ ಕೇಳಿರುವ ಪ್ರಶ್ನೆಗೆ ಶೇ. 68 ಮಂದಿ ʼಹೌದು, ಅವರೊಬ್ಬ ಪವಾಡ ಪುರುಷʼ ಎಂದು ಉತ್ತರಿಸಿದ್ದರು. ಇನ್ನು ಶೇ. 22.9 ಮಂದಿ ಅವರನ್ನು ಪವಾಡ ಪುರುಷರಲ್ಲ ಎಂದು ಹೇಳಿದ್ದರು. ಉಳಿದ ಮಂದಿ ತಮಗೆ ಅದರ ಬಗ್ಗೆ ಅರಿವಿಲ್ಲ ಎಂದಿದ್ದರು.

ಇದನ್ನೂ ಓದಿ: ಅಮೃತ್​ಪಾಲ್​​ನಂಥ ಪ್ರತ್ಯೇಕತಾವಾದಿ ಹುಟ್ಟಲು ಬಿಜೆಪಿ-ಆರ್​ಎಸ್​​ಎಸ್​​ನ ಹಿಂದು ರಾಷ್ಟ್ರ ಸಿದ್ಧಾಂತವೇ ಕಾರಣ; ಕಾಂಗ್ರೆಸ್​ ನಾಯಕ ಗೆಹ್ಲೋಟ್​ ವಾದ

Exit mobile version