Dhirendra Shastri: ಹಿಂದುಗಳು ಒಗ್ಗಟ್ಟಾದರೆ ಪಾಕಿಸ್ತಾನವನ್ನೂ ಹಿಂದು ರಾಷ್ಟ್ರ ಮಾಡಬಹುದು: ಧೀರೇಂದ್ರ ಶಾಸ್ತ್ರಿ - Vistara News

ದೇಶ

Dhirendra Shastri: ಹಿಂದುಗಳು ಒಗ್ಗಟ್ಟಾದರೆ ಪಾಕಿಸ್ತಾನವನ್ನೂ ಹಿಂದು ರಾಷ್ಟ್ರ ಮಾಡಬಹುದು: ಧೀರೇಂದ್ರ ಶಾಸ್ತ್ರಿ

Dhirendra Shastri: ಸದಾ ಒಂದಿಲ್ಲೊಂದು ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಯಲ್ಲಿರುವ ಆಚಾರ್ಯ ಧೀರೇಂದ್ರ ಶಾಸ್ತ್ರಿ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಹಿಂದುಗಳು ಒಗ್ಗಟ್ಟಾದರೆ ಪಾಕಿಸ್ತಾನವನ್ನೂ ಹಿಂದು ರಾಷ್ಟ್ರ ಮಾಡಬಹುದು ಎಂದಿದ್ದಾರೆ.

VISTARANEWS.COM


on

Dhirendra Shastri On Hindu Nation
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಗಾಂಧಿನಗರ: ಸದಾ ಒಂದಿಲ್ಲೊಂದು ಹೇಳಿಕೆ, ಪವಾಡಗಳು ಸೇರಿ ವಿವಿಧ ಕಾರಣಗಳಿಂದಾಗಿ ಸುದ್ದಿಯಲ್ಲಿರುವ ಮಧ್ಯಪ್ರದೇಶದ ಬಾಗೇಶ್ವರ ಧಾಮ್‌ ಟ್ರಸ್ಟ್‌ ಮುಖ್ಯಸ್ಥ ಆಚಾರ್ಯ ಧೀರೇಂದ್ರ ಶಾಸ್ತ್ರಿ (Dhirendra Shastri) (ಬಾಗೇಶ್ವರ ಬಾಬಾ) ಮತ್ತೆ ಸುದ್ದಿಯಲ್ಲಿದ್ದಾರೆ. “ನಮ್ಮ ದೇಶದ ಹಿಂದುಗಳು ಒಗ್ಗಟ್ಟಾದರೆ ಪಾಕಿಸ್ತಾನವನ್ನೂ ಹಿಂದು ರಾಷ್ಟ್ರ ಮಾಡಬಹುದು” ಎಂದು ಹೇಳುವ ಮೂಲಕ ಸುದ್ದಿಯಾಗಿದ್ದಾರೆ.

ಗುಜರಾತ್‌ನ ಸೂರತ್‌ನಲ್ಲಿ ನಡೆದ ದಿವ್ಯ ದರ್ಬಾರ್‌ ಎಂಬ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ಪಾಕಿಸ್ತಾನವನ್ನೂ ಹಿಂದು ರಾಷ್ಟ್ರ ಮಾಡಬಹುದು ಎಂದು ಹೇಳಿದರು. “ಗುಜರಾತ್‌ನ ಜನರಿಂದ ನಾನು ಹಣವನ್ನಾಗಲಿ, ಖ್ಯಾತಿಯನ್ನಾಗಲಿ ಬಯಸುವುದಿಲ್ಲ. ಆದರೆ, ಹಿಂದುತ್ವದ ಹೆಸರಿನಲ್ಲಿ ಹಿಂದುಗಳು ಒಗ್ಗೂಡಬೇಕು. ಹಾಗೊಂದು ವೇಳೆ, ಹಿಂದುಗಳೆಲ್ಲ ಒಂದಾದರೆ ಭಾರತ ಅ ಥವಾ ಪಾಕಿಸ್ತಾನವನ್ನೂ ಹಿಂದು ರಾಷ್ಟ್ರವನ್ನಾಗಿ ಮಾಡಬಹುದು” ಎಂದರು.

ಹಿಂದು ರಾಷ್ಟ್ರದ ಬಗ್ಗೆ ಹೇಳಿದ್ದೇನು?

ಧೀರೇಂದ್ರ ಶಾಸ್ತ್ರಿ ಅವರು ಮಾತನಾಡುವಾಗ ಕೆಲವು ಜನ “ಭಾರತವನ್ನು ಹೇಗೆ ಹಿಂದು ರಾಷ್ಟ್ರವನ್ನಾಗಿ ಮಾಡಬಹುದು” ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಬಾಗೇಶ್ವರ ಬಾಬಾ, “ಭಾರತ ಈಗಾಗಲೇ ಹಿಂದು ರಾಷ್ಟ್ರವಾಗಿದೆ ಹಾಗೂ ಹಿಂದು ರಾಷ್ಟ್ರವಾಗಿಯೇ ಇರಲಿದೆ. ಆದರೆ, ಸನಾತನಿಗಳು ಎಚ್ಚೆತ್ತುಕೊಳ್ಳಬೇಕು. ರಾಮಮಂದಿರ ವಿವಾದ ಈಗ ಮುಗಿದಿದೆ. ಮುಂದೆ ಮಥುರಾ ವಿವಾದವು ಇತ್ಯರ್ಥವಾಗಬೇಕು” ಎಂದು ಹೇಳಿದರು.

ಧೀರೇಂದ್ರ ಶಾಸ್ತ್ರಿ ಪವಾಡ ಪುರುಷ?

ಮಧ್ಯಪ್ರದೇಶದಲ್ಲಿ ಅಪಾರ ಭಕ್ತವೃಂದವನ್ನು ಹೊಂದಿರುವ ಇವರು ಪವಾಡ ಪುರುಷ ಎನ್ನುವ ವದಂತಿ ಇದೆ. ಬಾಗೇಶ್ವರ ಬಾಬಾ ಎಂದೇ ಪ್ರಸಿದ್ಧಿ ಪಡೆದುಕೊಂಡಿರುವ ಇವರು ಕೆಲ ತಿಂಗಳ ಹಿಂದೆ ಪವಾಡ ಪುರುಷನಾ ಎನ್ನುವ ಪ್ರಶ್ನೆ ಉದ್ಭವಿಸಿತ್ತು. ಈಗಿನ್ನೂ 26 ವರ್ಷದವರಾಗಿರುವ ಧೀರೇಂದ್ರ ಶಾಸ್ತ್ರಿ ಪವಾಡ ಪುರುಷ ಹೌದೇ? ಅಲ್ಲವೇ ಎನ್ನುವ ಬಗ್ಗೆ ʼಇಂಡಿಯಾ ಟಿವಿʼ ಸಂಸ್ಥೆ ಟ್ವಿಟರ್‌ನಲ್ಲಿ ಸಮೀಕ್ಷೆ ಮಾಡಿತ್ತು. ಸಂಸ್ಥೆ ಕೇಳಿರುವ ಪ್ರಶ್ನೆಗೆ ಶೇ. 68 ಮಂದಿ ʼಹೌದು, ಅವರೊಬ್ಬ ಪವಾಡ ಪುರುಷʼ ಎಂದು ಉತ್ತರಿಸಿದ್ದರು. ಇನ್ನು ಶೇ. 22.9 ಮಂದಿ ಅವರನ್ನು ಪವಾಡ ಪುರುಷರಲ್ಲ ಎಂದು ಹೇಳಿದ್ದರು. ಉಳಿದ ಮಂದಿ ತಮಗೆ ಅದರ ಬಗ್ಗೆ ಅರಿವಿಲ್ಲ ಎಂದಿದ್ದರು.

ಇದನ್ನೂ ಓದಿ: ಅಮೃತ್​ಪಾಲ್​​ನಂಥ ಪ್ರತ್ಯೇಕತಾವಾದಿ ಹುಟ್ಟಲು ಬಿಜೆಪಿ-ಆರ್​ಎಸ್​​ಎಸ್​​ನ ಹಿಂದು ರಾಷ್ಟ್ರ ಸಿದ್ಧಾಂತವೇ ಕಾರಣ; ಕಾಂಗ್ರೆಸ್​ ನಾಯಕ ಗೆಹ್ಲೋಟ್​ ವಾದ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Chinese visa scam : ಚೀನಾ ವೀಸಾ ಹಗರಣ: ಕಾರ್ತಿ ಚಿದಂಬರಂ ಸೇರಿ ಹಲವರಿಗೆ ಕೋರ್ಟ್​​ ಸಮನ್ಸ್

Chinese visa scam : ಕಾರ್ತಿ ಚಿದಂಬರಂ ಅವರ ಮಾಜಿ ಚಾರ್ಟರ್ಡ್ ಅಕೌಂಟೆಂಟ್ ಎಸ್ ಭಾಸ್ಕರರಾಮನ್ ಮತ್ತು ಉಳಿದ ಕಂಪನಿಗಳ ಪ್ರತಿನಿಧಿಗಳಿಗೆ ಏಪ್ರಿಲ್ 5 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

VISTARANEWS.COM


on

Karti Chidambaram
Koo

ನವದೆಹಲಿ,: ಚೀನಾದ ವೀಸಾ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಮತ್ತು ಇತರರಿಗೆ ದೆಹಲಿ ನ್ಯಾಯಾಲಯ ಮಂಗಳವಾರ ಸಮನ್ಸ್ ಜಾರಿ ಮಾಡಿದೆ. ಜಾರಿ ನಿರ್ದೇಶನಾಲಯ (ಇಡಿ) ಚಾರ್ಜ್ ಶೀಟ್ ಸಲ್ಲಿಸಿದ ನಂತರ ಕಾರ್ತಿ ಚಿದಂಬರಂ ಮತ್ತು ಇತತರಿಗೆ ಸಮನ್ಸ್ ಜಾರಿ ಮಾಡಲಾಗಿದೆ.

ವಿಶೇಷ ನ್ಯಾಯಾಧೀಶ ಎಂ.ಕೆ.ನಾಗಪಾಲ್ ಅವರು ಕಾರ್ತಿ ಚಿದಂಬರಂ ಮತ್ತು ಇತರರಿಗೆ ಸಮನ್ಸ್ ಜಾರಿ ಮಾಡಿದ್ದಾರೆ. ಪದಮ್ ದುಗರ್, ವಿಕಾಸ್ ಮಖಾರಿಯಾ, ಮನ್ಸೂರ್ ಸಿದ್ದಿಕಿ, ದುಗರ್ ಹೌಸಿಂಗ್ ಲಿಮಿಟೆಡ್, ಅಡ್ವಾಂಟೇಜ್ ಸ್ಟ್ರಾಟೆಜಿಕ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ ಮತ್ತು ತಲ್ವಾಂಡಿ ಸಾಬೊ ಪವರ್ ಲಿಮಿಟೆಡ್ ಈ ಪ್ರಕರಣದ ಆರೋಪಿಗಳ ಪಟ್ಟಿಯಲ್ಲಿರುವ ಹೆಸರುಗಳು.

ಕಾರ್ತಿ ಚಿದಂಬರಂ ಅವರ ಮಾಜಿ ಚಾರ್ಟರ್ಡ್ ಅಕೌಂಟೆಂಟ್ ಎಸ್ ಭಾಸ್ಕರರಾಮನ್ ಮತ್ತು ಕೆಲವು ಕಂಪನಿಗಳ ಪ್ರತಿನಿಧಿಗಳಿಗೆ ಏಪ್ರಿಲ್ 5 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಕಾರ್ತಿ ಅವರ ತಂದೆ ಪಿ.ಚಿದಂಬರಂ ಯುಪಿಎ ನೇತೃತ್ವದ ಸರ್ಕಾರದಲ್ಲಿ ಕೇಂದ್ರ ಗೃಹ ಸಚಿವರಾಗಿದ್ದಾಗ 2011 ರಲ್ಲಿ 263 ಚೀನೀ ಪ್ರಜೆಗಳಿಗೆ ವೀಸಾಗಳನ್ನು ನೀಡಿದ್ದ ಪ್ರಕರಣ ಇದಾಗಿದೆ. ಅವರ ಮೂಲಕ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪದ ಬಗ್ಗೆ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿದೆ.

ಇದನ್ನೂ ಓದಿ : ರ್ಯಾಲಿಯ ಭಾಷಣದಲ್ಲಿ ಭಾವುಕರಾದ ಪ್ರಧಾನಿ ಮೋದಿ; ಅವರು ಹೇಳಿದ್ದೇನು?

ಈ ಪ್ರಕರಣದಲ್ಲಿ ಹಣ ವರ್ಗಾವಣೆ ಮಾಡಿದ ಹಣದ ನಿಜವಾದ ಪ್ರಮಾಣ ಅಥವಾ ಪ್ರಮಾಣವನ್ನು ಇನ್ನೂ ಗೊತ್ತಾಗಿಲ್ಲ. ಕೇಂದ್ರ ತನಿಖಾ ದಳ (ಸಿಬಿಎಲ್) ಉಲ್ಲೇಖಿಸಿದಂತೆ 50 ಲಕ್ಷ ರೂ.ಗಳ ಲಂಚವನ್ನು ಪ್ರಸ್ತುತ ಪ್ರಕರಣದ ಆಧಾರವೆಂದು ಪರಿಗಣಿಸಲಾಗುವುದಿಲ್ಲ ಎಂದು ಇಡಿ ಹೇಳಿದೆ.

ಇದೇ ಪ್ರಕರಣದಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ದಾಖಲಿಸಿದ ಎಫ್ಐಆರ್ ಅನ್ನು ಗಮನದಲ್ಲಿಟ್ಟುಕೊಂಡು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್ಎ) ನಿಬಂಧನೆಗಳ ಅಡಿಯಲ್ಲಿ ಇಡಿ ತನ್ನ ಪ್ರಕರಣವನ್ನು ದಾಖಲಿಸಿದೆ.

Continue Reading

ಪ್ರಮುಖ ಸುದ್ದಿ

Narendra Modi : ಸೇಲಂ ರ್ಯಾಲಿಯ ಭಾಷಣದಲ್ಲಿ ಭಾವುಕರಾದ ಪ್ರಧಾನಿ ಮೋದಿ; ಅವರು ಹೇಳಿದ್ದೇನು?

Narendra Modi: 2013ರಲ್ಲಿ ಸೇಲಂ ಪಟ್ಟಣದ ಮರವನೇರಿ ಪ್ರದೇಶದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ರಮೇಶ್ (54) ಅವರನ್ನು ಅವರ ಮನೆಯ ಕಾಂಪೌಂಡ್ ಒಳಗೆ ಅಪರಿಚಿತ ಗುಂಪೊಂದು ಕೊಚ್ಚಿ ಕೊಲೆ ಮಾಡಿತ್ತು.

VISTARANEWS.COM


on

Modi Speech
Koo

ಸೇಲಂ: 2013ರಲ್ಲಿ ತಮಿಳುನಾಡಿನ ಸೇಲಂನಲ್ಲಿ ಹತ್ಯೆಗೀಡಾದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ‘ಆಡಿಟರ್’ ವಿ. ರಮೇಶ್ ಅವರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಸೇಲಂನಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವಾಗ ಪ್ರಧಾನಿ ಮೋದಿ ಸ್ಮರಿಸಿಕೊಂಡರು. ವಿ ರಮೇಶ್ ಅವರು ಪಕ್ಷಕ್ಕಾಗಿ ಹಗಲು ರಾತ್ರಿ ಕೆಲಸ ಮಾಡಿದ್ದಾರೆ ಎಂದು ಹೇಳಿ ಭಾವುಕರಾದರು.

“ಇಂದು ನಾನು ಸೇಲಂನಲ್ಲಿದ್ದೇನೆ, ನನಗೆ ಆಡಿಟರ್​ ರಮೇಶ್ ನೆನಪಿದೆ… ಆಜ್ ಸೇಲಂ ಕಾ ಮೇರಾ ವೋ ರಮೇಶ್ ನಹೀ ಹೈ. ರಮೇಶ್ ಪಕ್ಷಕ್ಕಾಗಿ ಹಗಲಿರುಳು ದುಡಿದಿದ್ದಾರೆ. ಅವರು ನಮ್ಮ ಪಕ್ಷದ ಸಮರ್ಪಿತ ನಾಯಕರಾಗಿದ್ದರು. ಅವರು ಉತ್ತಮ ವಾಗ್ಮಿ ಮತ್ತು ಬಹಳ ಶ್ರಮಜೀವಿಯಾಗಿದ್ದರು. ನಾನು ಅವರಿಗೆ ಗೌರವ ಸಲ್ಲಿಸುತ್ತೇನೆ” ಎಂದು ಪ್ರಧಾನಿ ಮೋದಿ ಹೇಳಿದರು.

2013ರಲ್ಲಿ ಸೇಲಂ ಪಟ್ಟಣದ ಮರವನೇರಿ ಪ್ರದೇಶದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ರಮೇಶ್ (54) ಅವರನ್ನು ಅವರ ಮನೆಯ ಕಾಂಪೌಂಡ್ ಒಳಗೆ ಅಪರಿಚಿತ ಗುಂಪೊಂದು ಕೊಚ್ಚಿ ಕೊಲೆ ಮಾಡಿತ್ತು. ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ.ಎನ್.ಲಕ್ಷ್ಮಣನ್ ಅವರನ್ನು ಸ್ಮರಿಸಿದ ಪ್ರಧಾನಿ, ತುರ್ತು ಪರಿಸ್ಥಿತಿ ವಿರೋಧಿ ಚಳವಳಿಯಲ್ಲಿ ಅವರ ಪಾತ್ರ ಅವಿಸ್ಮರಣೀಯ ಎಂದು ಹೇಳಿದರು.

ಇದನ್ನೂ ಓದಿ : Sita Soren : ಜಾರ್ಖಂಡ್ ಮಾಜಿ ಸಿಎಂ ಹೇಮಂತ್​ ಸೊರೆನ್​ ಅತ್ತಿಗೆ ಬಿಜೆಪಿಗೆ ಸೇರ್ಪಡೆ

“ತುರ್ತು ಪರಿಸ್ಥಿತಿ ವಿರೋಧಿ ಚಳವಳಿಯಲ್ಲಿ ಲಕ್ಷ್ಮಣನ್ ಜಿ ಅವರ ಪಾತ್ರ ಮತ್ತು ಸಾಮಾಜಿಕ-ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದು ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ. ರಾಜ್ಯದಲ್ಲಿ ಬಿಜೆಪಿಯ ವಿಸ್ತರಣೆಗೆ ಅವರ ಕೊಡುಗೆ ಅವಿಸ್ಮರಣೀಯ. ಅವರು ರಾಜ್ಯದಲ್ಲಿ ಅನೇಕ ಶಾಲೆಗಳನ್ನು ಸಹ ಪ್ರಾರಂಭಿಸಿದರು ಎಂದು ಅವರು ಹೇಳಿದರು. ಕೆ.ಎನ್. ಲಕ್ಷ್ಮಣನ್ ಅವರು ವಯೋಸಹಜ ಸಮಸ್ಯೆಗಳಿಂದಾಗಿ 2020 ರ ಜೂನ್​ನಲ್ಲಿ ಸೇಲಂನ ಸೆವ್ವೈಪೇಟೈನಲ್ಲಿರುವ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದರು

ತಮಿಳುನಾಡಿನ ಅಭಿವೃದ್ಧಿಗೆ ಬದ್ಧ

ತಮಿಳುನಾಡಿನ ಅಭಿವೃದ್ಧಿ ಮತ್ತು ಸಮೃದ್ಧಿಯನ್ನು ಖಚಿತಪಡಿಸಿಕೊಳ್ಳಲು ನಮ್ಮ ಸರ್ಕಾರ ಯಾವುದೇ ಪ್ರಯತ್ನವನ್ನು ಬಿಡುತ್ತಿಲ್ಲ. ಉಚಿತ ವೈದ್ಯಕೀಯ ಚಿಕಿತ್ಸೆಯಿಂದ ಹಿಡಿದು ಮನೆಗಳಲ್ಲಿ ನಲ್ಲಿ ನೀರಿನ ಸಂಪರ್ಕವನ್ನು ಒದಗಿಸುವವರೆಗೆ, ಉಚಿತ ಪಡಿತರ ಸೌಲಭ್ಯಗಳಿಂದ ಹಿಡಿದು ಮುದ್ರಾ ಯೋಜನೆಯ ಮೂಲಕ ತಮಿಳುನಾಡಿನ ಮಹಿಳೆಯರಿಗೆ ಪ್ರಯೋಜನವಾಗುವವರೆಗೆ, ನಾವು ಅತ್ಯುತ್ತಮವಾದದ್ದನ್ನು ನೀಡುವುದನ್ನು ಖಚಿತಪಡಿಸಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.

ಕಾಂಗ್ರೆಸ್, ಡಿಎಂಕೆಯಿಂದ ಹಿಂದೂ ಧರ್ಮಕ್ಕೆ ನಿರಂತರ ಅವಮಾನ; ಮೋದಿ ವಾಗ್ದಾಳಿ

ಲೋಕಸಭಾ ಚುನಾವಣೆ (Lok Sabha Election 2024)ಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ರಾಜಕೀಯ ಪಕ್ಷಗಳು ಆರೋಪ-ಪ್ರತ್ಯಾರೋಪದಲ್ಲಿ ತೊಡಗಿವೆ. ಭಾನುವಾರ ನಡೆದ ರ‍್ಯಾಲಿಯಲ್ಲಿ ಮಾತನಾಡಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi), ಎನ್‌ಡಿಎ ಸರ್ಕಾರವನ್ನು ಟೀಕಿಸಲು ʼಶಕ್ತಿʼ ಪದವನ್ನು ಪ್ರಯೋಗಿಸಿದ್ದರು. ಇದೀಗ ಬಿಜೆಪಿ (BJP) ಇದನ್ನೇ ಪ್ರತ್ಯಸ್ತ್ರವಾಗಿ ಕೈಗೆತ್ತಿಕೊಂಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಈ ಪದವನ್ನು ಬಳಸಿ ವಿಪಕ್ಷಗಳ ʼಇಂಡಿಯಾʼ ಮೈತ್ರಿಕೂಟ (INDIA bloc)ದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತಮಿಳುನಾಡಿನ ಸೇಲಂನಲ್ಲಿ ಮಾತನಾಡಿದ ಮೋದಿ, ʼʼಕಾಂಗ್ರೆಸ್ ಮತ್ತು ಡಿಎಂಕೆ ಹಿಂದೂ ಧರ್ಮವನ್ನು ಅವಮಾನಿಸುವ ಪ್ರವೃತ್ತಿಯನ್ನು ಹೊಂದಿವೆ. ಆ ಪಕ್ಷಗಳ ನಾಯಕರು ಎಂದಿಗೂ ಇತರ ಧರ್ಮಗಳ ವಿರುದ್ಧ ಮಾತನಾಡುವುದಿಲ್ಲʼʼ ಹೇಳಿದ್ದಾರೆ.

ಹಿಂದೂ ಧರ್ಮದ ವಿರುದ್ಧ ಹೇಳಿಕ
ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿ ಪ್ರಧಾನಿ, “ಇಂಡಿಯಾ ಮೈತ್ರಿಕೂಟ ಉದ್ದೇಶಪೂರ್ವಕವಾಗಿ ಹಿಂದೂ ಧರ್ಮವನ್ನು ಅವಮಾನಿಸುತ್ತಿದೆ. ಹಿಂದೂ ಧರ್ಮದ ವಿರುದ್ಧ ಯೋಜನೆ ರೂಪಿಸಲಾಗುತ್ತಿದೆ. ಕಾಂಗ್ರೆಸ್-ಡಿಎಂಕೆ ಮೈತ್ರಿ ಎಂದಿಗೂ ಇತರ ಧರ್ಮಗಳ ವಿರುದ್ಧ ಮಾತನಾಡುವುದಿಲ್ಲ. ಆದರೆ ಅವರು ಹಿಂದೂ ಧರ್ಮವನ್ನು ಅವಮಾನಿಸಲು ಒಂದು ಕ್ಷಣವೂ ಯೋಚಿಸುವುದಿಲ್ಲ” ಎಂದು ಆರೋಪಿಸಿದ್ದಾರೆ.

ಡಿಎಂಕೆ, ಕಾಂಗ್ರೆಸ್‌ ಮತ್ತು ʼಇಂಡಿಯಾʼ ಮೈತ್ರಿ ಕೂಟಗಳು ಶಕ್ತಿಯನ್ನು ನಿರ್ನಾಮ ಮಾಡುತ್ತೇವೆ ಎಂದು ಹೇಳಿವೆ. “ತಮಿಳುನಾಡಿನಲ್ಲಿ ಮಾರಿಯಮ್ಮನ್, ಕಾಂಚಿ ಕಾಮಾಕ್ಷಿ, ಮಧುರೈ ಮೀನಾಕ್ಷಿ ಕೂಡ ‘ಶಕ್ತಿ’ಯೇ. ಕಾಂಗ್ರೆಸ್, ಡಿಎಂಕೆ ಮತ್ತು ʼಇಂಡಿಯಾʼ ಮೈತ್ರಿಕೂಟವು ಈ ಶಕ್ತಿಯನ್ನು ನಾಶಪಡಿಸುವುದಾಗಿ ಹೇಳುತ್ತಿವೆ. ಹಿಂದೂ ಧರ್ಮದಲ್ಲಿ ಶಕ್ತಿ ಎಂದರೆ ಮಹಿಳಾ ಶಕ್ತಿ, ತಾಯಿಯ ಶಕ್ತಿʼʼ ಎಂದು ಮೋದಿ ಹೇಳಿದ್ದಾರೆ.

Continue Reading

Lok Sabha Election 2024

Narendra Modi: ಕಾಂಗ್ರೆಸ್, ಡಿಎಂಕೆಯಿಂದ ಹಿಂದೂ ಧರ್ಮಕ್ಕೆ ನಿರಂತರ ಅವಮಾನ; ಮೋದಿ ವಾಗ್ದಾಳಿ

Narendra Modi: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬಳಿಸಿದ್ದ ಶಕ್ತಿ ಪದವನ್ನು ಬಳಿಸಿ ಪ್ರಧಾನ ಮಂತ್ರಿ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ ಮತ್ತು ಡಿಎಂಕೆ ನಿರಂತರವಾಗಿ ಹಿಂದೂ ಧರ್ಮವನ್ನು ಅವಮಾನಿಸುತ್ತಿವೆ ಎಂದು ಹೇಳಿದ್ದಾರೆ.

VISTARANEWS.COM


on

modi
Koo

ಚೆನ್ನೈ: ಲೋಕಸಭಾ ಚುನಾವಣೆ (Lok Sabha Election 2024)ಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ರಾಜಕೀಯ ಪಕ್ಷಗಳು ಆರೋಪ-ಪ್ರತ್ಯಾರೋಪದಲ್ಲಿ ತೊಡಗಿವೆ. ಭಾನುವಾರ ನಡೆದ ರ‍್ಯಾಲಿಯಲ್ಲಿ ಮಾತನಾಡಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi), ಎನ್‌ಡಿಎ ಸರ್ಕಾರವನ್ನು ಟೀಕಿಸಲು ʼಶಕ್ತಿʼ ಪದವನ್ನು ಪ್ರಯೋಗಿಸಿದ್ದರು. ಇದೀಗ ಬಿಜೆಪಿ (BJP) ಇದನ್ನೇ ಪ್ರತ್ಯಸ್ತ್ರವಾಗಿ ಕೈಗೆತ್ತಿಕೊಂಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಈ ಪದವನ್ನು ಬಳಸಿ ವಿಪಕ್ಷಗಳ ʼಇಂಡಿಯಾʼ ಮೈತ್ರಿಕೂಟ (INDIA bloc)ದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತಮಿಳುನಾಡಿನ ಸೇಲಂನಲ್ಲಿ ಮಾತನಾಡಿದ ಮೋದಿ, ʼʼಕಾಂಗ್ರೆಸ್ ಮತ್ತು ಡಿಎಂಕೆ ಹಿಂದೂ ಧರ್ಮವನ್ನು ಅವಮಾನಿಸುವ ಪ್ರವೃತ್ತಿಯನ್ನು ಹೊಂದಿವೆ. ಆ ಪಕ್ಷಗಳ ನಾಯಕರು ಎಂದಿಗೂ ಇತರ ಧರ್ಮಗಳ ವಿರುದ್ಧ ಮಾತನಾಡುವುದಿಲ್ಲʼʼ ಹೇಳಿದ್ದಾರೆ.

ಹಿಂದೂ ಧರ್ಮದ ವಿರುದ್ಧ ಹೇಳಿಕ

ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿ ಪ್ರಧಾನಿ, “ಇಂಡಿಯಾ ಮೈತ್ರಿಕೂಟ ಉದ್ದೇಶಪೂರ್ವಕವಾಗಿ ಹಿಂದೂ ಧರ್ಮವನ್ನು ಅವಮಾನಿಸುತ್ತಿದೆ. ಹಿಂದೂ ಧರ್ಮದ ವಿರುದ್ಧ ಯೋಜನೆ ರೂಪಿಸಲಾಗುತ್ತಿದೆ. ಕಾಂಗ್ರೆಸ್-ಡಿಎಂಕೆ ಮೈತ್ರಿ ಎಂದಿಗೂ ಇತರ ಧರ್ಮಗಳ ವಿರುದ್ಧ ಮಾತನಾಡುವುದಿಲ್ಲ. ಆದರೆ ಅವರು ಹಿಂದೂ ಧರ್ಮವನ್ನು ಅವಮಾನಿಸಲು ಒಂದು ಕ್ಷಣವೂ ಯೋಚಿಸುವುದಿಲ್ಲ” ಎಂದು ಆರೋಪಿಸಿದ್ದಾರೆ.

ʼʼಡಿಎಂಕೆ, ಕಾಂಗ್ರೆಸ್‌ ಮತ್ತು ʼಇಂಡಿಯಾʼ ಮೈತ್ರಿ ಕೂಟಗಳು ಶಕ್ತಿಯನ್ನು ನಿರ್ನಾಮ ಮಾಡುತ್ತೇವೆ ಎಂದು ಹೇಳಿವೆ. “ತಮಿಳುನಾಡಿನಲ್ಲಿ ಮಾರಿಯಮ್ಮನ್, ಕಾಂಚಿ ಕಾಮಾಕ್ಷಿ, ಮಧುರೈ ಮೀನಾಕ್ಷಿ ಕೂಡ ‘ಶಕ್ತಿ’ಯೇ. ಕಾಂಗ್ರೆಸ್, ಡಿಎಂಕೆ ಮತ್ತು ʼಇಂಡಿಯಾʼ ಮೈತ್ರಿಕೂಟವು ಈ ಶಕ್ತಿಯನ್ನು ನಾಶಪಡಿಸುವುದಾಗಿ ಹೇಳುತ್ತಿವೆ. ಹಿಂದೂ ಧರ್ಮದಲ್ಲಿ ಶಕ್ತಿ ಎಂದರೆ ಮಹಿಳಾ ಶಕ್ತಿ, ತಾಯಿಯ ಶಕ್ತಿʼʼ ಎಂದು ಮೋದಿ ಹೇಳಿದ್ದಾರೆ.

ಒಂದೇ ನಾಣ್ಯದ ಎರಡು ಮುಖಗಳು

ಡಿಎಂಕೆ ಮತ್ತು ಕಾಂಗ್ರೆಸ್‌ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣಕ್ಕೆ ಇವು ಒತ್ತು ನೀಡುತ್ತವೆ. ಕಾಂಗ್ರೆಸ್‌ನಿಂದ ಅಧಿಕಾರವನ್ನು ದೂರ ಇಟ್ಟಾಗ ದೇಶವು 5 ಜಿ ತಂತ್ರಜ್ಞಾನವನ್ನು ತಲುಪಿತು. ಆದರೆ ತಮಿಳುನಾಡಿನಲ್ಲಿ ಡಿಎಂಕೆ ತನ್ನದೇ ಆದ 5 ಜಿ ನಡೆಸುತ್ತಿದೆ- ಅಂದರೆ ಇಲ್ಲಿನ 5 ಜಿ ಎಂದರೆ ತಮಿಳುನಾಡಿನ ಮೇಲೆ ನಿಯಂತ್ರಣ ಸಾಧಿಸಲು ಒಂದು ಕುಟುಂಬದ ಐದನೇ ತಲೆಮಾರಿನ ಪ್ರಯತ್ನ ಎಂದರ್ಥʼʼ ಎಂದು ಅವರು ಟೀಕಿಸಿದ್ದಾರೆ.

“ಇಂಡಿಯಾʼ ಮೈತ್ರಿಕೂಟವು ಮಹಿಳೆಯರೊಂದಿಗೆ ಯಾವ ರೀತಿ ವರ್ತಿಸುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಬದುಕಿದ್ದಾಗ ಡಿಎಂಕೆ ನಾಯಕರು ಅವರೊಂದಿಗೆ ಹೇಗೆ ವರ್ತಿಸಿದರು ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಇದು ಡಿಎಂಕೆಯ ನಿಜವಾದ ಮುಖ” ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: Lok Sabha Election 2024: ರಾಹುಲ್‌ ಗಾಂಧಿ ‘ಶಕ್ತಿ’ ಹೇಳಿಕೆಗೆ ತಿರುಗಿ ಬಿದ್ದ ಬಿಜೆಪಿ ನಾಯಕರು ಹೇಳಿದ್ದೇನು?

ರಾಹುಲ್‌ ಗಾಂಧಿ ಹೇಳಿದ್ದೇನು?

ಮುಂಬೈಯ ಶಿವಾಜಿ ಪಾರ್ಕ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ್ದ ರಾಹುಲ್‌ ಗಾಂಧಿ, ಶಕ್ತಿ ಎಂಬ ಪದದ ಪ್ರಸ್ತಾವ ಮಾಡಿದ್ದರು. ಎನ್‌ಡಿಎ ಸರ್ಕಾರವನ್ನು ಶಕ್ತಿಗೆ ಹೋಲಿಸಿದ್ದ ಅವರು, ಆ ಶಕ್ತಿಯ ವಿರುದ್ಧ ಹೋರಾಡುತ್ತೇವೆ ಎಂದಿದ್ದರು. “ಹಿಂದಿಯಲ್ಲಿ ಶಕ್ತಿ ಎಂಬ ಪದ ಇದೆ. ನಾವು ಆ ಶಕ್ತಿಯ ವಿರುದ್ಧ ಹೋರಾಡುತ್ತೇವೆ. ಅಷ್ಟಕ್ಕೂ, ಈ ಶಕ್ತಿ ಎಂದರೇನು? ಇದು ನಮಗೆ ಏನು ಮಾಡುತ್ತದೆ? ವಿದ್ಯುನ್ಮಾನ ಮತಯಂತ್ರಗಳ ಆತ್ಮ ಹಾಗೂ ಸಮಗ್ರತೆಯನ್ನು ರಾಜನಿಗೆ (ಮೋದಿ) ವರ್ಗಾಯಿಸಲಾಗಿದೆ. ಇ.ಡಿ, ಸಿಬಿಐಗಳು ಕೂಡ ರಾಜನ ವಶವಾಗಿವೆ. ಇವಿಎಂ, ಇ.ಡಿ, ಸಿಬಿಐ ಮತ್ತು ಆದಾಯ ತೆರಿಗೆ ಇಲ್ಲದೆ ಪ್ರಧಾನಿ ಮೋದಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ” ಎಂದು ರಾಹುಲ್‌ ಗಾಂಧಿ ಟೀಕಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ದೇಶ

Sita Soren : ಜಾರ್ಖಂಡ್ ಮಾಜಿ ಸಿಎಂ ಹೇಮಂತ್​ ಸೊರೆನ್​ ಅತ್ತಿಗೆ ಬಿಜೆಪಿಗೆ ಸೇರ್ಪಡೆ

Sita Soren : ಜೆಎಂಎಂನಲ್ಲಿ ನಮಗೆ ಸೂಕ್ತ ಸ್ಥಾನಮಾನ ದೊರಕಿಲ್ಲ ಎಂದು ಆರೋಪಿಸಿರುವ ಸೀತಾ ಸೊರೆನ್​ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

VISTARANEWS.COM


on

Sita Soren
Koo

ರಾಂಚಿ: ಜಾರ್ಖಂಡ್​​ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ (Hemant Soren) ಅವರ ಅತ್ತಿಗೆ, ಜಾರ್ಖಂಡ್​ನ ಜಾಮಾ ಕ್ಷೇತ್ರದ ಶಾಸಕಿ ಸೀತಾ ಸೊರೆನ್ (Sita Soren) ಮಂಗಳವಾರ ಬಿಜೆಪಿ (BJP) ಸೇರಿದ್ದಾರೆ. ಜೆಎಂಎಂ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ನಂತರ, ಸೀತಾ ಸೊರೆನ್ ಜಾರ್ಖಂಡ್ ವಿಧಾನಸಭೆಯ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದರು. ಅವರು ಜೆಎಂಎಂನ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು.

“ಪಕ್ಷದಲ್ಲಿ ಅನೇಕ ಸಂದರ್ಭಗಳು ಉದ್ಭವಿಸಿದವು; ಕೊನೆಯಲ್ಲಿ, ಇದು ನನಗೆ ನೈತಿಕತೆಯ ವಿಷಯವಾಗಿತ್ತು. ಆದ್ದರಿಂದ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ” ಎಂದು ಸೀತಾ ಸೊರೆನ್ ಜಾರ್ಖಂಡ್ ವಿಧಾನಸಭಾ ಸ್ಪೀಕರ್​ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಜೆಎಂಎಂ ತನಗೆ ನೀಡಬೇಕಾದ ಸ್ಥಾನಮಾನ ನೀಡಿಲ್ಲ ಎಂದು ಸೀತಾ ಸೊರೆನ್ ಹೇಳಿದ್ದಾರೆ. “ನಾನು 14 ವರ್ಷಗಳ ಕಾಲ ಪಕ್ಷಕ್ಕೆ ಸೇವೆ ಸಲ್ಲಿಸಿದ್ದೇನೆ, ಆದರೆ ಇಲ್ಲಿಯವರೆಗೆ, ಆ 14 ವರ್ಷಗಳಲ್ಲಿ ನನಗೆ ಸಿಗಬೇಕಾದ ಗೌರವವನ್ನು ನಾನು ಪಡೆದಿಲ್ಲ, ಇದರಿಂದಾಗಿ ನನ್ನ ದಿವಂಗತ ಪತಿ ದುರ್ಗೇಶ್ವರ್ ಜಿ ಅವರ ಕಠಿಣ ಪರಿಶ್ರಮಕ್ಕೆ ಗೌರವ ಸಲ್ಲಿಸಲು ನಾನು ಈ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕಾಯಿತು ನಾವು ಇಲ್ಲಿಯವರೆಗೆ ಅಸ್ಪೃಶ್ಯರಾಗಿ ಉಳಿದಿದ್ದೇವೆ, ಪಕ್ಷದಿಂದ ನಮಗೆ ಯಾವುದೇ ಗೌರವ ದೊರೆತಿಲ್ಲ” ಎಂದು ಸೀತಾ ಸೊರೆನ್ ಆರೋಪಿಸಿದ್ದಾರೆ.

“ನಾನು ಇಂದು ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು. ಪ್ರಧಾನಿ ನರೇಂದ್ರ ಮೋದಿಯವರಿಂದ ಭಾರತ ಅಭಿವೃದ್ಧಿಯಾಗುತ್ತಿದೆ. ಭಾರತದ ಹೆಸರು ವಿದೇಶಗಳಲ್ಲಿಯೂ ಜನಪ್ರಿಯವಾಗುತ್ತಿದೆ. ನನಗೆ ಜೆಪಿ ನಡ್ಡಾ (ಬಿಜೆಪಿ ರಾಷ್ಟ್ರಿಯ ಅಧ್ಯಕ್ಷ) ಜಿ, ಅಮಿತ್ ಶಾ ಜಿ (ಕೇಂದ್ರ ಗೃಹ ಸಚಿವ), ದೇವೇಂದ್ರ ಫಡ್ನವಿಸ್​ ಜಿ (ಮಹಾರಾಷ್ಟ್ರ ಡಿಸಿಎಂ) ಅವರ ಮೇಲೆ ನಂಬಿಕೆ ಇದೆ. ನಾನು ಅವರಿಂದ ಬೆಂಬಲವನ್ನು ಪಡೆಯುತ್ತೇನೆ. ನಾವು ಜಾರ್ಖಂಡ್ ಉಳಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ವಾಪಸ್​ ಬರುತ್ತಾರೆ ಎಂದ ಜೆಎಮ್​ಎಮ್​ ನಾಯಕ

ಸೀತಾ ಸೊರೆನ್ ತಮ್ಮ ನಿರ್ಧಾರವನ್ನು ಹಿಂತೆಗೆದುಕೊಳ್ಳುತ್ತಾರೆ ಎಂದು ಜೆಎಂಎಂ ನಾಯಕ ಮನೋಜ್ ಪಾಂಡೆ ಆಶಿಸಿದ್ದಾರೆ. ಇದು ತುಂಬಾ ದುರದೃಷ್ಟಕರ. ನಾವು ಅವರನ್ನು ಪಕ್ಷದ ಪ್ರಮುಖ ಸದಸ್ಯ ಎಂದು ಪರಿಗಣಿಸುತ್ತೇವೆ. ಅವರು ನಿರ್ಧಾರದಿಂದ ಸರಿಯುತ್ತಾರೆ ಎಂದು ನಾವು ಭಾವಿಸುತ್ತೇವೆ. ನಮ್ಮ ಪಕ್ಷದಿಂದ ಅವರು ಪಡೆದ ರೀತಿಯ ಗೌರವವನ್ನು ಅವರು ಬೇರೆಲ್ಲಿಯೂ ಪಡೆಯುತ್ತಾರೆ ಎಂದು ನಾನು ಭಾವಿಸುವುದಿಲ್ಲ ಅವರು ನಮ್ಮನ್ನು ವಿರೋಧಿಸುವ ಜನರ ಪ್ರಭಾವಕ್ಕೆ ಒಳಗಾಗಿದ್ದಾರೆ” ಎಂದು ಜೆಎಂಎಂ ನಾಯಕ ಮನೋಜ್ ಪಾಂಡೆ ಹೇಳಿದರು.

ಇದನ್ನೂ ಓದಿ : CAA: ಸಿಎಎಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಣೆ, ಸರ್ಕಾರಕ್ಕೆ ಸ್ಪಂದಿಸಲು 3 ವಾರ ಗಡುವು

ಸೀತಾ ಸೊರೆನ್ ಬಿಜೆಪಿ ಸೇರುವ ಬಗ್ಗೆ ಮಾತನಾಡಿದ ಜೆಎಂಎಂ ಸಂಸದೆ ಮಹುವಾ ಮಾಜಿ, “ನಾವೆಲ್ಲರೂ ಆಘಾತಕ್ಕೊಳಗಾಗಿದ್ದೇವೆ. ಅವರು ಇದನ್ನು ಏಕೆ ಮಾಡಿದರು ಎಂಬುದರ ಬಗ್ಗೆ ನಮಗೆ ಮಾಹಿತಿ ಇಲ್ಲ. ಪಕ್ಷವು ಇದೀಗ ಬಿಕ್ಕಟ್ಟನ್ನು ಎದುರಿಸುತ್ತಿದೆ. ಆದ್ದರಿಂದ, ಪ್ರತಿಯೊಬ್ಬರೂ ಸ್ವಲ್ಪ ತಾಳ್ಮೆಯನ್ನು ಹೊಂದಿರಬೇಕು ಎಂದು ನಾನು ಭಾವಿಸುತ್ತೇನೆ. ಶಿಬು ಸೊರೆನ್ ಅವರ ಮಾರ್ಗದರ್ಶನದಲ್ಲಿ ಹೇಮಂತ್ ಸೊರೆನ್ ಕೆಲಸ ಮಾಡಿದ್ದಾರೆ ಮತ್ತು ಚಂಪೈ ಸೊರೆನ್ ಅಪೂರ್ಣ ಕೆಲಸವನ್ನು ಪೂರ್ಣಗೊಳಿಸುತ್ತಿದ್ದಾರೆ ” ಎಂದು ಹೇಳಿದರು.

ಜಾರ್ಖಂಡ್ನ 14 ಸ್ಥಾನಗಳ ಪೈಕಿ 11 ಸ್ಥಾನಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಹೆಸರಿಸಿದ್ದರೂ, ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಇನ್ನೂ ಘೋಷಿಸಿಲ್ಲ. ಜಾರ್ಖಂಡ್​ನಲ್ಲಿ ಮೇ 13 ರಿಂದ ಜೂನ್ 1 ರವರೆಗೆ ನಾಲ್ಕು ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ.

Continue Reading
Advertisement
Summer Fashion
ಫ್ಯಾಷನ್4 mins ago

Summer Fashion: ಸಮ್ಮರ್‌ ಸೀರೆಯಲ್ಲಿ ನಟಿ ನಿಮಿಕಾರಂತೆ ಆಕರ್ಷಕವಾಗಿ ಕಾಣಲು 5 ಟಿಪ್ಸ್ !

DV Sadananda Gowda Congress
ರಾಜಕೀಯ5 mins ago

DV Sadananda Gowda : ಡಿವಿಎಸ್‌ ಕಾಂಗ್ರೆಸ್‌ ಸೇರ್ಪಡೆಗೆ ಒಕ್ಕಲಿಗರ ಸಂಘ ಬೆಂಬಲ; ಕೈ ತೀರ್ಮಾನ ಏನು?

Karti Chidambaram
ಪ್ರಮುಖ ಸುದ್ದಿ12 mins ago

Chinese visa scam : ಚೀನಾ ವೀಸಾ ಹಗರಣ: ಕಾರ್ತಿ ಚಿದಂಬರಂ ಸೇರಿ ಹಲವರಿಗೆ ಕೋರ್ಟ್​​ ಸಮನ್ಸ್

Tough fight between BJP and Congress in Chamarajanagar
ರಾಜಕೀಯ27 mins ago

Vistara News Polling Booth: ಚಾಮರಾಜನಗರದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಟಫ್‌ ಫೈಟ್; ಯಾರಿಗೆಷ್ಟು ಮತ?

Additional Special bus facility for Sri Marikamba Devi Jatra in Sirsi
ಉತ್ತರ ಕನ್ನಡ31 mins ago

Uttara Kannada News: ಶಿರಸಿ ಮಾರಿಕಾಂಬಾ ದೇವಿ ಜಾತ್ರೆಗೆ ಇಂದಿನಿಂದ ಹೆಚ್ಚುವರಿ ವಿಶೇಷ ಬಸ್

Modi Speech
ಪ್ರಮುಖ ಸುದ್ದಿ33 mins ago

Narendra Modi : ಸೇಲಂ ರ್ಯಾಲಿಯ ಭಾಷಣದಲ್ಲಿ ಭಾವುಕರಾದ ಪ್ರಧಾನಿ ಮೋದಿ; ಅವರು ಹೇಳಿದ್ದೇನು?

Ondu Sarala Premakathe ott in amazon prime
ಸ್ಯಾಂಡಲ್ ವುಡ್42 mins ago

Ondu Sarala Premakathe: ಒಟಿಟಿಗೆ ಬಂದೇ ಬಿಡ್ತು ʻಒಂದು ಸರಳ ಪ್ರೇಮಕಥೆʼ; ಕನ್ನಡಿಗರ ಆಕ್ರೋಶ!

modi
Lok Sabha Election 202453 mins ago

Narendra Modi: ಕಾಂಗ್ರೆಸ್, ಡಿಎಂಕೆಯಿಂದ ಹಿಂದೂ ಧರ್ಮಕ್ಕೆ ನಿರಂತರ ಅವಮಾನ; ಮೋದಿ ವಾಗ್ದಾಳಿ

Sita Soren
ದೇಶ57 mins ago

Sita Soren : ಜಾರ್ಖಂಡ್ ಮಾಜಿ ಸಿಎಂ ಹೇಮಂತ್​ ಸೊರೆನ್​ ಅತ್ತಿಗೆ ಬಿಜೆಪಿಗೆ ಸೇರ್ಪಡೆ

Hanuman Chalisa Accused
ಬೆಂಗಳೂರು1 hour ago

Hanuman Chalisa : ಹನುಮಾನ್‌ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ಮಾಡಿದ ದುಷ್ಕರ್ಮಿಗಳು ಇವರೇ ನೋಡಿ..

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Nagarthpet protest by BJP
ಬೆಂಗಳೂರು4 hours ago

Hanuman Chalisa: ನಗರ್ತಪೇಟೆ ಉದ್ವಿಗ್ನ; ಜೈಶ್ರೀರಾಮ್‌ ಕೂಗಿದ ಹಿಂದು ಕಾರ್ಯಕರ್ತರು, ಶೋಭಾ ಕರಂದ್ಲಾಜೆ ಪೊಲೀಸ್‌ ವಶಕ್ಕೆ

dina Bhavishya
ಭವಿಷ್ಯ12 hours ago

Dina Bhavishya : ಈ ರಾಶಿಯವರು ಎಚ್ಚರ ವಹಿಸಿ; ಅಮೂಲ್ಯವಾದ ವಸ್ತುವೊಂದು ಕೈ ತಪ್ಪಬಹುದು

Tejaswi Surya About Hanuman Chalisa Issue
ಬೆಂಗಳೂರು23 hours ago

ಹನುಮಾನ್‌ ಚಾಲೀಸಾ ಕೇಸ್‌; ಆರೋಪಿಗಳು ಅರೆಸ್ಟ್ ಆಗದಿದ್ದರೆ ಪ್ರತಿಭಟನೆ- ತೇಜಸ್ವಿ ಸೂರ್ಯ ಎಚ್ಚರಿಕೆ

read your daily horoscope predictions for march 18 2024
ಭವಿಷ್ಯ2 days ago

Dina Bhavishya : ಈ ದಿನ ನೀವೂ ಮೋಸ ಹೋಗುವುದು ಗ್ಯಾರಂಟಿ; ಬೆನ್ನ ಹಿಂದೆಯೇ ನಡೆಯುತ್ತೆ ಪಿತೂರಿ

Lok Sabha Election 2024 Congress finalises list of 13 seats
Lok Sabha Election 20242 days ago

Lok Sabha Election 2024: ಕಾಂಗ್ರೆಸ್‌ನಲ್ಲಿ 13 ಕ್ಷೇತ್ರಗಳ ಪಟ್ಟಿ ಫೈನಲ್!‌ ಸಂಭಾವ್ಯ ಅಭ್ಯರ್ಥಿಗಳ ಲಿಸ್ಟ್‌ ಇಲ್ಲಿದೆ

dina Bhvishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಅತ್ತೆ ಮನೆಯಿಂದ ಸಿಗಲಿದೆ ಭರಪೂರ ಉಡುಗೊರೆ

Dina Bhavishya
ಭವಿಷ್ಯ4 days ago

Dina Bhavishya : ಇವತ್ತು ಈ ರಾಶಿಯವರು ಮೌನದಿಂದ ಇರುವುದು ಒಳಿತು

Lok Sabha Election 2024 Is Operation JDS Worker Behind DK Brothers Breakfast Meeting
Lok Sabha Election 20244 days ago

Lok Sabha Election 2024: ಡಿಕೆ ಬ್ರದರ್ಸ್‌ ಬ್ರೇಕ್‌ಫಾಸ್ಟ್‌ ಮೀಟಿಂಗ್ ಹಿಂದೆ ‘ಆಪರೇಷನ್‌ ಜೆಡಿಎಸ್‌ ಕಾರ್ಯಕರ್ತ’?

read your daily horoscope predictions for march 15 2024
ಭವಿಷ್ಯ5 days ago

Dina Bhavishya : ಕೆಲವು ರಹಸ್ಯ ವಿಷಯಗಳು ಈ ರಾಶಿಯವರಿಗೆ ಅಚ್ಚರಿ ತರಲಿದೆ

Lok Sabha Election 2024 Yaduveer talks about entering politics and Yaduveer Krishnadatta Chamaraja Wadiyar meets BY Vijayendra
ಕರ್ನಾಟಕ5 days ago

‌Lok Sabha Election 2024: ಮೆಣಸಿನಕಾಯಿಯನ್ನು ಜೀರ್ಣಿಸಿಕೊಳ್ತೇನೆ; ನನ್ನ ಮೇಲೆ ರಾಜಸ್ಥಾನದ ಪ್ರಭಾವ ಇಲ್ಲ: ಯದುವೀರ್

ಟ್ರೆಂಡಿಂಗ್‌