Site icon Vistara News

PM Modi US Visit: ಅಮೆರಿಕದಲ್ಲಿ ಮೋದಿ ವಿರುದ್ಧ ಪಿತೂರಿ ಮಾಡಲು ಪಾಕಿಸ್ತಾನದ ಟೂಲ್​ ಕಿಟ್ ರೆಡಿ!

PM Modi

#image_title

ನವ ದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ವಾರದ ಕೊನೆಯಲ್ಲಿ ಅಮೆರಿಕಕ್ಕೆ ಭೇಟಿ (PM Modi US Visit) ನೀಡಲಿದ್ದಾರೆ. ಈ ವೇಳೆ ಅವರ ವಿರುದ್ಧ ಘೋಷಣೆಗಳನ್ನು ಕೂಗಿಸುವ ಜತೆಗೆ ನಾನಾ ರೀತಿಯಲ್ಲಿ ತೊಂದರೆ ಕೊಡಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಅಮೆರಿಕದಲ್ಲಿ ಸಂಚು ರೂಪಿಸುತ್ತಿದೆ. ಆ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವಾರು ಖಲಿಸ್ತಾನ್ ಪರ ಸಂಘಟನೆಗಳು ಮತ್ತು ಭಾರತದ ವಿರುದ್ಧ ಕೆಲಸ ಮಾಡುವ ಗುಂಪುಗಳೊಂದಿಗೆ ಸಭೆ ನಡೆಸಿದೆ ಎಂದು ವರದಿಯಾಗಿದೆ.

ನಾನಾ ಮೂಲಗಳ ಪ್ರಕಾರ, ಪ್ರಧಾನಿ ಮೋದಿಯವರ ಅಮೆರಿಕ ಭೇಟಿಯನ್ನು ವಿರೋಧಿಸಲು ಪಾಕಿಸ್ತಾನದ ಐಎಸ್ಐ ಕಳೆದ ಹಲವಾರು ದಿನಗಳಿಂದ ಅಮೆರಿಕದಲ್ಲಿ ಸಕ್ರಿಯವಾಗಿದೆ. ಭಾರತದ ವಿರುದ್ಧದ ಪಿತೂರಿಯನ್ನು ಕಾರ್ಯಗತಗೊಳಿಸಲು ಅನೇಕ ಸಂಸ್ಥೆಗಳಿಗೆ ಧನಸಹಾಯವನ್ನು ಸಹ ಒದಗಿಸುತ್ತಿದೆ. ಸಭೆ ಸೇರಿ ಕಾರ್ಯತಂತ್ರವನ್ನು ಕೂಡ ವಿವರಿಸುತ್ತಿದೆ.

ಪ್ರಧಾನಿ ಮೋದಿ ಅವರ ಅಮೆರಿಕ ಭೇಟಿಯ ಸಮಯದಲ್ಲಿ ಅವರನ್ನು ಸ್ವಾಗತಿಸಲು ಭರ್ಜರಿ ಸಿದ್ಧತೆಗಳು ನಡೆದಿವೆ. ದೊಡ್ಡ ಕಾರ್ಯಕ್ರಮ ನಡೆದರೆ ಭಾರತದ ಪ್ರಧಾನಿಯ ವರ್ಚಸ್ಸು ಇನ್ನಷ್ಟು ಹೆಚ್ಚಾಗಬಹುದು ಎಂಬ ಭ್ರಾಂತಿಗೆ ಒಳಗಾಗಿದೆ ಪಾಕ್​. ಪ್ರಧಾನಿ ಮೋದಿ ಅವರ ಮೂಲಕ ಹೆಚ್ಚುತ್ತಿರುವ ಭಾರತದ ವರ್ಚಸ್ಸನ್ನು ಕಡಿಮೆ ಮಾಡುವುದಕ್ಕೆ ಕುತಂತ್ರ ಆರಂಭಿಸಿದೆ. ಪಾಕ್​. ಅದಕ್ಕಾಗಿಯೇ ಮೋದಿ ಅವರನ್ನು ವಿರೋಧಿಸಲು ಟೂಲ್ ಕಿಟ್ ಸಹ ಸಿದ್ಧಪಡಿಸಿಕೊಂಡಿದೆ.

ಮೋದಿ ರ್ಯಾಲಿ ಸಮಯದಲ್ಲಿ ಅವರಿಗೆ ವಿರೋಧವಿದೆ ಎಂಬುದನ್ನು ಚಿತ್ರಿಸಲು ಭಿತ್ತಿ ಪತ್ರಗಳನ್ನು ತಯಾರು ಮಾಡಿಟ್ಟುಕೊಂಡಿದೆ ಎಂದು ಹೇಳಲಾಗುತ್ತಿದೆ. ಖಲಿಸ್ತಾನಿ ಸೇರಿದಂತೆ ಮೋದಿ ವಿರೋಧಿಗಳ ಗುಂಪನ್ನು ಕಾರ್ಯಕ್ರಮ ನಡೆಯು ಸ್ಥಳಕ್ಕೆ ಕರೆದುಕೊಂಡು ಹೋಗಲು ಐಎಸ್​ಐ ಬಸ್​ ವ್ಯವಸ್ಥೆಯೂ ಮಾಡಿದೆ.

ಭಾರತದ ವಿರುದ್ಧ ಐಎಸ್ಐ ಸಿದ್ಧಪಡಿಸಿದ ಪಿತೂರಿಯ ಪ್ರಕಾರ, ಅವರು ಅಮೆರಿಕದಲ್ಲಿ ಪ್ರಯಾಣಿಸುವ ರಸ್ತೆಯುದ್ದಕ್ಕೂ ಮೋದಿ ವಿರೋಧಿ ಪೋಸ್ಟರ್​​ಗಳನ್ನು ಹಾಕುವುದಕ್ಕೆ ಸಿದ್ಧತೆ ನಡೆಸಿಕೊಂಡಿದೆ. ಅಂಥ ಪೋಸ್ಟರ್​ಗಳನ್ನು ಈಗಲೇ ಮಾಡಿಟ್ಟುಕೊಂಡಿದೆ. ಭಾರತೀಯ ಸೇನೆಯ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ನಕಲಿ ಪ್ರಚಾರದ ಪೋಸ್ಟರ್​​ಗಳು ಸೇರಿದಂತೆ ಪ್ರತಿಭಟನೆ ಉತ್ತೇಜಿಸಲು #ModiNotWelcome ಹ್ಯಾಶ್​ಟ್ಯಾಗ್​ಗಳನ್ನೂ ಸೃಷ್ಟಿಸಿದೆ ಎಂದು ಹೇಳಲಾಗಿದೆ.

Exit mobile version