Site icon Vistara News

ಸ್ವಾಮಿ ನಿತ್ಯಾನಂದನ ‘ಕೈಲಾಸ’ ಜತೆ ಒಪ್ಪಂದ! ಮೂರ್ಖನಾದ ಪರಗ್ವೆ ಅಧಿಕಾರಿ ವಜಾ

Paraguayan official made an agreement with Nithyananda Kailasa country was fired

ಅಸುನ್ಸಿಯಾನ್, ಪರಗ್ವೆ: ಅಸ್ತಿತ್ವದಲ್ಲಿ ಇಲ್ಲದೇ ಇರುವ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ (United States of Kailasa) ಎಂಬ ದೇಶದ ಮೂಲಕ ಸಾಕಷ್ಟು ಜನರು ಮೂರ್ಖರನ್ನಾಗಿಸುತ್ತಿರುವ, ಅತ್ಯಾಚಾರ ಸೇರಿದಂತೆ ಸಾಕಷ್ಟು ಪ್ರಕರಣಗಳಲ್ಲಿ ಭಾರತದ ಪೊಲೀಸರಿಗೆ (Indian Police) ಬೇಕಾಗಿರುವ ಸ್ವಾಮಿ ನಿತ್ಯಾನಂದ (Swamy Nithyananda) ಹಾಕಿದ ಗಾಳಕ್ಕೆ ಈಗ ಪರಗ್ವೆಯ ಹಿರಿಯ ಅಧಿಕಾರಿಯೊಬ್ಬರು (Officer From Paraguay) ಕೆಲಸವನ್ನೇ ಕಳೆದುಕೊಂಡಿದ್ದಾರೆ. ಕೈಲಾಸ ದೇಶದೊಂದಿಗೆ ಅಧಿಕಾರ ತಿಳಿವಳಿಕಾ ಒಪ್ಪಂದಕ್ಕೆ ಸಹಿ ಹಾಕಿದ್ದರು. ಪರಿಣಾಮ ಅವರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಕರ್ನಾಟಕ, ಗುಜರಾತ್ ಸೇರಿದಂತೆ ದೇಶ ವಿವಿಧ ರಾಜ್ಯಗಳಲ್ಲಿ ಸ್ವಾಮಿ ನಿತ್ಯಾನಂದ ವಿರುದ್ದ ಪೊಲೀಸ್ ಕೇಸ್‌ಗಳಿವೆ.

ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸದ ಉದ್ದೇಶಿತ ಅಧಿಕಾರಿಗಳೊಂದಿಗೆ ಡಾಕ್ಯುಮೆಂಟ್‌ಗೆ ಸಹಿ ಹಾಕಿದ ನಂತರ ಕೃಷಿ ಸಚಿವರ ಸಿಬ್ಬಂದಿಯ ಮುಖ್ಯಸ್ಥ ಹುದ್ದೆಯಿಂದ ತನ್ನನ್ನು ವಜಾಗೊಳಿಸಲಾಗಿದೆ ಎಂದು ಅರ್ನಾಲ್ಡೊ ಚಮೊರೊ ಗುರುವಾರ ಸುದ್ದಿಗಾರರಿಗೆ ತಿಳಿಸಿದರು. ಕೈಲಾಸ ದೇಶವು ದಕ್ಷಿಣ ಅಮೆರಿಕದ ದ್ವೀಪ ಎಂದು ಪರುಗ್ವೆ ಅಧಿಕಾರಿಯನ್ನು ನಂಬಿಸಲಾಗಿತ್ತು.

ಪರುಗ್ವೆಗೆ ಸಹಾಯ ಮಾಡುವುದಕ್ಕಾಗಿ ಎಂದು ಕೈಲಾಸ ದೇಶ ಎಂದು ಹೇಳಿಕೊಳ್ಳುವವರು ಬಂದಿದ್ದರು. ಅವರು ಅನೇಕ ಯೋಜನೆಗಳನ್ನು ನಮ್ಮ ಮುಂದೆ ಹೇಳಿದರು. ನಾವು ಅವುಗಳನ್ನು ಕೇಳಿದೆವು. ಅಷ್ಟೇ ಆಗಿದ್ದು ಎಂದು ವಜಾಗೊಂಡ ಅಧಿಕಾರಿ ತಾನು ಹೇಗೆ ಮೂರ್ಖನಾದೆ ಎಂಬುದನ್ನು ಹೇಳಿಕೊಂಡಿದ್ದಾರೆ. ಬುಧವಾರವೇ ಅಧಿಕಾರಿಯನ್ನು ಕೆಲಸದಿಂದ ಕಿತ್ತು ಹಾಕಲಾಗಿದೆ. ಈ ನಕಲಿ ದೇಶದ ಅಧಿಕಾರಿಗಳು ತಮ್ಮ ಕೃಷಿ ಸಚಿವ ಕಾರ್ಲೋಸ್ ಗಿಮೆನೆಜ್ ಅವರನ್ನೂ ಭೇಟಿಯಾಗಿದ್ದರು. ಅವರ ಉದ್ದೇಶ ಏನಾಗಿತ್ತು ಎಂಬುದು ಗೊತ್ತಾಗಿಲ್ಲ ಎಂದು ವಜಾಗೊಂಡ ಅಧಿಕಾರಿ ತಿಳಿಸಿದ್ದಾರೆ.

ಉಭಯ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಸಂಬಂಧಗಳನ್ನು ಸಾಧಿಸುವ ಬಗ್ಗೆ ತಿಳಿವಳಿಕಾ ಪತ್ರಕ್ಕೆ ಎರಡೂ ಪಕ್ಷಗಳು ಸಹಿ ಹಾಕಿದ್ದವು. ಸಚಿವಾಲಯದ ಲೆಟರ್‌ಹೆಡ್ ಮತ್ತು ಅಧಿಕೃತ ಮುದ್ರೆಯೊಂದಿಗೆ ಪೂರ್ಣಗೊಂಡ ಒಪ್ಪಂದ ಪತ್ರದಲ್ಲಿ ಚಮೊರೊ ಅವರು, ಕೈಲಾಸ ಯುನೈಟೆಡ್ ಸ್ಟೇಟ್ಸ್‌ನ ಸಾರ್ವಭೌಮ ಗೌರವಾನ್ವಿತ ನಿತ್ಯಾನಂದ ಪರಮಶಿವಂ ಅವರನ್ನು ವಂದಿಸಿದ್ದಾರೆ ಮತ್ತು ಹಿಂದೂ ಧರ್ಮ, ಮಾನವೀಯತೆ ಮತ್ತು ಪರಾಗ್ವೆ ಗಣರಾಜ್ಯಕ್ಕೆ ಅವರ ಕೊಡುಗೆಗಳನ್ನು ಹೊಗಳಿದ್ದಾರೆ ಎಂದು ಬರೆಯಲಾಗಿದೆ.

ಪರಗ್ವೆ ಸರ್ಕಾರವು ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸದೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸುವುದನ್ನು ಸಕ್ರಿಯವಾಗಿ ಅನ್ವೇಷಿಸುತ್ತದೆ ಮತ್ತು ವಿಶ್ವಸಂಸ್ಥೆ ಸೇರಿದಂತೆ ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಸಾರ್ವಭೌಮ ರಾಜ್ಯವಾಗಿ ಅದರ ಪ್ರವೇಶವನ್ನು ಬೆಂಬಲಿಸುತ್ತದೆ ಎಂದು ಒಪ್ಪಂದದಲ್ಲಿ ತಿಳಿಸಲಾಗಿದೆ.

ಪರಗ್ವೆ ಮಾಧ್ಯಮಗಳಲ್ಲಿ ಈ ಕುರಿತು ಸುದ್ದಿ ಮಾಡಲಾಗಿದ್ದು, ತಮ್ಮ ದೇಶದ ಅಧಿಕಾರಿಯನ್ನು ಮೂರ್ಖರನ್ನಾಗಿಸಿರುವ ಪರಮಶಿವ ಎಂಬ ವ್ಯಕ್ತಿಯ ಭಾರತದ ಪ್ರಜೆಯಾಗಿದ್ದು, ಹಲವು ಅಪರಾಧಗಳಿಗಾಗಿ ಪೊಲೀಸರಿಗೆ ಬೇಕಾಗಿರುವ ವ್ಯಕ್ತಿಯಾಗಿದ್ದೇನೆ ಎಂದು ಬರೆದಿವೆ. ಪರಗ್ವೆ ಸರ್ಕಾರ ಈ ಒಪ್ಪಂದವು ಅಧಿಕೃತವಲ್ಲ ಎಂದು ಘೋಷಿಸಿದೆ.

ಈ ಸುದ್ದಿಯನ್ನೂ ಓದಿ: Swami Nithyananda: ಸ್ವಾಮಿ ನಿತ್ಯಾನಂದನ ‘ಕೈಲಾಸ ದೇಶ’ಕ್ಕೆ ನಟಿ ರಂಜಿತಾಳೇ ಪ್ರಧಾನಿ!

Exit mobile version