ನವದೆಹಲಿ: ವ್ಯಾಜ್ಯಗಳನ್ನು ಬಗೆಹರಿಸುವ ಕೋರ್ಟುಗಳು ಕೆಲವೊಮ್ಮೆ ವಿಚಿತ್ರ ಪ್ರಕರಣಗಳಿಗೆ ಸಾಕ್ಷಿಯಾಗುತ್ತವೆ. ಇಲ್ಲವೇ ವಿಲಕ್ಷಣ ಆದೇಶವನ್ನೂ, ತೀರ್ಪನ್ನು ನೀಡಿ ಗಮನ ಸೆಳೆಯುತ್ತವೆ. ಕೇರಳ ಹೈಕೋರ್ಟ್ (Kerala High Court) ಕೂಡ ಇಂಥ ವಿಲಕ್ಷಣ ಘಟನೆಗೆ ಸಾಕ್ಷಿಯಾಗಿದೆ. ಮೂರು ವರ್ಷದ ಮಗುವಿಗೆ ಯಾವ ಹೆಸರು ಇಡಬೇಕು ಎಂಬ ಕುರಿತು, ಆ ಮಗುವಿನ ವಿಚ್ಛೇದಿತ ಪೋಷಕರು (estranged parents) ಒಮ್ಮತಕ್ಕೆ ಬರಲು ಸಾಧ್ಯವಾಗದ್ದರಿಂದ, ಕೇರಳ ಹೈಕೋರ್ಟ್ ಮಗುವಿಗೆ ತಾನೇ ನಾಮಕರಣ ಮಾಡಿದೆ!(Kerala High Court Names).
ಕೇರಳ ಹೈಕೋರ್ಟ್‌ನ ಬೆಚು ಕುರಿಯನ್ ಥಾಮಸ್ ಅವರು ಕಳೆದ ತಿಂಗಳು ಆದೇಶ ನೀಡಿ, ಮಗುವಿನ ನಾಮಕರಣ ಮಾಡುವಾಗ ತಾಯಿಯ ಸೂಚಿಸಿದ ಹೆಸರಿಗೆ ಪ್ರಾಮುಖ್ಯತೆ ನೀಡಬೇಕು. ಹಾಗೆಯೇ, ಯಾವುದೇ ವಿವಾದಕ್ಕೆ ಆಸ್ಪದ ಉಂಟಾಗಬಾರದು ಎಂಬ ಕಾರಣಕ್ಕೆ ತಂದೆ ಸೂಚಿಸಿದ ಹೆಸರನ್ನು ಸೇರಿಸಬೇಕು ಎಂದು ಹೇಳಿತ್ತು. ಆದರೆ, ಪೋಷಕರಿಬ್ಬರೂ ಮಗಳಿಗೆ ನಾಮಕರಣ ಮಾಡುವ ವಿಷಯದಲ್ಲಿ ಕಚ್ಚಾಡುತ್ತಾ, ಹೆಸರಿನ ಕುರಿತು ಒಮ್ಮತಕ್ಕೆ ಬರಲು ನಿರಾಕರಿಸಿದರು.
ಬಾಲಕಿಗೆ ನೀಡಿದ ಜನನ ಪ್ರಮಾಣಪತ್ರದಲ್ಲಿ ಹೆಸರಿಲ್ಲದ ಕಾರಣ, ಆಕೆಯ ತಾಯಿ ಹೆಸರು ನೋಂದಾಯಿಸಲು ಪ್ರಯತ್ನಿಸಿದರು. ಆದರೆ, ಜನನ ಮತ್ತು ಮರಣ ನೋಂದಣಾಧಿಕಾರಿ ಹೆಸರು ನೋಂದಾಯಿಸಲು ತಂದೆ-ತಾಯಿ ಇಬ್ಬರೂ ಹಾಜರಿರಬೇಕು ಎಂದು ಒತ್ತಾಯಿಸಿದರು. ಆದರೆ, ನಾಮಕರಣಕ್ಕೆ ಸಂಬಂಧಿಸಿದಂತೆ ಪೋಷಕರ ಮಧ್ಯೆ ಒಮ್ಮತ ಏರ್ಪಡದ ಕಾರಣ ಕೇರಳ ಹೈಕೋರ್ಟ್‌ಗೆ ತಮ್ಮ ಸಮಸ್ಯೆಯನ್ನು ಅರುಹಿದರು. ತಂದೆ-ತಾಯಿ ಸಂಬಂಧ ಹದಗೆಡುತ್ತಿರುವ ಸಂದರ್ಭದಲ್ಲೇ ಮಗು, 2020 ಫೆ 12ರಂದು ಜನಿಸಿತ್ತು.
ಈ ಸುದ್ದಿಯನ್ನೂ ಓದಿ: Viral News: ನಟ್ಟು, ಬೋಲ್ಟು, ವಾಷರ್, ಕ್ಲಿಪ್; ಇದೆಲ್ಲ ಸಿಕ್ಕಿದ್ದು ಗ್ಯಾರೇಜ್‌ನಲ್ಲಲ್ಲ, ವ್ಯಕ್ತಿಯ ಹೊಟ್ಟೆಯಲ್ಲಿ!
ಹೆಸರನ್ನು ಆಯ್ಕೆಮಾಡುವಾಗ, ಮಗುವಿನ ಯೋಗಕ್ಷೇಮ, ಸಾಂಸ್ಕೃತಿಕ ಪರಿಗಣನೆಗಳು, ಪೋಷಕರ ಹಿತಾಸಕ್ತಿ ಮತ್ತು ಸಾಮಾಜಿಕ ಮಾನದಂಡಗಳಂತಹ ಅಂಶಗಳನ್ನು ನ್ಯಾಯಾಲಯವು ಪರಿಗಣಿಸಬಹುದು. ಮಗುವಿನ ಯೋಗಕ್ಷೇಮವೇ ಅಂತಿಮ ಉದ್ದೇಶವಾದ್ದರಿಂದ, ನ್ಯಾಯಾಲಯವು ನೀಡಿದ ಹೆಸರನ್ನು ಅಳವಡಿಸಿಕೊಳ್ಳಬೇಕು. ಒಟ್ಟಾರೆ ಸನ್ನಿವೇಶಗಳನ್ನು ಪರಿಗಣನೆಗೆ ತೆಗೆದುಕೊಂಡು, ಈ ನ್ಯಾಯಾಲಯವು ಮಗುವಿಗೆ ಹೆಸರನ್ನು ಆಯ್ಕೆ ಮಾಡಲು ತನ್ನ ಪೋಷಕರ ಅಧಿಕಾರ ವ್ಯಾಪ್ತಿಯನ್ನು ಚಲಾಯಿಸಲು ಮುಂದಾಗಿದೆ ಎಂದು ಕೇರಳ ಹೈಕೋರ್ಟ್ ಹೇಳಿದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.