Site icon Vistara News

Parliament Session 2024: ಇಂದಿನಿಂದ ಸಂಸತ್‌ ಅಧಿವೇಶನ; 10 ದಿನದ ಕಲಾಪದಲ್ಲಿ ಏನೇನು ನಡೆಯಲಿದೆ?

Parliament Session 2024

18th Lok Sabha Session Begins From July 24 Taking Oath By New Mps Including Modi

ಹೊಸದಿಲ್ಲಿ: ಇಂದಿನಿಂದ ಪ್ರಧಾನಿ ನರೇಂದ್ರ ಮೋದಿ(PM Narendra Modi) ನೇತೃತ್ವದ 3.0 ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕದ ಮೊದಲ ಅಧಿವೇಶನ(Parliament Session 2024) ಇಂದಿನಿಂದ ಆರಂಭವಾಗಲಿದೆ. 18ನೇ ಲೋಕಸಭೆ(Lok Sabha) ರಚನೆಯಾದ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದ್ದು, ಜು. 3ರವರೆಗೆ ನಡೆಯಲಿದೆ. ರಾಜ್ಯಸಭೆಯ ಅಧಿವೇಶನ ಜೂ. 27ರಿಂದ ಜು. 3ರವರೆಗೆ ನಡೆಯಲಿದೆ.

ಏನೇನು ನಡೆಯಲಿದೆ?

ಜೂ. 24, 25: ಹಂಗಾಮಿ ಸ್ಪೀಕರ್‌ ಪ್ರಮಾಣ, ಮೊದಲ ಹಂತದಲ್ಲಿ 264 ಮಂದಿಯ ಪ್ರಮಾಣ
ಜೂ. 26: ಉಳಿದ 264 ಮಂದಿಯ ಪ್ರಮಾಣ. ಸ್ಪೀಕರ್‌ ಚುನಾವಣೆ
ಜೂ. 27: ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ
ಜೂ. 28: ರಾಷ್ಟ್ರಪತಿ ಭಾಷಣಕ್ಕೆ ಧನ್ಯವಾದ ಸಮರ್ಪಿಸುವ ಗೊತ್ತುವಳಿ ಮೇಲೆ ಚರ್ಚೆ ಆರಂಭ
ಜು. 2 ಅಥವಾ ಜು. 3: ಚರ್ಚೆಗೆ ಪ್ರಧಾನಿ ಉತ್ತರ

ಪ್ರಧಾನಿ ಮೋದಿ ಪ್ರಮಾಣವಚನ

ಮೊದಲಿಗೆ ಪ್ರಧಾನಿ ಮೋದಿ ಲೋಕ ಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅನಂತರ ಸಂಪುಟದ ಸದಸ್ಯರು, ಇತರ ಚುನಾಯಿತ ಸದಸ್ಯರು ಪ್ರಮಾಣ ಸ್ವೀಕರಿಸಲಿದ್ದಾರೆ. ಮೊದಲ ದಿನ ಹಂಗಾಮಿ ಸ್ಪೀಕರ್‌ ಆಗಿ ನೇಮಕಗೊಂಡಿರುವ ಬಿಜೆಪಿಯ ಭತೃ ಹರಿ ಮಹತಾಬ್‌ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಒಟ್ಟು 543 ಲೋಕಸಭಾ ಸದಸ್ಯರ ಪೈಕಿ ಮೊದಲ ದಿನವಾಗಿರುವ ಸೋಮವಾರ 280 ಮಂದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜೂ. 25ರಂದು ಉಳಿದ 264 ಮಂದಿ ಸದಸ್ಯರು ಪ್ರಮಾಣ ಸ್ವೀಕರಿಸಲಿದ್ದಾರೆ.

ಹಂಗಾಮಿ ಸ್ಪೀಕರ್‌ ನೇಮಕ ವಿವಾದ

ಹಿರಿತನ ಕಡೆಗಣಿಸಿ ಹಂಗಾಮಿ ಸ್ಪೀಕರ್‌ ನೇಮಕ ಮಾಡಿದ ಕೇಂದ್ರ ಸರ್ಕಾರದ ನಡೆಗೆ ಕಾಂಗ್ರೆಸ್‌ ಆಕ್ಷೇಪಿಸಿದೆ. ಸಂಸದೀಯ ಸಂಪ್ರದಾಯ ಉಲ್ಲಂಘಿಘಿಸಿ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದೆ. ಎಂಟು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಕಾಂಗ್ರೆಸ್‌ನ ಕೊಡಿಕುನ್ನಿಲ್‌ ಸುರೇಶ್‌ ಬದಲಿಗೆ ಏಳು ಬಾರಿ ಸಂಸದರಾಗಿರುವ ಭರ್ತೃಹರಿ ಮಹ್ತಾಬ್‌ ಅವರನ್ನು ಹಂಗಾಮಿ ಸ್ಪೀಕರ್‌ ಆಗಿ ನೇಮಿಸಿರುವುದಕ್ಕೆ ಕಾಂಗ್ರೆಸ್‌ ಆಕ್ಷೇಪಿಸಿದೆ. ಇದಕ್ಕೆ ಸ್ಪಷ್ಟೀಕರಣ ನೀಡಿರುವ ಸಂಸದೀಯ ವ್ಯವಹಾರ ಸಚಿವ ಕಿರಣ್‌ ರಿಜಿಜು, ಭರ್ತೃಹರಿ ಮಹತಾಬ್‌ 1998 ರಿಂದ ಕಟಕ್‌ನಿಂದ ನಿರಂತರವಾಗಿ ಗೆಲ್ಲುತ್ತಿದ್ದಾರೆ. ಹೀಗಾಗಿ ಹಂಗಾಮಿ ಸ್ಪೀಕರ್‌ ಸ್ಥಾನಕ್ಕೆ ಆಯ್ಕೆ ಮಾಡಿದ್ದೇವೆ. ಕಾಂಗ್ರೆಸ್‌ನ ಕೆ. ಸುರೇಶ್‌ 1998 ಮತ್ತು 2004ರ ಚುನಾವಣೆಯಲ್ಲಿ ಸೋತಿದ್ದರು.

ಯಾರಾಗಲಿದ್ದಾರೆ ಹೊಸ ಸ್ಪೀಕರ್‌ ?

ಲೋಕಸಭೆ ಸ್ಪೀಕರ್‌ ಆಯ್ಕೆ ಬುಧವಾರ ನಡೆಯಲಿದೆ. ಎನ್‌ಡಿಎ ವತಿಯಿಂದ ಯಾರು ಸ್ಪೀಕರ್‌ ಆಗಲಿದ್ದಾರೆ ಎಂಬ ವಿಚಾರ ಈಗ ಕುತೂಹಲ ಕೆರಳಿಸಿದೆ. ಬಿಜೆಪಿ ಯಾರನ್ನು ಸ್ಪೀಕರ್‌ ಆಗಿ ಆಯ್ಕೆ ಮಾಡುತ್ತದೆಯೊ ಅವರನ್ನು ನಾವು ಬೆಂಬಲಿಸುತ್ತೇವೆ ಎಂದು ಜೆಡಿಯು ಈಗಾಗಲೇ ಹೇಳಿದೆ. ಟಿಡಿಪಿ ಕೂಡ ಸ್ಪೀಕರ್‌ ಆಯ್ಕೆಯಲ್ಲಿ ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದಿದೆ. ಸದ್ಯ ಆಂಧ್ರಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷೆ ದಗ್ಗುಬಾಟಿ ಪುರಂದೇಶ್ವರಿ ಮತ್ತು ಟಿಡಿಪಿ ಯಿಂದ ಮೊದಲ ಬಾರಿಯ ಸಂಸದ ಜಿ.ಎಂ. ಹರೀಶ್‌ ಬಾಲಯೋಗಿ ಅವರ ಹೆಸರು
ಸ್ಪೀಕರ್‌ ಸ್ಥಾನಕ್ಕೆ ಕೇಳಿಬರುತ್ತಿವೆ. ಸ್ಪೀಕರ್‌ ಸ್ಥಾನಕ್ಕೆ ಟಿಡಿಪಿ ತನ್ನ ಸದಸ್ಯನನ್ನು ಕಣಕ್ಕಿಳಿಸಿದರೆ ಐಎನ್‌ಡಿಐಎ ಒಕ್ಕೂಟದ ನಾಯಕರೆಲ್ಲ ಚರ್ಚಿಸಿ ಬೆಂಬಲ ಸೂಚಿಸುತ್ತೇವೆ ಎಂದು ಶಿವಸೇನೆ ಉದ್ಧವ್‌ ಬಣದ ನಾಯಕ ಸಂಜಯ್‌ ರಾವತ್‌ ಹೇಳಿದ್ದಾರೆ. ಜೂ. 26ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ

ಇದನ್ನೂ ಓದಿ: Manoj Kalyane: ಬಿಜೆಪಿ ಮುಖಂಡ, ಮಧ್ಯ ಪ್ರದೇಶ ಸಚಿವರ ಆಪ್ತನ ಹತ್ಯೆ; ಬೈಕ್‌ನಲ್ಲಿ ಬಂದು ಗುಂಡಿನ ಮಳೆಗೆರೆದ ದುಷ್ಕರ್ಮಿಗಳು

Exit mobile version