Site icon Vistara News

Parliament Session 2024: ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ರಾಹುಲ್‌ ಗಾಂಧಿ ಮಾಡಿದ್ದೇನು ಗೊತ್ತಾ? ವೈರಲಾಯ್ತು ವಿಡಿಯೋ

Parliament Session 2024

ಹೊಸದಿಲ್ಲಿ: 18ನೇ ಲೋಕಸಭೆಯ ಮೊದಲ ಅಧಿವೇಶನ(Parliament Session 2024)ದಲ್ಲೇ ಕೆಲವು ನಾಟಕೀಯ ಬೆಳವಣಿಗೆಗೆ ಸಂಸತ್‌ ಇಂದು ಸಾಕ್ಷಿಯಾಗಿತ್ತು. ಅಧಿವೇಶನದ ಮೊದಲ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ(PM Narendra Modi) ಸೇರಿದಂತೆ ಅನೇಕ ಸಂಸದರು ಪ್ರಮಾಣ ವಚನ ಸ್ವೀಕರಿಸಿದ್ದರು. ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕರಿಸಲೆಂದು ತಮ್ಮ ಸೀಟಿನಿಂದ ಮೇಲೇಳುತ್ತಿದ್ದಂತೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ(Rahul Gandhi) ಸಂವಿಧಾನ ಪುಸ್ತಕ ಕೈಯಲ್ಲಿ ಹಿಡಿದು ಸಂವಿಧಾನ ಸುದೀರ್ಘವಾಗಿ ಬಾಳಲಿ ಎಂದು ಘೋಷಣೆ ಕೂಗಿರುವ ಘಟನೆ ನಡೆಯಿತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ವೈರಲ್‌ ಆಗಿದೆ.

ಸಂಸತ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತೃಣಮೂಲ ನಾಯಕ ಕಲ್ಯಾಣ್ ಬ್ಯಾನರ್ಜಿ, ಸಮಾಜವಾದಿ ಪಕ್ಷದ ನಾಯಕರಾದ ಅಖಿಲೇಶ್ ಯಾದವ್ ಮತ್ತು ಅವಧೇಶ್ ಪ್ರಸಾದ್ ಮೊದಲ ಸಾಲಿನಲ್ಲಿ ವಿರೋಧ ಪಕ್ಷದ ಬೆಂಚ್‌ನಲ್ಲಿ ಕುಳಿತಿದ್ದರು. ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರಕ್ಕಾಗಿ ತಮ್ಮ ಸೀಟಿನಿಂದ ಎದ್ದೇಳುತ್ತಿದ್ದಂತೆ ಸಂವಿಧಾನ ಪುಸ್ತಕ ಹಿಡಿದು ಎದ್ದು ನಿಂತ ರಾಹುಲ್‌ ಗಾಂಧಿ, ನಾವು ಸಂವಿಧಾನವನ್ನು ರಕ್ಷಿಸುತ್ತೇವೆ. ಯಾವುದೇ ಕಾರಣಕ್ಕೂ ಸಂವಿಧಾನಕ್ಕೆ ಅಪಮಾನವಾಗುವುದಕ್ಕೆ ಇಂಡಿಯಾ ಒಕ್ಕೂಟ ಬಿಡುವುದಿಲ್ಲ ಎಂದು ಕೂಗಿ ಕೂಗಿ ಹೇಳಿದರು.

ಇದಾದ ಬಳಿಕ ಸಂಸತ್‌ ಹೊರಗೆ ಪತ್ರಕರ್ತರ ಜೊತೆಗೆ ಮಾತನಾಡಿದ ರಾಹುಲ್‌ ಗಾಂಧಿ, ಪ್ರಧಾನಿ ನರೇಂದ್ರ ಮತ್ತು ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಆಕ್ರೋಶ ವಾಗ್ದಾಳಿ ನಡೆಸಿದ್ದಾರೆ. ಸಂಸತ್‌ನಲ್ಲೂ ಸಂವಿಧಾನ ಪುಸ್ತಕ ತೋರಿಸುತ್ತಾ ಮಾತನ್ನು ಆರಂಭಿಸಿದ್ದ ರಾಹುಲ್‌, ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಸಂವಿಧಾನದ ಮೇಲೆ ದಾಳಿ ನಡೆಸುತ್ತಿದ್ದು, ಇದು ಎಂದಿಗೂ ಸ್ವೀಕಾರಾರ್ಹವಲ್ಲ ಎಂದು ಕಿಡಿ ಕಾರಿದ್ರು.

ಸಂವಿಧಾನವನ್ನು ಯಾವುದೇ ಶಕ್ತಿ ಮುಟ್ಟಲು ಸಾಧ್ಯವಿಲ್ಲ. ಸಂವಿಧಾನದ ಮೇಲೆ ಪ್ರಧಾನಿ ಮತ್ತು ಅಮಿತ್ ಶಾ ನಡೆಸುತ್ತಿರುವ ದಾಳಿ ನಮಗೆ ಸ್ವೀಕಾರಾರ್ಹವಲ್ಲ. ಇದನ್ನು ನಾವು ಮಾಡಲು ಬಿಡುವುದಿಲ್ಲ. ಹಾಗಾಗಿ ಪ್ರಮಾಣ ವಚನ ಸ್ವೀಕರಿಸುವಾಗ ನಾವು ಸಂವಿಧಾನವನ್ನು ಹಿಡಿದಿದ್ದೇವೆ. ನಮ್ಮ ಸಂದೇಶವು ಹಾದುಹೋಗುತ್ತಿದೆ ಮತ್ತು ಯಾವುದೇ ಶಕ್ತಿಯಿಂದ ಭಾರತದ ಸಂವಿಧಾನವನ್ನು ಮುಟ್ಟಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.

1975 ರಲ್ಲಿ ಹೇರಿದ ತುರ್ತು ಪರಿಸ್ಥಿತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ನಂತರ ರಾಹುಲ್ ಗಾಂಧಿಯವರ ಹೇಳಿಕೆಗಳು ಬಂದವು, ಇದು “ಸಂವಿಧಾನವನ್ನು ತಿರಸ್ಕರಿಸಿದಾಗ” ಪ್ರಜಾಪ್ರಭುತ್ವಕ್ಕೆ “ಕಪ್ಪು ಚುಕ್ಕೆ” ಎಂದರು.

“ನಾಳೆ ಜೂನ್ 25, ಇದು ಭಾರತದ ಪ್ರಜಾಪ್ರಭುತ್ವದ ಮೇಲೆ ಹಾಕಲಾದ ಕಳಂಕಕ್ಕೆ 50 ವರ್ಷಗಳನ್ನು ಸೂಚಿಸುತ್ತದೆ. ಭಾರತದ ಹೊಸ ಪೀಳಿಗೆಯು ಭಾರತದ ಸಂವಿಧಾನವನ್ನು ಸಂಪೂರ್ಣವಾಗಿ ತಿರಸ್ಕರಿಸಲಾಗಿದೆ, ಸಂವಿಧಾನದ ಪ್ರತಿಯೊಂದು ಭಾಗವನ್ನು ತುಂಡು ತುಂಡಾಗಿದೆ ಎಂಬುದನ್ನು ಎಂದಿಗೂ ಮರೆಯುವುದಿಲ್ಲ. ದೇಶವನ್ನು ಜೈಲಾಗಿ ಪರಿವರ್ತಿಸಲಾಯಿತು ಮತ್ತು ಪ್ರಜಾಪ್ರಭುತ್ವವನ್ನು ಸಂಪೂರ್ಣವಾಗಿ ಹತ್ತಿಕ್ಕಲಾಯಿತು” ಎಂದು ಹೊಸ ಸಂಸತ್ತಿನ ಅಧಿವೇಶನ ಪ್ರಾರಂಭವಾಗುವ ಮೊದಲು ಪಿಎಂ ಮೋದಿ ಹೇಳಿದರು.

ಇದನ್ನೂ ಓದಿ:Pralhad Joshi: ಮಾತೃಭಾಷೆ, ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಚಿವ ಪ್ರಲ್ಹಾದ್‌ ಜೋಶಿ

Exit mobile version