Site icon Vistara News

Parliament Sessions: “ಕಾಂಗ್ರೆಸ್‌ನದ್ದು ರಿಮೋಟ್‌ ಕಂಟ್ರೋಲ್‌ ಸರ್ಕಾರ”-ಸೋನಿಯಾ ವಿರುದ್ಧ ಮೋದಿ ವಾಗ್ಬಾಣ

Parliament Sessions

ಹೊಸದಿಲ್ಲಿ: ನಿನ್ನೆ ಲೋಕಸಭೆ ಅಧಿವೇಶನ(Parliament Sessions)ವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ(PM Narendra Modi) ಇಂದು ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆಗೆ ರಾಜ್ಯಸಭೆಯಲ್ಲಿ ಉತ್ತರಿಸಿದರು. ಲೋಕಸಭೆಯಲ್ಲಿ ವಿಪಕ್ಷ ನಾಯಕರ ರಾಹುಲ್‌ ಗಾಂಧಿ(Rahul Gandhi)ಯನ್ನು ಬಾಲ ಬುದ್ಧಿಯ ನಾಯಕ ಎಂದಿದ್ದ ಮೋದಿ ಇಂದು ಪರೋಕ್ಷವಾಗಿ ರಾಜ್ಯಸಭೆ ಸದಸ್ಯೆ, ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ(Sonia Gandhi)ಯನ್ನು ಕುಟುಕಿದರು. ಈ ವೇಳೆ ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷ ಮುಖಂಡರು ಸಭಾತ್ಯಾಗ ಮಾಡಿದರು.

ರಾಜ್ಯಸಭೆಯಲ್ಲಿ ಮಾತನಾಡುತ್ತಾ ಪ್ರಧಾನಿ ಮೋದಿ, ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.” ಇವರೆಲ್ಲರೂ ಸರ್ಕಾರ ರಿಮೋಟ್‌ ಕಂಟ್ರೋಲ್‌ನಿಂದ ನಡೆಯುವುದನ್ನೇ ಬಯಸುತ್ತಿದ್ದಾರೆ. ಸರ್ಕಾರ ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದು ಅವರಿಗೆ ಬೇಕಿಲ್ಲ. ಅವರಿಗೆ ಕೇವಲ ಅನುಮತಿಗಾಗಿ ಕಾಯುವುದು ಮಾತ್ರ ಗೊತ್ತು” ಎಂದು ಕಿಡಿಕಾರಿದರು. ಆ ಮೂಲಕ ಕಾಂಗ್ರೆಸ್‌ ಅಧಿಕಾರದಲ್ಲಿರುವಾಗ ಪ್ರಧಾನಿಯಾಗಿ ಮನಮೋಹನ್‌ ಸಿಂಗ್‌ ಇದ್ದರೂ ಎಲ್ಲಾ ನಿರ್ಧಾರಗಳು ಸೋನಿಯಾ ಗಾಂಧಿಯದ್ದೇ ಆಗಿತ್ತು ಎಂಬ ಬಿಜೆಪಿ ಆರೋಪವನ್ನು ಪುನರುಚ್ಛರಿಸಿದರು. ಈ ಹೇಳಿಕೆ ನೀಡುತ್ತಿರುವಾಗಲೇ ಪ್ರತಿಪಕ್ಷ ನಾಯಕರು ಗದ್ದಲ ಆರಂಭಿಸಿದರು.

ಪ್ರಧಾನಿ ಮಾತಿನ ಆಕ್ಷೇಪ ವ್ಯಕ್ತಪಡಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಸ್ಥಾನದಿಂದ ಎದ್ದು ನಿಲ್ಲುತ್ತಿದ್ದಂತೆ ಸಭಾಧ್ಯಕ್ಷ ಜಗದೀಪ್‌ ಧನ್ಕರ್‌ ಅನುಮತಿ ನೀಡಲಿಲ್ಲ. ಇದರಿಂದ ಕೋಪಗೊಂಡ ನಾಯಕರು ವಾಕ್‌ಔಟ್‌ ಮಾಡಿದರು. ಇನ್ನು ಪ್ರತಿಪಕ್ಷ ನಾಯಕರು ಸಭಾತ್ಯಾಗ ಮಾಡುತ್ತಿದ್ದಂತೆ ಟಾಂಗ್‌ ಕೊಟ್ಟ ಪ್ರಧಾನಿ ಸತ್ಯವನ್ನು ಎದುರಿಸುವ ತಾಕತ್ತು ಪ್ರತಿಪಕ್ಷಕ್ಕೆ ಇಲ್ಲ ಎಂದರು.

10 ವರ್ಷಗಳ ನಂತರ ಸರ್ಕಾರವು ಸತತವಾಗಿ ಮರಳಿದೆ ಮತ್ತು 6 ದಶಕಗಳ ನಂತರ ಭಾರತೀಯ ಪ್ರಜಾಪ್ರಭುತ್ವದಲ್ಲಿ ಇದು ಸಂಭವಿಸಿದೆ ಎಂದು ನನಗೆ ತಿಳಿದಿದೆ, ಈ ಘಟನೆ ಅಸಾಮಾನ್ಯ ಘಟನೆಯಾಗಿದೆ. ದೇಶದ ಜನ ಸಾಧನೆಗೆ ಆದ್ಯತೆ ನೀಡಿದ್ದಾರೆ. ಆದರೆ ಕೆಲವರಿಗೆ ಸಾರ್ವಜನಿಕ ವ್ಯವಸ್ಥೆ ಅರ್ಥವಾಗಲಿಲ್ಲ. ದೇಶದ ಜನತೆ ವಿಶ್ವಾಸದ ರಾಜಕಾರಣವನ್ನು ಅಳವಡಿಸಿಕೊಂಡಿದ್ದಾರೆ. ಭವಿಷ್ಯದ ನಿರ್ಣಯಗಳಿಗಾಗಿ ಸಾರ್ವಜನಿಕರು ನಮ್ಮತ್ತ ಮುಖ ಮಾಡಿದ್ದಾರೆ. ನಮ್ಮ ಸರ್ಕಾರ 10 ವರ್ಷ ನಡೆದಿದೆ, ಇನ್ನೂ 20 ವರ್ಷ ಬಾಕಿ ಇದೆ ಎಂದಿದ್ದಾರೆ.

ಇದನ್ನೂ ಓದಿ: Sudha Murty: ಕರ್ನಾಟಕ ಸೇರಿ ದೇಶದ ಪ್ರವಾಸೋದ್ಯಮಕ್ಕೆ ಒತ್ತು ನೀಡಿ; ರಾಜ್ಯಸಭೆಯಲ್ಲಿ ಸುಧಾಮೂರ್ತಿ ಮೊದಲ ಭಾಷಣ!

Exit mobile version