Site icon Vistara News

Parliament Sessions: ಮೋದಿ ಆತ್ಮದ ಜೊತೆ ಪರಮಾತ್ಮನ ಸಂವಹನ; ರಾಹುಲ್‌ ಗಾಂಧಿ ವ್ಯಂಗ್ಯ

Parliament Sessions

ಹೊಸದಿಲ್ಲಿ: ಇಂದು ಲೋಕಸಭೆ ಅಧಿವೇಶನ(Parliament Sessions)ದಲ್ಲಿ ಆಡಳಿತ-ವಿಪಕ್ಷ ನಾಯಕರ ನಡುವಿನ ಕೋಲಾಹಲಕ್ಕೆ ಸಾಕ್ಷಿಯಾಗಿತ್ತು. ರಾಹುಲ್‌ ಗಾಂಧಿ(Rahul Gandhi) ಹಿಂದೂ ಹಿಂಸಾಚಾರ ಹೇಳಿಕೆ, ಶಿವನ ಫೋಟೋ ಪ್ರದರ್ಶನ, ನೀಟ್‌ ಚರ್ಚೆ ಇವೆಲ್ಲವೂ ಭಾರೀ ಗದ್ದಲವನ್ನೇ ಸೃಷ್ಟಿಸಿತ್ತು. ಪ್ರಧಾನಿ ನರೇಂದ್ರ ಮೋದಿ(PM Narendra Modi) ಹಾಗೂ ಬಿಜೆಪಿ ವಿರುದ್ಧ ವಾಕ್ಸಮರಕ್ಕೆ ಸಜ್ಜಾಗಿಯೇ ಬಂದಿದ್ದ ರಾಹುಲ್‌ ಗಾಂಧಿ, ಹಲವು ವಿಚಾರಗಳನ್ನು ಪ್ರಸ್ತಾಪಿಸಿ ನೇರವಾಗಿ ತಿವಿದರು. ಇದರಿಂದ ಸದನ ರಣರಂಗವಾಗಿತ್ತು. ಹಾಗಿದ್ದರೆ ಇಂದು ಕಲಾಪದಲ್ಲಿ ರಾಹುಲ್‌ ಗಾಂಧಿ ವಾಗ್ದಾಳಿ ಹೇಗಿತ್ತು? ಮತ್ತು ಅದಕ್ಕೆ ಬಿಜೆಪಿ ನಾಯಕರ ತಿರುಗೇಟು ಯಾವ ರೀತಿ ಇತ್ತು ಎಂಬುದನ್ನು ನೋಡೋಣ.

ಮೋದಿ ಜೊತೆ ಪರಮಾತ್ಮನ ಸಂವಹನ

ಕೆಲವು ತಿಂಗಳ ಹಿಂದೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಧ್ಯಮ ಸಂದರ್ಶನದಲ್ಲಿ ಮಾತನಾಡುತ್ತಾ ತಾವು ದೇವರ ಇಚ್ಛೆಯ ಮೇರೆಗೆ ಭೂಮಿಗೆ ಬಂದಿರೋದಾಗಿ ಹೇಳಿ ಸುದ್ದಿಯಾಗಿದ್ರು. ಇದೀಗ ಇದೇ ವಿಚಾರವನ್ನು ಪ್ರಸ್ತಾಪಿಸಿದ ರಾಹುಲ್‌, ಮೋದಿ ಸಾಮಾನ್ಯ ವ್ಯಕ್ಯಿಯಲ್ಲ. ದೇವರ ಆದೇಶದ ಮೇರೆಗೆ ಅವರು ಕೆಲಸ ಮಾಡುವವರು. ಅವರ ಆತ್ಮದ ಜೊತೆ ಪರಮಾತ್ಮ ಸಂವಹನ ನಡೆಸುತ್ತಾನೆ. ಪರಮಾತ್ಮನ ಸೂಚನೆಯ ಮೇರೆಗೆ ಅವರು ನೋಟು ಅಮಾನೀಕರದಂತಹ ಮಹತ್ವದ ನಿರ್ಧಾರವನ್ನು ದಿಢೀರ್‌ ಅಂತ ಘೋಷಿಸುತ್ತಾರೆ. ದೇವರ ಆದೇಶದ ಮೇರೆಗೇ ಬಡವರ ಬದಲಿಗೆ ಅಂಬಾನಿ, ಅದಾನಿಯಂತಹ ಉದ್ಯಮಿಗಳ ಏಳಿಗೆಗೆ ಶ್ರಮಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

“ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಯ ದಿನ ಅದಾನಿ ಅಂಬಾನಿಯವರನ್ನು ಆಮಂತ್ರಿಸಲಾಗಿತ್ತು. ಆದರೆ, ಅಲ್ಲಿನ ಸ್ಥಳೀಯ ಜನರನ್ನು ದೂರವಿಡಲಾಗಿತ್ತು. ಆದರೆ, ಲೋಕಸಭಾ ಚುನಾವಣೆಯಲ್ಲಿ ಅಲ್ಲಿನ ಮತದಾರರು ಬಿಜೆಪಿಗೆ ಸೂಕ್ತ ಪಾಠ ಕಲಿಸಿದ್ದಾರೆ” ಎಂದು ರಾಹುಲ್ ಗಾಂಧಿ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿಯು ಸಂವಿಧಾನ ಮತ್ತು ಭಾರತದ ಮೂಲಭೂತ ಕಲ್ಪನೆಯ ಮೇಲೆ ವ್ಯವಸ್ಥಿತ ದಾಳಿಗಳನ್ನು ನಡೆಸುತ್ತಿದೆ ಎಂದು ಆರೋಪಿಸಿದ ರಾಹುಲ್ ಗಾಂಧಿ, ಆಡಳಿತ ಪಕ್ಷವು ಪ್ರಸ್ತಾಪಿಸಿದ ವಿಚಾರಗಳನ್ನು ಲಕ್ಷಾಂತರ ಜನರು ವಿರೋಧಿಸಿದ್ದಾರೆ. ‘ಪ್ರಧಾನಿ ಮೋದಿಯವರ ಆದೇಶದ ಮೇರೆಗೆ ನನ್ನ ಮೇಲೆ ದಾಳಿ ನಡೆದಿದೆ. 20ಕ್ಕೂ ಹೆಚ್ಚು ಪ್ರಕರಣಗಳು ನನ್ನ ವಿರುದ್ಧ ದಾಖಲಾಗಿವೆ. ನನ್ನ ಮನೆಯನ್ನು ಕಿತ್ತುಕೊಳ್ಳಲಾಯಿತು, ಇ.ಡಿ 55 ಗಂಟೆಗಳ ವಿಚಾರಣೆ ನಡೆಸಿತು ಎಂದು ರಾಹುಲ್ ಗಾಂಧಿ ಆರೋಪ ವ್ಯಕ್ತಪಡಿಸಿದರು.

ಅಗ್ನಿಪಥ್ ಯೋಜನೆಯು ಪ್ರಧಾನಿ ಮೋದಿಯ ಕೂಸು. ಆದರೆ ಸಶಸ್ತ್ರ ಪಡೆಗಳದ್ದಲ್ಲ. ನಮ್ಮ ಸರ್ಕಾರ ಬಂದಾಗ ಅಗ್ನಿಪಥ್ ಯೋಜನೆಯನ್ನು ರದ್ದುಗೊಳಿಸುತ್ತೇವೆ. ಏಕೆಂದರೆ ಇದು ಸಶಸ್ತ್ರ ಪಡೆಗಳು ಮತ್ತು ದೇಶಭಕ್ತಿಗೆ ವಿರುದ್ಧವಾಗಿದೆ. ಬಿಜೆಪಿಯ ನೀತಿಗಳು, ರಾಜಕಾರಣವು ಮಣಿಪುರವನ್ನು ಭಸ್ಮ ಮಾಡಿದೆ, ನಾಗರಿಕ ಯುದ್ಧಕ್ಕೆ ನೂಕಿದೆ. ಆದರೂ ಪ್ರಧಾನಿ ಮೋದಿ ರಾಜ್ಯಕ್ಕೆ ಈವರೆಗೂ ಭೇಟಿ ನೀಡಿಲ್ಲ.

“ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಯ ದಿನ ಅದಾನಿ ಅಂಬಾನಿಯವರನ್ನು ಆಮಂತ್ರಿಸಲಾಗಿತ್ತು. ಆದರೆ, ಅಲ್ಲಿನ ಸ್ಥಳೀಯ ಜನರನ್ನು ದೂರವಿಡಲಾಗಿತ್ತು. ಆದರೆ, ಲೋಕಸಭಾ ಚುನಾವಣೆಯಲ್ಲಿ ಅಲ್ಲಿನ ಮತದಾರರು ಬಿಜೆಪಿಗೆ ಸೂಕ್ತ ಪಾಠ ಕಲಿಸಿದ್ದಾರೆ” ಎಂದು ರಾಹುಲ್ ಗಾಂಧಿ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದರು

ಬಿಜೆಪಿಯು ಸಂವಿಧಾನ ಮತ್ತು ಭಾರತದ ಮೂಲಭೂತ ಕಲ್ಪನೆಯ ಮೇಲೆ ವ್ಯವಸ್ಥಿತ ದಾಳಿಗಳನ್ನು ನಡೆಸುತ್ತಿದೆ ಎಂದು ಆರೋಪಿಸಿದ ರಾಹುಲ್ ಗಾಂಧಿ, ಆಡಳಿತ ಪಕ್ಷವು ಪ್ರಸ್ತಾಪಿಸಿದ ವಿಚಾರಗಳನ್ನು ಲಕ್ಷಾಂತರ ಜನರು ವಿರೋಧಿಸಿದ್ದಾರೆ. ‘ಪ್ರಧಾನಿ ಮೋದಿಯವರ ಆದೇಶದ ಮೇರೆಗೆ ನನ್ನ ಮೇಲೆ ದಾಳಿ ನಡೆದಿದೆ. 20ಕ್ಕೂ ಹೆಚ್ಚು ಪ್ರಕರಣಗಳು ನನ್ನ ವಿರುದ್ಧ ದಾಖಲಾಗಿವೆ. ನನ್ನ ಮನೆಯನ್ನು ಕಿತ್ತುಕೊಳ್ಳಲಾಯಿತು, ಇ.ಡಿ 55 ಗಂಟೆಗಳ ವಿಚಾರಣೆ ನಡೆಸಿತು ಎಂದು ರಾಹುಲ್ ಗಾಂಧಿ ಆರೋಪ ವ್ಯಕ್ತಪಡಿಸಿದರು.

ಹಿಂದೂಗಳು ಹಿಂಸಾವಾದಿಗಳು

ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳ ವಿರುದ್ಧ ವಾಗ್ದಾಳಿ ಆರಂಭಿಸಿದ ರಾಹುಲ್‌, ಹಿಂದೂ ಧರ್ಮ ಹಾಗೂ ನಮ್ಮ ಅನೇಕ ಹಿಂದೂ ಮಹಾಪುರುಷರು ಅಹಿಂಸೆಯನ್ನು ಪ್ರತಿಪಾದಿಸುತ್ತಾರೆ. ಜೀಸಸ್‌ ಕ್ರೈಸ್ಟ್‌ ಕೂಡ ಅಹಿಂಸೆಯನ್ನೇ ಪ್ರತಿಪಾದಿಸುತ್ತಾನೆ. ಸ್ವತಃ ಕೈಯಲ್ಲಿ ತ್ರಿಶೂಲ ಹಿಡಿದಿರುವ ಮಹಾಶಿವನೂ ಅಹಿಂಸೆಯನ್ನೇ ಹೇಳುತ್ತಾನೆ. ಆದರೆ ದಿನದ 24 ಗಂಟೆ ಹಿಂದೂಗಳೆಂದು ಹೇಳುತ್ತಾ ತಿರುಗಾಡುವವರು ಹಿಂಸೆ, ಶತ್ರುತ್ವ, ಅಸತ್ಯವನ್ನೇ ಹೇಳುತ್ತಿದ್ದಾರೆ. ನೀವು ಹಿಂದೂಗಳೇ ಅಲ್ಲ ಎಂದು ಕಿಡಿ ಕಾರಿದರು.

ಪ್ರಧಾನಿ ಮೋದಿ ಆಕ್ಷೇಪ

ಇನ್ನು ರಾಹುಲ್‌ ಮಾತು ಪುರ್ಣಗೊಳ್ಳುವ ಮುನ್ನವೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಆಡಳಿತ ಪಕ್ಷ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎಲ್ಲಾ ಹಿಂದೂಗಳನ್ನು ಹಿಂಸಾವಾದಿಗಳು ಹೇಳುತ್ತಿರುವುದು ತಪ್ಪು. ಹಿಂದೂಗ ಸಮುದಾಯವನ್ನು ಹಿಂಸಾವಾದಿಗಳೆಂದು ಕರೆಯುತ್ತಿರುವುದು ಗಂಭೀರವಾದ ಸಂಗತಿ ಎಂದಿದ್ದಾರೆ. ಇದಕ್ಕೆ ವಿರೋದ ವ್ಯಕ್ತಪಡಿಸಿದ ರಾಹುಲ್‌ ಕೇವಲ ಬಿಜೆಪಿ, ಆರ್‌ಎಸ್‌ಎಸ್‌ ನವರನ್ನು “ನಾನು ಉಲ್ಲೇಖಿಸಿ ಹೇಳಿರುವುದೇ ಹೊರತು ಪೂರ್ತಿ ಹಿಂದೂ ಸಮಾಜವನ್ನಲ್ಲ. ಪ್ರಧಾನಿ ಹೇಳಿಕೆಯನ್ನು ತಪ್ಪಾಗಿ ಅರ್ಥೈಸುತ್ತಿದ್ದಾರೆʼʼ ಎಂದು ಹೇಳಿದರು

ಶಿವನ ಫೋಟೋ ತೋರಿಸಿದಕ್ಕೆ ಸ್ಫೀಕರ್‌ ಆಕ್ಷೇಪ

ತಮ್ಮ ಭಾಷಣದ ಸಮಯದಲ್ಲಿ ರಾಹುಲ್‌ ಗಾಂಧಿ ಶಿವ ದೇವರ ಚಿತ್ರವನ್ನು ತೋರಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್‌ ಓಂ ಬಿರ್ಲಾ, ಸದನದಲ್ಲಿ ಫಲಕಗಳನ್ನು ಪ್ರದರ್ಶನ ಮಾಡಲು ಯಾವುದೇ ನಿಯಮಗಳು ಅನುಮತಿ ನೀಡುವುದಿಲ್ಲ ಎನ್ನುವುದನ್ನು ನೀವು ತಿಳಿದುಕೊಂಡಿರಬೇಕು ಎಂದು ಹೇಳಿದರು. ಇಸ್ಲಾಂ ಮತ್ತು ಸಿಖ್ ಧರ್ಮ ಸೇರಿದಂತೆ ಎಲ್ಲಾ ಧರ್ಮಗಳು ಧೈರ್ಯ ಮತ್ತು ನಿರ್ಭೀತರಾಗಿರುವುದರ ಮಹತ್ವವನ್ನು ಒತ್ತಿಹೇಳುತ್ತವೆ ಎಂದು ರಾಹುಲ್‌ ಗಾಂಧಿ ಹೇಳಿದರು.. ಎಲ್ಲಾ ಧರ್ಮಗಳು ಧೈರ್ಯದ ಬಗ್ಗೆ ಮಾತನಾಡುತ್ತವೆ, ಇಸ್ಲಾಂ, ಕ್ರಿಶ್ಚಿಯನ್ ಧರ್ಮ, ಬೌದ್ಧ, ಜೈನ ಮತ್ತು ಸಿಖ್ ಧರ್ಮಗಳನ್ನು ಉಲ್ಲೇಖಿಸಿ ನಿರ್ಭಯತೆಯ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತವೆ ಎಂದು ಕಾಂಗ್ರೆಸ್ ನಾಯಕ ಒತ್ತಿ ಹೇಳಿದರು.

ಇದನ್ನೂ ಓದಿ:Money Guide: ವಿದೇಶ ಪ್ರವಾಸಕ್ಕೆ ಮುಂದಾಗಿದ್ದೀರಾ? ಅತ್ಯುತ್ತಮ ಕೊಡುಗೆ ನೀಡುವ ಈ ಅಂತಾರಾಷ್ಟ್ರೀಯ ಡೆಬಿಟ್ ಕಾರ್ಡ್‌ ಬಗ್ಗೆ ತಿಳಿಯಿರಿ

Exit mobile version