Site icon Vistara News

Parliament Sessions: ಸೆಂಗೋಲ್‌ ಮೇಲೆ ಪ್ರತಿಪಕ್ಷಗಳ ಕಣ್ಣು; ಸಂಸತ್‌ನಲ್ಲಿ ಭಾರೀ ಕೋಲಾಹಲ

Parliament Sessions

ಹೊಸದಿಲ್ಲಿ: 18ನೇ ಲೋಕಸಭಾ ಅಧಿವೇಶನ(Parliament Sessions)ದಲ್ಲಿ ಇಂದು ಸಭಾಧ್ಯಕ್ಷರ ಪೀಠದ ಬಳಿ ಇರುವ ಸೆಂಗೋಲ್‌(Sengol) ರಾಜದಂಡ ವಿಚಾರ ಚರ್ಚೆಗೆ ಗ್ರಾಸವಾಯಿತು. ಸೆಂಗೋಲ್‌(Sengol) ಅನ್ನು ಬದಲಿಸುವಂತೆ ಪ್ರತಿಪಕ್ಷಗಳು ಪಟ್ಟು ಹಿಡಿದಿವೆ. ಸಮಾಜವಾದಿ ಪಕ್ಷದ ಸಂಸದ ಆರ್‌.ಕೆ. ಚೌಧರಿ ಈ ಬಗ್ಗೆ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದು, ಸೆಂಗೋಲ್‌ ಬದಲಾಗಿ ಸಂವಿಧಾನದ ಪ್ರತಿಯನ್ನು ಇಡುವಂತೆ ಒತ್ತಾಯಿಸಿದ್ದಾರೆ.

ಸಂವಿಧಾನದ ಅಂಗೀಕಾರವು ದೇಶದಲ್ಲಿ ಪ್ರಜಾಪ್ರಭುತ್ವದ ಆರಂಭವನ್ನು ಗುರುತಿಸಿತು ಮತ್ತು ಸಂವಿಧಾನವು ಅದರ ಸಂಕೇತವಾಗಿದೆ. ಬಿಜೆಪಿ ಸರ್ಕಾರ ತನ್ನ ಕೊನೆಯ ಅವಧಿಯಲ್ಲಿ ಸ್ಪೀಕರ್ ಕುರ್ಚಿಯ ಪಕ್ಕದಲ್ಲಿ ‘ಸೆಂಗೊಲ್’ ಅನ್ನು ಸ್ಥಾಪಿಸಿತು. ಸೆಂಗೋಲ್ ಎಂಬುದು ತಮಿಳು ಪದವಾಗಿದ್ದು, ಇದರ ಅರ್ಥ ರಾಜದಂಡ. ರಾಜದಂಡ ಎಂದರೆ ರಾಜನ ಕೋಲು ಎಂದೂ ಅರ್ಥ. ರಾಜಕಾಲದ ನಂತರ ನಾವು ಸ್ವತಂತ್ರರಾಗಿದ್ದೇವೆ. ಈಗ, ಅರ್ಹ ಮತದಾರರಾಗಿರುವ ಪ್ರತಿಯೊಬ್ಬ ಪುರುಷ ಮತ್ತು ಮಹಿಳೆ ಈ ದೇಶವನ್ನು ನಡೆಸಲು ಸರ್ಕಾರವನ್ನು ಆಯ್ಕೆ ಮಾಡುತ್ತಾರೆ. ಹಾಗಾದರೆ ದೇಶವು ಸಂವಿಧಾನದಿಂದ ನಡೆಯುತ್ತದೋ? ಅಥವಾ ರಾಜದಂಡದಿಂದ ನಡೆಸಲ್ಪಡುತ್ತದೆಯೇ? ‘ಸೆಂಗೊಲ್’ ಬದಲಿಗೆ ಪ್ರಜಾಪ್ರಭುತ್ವವನ್ನು ಉಳಿಸಲು ಸಂವಿಧಾನದ ಪ್ರತಿಯನ್ನು ಇರಿಸಬೇಕೆಂದು ಒತ್ತಾಯಿಸಿದರು.

ಈ ಸೆಂಗೋಲ್‌ ಅನ್ನು ಸ್ಥಾಪಿಸುವಾಗ ಪ್ರಧಾನಿ ಮೋದಿ ತಲೆಬಾಗಿ ನಮಸ್ಕರಿಸಿದ್ದರು. ಆದರೆ ಈ ಬಾರಿ ಪ್ರಮಾಣ ವಚನ ಸ್ವೀಕರಿಸುವಾಗ ಅದಕ್ಕೆ ನಮಸ್ಕರಿಸುವುದನ್ನು ಮರೆತಿದ್ದಾರೆ. ನಾವೇ ಇದೀಗ ಅವರಿಗೆ ಇದನ್ನು ನೆನಪಿಸಬೇಕಾಗಿದೆ ಎಂದು ಚೌಧರಿ ಕುಟುಕಿದರು. ಚೌಧರಿ ಬೇಡಿಕೆಗೆ ಹಿರಿಯ ಕಾಂಗ್ರೆಸ್‌ ಮುಖಂಡ ಮಾಣಿಕ್ಯಂ, ಆರ್‌ಜೆಡಿ ಸಂಸದರು ಹಾಗೂ ಲಾಲೂ ಪ್ರಸಾದ್‌ ಪುತ್ರಿ ಮೀಸಾ ಭಾರತಿ ಬೆಂಬಲ ಸೂಚಿಸಿದ್ದಾರೆ.

ಬಿಜೆಪಿ ತಿರುಗೇಟು

ಪ್ರತಿಪಕ್ಷಗಳ ಆರೋಪಕ್ಕೆ ಬಿಜೆಪಿ ಸೇರಿದಂತೆ ಎನ್‌ಡಿಎ ನಾಯಕರು ತಿರುಗೇಟು ಕೊಟ್ಟಿದ್ದಾರೆ. ಸಮಾಜವಾದಿ ಪಕ್ಷವು ಮೊದಲು ರಾಮಚರಿತಮಾನಸ್ ಮತ್ತು ಈಗ ಭಾರತೀಯ ಸಂಸ್ಕೃತಿಯ ಭಾಗವಾಗಿರುವ ಮತ್ತು ವಿಶೇಷವಾಗಿ ತಮಿಳು ಸಂಸ್ಕೃತಿಯ ಭಾಗವಾಗಿರುವ ಸೆಂಗೋಲ್ ಮೇಲೆ ದಾಳಿ ಮತ್ತು ನಿಂದನೆ ಮಾಡಿದೆ. ಸೆಂಗೋಲ್‌ನ ಈ ಅವಮಾನವನ್ನು ಅವರು ಬೆಂಬಲಿಸುತ್ತಾರೆಯೇ ಎಂಬುದನ್ನು ಡಿಎಂಕೆ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Hijab Ban: ತರಗತಿಯಲ್ಲಿ ಹಿಜಾಬ್‌, ಬುರ್ಖಾ ನಿಷೇಧ; ಕಾಲೇಜು ಆದೇಶ ಎತ್ತಿಹಿಡಿದ ಹೈಕೋರ್ಟ್‌

Exit mobile version