Site icon Vistara News

Train Accident : ಆಂಧ್ರದಲ್ಲಿ ಎಕ್ಸ್​ಪ್ರೆಸ್​- ಪ್ಯಾಸೆಂಜರ್​ ರೈಲುಗಳ ನಡುವೆ ಅಪಘಾತ, 3 ಸಾವು

Indian Railway

ನವದೆಹಲಿ: ಆಂಧ್ರಪ್ರದೇಶದಲ್ಲಿ ಎಕ್ಸ್​ಪ್ರೆಸ್​ ರೈಲೊಂದು ನಿಂತಿದ್ದ ಪ್ಯಾಸೆಂಜರ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ (Train Accident) ಎಂಬುದಾಗಿ ವರದಿಯಾಗಿದೆ. ಪ್ಯಾಸೆಂಜರ್ ರೈಲು ವಿಶಾಖಪಟ್ಟಣಂನಿಂದ ರಾಯಗಡಕ್ಕೆ ಹೋಗುತ್ತಿತ್ತು. ಓವರ್ ಹೆಡ್ ಕೇಬಲ್ ಸಮಸ್ಯೆಯಿಂದಾಗಿ ಅದು ಏಕಾಏಕಿ ನಿಂತಿತ್ತು. ಎಕ್ಸ್​ಪ್ರೆಸ್ ರೈಲು ಅದಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ವಿಶಾಖಪಟ್ಟಣಂ-ಪಲಾಸ ಪ್ಯಾಸೆಂಜರ್ ರೈಲು ಮತ್ತು ವಿಶಾಖಪಟ್ಟಣಂ-ರಗಡ ಪ್ಯಾಸೆಂಜರ್ ರೈಲು ನಡುವೆ ಡಿಕ್ಕಿಯಾಗಿದೆ. ಅಪಘಾತಕ್ಕೆ 3 ಬೋಗಿಗಳು ಒಳಗಾಗಿವೆ. ಮೂರು ಮಂದಿ ಮೃತಪಟ್ಟಯ 10 ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಸ್ಥಳೀಯ ಆಡಳಿತ ಮತ್ತು ಎನ್​​ಡಿಆರ್​​ಎಫ್​ ಸಹಾಯ ಮತ್ತು ಆಂಬ್ಯುಲೆನ್ಸ್​ಗಳಿಗಾಗಿ ಮಾಹಿತಿ ನೀಡಲಾಗಿದೆ. ಅಪಘಾತ ಪರಿಹಾರ ರೈಲುಗಳು ಸ್ಥಳಕ್ಕೆ ತಲುಪಿವೆ ಎಂದು ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ತಕ್ಷಣದ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ವಿಜಯನಗರಂನ ಹತ್ತಿರದ ಜಿಲ್ಲೆಗಳಾದ ವಿಶಾಖಪಟ್ಟಣಂ ಮತ್ತು ಅನಕಪಲ್ಲಿಯಿಂದ ಸಾಧ್ಯವಾದಷ್ಟು ಆಂಬ್ಯುಲೆನ್ಸ್​ಗಳನ್ನು ಕಳುಹಿಸಲು ಆದೇಶಿಸಿದ್ದಾರೆ. ಉತ್ತಮ ವೈದ್ಯಕೀಯ ಆರೈಕೆಯನ್ನು ಒದಗಿಸಲು ಹತ್ತಿರದ ಆಸ್ಪತ್ರೆಗಳಲ್ಲಿ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡುವಂತೆ ಆದೇಶಿಸಿದ್ದಾರೆ ಎಂದು ಸಿಎಂ ಕಚೇರಿ ಹೇಳಿಕೆ ನೀಡಿದೆ.

ಇದನ್ನೂ ಓದಿ : ತಮಿಳುನಾಡಿನಲ್ಲಿ ರೈಲು ಹರಿದು ಕರ್ನಾಟಕದ ಮೂವರು ಮಕ್ಕಳ ಸಾವು; ಶ್ರವಣ ದೋಷ ಕಾರಣ

ಅಪಘಾತದಲ್ಲಿ ಸಂಭವಿಸಿದ ಜೀವಹಾನಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ರೆಡ್ಡಿ ಸಂತಾಪ ಸೂಚಿಸಿದ್ದಾರೆ. ವಿಜಯನಗರಂ ಜಿಲ್ಲೆಯ ಕಾಂತಕಪಲ್ಲಿ ರೈಲು ಅಪಘಾತ ಘಟನೆಯ ಬಗ್ಗೆ ಸಿಎಂ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ತ್ವರಿತ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ಗಾಯಗೊಂಡವರಿಗೆ ತ್ವರಿತ ವೈದ್ಯಕೀಯ ಸೇವೆಗಳು ಸಿಗುವಂತೆ ನೋಡಿಕೊಳ್ಳಲು ಅವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.

“ತ್ವರಿತ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ಗಾಯಗೊಂಡವರಿಗೆ ತ್ವರಿತ ವೈದ್ಯಕೀಯ ಸೇವೆಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಆರೋಗ್ಯ, ಪೊಲೀಸ್ ಮತ್ತು ಕಂದಾಯ ಸೇರಿದಂತೆ ಇತರ ಸರ್ಕಾರಿ ಇಲಾಖೆಗಳನ್ನು ಸಮನ್ವಯಗೊಳಿಸಲು ಮುಖ್ಯಮಂತ್ರಿ ಆದೇಶ ಹೊರಡಿಸಿದ್ದಾರೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Exit mobile version