ಪಟನಾ: ದೇವರ ದರ್ಶನ ಮಾಡಿ ಮರಳುತ್ತಿದ್ದ 17 ಭಕ್ತರಿದ್ದ ದೋಣಿ ಗಂಗಾ ನದಿಯಲ್ಲಿ ಮುಳುಗಿ 6 ಮಂದಿ ನಾಪತ್ತೆಯಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ. ನದಿಯಲ್ಲಿ ಮುಳುಗಿದ್ದ 11 ಮಂದಿಯನ್ನು ರಕ್ಷಿಸಲಾಗಿದ್ದು, ನಾಪತ್ತೆಯಾಗಿರುವ ಉಳಿದ 6 ಮಂದಿಗಾಗಿ ಶೋಧ ಕಾರ್ಯ ನಡೆಯುತ್ತಿದೆ (Patna Boat Accident).
ಪಾಟ್ನಾದಿಂದ 70 ಕಿಮೀ ದೂರದಲ್ಲಿರುವ ಬಾರ್ಹ್ ಪಟ್ಟಣದ ಬಳಿಯ ಗಂಗಾ ನದಿಯಲ್ಲಿ ಪ್ರಯಾಣಿಕರಿದ್ದ ದೋಣಿ ಮುಳುಗಿ ಈ ದುರಂತ ಸಂಭವಿಸಿದೆ. ಅನಾಹುತ ನಡೆಯುವ ವೇಳೆ ದೋಣಿ ಬರ್ಹ್‌ನ ಉಮಾನಾಥ್ ಘಾಟ್‌ನಿಂದ ಡಿಯಾರಾಗೆ ಪ್ರಯಾಣಿಸುತ್ತಿತ್ತು. ಸದ್ಯ ಸ್ಥಳಕ್ಕೆ ಧಾವಿಸಿರುವ ಎಸ್‌ಡಿಆರ್‌ಎಫ್ ತಂಡ ಶೋಧ ಕಾರ್ಯ ಆರಂಭಿಸಿದೆ.
Bihar: Boat carrying 17 devotees capsizes in Ganga River in Barh, 6 missing
— ANI Digital (@ani_digital) June 16, 2024
Read @ANI Story | https://t.co/6Tfl15rmwv#Bihar #boataccident #barh #Ganga pic.twitter.com/aOGNc6gV2f
ʼʼಉಮನಾಥ್ ಘಾಟ್ ಸಮೀಪದಲ್ಲೇ ದೋಣಿ ಮುಳುಗಿದೆ. ದೋಣಿಯಲ್ಲಿ ಒಂದೇ ಕುಟುಂಬದ 17 ಮಂದಿ ಪ್ರಯಾಣಿಸುತ್ತಿದ್ದರು. ಬೆಳಿಗ್ಗೆ ಈ ಅವಘಡ ಸಂಭವಿಸಿದೆ. ದೋಣಿಯಲ್ಲಿ ಯಾರಿಗೂ ಲೈಫ್ ಜಾಕೆಟ್ ಇರಲಿಲ್ಲ. ಕೆಲವರು ಈಜಿ ದಡ ಸೇರಿದ್ದಾರೆ. ಕೆಲವರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಆದರೆ ನಾಪತ್ತೆಯಾದ 6 ಮಂದಿ ಇನ್ನೂ ಪತ್ತೆಯಾಗಿಲ್ಲʼʼ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದಾರೆ.
ʼʼಸಣ್ಣ ದೋಣಿಯಲ್ಲಿ ಸಾಮರ್ಥ್ಯಕ್ಕಿಂತ ಅಧಿಕ ಜನ ತುಂಬಿದ್ದರಿಂದ ಅದು ಮಗುಚಿ ಬಿದ್ದಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ದೋಣಿಯಲ್ಲಿದ್ದ 11 ಮಂದಿ ಸುರಕ್ಷಿತವಾಗಿದ್ದಾರೆ. ಉಳಿದ 6 ಮಂದಿಗಾಗಿ ಎಸ್‌ಡಿಆರ್‌ಎಫ್ ತಂಡ ಶೋಧ ನಡೆಸುತ್ತಿದೆʼʼ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೆಚ್ಚು ಜನರನ್ನು ತುಂಬಿದ್ದೇ ಕಾರಣ?
ದೋಣಿ ಮಗುಚಿ ಬಿದ್ದಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು ಕಾರಣ ಪತ್ತೆಗೆ ಆದೇಶ ಹೊರಡಿಸಿದ್ದಾರೆ. ಚಿಕ್ಕ ದೋಣಿಗೆ ಅಧಿಕ ಮಂದಿಯನ್ನು ತುಂಬಿಸಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. ಜಿಲ್ಲಾಡಳಿತ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆಗೆ ಎಲ್ಲ ನೆರವು ನೀಡಿದೆ. ಸ್ಥಳದಲ್ಲಿ ನೂರಾರು ಮಂದಿ ನೆರೆದಿದ್ದಾರೆ.
ಇದನ್ನೂ ಓದಿ: boat capsizes: ಬೋಟ್ ಮಗುಚಿ 6 ಶಾಲಾ ಮಕ್ಕಳ ದುರ್ಮರಣ, ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ
ಈ ವರ್ಷದ ಜನವರಿಯಲ್ಲಿ ಗುಜರಾತ್‌ನ ವಡೋದಾರದ ಹರಿಣಿ ಸರೋವರದಲ್ಲಿ ಬೋಟ್ ಮಗುಚಿ 13 ಶಾಲಾ ಮಕ್ಕಳು ಹಾಗೂ ಇಬ್ಬರು ಶಿಕ್ಷಕರು ಮೃತಪಟ್ಟಿದ್ದರು. ನ್ಯೂ ಸನ್‌ರೈಸ್ ಶಾಲೆಯ ಮಕ್ಕಳು ಪಿಕ್‌ನಿಕ್‌ಗಾಗಿ ಕೆರೆಗೆ ಆಗಮಿಸಿದ್ದ ವೇಳೆ ಈ ದುರಂತ ಸಂಭವಿಸಿತ್ತು. ಬೋಟ್‌ನಲ್ಲಿ 27 ವಿದ್ಯಾರ್ಥಿಗಳಿದ್ದರು. ಮಕ್ಕಳ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತ ಮಕ್ಕಳ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಿಸಿದ್ದರು. ಅಲ್ಲದೇ, ಈ ಘಟನೆಯಲ್ಲಿ ಗಾಯಗೊಂಡವರಿಗೆ 50 ಸಾವಿರ ರೂ. ನೆರವು ನೀಡುವುದಾಗಿ ಪ್ರಕಟಿಸಿದ್ದರು.
ಅಲ್ಲದೆ ಕೆಲವು ದಿನಗಳ ಹಿಂದೆ ಭೀಕರ ಗಾಳಿಗೆ ದೋಣಿಯಿಂದು ಮಗುಚಿ ಬಿದ್ದು ಆರು ಮಂದಿ ನೀರುಪಾಲಾಗಿರುವ ದಾರುಣ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿತ್ತು. ಜಿಲ್ಲೆಯ ಫಾಲಘರ್ ತಾಲೂಕಿನ ಕಲಾಶಿ ಬಳಿ ದುರ್ಘಟನೆ ಸಂಭವಿಸಿದ್ದು, ಇಬ್ಬರು ಪುಟ್ಟ ಮಕ್ಕಳು ಸೇರಿ ಆರು ಮಂದಿ ಕಣ್ಮರೆಯಾಗಿದ್ದರು.
ಉಜ್ಜನಿ ಜಲಾಶಯದ ಹಿನ್ನೀರಿನಲ್ಲಿ ಕುಟುಂಬಸ್ಥರು ದೋಣಿ ವಿಹಾರಕ್ಕೆ ತೆರಳಿದ್ದರು. ಈ ವೇಳೆ ಭೀಮಾ ನದಿಗೆ ಅಡ್ಡಲಾಗಿ ಕಟ್ಟಿರುವ ಉಜ್ಜನಿ ಜಲಾಶಯದಲ್ಲಿ ಗೋಕುಳ ಜಾಧವ್(30) ಕೋಮಲ್ ಜಾಧವ್(26) ಶುಭ ಜಾಧವ್(1) ಮಾಹಿ ಜಾಧವ್(3) ನೀರು ಪಾಲಾಗಿದ್ದರು.