Site icon Vistara News

Pawan Kalyan: ಪವನ್‌ ಕಲ್ಯಾಣ್‌ಗೆ ಚಾಲೆಂಜ್‌ ಮಾಡಿ ಸೋಲು- ಹೆಸ್ರು ಬದಲಿಸಿಕೊಂಡ YSRCP ನಾಯಕ

Pawan Kalyan

ಹೈದರಾಬಾದ್‌: ಇತ್ತೀಚೆಗೆ ನಡೆದ ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಜನಸೇನಾ ಪಾರ್ಟಿ (Jana Sena Party)ಯ ಪವನ್‌ ಕಲ್ಯಾಣ್‌(Pawan Kalyan) ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ ವೈಎಸ್‌ಆರ್‌ಪಿ ನಾಯಕರೊಬ್ಬರು ತಮ್ಮ ಹೆಸರನ್ನು ಅಧಿಕೃತವಾಗಿ ಬದಲಿಸಿಕೊಂಡಿದ್ದಾರೆ. ಪವನ್‌ ಕಲ್ಯಾಣ್‌ ಅವರಿಗೆ ಚುನಾವಣೆ ಸಂದರ್ಭದಲ್ಲಿ ಗೆಲುವಿನ ಚಾಲೆಂಜ್‌ ಮಾಡಿ ಸೋಲುಂಡಿರುವ ವೈಎಸ್‌ಆರ್‌ಪಿ ನಾಯಕ ಮುದ್ರಾಗದ ಪದ್ಮನಾಭ (Mudragada Padmanabham) ತಮ್ಮ ಹೆಸರನ್ನು ಪದ್ಮಾನಾಭ ರೆಡ್ಡಿ ಎಂದು ಬದಲಿಸಿಕೊಂಡಿದ್ದಾರೆ.

ಪಿತಾಪುರಂ ವಿಧಾನಸಭಾ ಕ್ಷೇತ್ರದಲ್ಲಿ ಪವನ್‌ ಕಲ್ಯಾಣ್‌ ವಿರುದ್ಧ ಸ್ಪರ್ಧಿಸಿದ್ದ ಮುದ್ರಾಗದ ಪದ್ಮನಾಭ ಈ ಬಾರಿ ಪವನ್‌ ಕಲ್ಯಾಣ್‌ ಅವರನ್ನು ಸೋಲಿಸಿಯೇ ತೀರುತ್ತೇನೆ. ಇಲ್ಲದಿದ್ದರೆ ಹೆಸರು ಬದಲಿಸೋದಾಗಿ ಚಾಲೆಂಜ್‌ ಮಾಡಿದ್ದರು ಇದೀಗ ಪವನ್‌ ಕಲ್ಯಾಣ್‌ ಭರ್ಜರಿ ಗೆಲುವು ಸಾಧಿಸಿ ಅಸೆಂಬ್ಲಿ ಮೆಟ್ಟಿಲೇರಿದ್ದು ಮಾತ್ರವಲ್ಲದೇ ಡಿಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಹೀಗಾಗಿ ಮುದ್ರಾಗದ ಪದ್ಮನಾಭ ಅವರು ಅಧಿಕೃತವಾಗಿ ತಮ್ಮ ಹೆಸರು ಬದಲಿಸಿಕೊಂಡು ಮಾತು ಉಳಿಸಿಕೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹೆಸರು ಬದಲಿಸಲು ಯಾರೂ ನನ್ನನ್ನು ಒತ್ತಾಯಿಸಿಲ್ಲ. ಇದು ನನ್ನದೇ ಆದ ನಿರ್ಧಾರ. ಇನ್ನು ಪವಾನ್‌ ಕಲ್ಯಾಣ್‌ ಅವರ ಅಭಿಮಾನಿಗಳು ನನ್ನ ವಿರುದ್ಧ ವಾಚ್ಯ ಶಬ್ದಗಳನ್ನು ಬಳಸಿದ್ದಾರೆ. ನನ್ನ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸುವ ಬದಲಿಗೆ ನನ್ನ ಮತ್ತು ನನ್ನ ಕುಟುಂಬವನ್ನು ಮುಗಿಸಿಬಿಡಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಮುದ್ರಾಗದ ಪದ್ಮನಾಭ ಅವರು ಕಾಪು ಸಮುದಾಯದ ನಾಯಕರು. ಚುನಾವಣೆಗೆ ಕೆಲವು ದಿನಗಳು ಇರೋವಾಗಲೇ ಅವರು YSRCP ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

ಕೆಲವು ದಿನಗಳ ಹಿಂದೆಯಷ್ಟೇ ಪವನ್‌ ಕಲ್ಯಾಣ್‌ ಅಭಿಮಾನಿಯೋರ್ವ ಅವರ ಗೆಲವಿನ ಶಪಥ ಮಾಡಿ ಐದು ವರ್ಷಗಳಿಂದ ಕೂದಲು ಬೆಳೆಸಿ ಫಲಿತಾಂಶದ ಬಳಿಕ ಕೂದಲಿಗೆ ಕತ್ತರಿ ಹಾಕಿದ್ದರು. 2019ರ ಚುನಾವಣೆಯಲ್ಲಿ ಪವನ್‌ ಕಲ್ಯಾಣ್‌ ಎರಡೂ ಕ್ಷೇತ್ರಗಳಲ್ಲಿ ಸೋತು ನಗೆಪಾಟಲಿಗೀಡಾಗಿದ್ದರು. ಆ ಸಮಯದಲ್ಲಿ ಪವನ್‌ ಅವರ ಫ್ಯಾನ್‌ ತೋಟ ನರೇಂದ್ರ ಅವರು ಪವನ್ ಗೆದ್ದೇ ಗೆಲ್ಲುತ್ತಾರೆಂದು ಸವಾಲು ಹಾಕಿ, ಪವನ್ ಗೆಲ್ಲುವವರೆಗೂ ತಲೆಗೂದಲು ಕತ್ತರಿವುದಿಲ್ಲ ಎಂದು ಪ್ರಮಾಣ ಮಾಡಿದ್ದರು. ಇದೀಗ ಕೂದಲಿಗೆ ಕತ್ತರಿ ಹಾಕಿದ್ದಾರೆ.

ತೋಟ ನರೇಂದ್ರ ಉರು ತೆನಾಲಿ ಸಮೀಪದ ಕೊಳಕಲೂರು. 2019ನೇ ಚುನಾವಣೆಯಲ್ಲಿ ತಮ್ಮ ನೆಚ್ಚಿನ ನಟ ಪವನ್ ಕಲ್ಯಾಣ್ ಅವರು ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಸೋತಿದ್ದರು. ಇದರಿಂದ ನರೇಂದ್ರ ತೀವ್ರ ಖಿನ್ನತೆಗೆ ಒಳಗಾಗಿದ್ದರು. ಎರಡು ಕಡೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ನರೇಂದ್ರ ಅವರಿಗೆ ಪವನ್‌ ಕಲ್ಯಾಣ್‌ ಸೋಲು ಭಾರಿ ನೋವುಂಟು ಮಾಡಿತ್ತು. ಹಾಗಾಗಿ ಆ ಸಮಯದಲ್ಲಿ ನರೇಂದ್ರ ಅವರು ಪ್ರಮಾಣ ಮಾಡಿದರು. ಪವನ್ ಕಲ್ಯಾಣ್ ಗೆದ್ದು ವಿಧಾನಸಭೆಗೆ ಕಾಲಿಡುವವರೆಗೂ ಕೂದಲಿಗೆ ಕತ್ತರಿ ಹಾಕಲ್ಲ ಎಂದು. ಇದೀಗ ಉಪ ಮುಖ್ಯಮಂತ್ರಿಯಾಗಿ ಪವನ್‌ ಕಲ್ಯಾಣ್‌ (Pawan Kalyan) ಅಧಿಕಾರ ವಹಿಸಿಕೊಂಡಿದ್ದಾರೆ. ಐದು ವರ್ಷಗಳ ಕಾಲ ಕೂದಲು ಬೆಳೆಸುತ್ತಲೇ ಪಕ್ಷಕ್ಕಾಗಿ ದುಡಿದ ನರೇಂದ್ರ ಕೊನೆಗೂ ಕೂದಲಿಗೆ ಕತ್ತರಿ ಹಾಕಿದ್ದಾರೆ.

ಇದನ್ನೂ ಓದಿ: Hajj Pilgrims: 98 ಭಾರತೀಯ ಹಜ್‌ ಯಾತ್ರಿಕರು ಸಾವು- ವಿದೇಶಾಂಗ ಸಚಿವಾಲಯ ಅಧಿಕೃತ ಮಾಹಿತಿ

Exit mobile version