ನವದೆಹಲಿ: ಪೇಟಿಎಂನ ಏಕೀಕೃತ ಪಾವತಿಗಳ ಇಂಟರ್ಫೇಸ್ (UPI) ಮುಂದುವರಿಕೆಗಾಗಿ ಥರ್ಡ್-ಪಾರ್ಟಿ ಅಪ್ಲಿಕೇಶನ್ ಪ್ರೊವೈಡರ್ (TPAP) ಮಾರ್ಗಕ್ಕೆ ಅನುಮೋದನೆ ಕೋರಿ ಒನ್97 ಕಮ್ಯುನಿಕೇಷನ್ ಲಿಮಿಟೆಡ್‌ನ ವಿನಂತಿಯನ್ನು ಪರಿಶೀಲಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಶುಕ್ರವಾರ ರಾಷ್ಟ್ರೀಯ ಪಾವತಿ ಸೇವೆಗಳ ನಿಗಮ (NPCI)ಗೆ ಸಲಹೆ ನೀಡಿದೆ.
ಒನ್97 ಕಮ್ಯುನಿಕೇಶನ್ ಲಿಮಿಟೆಡ್ ಫಿನ್‌ಟೆಕ್ ಪ್ರಮುಖ ಪೇಟಿಎಂನ ಮೂಲ ಸಂಸ್ಥೆಯಾಗಿದೆ. ಜನವರಿ 31 ರಂದು ಪೇಟಿಎಂ ಬ್ಯಾಂಕಿಂಗ್ ಅಂಗವಾದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಿರುದ್ಧ ಆರ್‌ಬಿಐ ನಿರ್ಬಂಧಗಳನ್ನು ಹೇರಿತ್ತು. ಮೊದಲಿಗೆ, ಫೆಬ್ರವರಿ 29 ರ ನಂತರ ಹೊಸ ಗ್ರಾಹಕರನ್ನು ಸೇರಿಸುವ ನಿಷೇಧವನ್ನು ಒಳಗೊಂಡಿತ್ತು. ನಂತರ ಅದನ್ನು ಮಾರ್ಚ್ 15 ರವರೆಗೆ ವಿಸ್ತರಿಸಲಾಯಿತು.
ಇದರ ನಂತರ ಒನ್97 ಪೇಟಿಎಂನ ಯುಪಿಐ ಸೇವೆಯನ್ನು ಮುಂದುವರಿಕೆಯನ್ನು ಖಚಿತಪಡಿಸಿಕೊಳ್ಳಲು ಬಾಹ್ಯ ಬ್ಯಾಂಕ್‌ಗಳೊಂದಿಗೆ ಪಾಲುದಾರಿಕೆಯನ್ನು ಶೋಧಲಾರಂಭಿಸಿತ್ತು. ಕಂಪನಿಯು ಈಗಾಗಲೇ ವ್ಯಾಪಾರಿ ಪಾವತಿಗಳನ್ನು ಇತ್ಯರ್ಥಗೊಳಿಸಲು ಆಕ್ಸಿಸ್ ಬ್ಯಾಂಕ್‌ನೊಂದಿಗೆ ಪಾಲುದಾರಿಕೆ ಹೊಂದಿದೆ ಮತ್ತು ಕೆಲವು ಇತರ ಸಾಲದಾತರೊಂದಿಗೆ ಚರ್ಚೆಗಳನ್ನು ನಡೆಸುತ್ತಿದೆ ಎಂದು ತಿಳಿದು ಬಂದಿದೆ.
ಎನ್‌ಪಿಸಿಐ ಟಿಪಿಎಪಿ ಸ್ಟೇಟಸ್ ನೀಡಿದರೆ, ಅಡಚಣೆಗಳನ್ನು ತಪ್ಪಿಸಲು ಪೇಟಿಎಂ, ತನ್ನ ಪಾವತಿಗಳ ಸೇವೆಯನ್ನು ತಡೆ ರಹಿತ ಮುಂದುವರಿಸಲು ಪಾವತಿಗಳ ಬ್ಯಾಂಕ್‌ನಿಂದ ಹೊಸದಾಗಿ ಗುರುತಿಸಲಾದ ಬ್ಯಾಂಕುಗಳೊಂದಿಗೆ ವರ್ಗಾಯಿಸಬಹುದು ಎಂದು ಆರ್‌ಬಿಐ ಹೇಳಿದೆ. ಅಲ್ಲದೆ, ಅಸ್ತಿತ್ವದಲ್ಲಿರುವ ಬಳಕೆದಾರರನ್ನು ಹೊಸ ಹ್ಯಾಂಡಲ್‌ಗೆ ‘ತೃಪ್ತಿಕರವಾಗಿ’ ಸ್ಥಳಾಂತರಿಸುವವರೆಗೆ ಮೂರನೇ ವ್ಯಕ್ತಿಯ ಅಪ್ಲಿಕೇಶನ್ ಹೊಸ ಬಳಕೆದಾರರನ್ನು ಸೇರಿಸಬಾರದು ಎಂದು ಅದು ಹೇಳಿದೆ.
ತಡೆರಹಿತ ಸ್ಥಳಾಂತರಕ್ಕಾಗಿ ಎನ್‌ಪಿಸಿಐ ಐದು ಬ್ಯಾಂಕ್‌ಗಳನ್ನು ‘ಪಾವತಿ ಸೇವಾ ಪೂರೈಕೆದಾರ (ಪಿಎಸ್‌ಪಿ)’ ಬ್ಯಾಂಕ್‌ಗಳೆಂದು ಪ್ರಮಾಣೀಕರಿಸುವುದನ್ನು ಪರಿಗಣಿಸಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.
ಈ ಸುದ್ದಯನ್ನೂ ಓದಿ: Paytm Payments Bank : ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನಿಲ್ಲಿಸಲು ಮಾರ್ಚ್ 15ರವರೆಗೆ ಗಡುವು ವಿಸ್ತರಣೆ